Police Bhavan Kalaburagi

Police Bhavan Kalaburagi

Thursday, November 19, 2020

BIDAR DISTRICT DAILY CRIME UPDATE 19-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-11-2020

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 07/2020, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 17-11-2020 ರಂದು ಫಿರ್ಯಾದಿ ಲಕ್ಷ್ಮಿ ಗಂಡ ನರಸಪ್ಪಾ ನಿರ್ಣಾಕರ ವಯ: 50 ವರ್ಷ, ಜಾತಿ: ಎಸ್.ಟಿ ಗೊಂ, ಸಾ: ಪಾತರಪಳ್ಳಿ ರವರ ಗಂಡನಾದ ನರಸಪ್ಪಾ ತಂದೆ ಸಂಗಪ್ಪಾ ನಿರ್ಣಾಕರ ವಯ: 60 ವರ್ಷ ಇವರು ಹೋಲದಲ್ಲಿ ಕೀಟನಾಶಕ ಸಿಂಪಡಿಸಿ, ನೀರಡಿಕೆಯಾದಾಗ ಹೋಲದಲ್ಲಿದ್ದ ಔಷಧಿ ಬೇರಸಿದ ನೀರನ್ನು ಆಕಸ್ಮಿಕವಾಗಿ ಮನೆಗೆ ಬರುವಾಗ ಕುಡಿದ ಪ್ರಯುಕ್ತ ಅವರನ್ನು 108 ಅಂಬುಲೇನ್ಸನಲ್ಲಿ ಚಿಕಿತ್ಸೆಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ದಿನಾಂಕ 18-11-2020 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೆ ದೂರು ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 164/2020, ಕಲಂ. 306 ಜೊತೆ 34 ಐಪಿಸಿ :-

ದಿನಾಂಕ 17-11-2020 ರಂದು 2300 ಗಂಟೆಯಿಂದ ದಿನಾಂಕ 18-11-2020 ರಂದು 0900 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿ ಕಾಶಿಬಾಯಿ ಗಂಡ ಶ್ರೀಪತಿ ಮೇಲಕೆರಿ ವಯ: 65 ವರ್ಷ, ಜಾತಿ: ಎಸ್.ಸಿ ಹೋಲೆಯಾ, ಸಾ: ತಾಜ ಸುಲ್ತಾನಪೂರ, ತಾ: ಕಲಬುರ್ಗಿ ರವರ ಮಗನಾದ ಹರೀಷ ಇತನು ಆರೋಪಿತರಾದ 1) ತುಕ್ಕಮ್ಮ (ಅತ್ತೆ), 2) ಶಿವಶರಣಪ್ಪಾ (ಮಾವ), 3) ದೇವಿಂದ್ರ (ಭಾವ) ಹಾಗೂ 4) ಭವಾನಿ (ಭಾವನ ಹೆಂಡತಿ) ಎಲ್ಲರು ಸಾ: ಕೊಡಂಬಲ ಇವರುಗಳ ನೀಡಿದ ಕಿರುಕುಳದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆಂದು ಕೊಟ್ಟ ಲಿಖಿತ ಪಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 73/2020, ಕಲಂ. 279, 338 ಐಪಿಸಿ :-

