Police Bhavan Kalaburagi

Police Bhavan Kalaburagi

Tuesday, January 2, 2018

BIDAR DISTRICT DAILY CRIME UPDATE 02-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-01-2018

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 01/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 01-01-2018 ರಂದು ಫಿರ್ಯಾದಿ ಕಸ್ತೂರಬಾಯಿ ಗಂಡ ಜಗನಾಥ@ ಜಗಪ್ಪಾ ಲಾಲಪನೊರ, ವಯ: 45 ವರ್ಷ, ಜಾತಿ: ಕಬ್ಬಲಿಗ, ಸಾ: ಮುಸ್ತಾಪೂರ ರವರ ಗಂಡ ಜಗನಾಥ ರವರಿಗೆ ಮುಸ್ತಾಪೂರ ಗ್ರಾಮದ ಹೊಲ ಸರ್ವೆ ನಂ. 50/2 ರಲ್ಲಿ 2 ಎಕ್ಕರೆ 31 ಗುಂಟೆ ಜಮೀನು ಇದ್ದು, ಸದರಿ ಜಮೀನು ಸಾಗುವಳಿ ಮಾಡಲು ಹಳ್ಳಿಖೇಡ(ಕೆ) ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 47,000/- ರೂಪಾಯಿ ಸಾಲ ಮಾಡಿ ಸದರಿ ಜಮೀನು ಸಾಗುವಳಿ ಮಾಡಿರುತ್ತಾರೆ, ಸದರಿ ಹೊಲದಲ್ಲಿ ಮಳೆ ಹೆಚ್ಚಾಗಿ ನೀರು ನಿಂತು ಬೇಳೆ ಹಾಳಾಗಿರುತ್ತದೆ, ಗಂಡ ಬ್ಯಾಂಕಿನಿಂದ ತಂದ ಸಾಲ ಹೇಗೆ ತಿರಿಸುವುದು ಅಂತಾ ಆಗಾಗ ಹೇಳುತ್ತಿದ್ದು ಹಾಗೂ ಗಂಡ ಆಗಾಗ ಸರಾಯಿ ಕುಡಿಯುವ ಚಟದವರಾಗಿದ್ದು, ಹೀಗಿರುವಾಗ ದಿನಾಂಕ 31-12-2017 ರಂದು ಗಂಡ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ನಂತರ ಹುಮನಾಬಾದಕ್ಕೆ ಹೋಗಿ ಅಂಗಡಿ ಮಾಡಿಕೊಂಡು ರಾತ್ರಿ ಮನೆಗೆ ಬಂದು ಊಟ ಮಾಡಿಕೊಂಡು ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಮನೆಯಲ್ಲಿ ಮಲಗಿಕೊಂಡಿರುತ್ತಾರೆ, ನಂತರ ದಿನಾಂಕ 01-01-2018 ರಂದು ಫಿರ್ಯಾದಿಯು ತನ್ನ ಗಂಡನಿಗೆ ಎಬ್ಬಿಸಲು ಅವರು ಮಾತಾಡುವ ಸ್ಥತಿಯಲ್ಲಿ ಇರದೆ ತೊದಲು ಧ್ವನಿಯಲ್ಲಿ ಮಾತಾಡುವುದು ಮತ್ತು ಅವರ ತಲೆಯ ಹತ್ತಿರ ಒಂದು ಹುಲ್ಲಿಗೆ ಹೊಡೆಯುವ ಕ್ರೀಮಿನಾಶಕ ಔಷಧಿಯನ್ನು ನೋಡಿ ಫಿರ್ಯಾದಿಯು ಚಿರಾಡುವಾಗ ಮಗ ಹಾಗೂ ಇತರರು ಬಂದು ಗಂಡನಿಗೆ ಎಬ್ಬಿಸಲು ಅವರು ವಾಂತಿ ಮಾಡಿರುತ್ತಾರೆ, ನಂತರ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿ ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತರುವಾಗ ದಿನಾಂಕ 01-01-2018 ರಂದು ದಾರಿಯ ಮಧ್ಯ ಮೃತಪಟ್ಟಿರುತ್ತಾರೆ, ಗಂಡ ಜಗನಾಥ@ಜಗಪ್ಪಾ ಅವರು ಈ ಮೂದಲು ಪಿ.