Police Bhavan Kalaburagi

Police Bhavan Kalaburagi

Saturday, August 8, 2020

BIDAR DISTRICT DAILY CRIME UPDATE 08-08-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-08-2020

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-08-02020 ರಂದು ಫಿರ್ಯಾದಿ ತುಕಾರಾಮ ತಂದೆ ನರಸಪ್ಪಾ ಮರಕುಂದಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ನಿರ್ಣಾ ರವರ ತಂದೆ ಹೊಲದ ಮೇಲೆ 1,40,000/- ರೂ ಸಾಲ ಮಾಡಿದ್ದು, ಸದರಿ ಸಾಲದ ಭಾದೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಗೋಂಡು ಮನೆಯ ಮಾಳಿಗೆ ಧಾಬಾಕ್ಕೆ ಇದ್ದ ಕೊಂಡಿಗೆ ತನ್ನ ಮೋಫಲರದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 07-08-2020 ರಂದು ಫಿರ್ಯಾದಿ ತುಕ್ಕಮ್ಮಾ ಗಂಡ ರಾಮಣ್ಣಾ ಹಳ್ಳೆನೋರ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ,  ಸಾ: ಗೊಗ್ಗಾ ರವರ ಗಂಡನಾದ ರಾಮಣ್ಣಾ ತಂದೆ ತುಕ್ಕಪ್ಪಾ ಹಳ್ಳೆನೋರ ವಯ: 50 ವರ್ಷ ರವರು ತಮ್ಮೂರ ವಿಷ್ಣು ರವರ ಹೊಲದಲ್ಲಿ ಕಬ್ಬಿನ ಬೆಳೆಯಲ್ಲಿ ಬೆಳೆದ ಹುಲ್ಲಿಗೆ ಔಷಧಿ ಹೊಡೆಯುವಾಗ ಗಂಡ ಗಾಟರದಲ್ಲಿ ನೀರು ಹಾಕುತ್ತಿದ್ದು ಅದೇ ವೇಳೆಗೆ ಆಕಸ್ಮೀಕವಾಗಿ ಗಾಳಿಯ ಮುಖಾಂತರ ಬೆಳೆಗೆ ಹೋಡೆಯುವ ಔಷಧಿ ಗಂಡ ರಾಮಣ್ಣಾ ಇವರ ಮೂಗಿನ ಮತ್ತು ಬಾಯಿ ಮೂಲಕ ದೇಹದಲ್ಲಿ ಹೋಗಿ ಮೃತಪಟ್ಟಿರುತ್ತಾರೆ, ಸದರಿ ಘಟನೆ ಆಕಸ್ಮೀಕವಾಗಿ ಜರುಗಿದ್ದು, ತನ್ನ ಗಂಡನ ಮರಣದ ಬಗ್ಗೆ ಯಾರ ಮೇಲೆ ಯಾವುದೇ ದೂರು ಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಗದಲ ಪೊಲೀಸ ಠಾಣೆ ಅಪರಾಧ ಸಂ. 47/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 07-08-2020 ರಂದು ಬಗದಲ ಗ್ರಾಮದ ಹನುಮಾನ ಮಂದಿರ ಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಡುತ್ತಿದ್ದಾರೆಂದು ಮೇಹಬೂಬ ಪಿ.ಎಸ್. [.ವಿ] ಬಗದಲ್ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಬಗದಲ ಗ್ರಾಮದ ಹನುಮಾನ ಮಂದಿರ ಹತ್ತಿರ ಮರೆಯಾಗಿ ನೋಡಲು ಹನುಮಾನ ಮಂದಿರಹತ್ತಿರ ಸಾರ್ವಜನಿಕ ಸ್ಧಳದಲ್ಲಿ ಆರೋಪಿತರಾದ ಜಗದೀಶ ತಂದೆ ಭೀಮರಾಯ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಬಗದಲ ಹಾಗೂ ಇನ್ನೂ 6 ಜನ ಆರೋಪಿತರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ನಸೀಬಿನ ಜೂಜಾಟ ಆಟುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಎಲ್ಲರು ಸೇರಿ ಏಕ ಕಾಲಕ್ಕೆ ದಾಳಿ ಮಾಡಿ ಇಸ್ಪಿಟ್ ಆಡುತ್ತಿದ್ದ 07 ಜನ ಆರೋಪಿರನ್ನು ಹಿಡಿದು ಅವರಿಂದ ಒಟ್ಟು ನಗದು ಹಣ 31,600/- ರೂ. ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ.118/2020, ಕಲಂ. 447 ಐಪಿಸಿ ಮತ್ತು ಕಲಂ. 192() ಕರ್ನಾಟಕ ಭೂ ಕಂದಾಯ ಅಧಿನಿಯಮ 1964 :-

ದಿನಾಂಕ 07-08-2020 ರಂದು ಫಿರ್ಯಾದಿ ರಾಜು ಕುಲಕರ್ಣಿ ಕಂದಾಯ ನಿರೀಕ್ಷಕರು ಕಮಠಾಣಾ ಹೋಬಳಿ ರವರು ನೀಡಿದ ಸಾರಾಂಶವೆನೆಂದರೆ ಬೀದರ ತಾಲೂಕಿನ ಚಿದ್ರಿ ಗಾ್ರಮದ ಸರಕಾರಿ ಭೂಮಿ ಸರ್ವೆ ನಂ. 362 ನೇದರಲ್ಲಿ ಆರೋಪಿ ಉಮಾದೇವಿ ಗಂಡ ಪ್ರಹಲಾದ ಸಾ: ಚಿದ್ರಿ ರವರು ಅನಧಿಕೃತವಾಗಿ ಒತ್ತುವರಿ ಮಾಡಿ ಅಂದಾಜು 50*40 ಚದುರು ಅಡಿಯಲ್ಲಿ ಆರೋಪಿ ರವರು ಮನೆ ಕಟ್ಟುತ್ತಿದ್ದಾರೆ, ಈಗಾಗಲೆ ಸದರಿಯವರಿಗೆ ದಿನಾಂಕ 05-3-2020 ರಂದು ನೊಟೀಸ ನೀಡಲಾಗಿದೆ, ಆದರೆ ಸದರಿಯವರು ನೊಟೀಸನ್ ಉತ್ತರ ಕೂಡ ಸಲ್ಲಿಸಿರುವುದಿಲ್ಲಾ, ಅಂತ ನೀಡಿದ ದೂರಿನ ಮೇರೆಗೆ ಉಮಾದೇವಿ ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.