ದಿನಾಂಕ 18-11-2020 ರಂದು ಫಿರ್ಯಾದಿ ಹಕೀಮ ತಂದೆ ರೆಹಮಾನಸಾಬ ಬರಾಡಿ ವಯ: 48 ವರ್ಷ, ಜಾತಿ: ಮುಸ್ಲಿಂ, ಸಾ: ಮಂಠಾಳ, ತಾ: ಬಸವಕಲ್ಯಾಣ ರವರು ಬಸವಕಲ್ಯಾಣ ನಗರದ ಹಳೆ ತಹಸಿಲ್ ಕಛೆರಿ ಎದುರಿಗೆ ನಡೆದುಕೊಂಡು ಅಂಬೇಡ್ಕರ್ ಚೌಕ್ ಕಡೆಗೆ ಹೋಗುವಾಗ ಹರಳಯ್ಯಾ ಚೌಕ್ ಕಡೆಯಿಂದ ಮೋಟರ ಸೈಕಲ್ ನಂ. ಕೆಎ-56/ಹೆಚ್-0808 ನೇದರ ಚಾಲಕನಾದ ಆರೋಪಿ ಮಹೇಶಕುಮಾರ ತಂದೆ ರಾಮಚಂದ್ರ ರಾಠೋಡ ಸಾ: ಬಿರದಾರ ಕಾಲೋನಿ ಬಸವಕಲ್ಯಾಣ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಬಲಗಾಲು ಮೊಣಕಾಲಿನ ಕೆಳಗೆ ಭಾರಿ ಗುಪ್ತಗಾಯ, ಎಡಗಾಲು ಮೊಣಕಾಲಿಗೆ ತರಚಿದ ಗಾಯ, ಬಲ ಭುಜಕ್ಕೆ ಗುಪ್ತಗಾಯ, ಎಡಗೈ ಮೊಣಕೈಗೆ ತರಚಿದ ಗಾಯಗಳಾಗಿರುತ್ತವೆ, ಆರೋಪಿಗೆ ನೋಡಲು ಆತನಿಗೆ ಮುಖಕ್ಕೆ, ಗಟಾಯಿಗೆ ತರಚಿದಗಾಯಗಳಾಗಿರುತ್ತದೆ, ನಂತರ ಅಲ್ಲೆ ಹಾಜರಿದ್ದ ಹಣ್ಣಿನ ವ್ಯಾಪಾರಿ ಇಬ್ರಾಹಿಂ ತಂದೆ ಕರೀಮಖಾನ ಸಾ: ಪಾಶಾಪೂರ ಗಲ್ಲಿ ಬಸವಕಲ್ಯಾಣ ರವರು ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 92/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 18-11-2020 ರಂದು ಫಿರ್ಯಾದಿ ಮಾಣಿಕಪ್ಪಾ ತಂದೆ ಹರಿನಾಥಪ್ಪಾ ನೂಲಾ ಸಾ: ಸಂಗಮೇಶ್ವರ ಲಾಡ್ಜ್ ಹುಮನಾಬಾದ ರವರ ಸಂಬಂಧಿಕರಾದ ರಮೇಶ ತಂದೆ ಶರಣಪ್ಪಾ ಬೊಮ್ಮಾ ಸಾ: ಟೀಚರ್ ಕಾಲೋನಿ ಹುಮನಾಬಾದ ರವರು ತನ್ನ ಸ್ಪ್ಲೆಂಡರ್ ಎನ್.ಎಕ್ಸ.ಜಿ ಮೋಟಾರ್ ಸೈಕಲ್ ಸಂ. ಕೆಎ-39/ಜೆ-4040 ನೇದನ್ನು ಚಲಾಯಿಸಿಕೊಂಡು ಸೆಕ್ಯೂರಿಟಿ ಗಾರ್ಡ ಕೆಲಸ ಮಾಡಲು ಮನೆಯಿಂದ ರಿಲೈಯನ್ಸ್ ಗ್ಯಾಸ್ ಕಂಪನಿಗೆ ಹೋಗುತ್ತಿರುವಾಗ ದಿಲ್ಲಿ ಗೌಡ ಪೆಟ್ರೋಲ್ ಬಂಕ್ ಹತ್ತಿರ ಹೋದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಬೀದರ ಕಡೆಯಿಂದ ಕಾರ್ ನಂ. ಎಮ್.ಹೆಚ್-12/ಸಿ.ಡಿ-8289 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ರಾ.ಹೆ ನಂ. 50 ಬೀದರ - ಹುಮನಾಬಾದ ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಚಲಾಯಿಸುತ್ತಿದ್ದ ಮೋಟಾರ್ ಸೈಕಲಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಕಾರನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಬಲಗಾಲ ಹಿಮ್ಮಡಿಗೆ ತೀವ್ರ ರಕ್ತಗಾಯ, ಬಲಗಾಲ ಪಾದದ ಮೇಲೆ ಮತ್ತು ಹಣೆಗೆ ಸಾದಾ ರಕ್ತಗಾಯಗಳು ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 96/2020, ಕಲಂ. 279, 337, 338 ಐಪಿಸಿ ಜೊತೆ 177 ಐಎಂವಿ ಕಾಯ್ದೆ :-