ಕೆ.ಪಿ.ಎಸ್ ಹಳ್ಳಿಖೇಡ(ಕೆ) ಬ್ಯಾಂಕಿನಿಂದ ತೆಗೆದ ಸಾಲ ಹೇಗೆ ಕಟ್ಟುವುದು ಈ ವರ್ಷ ಹೊಲದಲ್ಲಿ ಬೆಳೆಗಳು ಸರಿಯಾಗಿ ಬೆಳೆದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹುಲ್ಲಿಗೆ ಹೋಡೆಯುವ ಕ್ರೀಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ವಗರೆ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 31-12-2017 ರಂದು 2030 ಗಂಟೆಗೆ ಬೆಳ್ಳುರಾದಿಂದ ಬೀದರ ವಾಯು ಸೇನೆ ಕೇಂದ್ರದ ಅಧಿಕಾರಿಯವರು ಕರೆ ಮುಖಾಂತರ ಮಾಹಿತಿ ತಿಳಿಸಿದ್ದೆನೆಂದರೆ ಬೀದರ ವಾಯುಸೇನಾ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರು ಬೆಳ್ಳುರಾ ಶಿವಾರದ ಕೆರೆಯಲ್ಲಿ ಈಜಾಡಲು ಹೋಗಿ ಕೆರೆಯ ನೀರಿನಲ್ಲಿ ಮುಳುಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಬೆಳ್ಳೂರಾ ಶಿವಾರದ ಘಟನೆ ಸ್ಥಳಕ್ಕೆ ಹೋಗಿ ಮೃತ ಮೋಹನ ಇವನ ಮೃತದೇಹವನ್ನು ಕೆರೆ ನೀರಿನಿಂದ ತೆಗೆಯಲು ಅಗ್ನಿ ಶಾಮಕ ದಳ ಹಾಗು ಇತರೆ ಖಾಸಗಿ ಈಜು ನುರಿತರ ಸಹಾಯದಿಂದ ಪ್ರಯತ್ನಿಸಿದ್ದು ನಂತರ ದಿನಾಂಕ 01-01-2018 ರಂದು ಹೈದ್ರಾಬಾದನ ಎನ್ಡಿಆರ್ಎಫ್ ತಂಡದ ಸಹಾಯದಿಂದ ಮೃತದೇಹವನ್ನು ಕೆರೆ ನೀರಿನಿಂದ ತೆಗೆಯಲಾಯಿತು, ನಂತರ ವಾಯು ಸೇನೆ ಅಧಿಕಾರಿಯವರಾದ ಮನಮೋಹನ ಸಿಂಗ ಫ್ಲೈಟ್ ಲೆಫ್ಟಿನೆಂಟ್ ಸ್ಟೆಷನ್ ಸೆಕ್ಯೂರಿಟಿ ಆಫಿಸರ್, ಏರ್ ಫೋರ್ಸ್ ಸ್ಟೆಷನ್ ಬೀದರ ರವರು ತಮ್ಮ ಇಂಗ್ಲಿಷನಲ್ಲಿನ ಲಿಖಿತ ದೂರು ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 31-12-2017 ರಂದು ಕೆರೆಯ ಹತ್ತಿರ ಹೋಗಿದ್ದು, ನಂತರ ಮೋಹನ ಹೊರತುಪಡಿಸಿ ಉಳಿದ ವಾಯು ಸೇನೆ ಯೋಧರಿಂದ ತಿಳಿದು ಬಂದಿದ್ದೆನೆಂದರೆ ಮೋಹನ ಇವರು ಈಜಾಡಲು ಕೆರೆಯ ಆಳ ನೀರಿನಲ್ಲಿ ಹೋಗಿದ್ದು ಕೆರೆಯ ನೀರಿನಲ್ಲಿ ಮುಳುಗಿರುತ್ತಾನೆ ಅಂತಾ ಗೊತ್ತಾಯಿತು, ನಂತರ ಜಿಲ್ಲಾ ಆಡಳಿತಕ್ಕೆ ಕರೆ ಮುಖಾಂತರ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಆ ಮೇರೆಗೆ ಮೃತದೇಹವನ್ನು ಹೊರತೆಗೆಯಲು ಜಿಲ್ಲಾ ಅಗ್ನಿಶಾಮಕ ದಳದವರಿಂದ ಮತ್ತು ಇತರೆ ತುರ್ತು ಸೇವೆಗಳಿಂದ ಪ್ರಯತ್ನಿಸಲಾಯಿತು ಮತ್ತು ಕಲಬುರ್ಗಿಯ ತಂಡದಿಂದ ಸಹ ಪ್ರಯತ್ನಿಸಲಾಯಿತು, ಕೊನೆಗೆ ಹೈದ್ರಾಬಾದನ  ಎನ್.ಡಿ.ಆರ್.ಎಫ್. ತಂಡದವರು ಜಿಲ್ಲಾ ಆಡಳಿತದವರ ಸಹಾಯದೊಂದಿಗೆ ವಿನಂತಿಸಿಕೊಂಡ ಮೇರೆಗೆ ಅವರು ಮೃತನ ಮೃತದೇಹವನ್ನು ದಿನಾಂಕ 01-01-2018 ರಂದು ಕೆರೆ ನೀರಿನಿಂದ ಹೊರತೆಗೆದರು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 01/2018, PÀ®A. 32, 34 PÉ.E PÁAiÉÄÝ :-
ದಿನಾಂಕ 01-01-2018 ರಂದು ಸಾಯಿ ಬಂಜಾರಾ ಧಾಬಾ ಹತ್ತರ ಒಬ್ಬನು ತನ್ನ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ತಮ್ಮ ವಶದಲ್ಲಿ ಸರಾಯಿ ಮಾರಾಟ ಮಾಡುವ ಕುರಿತು ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾನೆ ಅಂತಾ ಶಂಕರ ಎ.ಎಸ್.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರ ಜೋತೆ ಸಾಯಿ ಬಂಜಾರಾ ಧಾಬಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾಯಿ ಬಂಜಾರಾ ಧಾಬಾದ ಹತ್ತಿರ ಆರೋಪಿ ತುಳಸಿರಾಮ ತಂದೆ ಭಾನುದಾಸ ರಾಠೋಡ ವಯ: 32 ವರ್ಷ, ಜಾತಿ: ಲಮಾಣಿ, ಸಾ: ಭಂಡಾರ ಕುಮಟಾ ಕೀಶನ ನಾಯಕ ತಾಂಡಾ ತಾ: ಔರಾದ (ಬಿ) ಇತನು ತನ್ನ ವಶದಲ್ಲಿ ಒಂದು ಚೀಲದ ಗಂಟು ಇಟ್ಟುಕೊಂಡು ಕುಳಿತಿರುವಾಗ  ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಲ್ಲಿದ್ದ ಚೀಲ ಪರಿಶೀಲಿಸಿ ನೋಡಲು ಅದರಲ್ಲಿ 1) 180 ಎಂ.ಎಲ್ ವುಳ್ಳ 16 ಒಲ್ಡ್ ಟಾವರ್ನ ವಿಸ್ಕಿ ಮಧ್ಯದ ಪೇಪರ ಪಾಕೇಟಗಳು, 2) 180 ಎಂ.ಎಲ್ ವುಳ್ಳ 8 ಬ್ಯಾಗ್ ಪೈಪರ್ ಮಧ್ಯದ ಪೇಪರ ಪಾಕೇಟಗಳು, 3) 180 ಎಂ.ಎಲ್ ವುಳ್ಳ 6 ಮೆಕಡಾಲ್ ವಿಸ್ಕಿ ಮಧ್ಯದ ಪೇಪರ ಪಾಕೇಟಗಳು, 4) 180 ಎಂ.