Police Bhavan Kalaburagi

Police Bhavan Kalaburagi

Thursday, June 20, 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕ 08/06/2019 ರಂದು 07:30 ಪಿ.ಎಂ. ಸುಮಾರಿಗೆ ಶ್ರೀ ನಿಜಾಮುದ್ದಿನ ತಂದೆ ಮಹೆಬುಬ್ ಅಲಿ ಲಂಗಡೆ ಸಾ : ಮಿಜಗುರಿ ಕಲಬುರಗಿ ರವರ ಮಗನಾದ ಶಮ್ಸುದ್ದಿನ್ ಈತನಿಗೆ ಅರೋಪಿತರಾದ ಶೇರೂ,ಮಹಮ್ಮದ್ ರಪಿಕ್ ಇವರು ಮಿಜುಗುರಿಯಲ್ಲಿರುವ  ಪಿರ್ಯಾದಿದಾರನ ಮನೆಗೆ ಬಂದು ಪಿರ್ಯಾದಿದಾರನ ಮಗನಾದ ಶಮ್ಸುದ್ದಿನ್ ಇತನೊಂದಿಗೆ ಸ್ವಲ್ಪ ಮಾತನಾಡುವುದಿದೆ ಅಂತಾ ಕರೆದುಕೊಂಡು ಹೋಗಿ ಸಂತ್ರಸವಾಡಿಯಲ್ಲಿರುವ ಪ್ರಿನ್ಸ್ ಪೆಟ್ರೊಲ್ ಪಂಪ್ ಪಕ್ಕದಲ್ಲಿನ ಒಂದು ರೂಮಿನಲ್ಲಿ ಕೂಡಿ ಹಾಕಿ, ಸದರಿಯವನಿಗೆ ಸಲೀಮಾ ಎಂಬುವವಳ ಜೊತೆಗೆ ಅನೈತಿಕ ಸಂಬಂದವಿದೆ ಅಂತಾ ತಪ್ಪು ಕಲ್ಪನೆಯಿಂದ  ಬಲವಾದ ಸಂಶಮಾಡಿ ಆರೋಪಿತರಾದ ಶೇರೂ,ಮಹಮ್ಮದ್ ರಪಿಕ್, ಜಾಹೆದ್, ಸೊಹೆಬ್ ನಾಲ್ಕು ಜನರು ಕೂಡಿಕೊಂಡು ವೈಯರ್ ,ಬಡಿಗೆ ಹಾಗು ಕೈಯಿಂದ ಮನಬಂದಂತ್ತೆ ಹೊಡೆಬಡೆ ಮಾಡಿ, ಗುಪ್ತಗಾಯ ಹಾಗೂ ರಕ್ತಗಾಯಗೊಳಿಸಿದ್ದಲ್ಲದೆ, ಸದರಿ ವಿಷಯದ ಬಗ್ಗೆ ಪೊಲೀಸ ಠಾಣೆಗೆ ಹೋಗಿ ದೂರು ದಾಖಲಿಸಿದ್ದಲ್ಲಿ ನಿನಗು ಹಾಗು ನಿನ್ನ ಕುಟುಂಬಕ್ಕು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ನನ್ನ ಮಗ ಶಮ್ಸುದ್ದಿನ್ ಹಾಗೂ ನಾವು ಸದರಿಯವರ ಬೆದರಿಕೆಗೆ ಅಂಜಿ ದೂರು ದಾಖಲಿಸದೆ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಶಮ್ಸುದ್ದಿನ್ ಈತನಿಗೆ ಆದ ಗಾಯದ ಉಪಚಾರ ನೀಡಿ ನಂತರ ಹೆಚ್ಚಿನ ಉಪಚಾರ ಕುರಿತು ಸೊಲ್ಲಾಪೂರದ ಅಶ್ವಿನಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 19/06/2019 ರಂದು 10.30 ಎ.