ದಿನಾಂಕ 18-11-2020 ರಂದು ಫಿರ್ಯಾದಿ ವಿವೇಕ ತಂದೆ ಚಂದ್ರಶೇಖರ ಪುಟೇದ, ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಮಾಧವ ನಗರ ಬೀದರ ರವರು ಮತ್ತು ಶಿವ ತಂದೆ ಕಾಶಿನಾಥ ಪೊಲೀಸ ಪಾಟೀಲ, ವಯ 26 ವರ್ಷ, ಸಾ: ಪ್ರತಾಪ ನಗರ ಬೀದರ ಮತ್ತು ಸತೀಷ ತಂದೆ ಲಾಲಪ್ಪಾ ಕುಲಾಲ, ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಪ್ರತಾಪ ನಗರ ಬೀದರ ಮೂವರು ಕೂಡಿ ಪ್ರತಾಪನಗರದಿಂದ ನೌಬಾದ ಕಡೆಗೆ ಮೋಟಾರ ಸೈಕಲ ನಂ. ಕೆಎ-38/ಡಬ್ಲು-3218 ನೇದರ ಮೇಲೆ ಹೋಗುತ್ತಿರುವಾಗ ಸರಕಾರಿ ನೌಕರರ ಭವನ ಹತ್ತಿರ ಸತೀಷ ಈತನು ಸದರಿ ಮೊಟಾರ ಸೈಕಲನ್ನು ಅತೀ ವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ, ವೇಗ ಹತೋಟಿಯಲ್ಲಿ ಇಟ್ಟುಕೊಳ್ಳದೆ ಸ್ಕೀಡ ಮಾಡಿರುತ್ತಾನೆ, ಪರಿಣಾಮ ಫಿರ್ಯಾದಿಯ ತಲೆಯಲ್ಲಿ ರಕ್ತಗಾಯವಾಗಿ, ಮೂಗಿನಿಂದ ರಕ್ತ ಬಂದಿರುತ್ತದೆ ಮತ್ತು ಎಡಗೈ ಮುಂಗೈಗೆ  ರಕ್ತಗಾಯ, ಶಿವ ತಂದೆ ಕಾಶಿನಾಥ ಈತನಿಗೆ ತಲೆಯಲ್ಲಿ ಭಾರಿ ರಕ್ತಗಾಯವಾಗಿ ಬಲ ಕಿವಿಯಿಂದ ರಕ್ತ ಬಂದಿರುತ್ತದೆ, ಸತೀಷ ಈತನಿಗೆ ಎಡಗಾಲ ತೊಡೆಗೆ, ಬಲಗಾಲ ಮೊಳಕಾಲಿಗೆ, ಬಲ ಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಆಗ ಅಲ್ಲಿಯೇ ಇದ್ದ ಆನಂದ ತಂದೆ ಬಸವರಾಜ ಭಂಗೂರೆ ಸಾ: ನೌಬಾದ ಬೀದರ ಮತ್ತು ಸುರೇಂದ್ರಸಿಂಗ್ ತಂದೆ ಜೀತೆಂದ್ರಸಿಂಗ್  ಸಾ: ಪ್ರತಾಪ ನಗರ ಬೀದರ ರವರು ನೊಡಿ ಒಂದು ಖಾಸಗಿ ವಾಹನದಲ್ಲಿ ಮೂವರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 76/2020, ಕಲಂ. 366(ಎ) ಐಪಿಸಿ :-

ದಿನಾಂಕ 15-11-2020 ರಂದು 1930 ಗಂಟೆ ಸುಮಾರಿಗೆ ಫಿರ್ಯಾದಿ ಮೈನೊದ್ದಿನ ತಂದೆ ಇಸ್ಮಾಯಿಲ ಸಾಬ ಖುರೇಷಿ ಸಾ: ಮಲಕಪೇಟ, ಹೈದ್ರಾಬಾದ, ಜಿ: ಹೈದ್ರಾಬಾದ ರವರ ಮಗಳಾದ ಸುಮಯ್ಯಾ ವಯ: 17 ವರ್ಷ ಇವಳು ಕಿರಾಣಾ ಅಂಗಡಿಗೆ ಹೋಗಿ ಬರುತ್ತೇನೆಂದು ಹೋದವಳು ಮನೆಗೆ ಮರಳಿ ಬಂದಿರುವುದಿಲ್ಲ, ನಂತರ ಸುಮಯ್ಯಾ ಇವಳನ್ನು ತಮ್ಮ ಸಂಬಂಧಿಕರ ಮತ್ತು ಇತರೆ ಕಡೆಗಳಲ್ಲಿ ವಿಚಾರಿಸಿ ಹುಡುಕಾಡಿದ್ದು, ಎಲ್ಲಿಯೂ ಆಕೆಯ ಬಗ್ಗೆ ಸುಳಿವು ಸಿಕ್ಕಿರುವುದಿಲ್ಲ, ಸುಮಯ್ಯಾ ಇವಳು ಅಪ್ರಾಪ್ತ ವಯಸ್ಸಿನವಳಿದ್ದು, ಅವಳನ್ನು ಯಾರೋ ದುಷ್ಕರ್ಮಿಗಳು ದುರ್ಮಾರ್ಗಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಅಪಹರಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 18-11-2020 ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.