ಎಲ್ ವುಳ್ಳ 4 ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಮಧ್ಯದ ಬಾಟಲಿಗಳು, 5) 180 ಎಂ.ಎಲ್ ವುಳ್ಳ 8 ಮೆಕಡಾಲ್ ವಿಸ್ಕಿ ಮಧ್ಯದ ಬಾಟಲಿಗಳು, 06) 180 ಎಂ.ಎಲ್ ವುಳ್ಳ 4 ರಾಯಲ್ ಸ್ಟ್ಯಾಗ್ ವಿಸ್ಕಿ ಮಧ್ಯದ ಬಾಟಲಿಗಳು, 7) 180 ಎಂ.ಎಲ್ ವುಳ್ಳ 4 ಆಫಿಸರ್ಸ್ ಚಾಯಿಸ್ ವಿಸ್ಕಿ ಮಧ್ಯದ ಬಾಟಲಿಗಳು, 8) 180 ಎಂ.ಎಲ್ ವುಳ್ಳ 6 ಇಂಪೆರಿಯಲ್ ಬ್ಲ್ಯು ವಿಸ್ಕಿ ಮಧ್ಯದ ಬಾಟಲಿಗಳು, 9) 90 ಎಂ.ಎಲ್ ವುಳ್ಳ 7 ಮೆಕಡಾಲ್ ವಿಸ್ಕಿ ಮಧ್ಯದ ಬಾಟಲಿಗಳು, 10) 90 ಎಂ.ಎಲ್ ವುಳ್ಳ 7 ಇಂಪೆರಿಯಲ್ ಬ್ಲು ವಿಸ್ಕಿ ಮಧ್ಯದ ಬಾಟಲಿಗಳು, 11) 60 ಎಂ.ಎಲ್ ವುಳ್ಳ 9 ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಮಧ್ಯದ ಬಾಟಲಿಗಳು, 12) 90 ಎಂ.ಎಲ್ ವುಳ್ಳ 3 ರಾಯಲ್ ಸ್ಟ್ಯಾಗ್ ವಿಸ್ಕಿ ಮಧ್ಯದ ಬಾಟಲಿಗಳು ಹಾಗೂ 13) 650 ಎಂ.ಎಲ್ ವುಳ್ಳ 20 ಕಿಂಗ್ ಫಿಷರ್ ಸ್ಟ್ರಾಂಗ್ ಬಿಯರ್ ಬಾಟಲಿಗಳು ಇದ್ದವು, ಸದರಿ ಆರೋಪಿಗೆ ಮಧ್ಯದ ಬಾಟಲಿಗಳು ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಅನುಮತಿ ಪತ್ರ ಇದ್ದಲ್ಲಿ ಹಾಜರ ಪಡಿಸುವಂತೆ ತಿಳಿಸಿದಾಗ ತನ್ನ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತಾ ತಿಳಿಸಿದರಿಂದ ಪಂಚರ ಸಮಕ್ಷಮ ಅವನ ವಶದಲ್ಲಿ ದೋರೆತ ಎಲ್ಲಾ ಮಧ್ಯದ ಬಾಟಲಿಗಳು ಅ.ಕಿ 11,792/- ರೂ ದಷ್ಟು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ವಶಕ್ಕೆ ತೆಗೆದುಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸುಧಾರಿತ ಗಸ್ತು ಸಂ 19 ಬಡದಾಳ ಗ್ರಾಮದ ಬೀಟ್ ಸಿಬ್ಬಂದಿಯಾದ ಭಾಗಣ್ಣ ಸಿಪಿಸಿ-167 ರವರು ಬಡದಾಳ ಗ್ರಾಮದ ದರ್ಗಾ ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ ಅಂತ ತಿಳಿಸಿದ ಮೇರೆಗೆ ಪಿ.ಎಸ್.