ಎಂ. ಕ್ಕೆ ಮೃತ ಪಟ್ಟಿರುತ್ತಾನೆ. ಕಾರಣ ಮಾನ್ಯರವರು ನನ್ನ ಮಗನಾದ ಶಮ್ಸು್ದಿನ್ ಈತನನ್ನು ಕೊಲೆ ಮಾಡಿದ ಶೇರೂ,ಮಹಮ್ಮದ್ ರಪಿಕ್, ಜಾಹೆದ್, ಸೊಹೆಬ್ ನಾಲ್ಕು  ಜನರ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆ ಗುನ್ನೆ ನಂ 37/2018 ಕಲಂ.342,366,302,ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ:19/06/2019 ರಂದು ನರೋಣಾ ಠಾಣಾ ವ್ಯಾಪ್ತಿಯ ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಮುಂದಿನ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಮುನ್ನಳ್ಳಿ ಗ್ರಾಮದ ಮಸಣಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಮುಂದಿನ ದೇವಸ್ಥಾನದ ಸಾರ್ವಜನಿಕ ಸ್ಥಳದಲ್ಲಿ 6 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ನಾನು ಹಾಗೂ ಸಿಬ್ಬಂದಿಯವರು ಕೂಡಿ ಸದರಿ ಜೂಜುಕೋರರ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಲಕ್ಷ್ಮಣ ತಂದೆ ಹಣಮಂತ ಗಡಕರ,2)ಶಿವಾನಂದ ತಂದೆ ಛತ್ರಪ್ಪಾ ಧೂಳಕರ, 3)ಹಣಮಂತ ತಂದೆ ಅಪ್ಪಾರಾಯ ಜ್ಯೋತಿ, 4)ಮಲ್ಲಿಕಾರ್ಜುನ ತಂದೆ ಭೀಮಶ್ಯಾ ಬೆಲಸೂರ, 5)ಶ್ರೀಮಂತ ತಂದೆ ಶರಣಪ್ಪಾ ಝಳಕಿ,  6)ಸೈಬಣ್ಣ ತಂದೆ ರೇವಣಸಿದ್ದಪ್ಪಾ ರೆಡ್ಡಿ, ಸಾ: ಎಲ್ಲರು ಮುನ್ನಳ್ಳಿ ಗ್ರಾಮ ಅಂಥಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1830/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಠಾಣೆಯ ಗುನ್ನೆ ನಂ 89/2019 ಕಲಂ 87 ಕೆ,ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಕ್ರಮವಾಗಿ ಮರಳು ತುಂಬುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 19-06-2019 ರಂದು ಅಫಜಲಪೂರ ಠಾಣಾ ವ್ಯಾಪ್ತಿಯ ಸೊನ್ನ ಗ್ರಾಮದ ಭೀಮಾ ನದಿಯಲ್ಲಿ ಟ್ಯಾಕ್ಟರದಲ್ಲಿ ಕಳ್ಳತನದಿಂದ ಮರಳು ತುಂಬುತ್ತಿದ್ದಾರೆ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸೊನ್ನ ಗ್ರಾಮದ ಭೀಮಾನದಿಯ ಹತ್ತಿರ ಹೋಗಿ ಟಾರ್ಚ ಬೆಳಕಿನಲ್ಲಿ ನೊಡಲಾಗಿ ನದಿಯಲ್ಲಿ ಟ್ಯಾಕ್ಟರದಲ್ಲಿ ಮರಳು ತುಂಬುತ್ತಿದ್ದರು. ಆಗ ನಾವು ಟ್ಯಾಕ್ಟರ ಹತ್ತಿರ ಹೋಗುತ್ತಿದ್ದಂತೆ ಟ್ಯಾಕ್ಟರ ಚಾಲಕ ತನ್ನ ಟ್ಯಾಕ್ಟರ ಲೈಟಿನ ಬೆಳಕಿನಲ್ಲಿ ಸಮವಸ್ತ್ರದಲ್ಲಿದ್ದ ನಮ್ಮನ್ನು ನೋಡಿ ಟ್ಯಾಕ್ಟರ ಟ್ರೈಲಿಯ ಡಂಪ ಎತ್ತಿ ಕತ್ತಲಲ್ಲಿ ಓಡಿಹೊದನು. ನಾವು ಟ್ಯಾಕ್ಟರ ಹತ್ತಿರ ಹೋಗುವಷ್ಟರಲ್ಲಿ ಟ್ಯಾಕ್ಟರದಲ್ಲಿದ್ದ ಮರಳು ನದಿಯಲ್ಲಿ ಕೆಳಗೆ ಬಿದ್ದಿತು. ಸದರಿ ಚಾಲಕನನ್ನು ಹಿಡಿಯಲು ನಾನು ಮತ್ತು ಸಿಬ್ಬಂದಿಯವರು ಬೆನ್ನಟ್ಟಿ ಓಡಿ ಹೋದರು ಸಿಕ್ಕಿರುವದಿಲ್ಲ ನಂತರ ನಾವು ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ ನಂಬರ ಚೆಕ್ಕ ಮಾಡಲು ಜಾನಡಿಯರ್ ಕಂಪನಿಯ ಟ್ಯಾಕ್ಟರ ಇದ್ದು, ಪಾಸಿಂಗ ನಂಭರ ಹಾಕಿರುವುದಿಲ್ಲ. ನಂತರ ಎಂಜಿನ ನಂಬರ ಮತ್ತು ಚಾಸ್ಸಿ ನಂಬರ ಚೆಕ್ ಮಾಡಲು CH NO:- 1PY5210EHJA003560 ENG NO:- PY3029T277197 ಅಂತಾ ಇರುತ್ತದೆ. ಸದರಿ ಟ್ಯಾಕ್ಟರ ಟ್ರೈಲಿಗೆ ಎಲ್ಲಿಯು ನಂಬರ ಹಾಕಿರುವುದಿಲ್ಲ. ಸದರಿ ಟ್ರ್ಯಾಕ್ಟರ .ಕಿ 5,00,000/-ರೂ  ಇರಬಹುದು. ನಂತರ ಸದರಿ ಟ್ರ್ಯಾಕ್ಟರನ್ನು  ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಠಾಣೆಯ ಗುನ್ನೆ ನಂ  95/2019 ಕಲಂ 379 ಐಪಿಸಿ ಮತ್ತು ಕಲಂ 21(1) ಎಮ್ ಎಮ್ ಡಿ ಆರ್ ಆಕ್ಟ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಿವನಗೌಡ ತಂದೆ ಗೌಡಪ್ಪಗೌಡ ಪಾಟೀಲ ಸಾ|| ವಂದಗನೂರ ತಾ|| ಸುರಪೂರ ರವರು ಕುಳಗೇರಾ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ಮಾಡುತ್ತಿರುತ್ತೇನೆ, ನನಗೆ ಬಸವರಾಜ@ಬಸನಗೌಡ ಅಂತಾ ಒಬ್ಬ ಮಗನಿರುತ್ತಾನೆ, ನನ್ನ ಮಗ ಡ್ರೈವರ ಕೆಲಸ ಮಾಡುತ್ತಿದ್ದನು, ನನ್ನ ಮಗನ ಸಲುವಾಗಿ ನಾನು ಇತ್ತೀಚಿಗೆ ಒಂದು ಸ್ವೀಫ್ಟ್ ಕಾರ ಖರಿದಿಮಾಡಿದ್ದು, ಅದರ ನಂ ಕೆ.-33/ಎಮ್- 7408 ನೇದ್ದು ಇರುತ್ತದೆ, ಇಂದು ಮದ್ಯಾಹ್ನ ನನ್ನ ಮಗ ಬಸವರಾಜ ಇವನು ನನಗೆ ಫೋನ ಮಾಡಿ ನಾನು ಸಿಂದಗಿಯಲ್ಲಿ ಇದ್ದೇನೆ, ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿದ್ದನು, ದಿನಾಂಕ 19-06-2019 ರಂದು 6;00 ಪಿ.