Police Bhavan Kalaburagi

Police Bhavan Kalaburagi

Wednesday, December 9, 2020

BIDAR DISTRICT DAILY CRIME UPDATE 09-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-12-2020

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 102/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 08-12-2020 ರಂದು ಫಿರ್ಯಾದಿ ಅಜಯ ತಂದೆ ವಿಲಾಸ ಜಾಧವ ವಯ: 19 ವರ್ಷ, ಸಾ: ನೀರಗುಡಿ ರವರು ಮತ್ತು ಬಾಲಾಜಿ ತಂದೆ ಲಕ್ಷ್ಮಣ ಜಾಧವ ಇಬ್ಬರು ಅವರ ಹೋಲಕ್ಕೆ ಕೆಲಸಕ್ಕೆಂದು ತಮ್ಮೂರ ರೋಡಿನ ಬದಿಯಿಂದ ನಡೆದುಕೊಂಡು ಬಾಲಾಜಿ ಜಾಧವ ಇವರ ಹೋಲದ ಹತ್ತಿರ ಹೋಗುತ್ತಿರುವಾಗ ಹಿಂದಿನಿಂದ ಬುಲೆರೋ ವಾಹನ ಸಂ. ಕೆಎ-33/ಎಂ-4343 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮತ್ತು ಬಾಲಜಿ ಇಬ್ಬರಿಗೂ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಸದೇ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಬಾಲಾಜಿಗೆ ಬಲಗಾಲ ತೊಡೆಯಲ್ಲಿ ಭಾರಿಗಾಯವಾಗಿ ಕಾಲು ಮುರಿದಿದ್ದು, ಫಿರ್ಯಾದಿಗೆ ಬಲಗಾಲ ಪಿಂಡ್ರಿಯಲ್ಲಿ ಗುಪ್ತಗಾಯ ಮತ್ತು ಪಾದದ ಮೇಲೆ ತರಚಿದ ಗಾಯಗಳು ಆಗಿದ್ದು ಇರುತ್ತದೆ, ಭಾರಿಗಾಯಗೊಂಡು ಸ್ಥಳದಲ್ಲಿ ಬಿದ್ದ ಬಾಲಾಜಿಗೆ ಫಿರ್ಯಾದಿಯು ರೋಳಾ ಗ್ರಾಮದ ಕಡೆಯಿಂದ ಬರುತ್ತಿದ್ದ ಒಂದು ವಾಹನಕ್ಕೆ ಕೈ ಮಾಡಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 155/2020, ಕಲಂ. 279, 337, 338 ಐಪಿಸಿ :-

ದಿನಾಂಕ 08-12-2020 ರಂದು ಫಿರ್ಯಾದಿ ಶೋಭಾಬಾಯಿ ಗಂಡ ಭರತ ಭಾಲ್ಕೆ ಸಾ: ಕೊಟಗ್ಯಾಳವಾಡಿ ರವರು ತನ್ನ ಗಂಡ ಭರತ ವಯ: 56 ವರ್ಷ ಇಬ್ಬರೂ ಕೂಡಿ ತಮ್ಮ ಟಿ.ವಿ.ಎಸ ಮೋಟಾರ ಸೈಕಲ್ ನಂ. ಕೆಎ-39/ಆರ್-9879 ನೇದರ ಮೇಲೆ ಖಾಸೆಂಪೂರ ಗ್ರಾಮಕ್ಕೆ ತಮ್ಮ ಸಂಬಂಧಿಕರ ಮನೆಗೆ ಹೋಗಿ ಮರಳಿ ತಮ್ಮೂರಿಗೆ ಬರುವಾಗ ಬೀರಿ(ಕೆ)-ಒಳಸಂಗ ಗ್ರಾಮ ರೋಡಿನ ಮೇಲೆ ಕೆನಾಲ ಹತ್ತಿರ ಗಂಡ ಸದರಿ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುವಾಗ ಎದುರುಗಡೆಯಿಂದ ಅಂದರೆ ಭಾಲ್ಕಿ ಕಡೆಯಿಂದ ಮೊಟಾರ ಸೈಕಲ ನಂ. ಕೆಎ-32/ಕ್ಯೂ-3278 ನೇದರ ಚಾಲಕನಾದ ಆರೋಪಿ ವಿಲಾಸ ತಂದೆ ರಾಮಚಂದ್ರ ಶರಮಂಗಲೆ ಸಾ: ಬೀರಿ(ಕೆ) ಇತನೂ ಕೂಡ ತನ್ನ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಮುಖಾಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಾಲ ಮೊಣಕಾಲ ಮೇಲೆ ಗುಪ್ತಗಾಯ ಮತ್ತು ಮುಖಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಗಂಡನಿಗೆ ಎಡಗಾಲ ಮೊಣಕಾಲ ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ನಂತರ ಪರಿಚಯದ ಕೊಟಗ್ಯಾಳ ವಾಡಿಯ ಅಂಕುಶ ತಂದೆ ರಾಮಚಂದ್ರ ಬಿರಾದಾರ ರವರಿಗೆ ಗಂಡ ಕರೆ ಮಾಡಿ ಬೀರಿ (ಕೆ) ಗ್ರಾಮದ ಹತ್ತಿರ ರಸ್ತೆ ಅಪಘಾತವಾಗಿದೆ ಅಂತ ತಿಳಿಸಿ ಬರಲು ಹೇಳಿದ್ದರಿಂದ ಅಂಕುಶ ಮತ್ತು ಅನಿಲ ತಂದೆ ಶ್ರೀಪತರಾವ ರವರು ಕೂಡಲೆ ಬಂದು 108 ಅಂಬುಲೆನ್ಸಗೆ ಕರೆ ಮಾಡಿ ಕರೆಸಿ ಗಾಯಗೊಂಡ ಫಿರ್ಯಾದಿಗೆ ಮತ್ತು ಗಂಡನಿಗೆ ಹಾಗೂ ವಿಲಾಸ ಎಲ್ಲರಿಗೂ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸರಾಂಶದ ಮೇರಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 103/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 08-12-2020 ರಂದು ಇಸ್ಲಾಂಪೂರ ಗ್ರಾಮದ ಕನಕದಾಸ ಚೌಕ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ವಸೀಮ ಪಟೇಲ್ ಪಿಎಸಐ (ಕಾಸು) ಬಸವಕಲ್ಯಾಣ ಗ್ರಾಮೀಣ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇಸ್ಲಾಮಪೂರ ಗ್ರಾಮದ ಕನಕದಾಸ ಚೌಕ ಹತ್ತಿರದಿಂದ ಮರೆಯಲ್ಲಿ ನಿಂತು ನೋಡಲು ಕನಕದಾಸ ಚೌಕ ಹತ್ತಿರ ಆರೋಪಿತರಾದ ಸಂತೋಷ ರೆಡ್ಡಿ ತಂದೆ ಈರಪ್ಪಾ ಗಡವಂತಿ ವಯ: 47 ವರ್ಷ, ಜಾತಿ: ರೆಡ್ಡಿ, ಸಾ: ಇಸ್ಲಾಮಪೂರ ಇತನು ಹಾಗೂ ಇನ್ನೂ 8 ಜನ ಎಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 9,600/- ರೂ. ಹಾಗು 52 ಇಸ್ಪಿಟ ಎಲೆಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.