ಊ. ಅಫಜಲಪೂರ ಠಾಣೆ ಹಾಗು  ಸಿಬ್ಬಂದಿ ಮತ್ತು ಪಂಚರೊಂದಿಗೆ ಬಡದಾಳ ಗ್ರಾಮದ ದರ್ಗಾ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು, ದರ್ಗಾ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು  ಖಚಿತಪಡಿಸಿಕೊಂಡು  ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಶಿವಾನಂದ ತಂದೆ ಮಹಾದೇವಪ್ಪ ಶಿರೂರ ಸಾ||ಬಡದಾಳ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2050/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 01-01-2018 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾನಗರ ಬಡಾವಣೆಯಲ್ಲಿ ಒಬ್ಬ ವ್ಯಕ್ತಿ ಸರಕಾರದ ಯಾವುದೆ ಪರವಾನಿಗೆ ಇಲ್ಲದೆ ಅನಧೀಕೃತವಾಗಿ ಮಧ್ಯದ ಮಾರಾಟ ಮಾಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿಯಂತೆ ಸ್ಥಳಕ್ಕೆ ಹೋಗಿ ನೋಡಲು ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರದಲ್ಲಿ ಇರುವ ಪಾನ ಶ್ಯಾಪ ಮುಂದೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ ಚೀಲದಲ್ಲಿ ಮಧ್ಯದ ಬಾಟಲಿಗಳು ಮತ್ತು ಟೇಟ್ರಾ ಪಾಕೇಟಗಳನ್ನು ಇಟ್ಟುಕೊಂಡು ಮಧ್ಯ ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಸಿಬ್ಬಂದಿಯವರ ಸಹಾಯ ದಿಂದ ಪಂಚರ ಸಮಕ್ಷಮ ದಾಳಿ ಮಾಡಿ ಮಧ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದುಕೊಂಡು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಸವರಾಜ ತಂದೆ ರಾಮಚಂದ್ರಪ್ಪ ಕೊಡಿ ಸಾ: ಗಂಗಾ ನಗರ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ ನಗದು ಹಣ 525/-ರೂ ದೊರೆತಿದ್ದು ಮತ್ತು ಸ್ಥಳದಲ್ಲಿ ಪರಿಶೀಲಿಸಿ ನೋಡಲು ಮಾರಾಟ ಕುರಿತು ಇಟ್ಟಿದ 1) 180 ಎಮ್.ಎಲ್. 4 ಇಂಪಿರಿಯಲ್ ಬ್ಲೂ ವಿಸ್ಕಿ ಬಾಟಲಗಳು ಒಂದು ಬಾಟಲಕ್ಕೆ 148 ರೂ 26 ಪೈಸೆ ಒಟ್ಟು 593 ರೂ 04 ಪೈಸೆ 2) 180 ಎಮ್.ಎಲ್. 10 ಆಪೀಸರ್ ಚೌಯಿಸ್ ವಿಸ್ಕಿ ಒಂದು ಬಾಟಲಕ್ಕೆ 82 ರೂ 85 ಪೈಸೆ ಒಟ್ಟು 828 ರೂ 50 ಪೈಸೆ 3) ಓರಿಜಿನಲ್ ಚ್ವಾಯಿಸ್ ವಿಸ್ಕಿ 90 ಎಮ್.ಎಲ್.ದ್ದು 50 ಟೇಟ್ರಾ ಪಾಕೇಟಗಳಿದ್ದು ಒಂದಕ್ಕೆ 28.ರೂ 13 ಪೈಸೆ. ಒಟ್ಟು ಕಿಮ್ಮತ್ತು 1406. 