ಎಂ ಸುಮಾರಿಗೆ ನನ್ನ ಮಗನ ಗೆಳೆಯನಾದ ಅಪ್ಪುಗೌಡ ತಂದೆ ಬಸನಗೌಡ ಬಿರಾದಾರ ಸಾ|| ಗಬಸಾವಳಗಿ ಈತನು ನನಗೆ ಫೋನ ಮಾಡಿ ಹೇಳಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಬಸವರಾಜ ಹಾಗು ನಮ್ಮೂರ ರಾಮನಗೌಡ ತಂದೆ ಮಲ್ಲನಗೌಡ ಧವಳಗಿ, ಶಾಂತಗೌಡ ತಂದೆ ವಿಶ್ವನಾಥರೆಡ್ಡಿ ಮಾಲಿ ಪಾಟೀಲ ರವರು ಕೂಡಿಕೊಂಡು ನಿಮ್ಮ ಕಾರನಲ್ಲಿ ಸಿಂದಗಿಯಿಂದ ಕೆಂಬಾವಿಗೆ ಹೋಗುತ್ತಿದ್ದೇವು, ಕಾರನ್ನು ನಾನೇ ಚಲಾಯಿಸುತ್ತಿದ್ದೇನು, 5;45 ಪಿ.ಎಂ ಸುಮಾರಿಗೆ ಅಲ್ಲಾಪೂರ ಗ್ರಾಮದಾಟಿ ಬರುತ್ತಿದ್ದಾಗ ಕಾರಿನ ವೇಗ ಹೆಚ್ಚಾಗಿದ್ದರಿಂದ ನಿಯಂತ್ರಣ ತಪ್ಪಿ ರೋಡಿನ ಎಡಗಡೆ ಇರುವ ಒಂದು ಬೇವಿನ ಮರಕ್ಕೆ ಕಾರು ಡಿಕ್ಕಿಹೊಡೆದು ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆತಲೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ, ಮತ್ತು ಅಲ್ಲಲ್ಲಿ ತರಚಿದಗಾಯಗಳಾಗಿರುತ್ತವೆ, ನಿಮ್ಮ ಮಗ ಬಸವರಾಜನಿಗೆ ನೋಡಲಾಗಿ ಬಲಭಾಗಿನ ಎದೆಗೆ, ಬಲ ಭುಜಕ್ಕೆ, ಬಲ ರಟ್ಟೆಗೆ, ಎಡತಲೆಗೆ ಭಾರಿ ರಕ್ತಗಾಯಗಳಾಗಿದ್ದು, ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಮತ್ತು ಇನ್ನುಳಿದ ನಮ್ಮೂರ ರಾಮನಗೌಡ ಧವಳಗಿ ಇವನ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಎಡರಟ್ಟೆ ಮುರದಿರುತ್ತದೆ ಇವನು ಸಹ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಶಾಂತಗೌಡ ಮಾಲಿ ಪಾಟೀಲ ಇವನ ಮುಖ ಪೂರ್ತಿ ನುಜ್ಜು ಗುಜ್ಜಾಗಿದ್ದು, ಎರಡು ಕೈಗಳ ರಟ್ಟೆಯಲ್ಲಿ ಮುರದಿರುತ್ತವೆ, ಮತ್ತು ಎರಡು ಪಕ್ಕೆಲುಬುಗಳು ಮುರಿದಿರುತ್ತವೆ ಅವನು ಸಹ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ, ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮಂಜುನಾಥರೆಡ್ಡಿ ತಂದೆ ನೀಲಕಂಠರೆಡ್ಡಿ ಪಾಟೀಲ ಹಾಗು ಇತರರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗನ ಶವ ನೋಡಿ ಗುರುತಿಸಿರುತ್ತೇನೆ, ಮೇಲ್ಕಂಡಂತೆ ನನ್ನ ಮಗನಿಗೆ ಗಾಯಗಳಾಗಿರುತ್ತವೆ, ಅದರಂತೆ ರಾಮನಗೌಡನಿಗೆ ಮತ್ತು ಶಾಂತಗೌಡನಿಗೆ ನೋಡಿದ್ದು, ಅವರಿಗು ಸಹ ಮೇಲ್ಕಂಡತೆ ಗಾಯಗಳಾಗಿದ್ದು ಮೃತ ಪಟ್ಟಿರುತ್ತಾರೆ, ನಂತರ ಅಲ್ಲೆ ಇದ್ದ ಅಪ್ಪುಗೌಡ ಬಿರಾದಾರ ಈತನಿಗೆ ವಿಚಾರಿಸಿ ಅವನಿಗೆ ಉಪಚಾರ ಕುರಿತು ಸಿಂದಗಿಗೆ ಕಳುಹಿಸಿಕೊಟ್ಟೆರುತ್ತೆವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆ ಗುನ್ನೆ ನಂ 64/2019 ಕಲಂ 279, 304 () ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ಶ್ರೀಮತಿ.ಸಂಗಮ್ಮ ಗಂಡ ಅಮೃತಪ್ಪಾ ಖೇಮಶೆಟಿ ಸಾ:ಲಾಡಮುಗಳಿ ರವರ ತವರೂರು ಗದ್ಲೇಗಾಂವ ಇದ್ದು ನನಗೆ ನನ್ನ ತಂದೆ-ತಾಯಿಯವರು 38 ವರ್ಷದ ಹಿಂದೆ ಲಾಡಮುಗಳಿ ಗ್ರಾಮದ ಬಸವಣಪ್ಪಾ ಖೇಮಶೆಟ್ಟಿ ಇವರ 2ನೇ ಮಗನಾದ ಅಮೃತಪ್ಪಾ ಇವರೊಂದಿಗೆ ಮದುವೆಮಾಡಿ ಕೊಟ್ಟಿದ್ದು, ನಮ್ಮ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು, 1ನೇದವ ಚನ್ನವೀರ ಇವನಿಗೆ ಬುದ್ದಿ ಮಾಂದ್ಯತೆ ಇರುತ್ತದೆ. 2ನೇದವನು ಅನೀಲಕುಮಾರ ಈತನು ನಮ್ಮೊಂದಿಗೆ ಒಕ್ಕಲುತನ ಮಾಡಿಕೊಂಡಿರುತ್ತಾನೆ. ನನ್ನ ಗಂಡನ ಮನೆಯಲ್ಲಿ ಮೈಧುನ ಕಲ್ಯಾಣಪ್ಪಾ ಮತ್ತು ಅವರ ಪತ್ನಿ ಕಮಲಾಬಾಯಿ ಇವರಿದ್ದು, ಅವರ ಕಲಬುರಗಿಯಲ್ಲಿ ವಾಸವಾಗಿದ್ದು, ಗ್ರಾಮಕ್ಕೆ ಬಂದು ಹೋಗುವುದು ಮಾಡುತ್ತಾರೆ. ಇನ್ನೊಬ್ಬ ಮೈಧುನ ಬಾಬುರಾವ ಮತ್ತು ಅವರ ಪತ್ನಿ ಸವಿತಾಬಾಯಿ ಇವರುಗಳು ಬೆಂಗಳೂರಿನಲ್ಲಿ ಉಪಜೀವಿಸುತ್ತಿದ್ದು. ಆಗಾಗ ಗ್ರಾಮಕ್ಕೆ ಬಂದು ಹೋಗುತ್ತಾರೆ. ಅದರಂತೆ ನಮ್ಮ ಪಾಲಿಗೆ ನನ್ನ ಗಂಡನ ಹೆಸರಿನಲ್ಲಿ ನಮ್ಮ ಗ್ರಾಮದ ಸೀಮೆಯಲ್ಲಿ ಹೊಲ ಸರ್ವೇ ನಂಬರ್ 215/115 ನೇದ್ದರಲ್ಲಿ 3.05 ಗುಂಟೆ ಇರುತ್ತದೆ. ನನ್ನ ಗಂಡನು ಸದರಿ ಹೊಲವನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಸಾಗುವಳಿಗಾಗಿ ಹಲವು ವರ್ಷಗಳಿಂದ ಕೃಷ್ಣಾ ಗ್ರಾಮೀಣ್ ಬ್ಯಾಂಕ್, ಮತ್ತು ಭಾಗ್ಯವಂತಿ ಸಂಗ ಮತ್ತು ಗಂಗಾ ಮಹಿಳಾ ಸಂಗದಲ್ಲಿ ಹೊಲದ ಸಾಗುವಳಿಗಾಗಿ ಸಾಲ ಪಡೆದು ಸಾಗುವಳಿ ಮಾಡಿದ್ದು, 2-3 ವರ್ಷಗಳಿಂದ ಚನ್ನಾಗಿ ಮಳೆ ಆಗದೆ ಬೆಳೆಹಾನಿ ಆಗಿದ್ದು, ಮನೆ ನಡೆಸಲು ಗ್ರಾಮದ ಕೆಲವರ ಹತ್ತಿರ ಕೈಗಡ ಅಲ್ಲದೇ ಬೀಗರು ಮತ್ತು ನೆಂಟರಿಂದ ಸಾಲ ಪಡೆದಿದ್ದು ಅದೇಲ್ಲವು ಸೇರಿ 4 ರಿಂದ 5 ಲಕ್ಷ ರೂ ಆಗಿರುತ್ತದೆ. ನನಗೆ ಮನೆಯಲ್ಲಿ ಆಗಾಗ ಸಾಲದ ಬಾದೆ ಬಗ್ಗೆ ಚಿಂತೆ ಇರುತ್ತದೆ ಅಂತಾ ಕೊರಗುತ್ತಿದ್ದು. ದಿನಾಂಕ:19/06/2019 ರಂದು ಬೆಳಿಗ್ಗೆ ನನ್ನ ಗಂಡನು 0600 ಗಂಟೆಗೆ ಮನೆಯಿಂದ ನಾನು ಹೊಲದ ಕಡೆಗೆ ಹೋಗಿಬರುತ್ತೇನೆ. ನನಗೆ ಮತ್ತು ನನ್ನ ಮಗನಾದ ಅನೀಲಕುಮಾರನಿಗೆ ಹೇಳಿ ಹೋದವನು ನಂತರ 0715 ಗಂಟೆ ಸುಮಾರಿಗೆ ನಮ್ಮ ಗ್ರಾಮದ ಗುಂಡಪ್ಪಾ ತಂದೆ ರೇವಣ್ಣಾ ಬಡೂರು ಇವರು ಮನೆಗೆ ಬಂದು ನಮಗೆ ತಿಳಿಸಿದ್ದು ಏನಂದರೆ, ನಿಮ್ಮ ಗಂಡನಾದ ಅಮೃತಪ್ಪಾ ಇವರು ನಿಮ್ಮ ಮೈಧುನ ಕಲ್ಯಾಣಪ್ಪಾ ಇವರ ಹೊಲದ ಬಂದಾರಿಯಲ್ಲಿದ್ದ ಹುಣಸಿಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಸತ್ತಿರುತ್ತಾನೆ ಅಂತಾ ತಿಳಿಸಿದ್ದು ನಾನು ಮತ್ತು ನನ್ನ ಮಗ ಗಾಭರಿಯಿಂದ ಹೊಲದ ಕಡೆಗೆ ಹೋಗಿದ್ದು ಅಲ್ಲಿ ಗ್ರಾಮದ ಗುರುಶಾಂತಪ್ಪಾ ಬಿ ಕಲಶೆಟ್ಟಿ ಮತ್ತು ಈರಪ್ಪಾ ಕಾಳ ಮಂದರಗಿ, ಶರಣಬಸಪ್ಪಾ ತಂದೆ ಸೂರ್ಯಕಾಂತ ಹಿರಮೇಶಟ್ಟಿ ಮಹಮ್ಮದ್ ಚೌದ್ರಿ ಇವರಿದ್ದು ನೋಡಲಾಗಿ ನನ್ನ ಗಂಡನು ಹುಣಸಿಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು  ಖಾತ್ರಿ ಆಗಿರುತ್ತದೆ.  ಕಾರಣ ನನ್ನ ಗಂಡನು ಹೊಲದ ವ್ಯವಸಾಯಕ್ಕಾಗಿ ಬ್ಯಾಂಕಿನಿಂದ ಸಂಗದಿಂದ ಮತ್ತು ಗ್ರಾಮಸ್ತರಿಂದ, ಬೀಗರಿಂದ, ನೆಂಟರಿಂದ ಸುಮಾರು 4-5 ಲಕ್ಷ ಸಾಲ ಆಗಿದ್ದರಿಂದ ಸಾಲದ ಬಾದೆಯಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆ, ಯು.ಡಿ.ಆರ್ ನಂ:11/2019 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.