50 ಪೈಸೆ. ಹೀಗೆ ಒಟ್ಟು 2828 ರೂ 04 ಪೈಸೆ ಕಿಮ್ಮತ್ತಿನ ಮಾಲು ಮತ್ತು ನಗದು ಹಣ 525/-ರೂ ಇದ್ದು ಅವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-01-2018 ರಂದು ಸಾಯಂಕಾಲ ನಾನು ನಮ್ಮೂರಿನಲ್ಲಿದ್ದಾಗ ನಮ್ಮ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಸಾ|| ಮೈಂದರ್ಗಿ ಇವರು ನನಗೆ ಪೋನ ಮಾಡಿ ತಮ್ಮ ಮಗಳಾದ ಮಹಾಲಕ್ಷ್ಮೀ ಇವಳಿಗೆ ಮೈಯಲ್ಲಿ ಆರಾಮ ಇಲ್ಲದ ಕಾರಣ ಅವಳನ್ನು ಅವಳ ಗಂಡನಾದ ಅಮರ ಮೇತ್ರೆ ಈತನು ಕಲಬುರಗಿಯ ದನ್ವಂತ್ರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದೆನೆ ನೀವು ಬನ್ನಿ ಅಂತಾ ನನಗೆ ಪೋನ್ ಮಾಡಿದ್ದಾನೆ, ಈಗ ನಾನು ಮೈಂದರ್ಗಿಯಿಂದ ಮೋಟರ ಸೈಕಲ ಮೇಲೆ ಕಲಬುರಗಿಗೆ ಹೊರಟಿದ್ದೆನೆ, ನೀನು ಕಲಬುರಗಿಗೆ ಬಾ ಅಂತಾ ತಿಳಿಸಿದನು. ಆಗ ನಾನು ಈಗ ನನಗೆ ಕೆಲಸ ಇದೆ ಬೆಳಿಗ್ಗೆ ಬರುತ್ತೇನೆ ಅಂತಾ ತಿಳಿಸಿರುತ್ತೇನೆ, ಸಂಜೆ 6:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ಸದರಿ ನನ್ನ ಮೌಸಿಯ ಮಗನಾದ ಕಲ್ಯಾಣಿ ದೊಡ್ಡಮನಿ ಈತನ ಮೋಬೈಲನಿಂದ ಯಾರೊ ಅಪರಿಚಿತರೊಬ್ಬರು ನನ್ನ ಮೋಬೈಲಿಗೆ ಕರೆ ಮಾಡಿ, ನಾವು ಮಾತಾಡುತ್ತಿರುವ ಮೋಬೈಲ ಫೋನಿನವರು ದುಧನಿ ಕಡೆಯಿಂದ ಸಾಯಂಕಾಲ 06:30 ಗಂಟೆಯ ಸುಮಾರಿಗೆ ಮೋಟರ ಸೈಕಲ ಮೇಲೆ ಅಫಜಲಪೂರ ಕಡೆಗೆ ಬರುತ್ತಿದ್ದಾಗ ಅಫಜಲಪೂರ ದುಧನಿ ರಸ್ತೆಗೆ ಇರುವ ಮಾದಾಬಾಳ ತಾಂಡಾದ ಕ್ಯಾನಾಲಿನ ಬ್ರೀಜ್ ಹತ್ತಿರ, ಕ್ಯಾನಾಲ ರೋಡಿನ ಕಡೆಯಿಂದ ಒಂದು ಜೆ.ಸಿ.ಬಿ ಚಾಲಕ ಜೆಸಿಬಿಯನ್ನು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಮೇನ್ ರೋಡಿನ ಮೇಲೆ ಬರುತ್ತಿದ್ದ ಮೋಟರ ಸೈಕಲ ಮೇಲೆ ಬರುತ್ತಿದ್ದವರಿಗೆ ಡಿಕ್ಕಿ ಪಡಿಸಿದ್ದರಿಂದ, ಸದರಿ ಮೋಟರ ಸೈಕಲ ಸವಾರನು ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಸದರಿ ಮೃತ ಪಟ್ಟ ವ್ಯೆಕ್ತಿಯ ಗುರುತು ಗೊತ್ತಾಗದ ಕಾರಣ ಸದರಿ ಮೃತನ ಜೇಬಿನಿಂದ ಕೆಳಗಡೆ ಬಿದ್ದ ಮೋಬೈಲನ್ನು ತಗೆದು ನೋಡಲಾಗಿ ಮೃತನು ಕೋನೆಯದಾಗಿ ನಿಮ್ಮ ನಂಬರಗೆ ಪೋನ್ ಮಾಡಿದ್ದರಿಂದ ವಿಷಯ ತಿಳಿಸಲು ಪೋನ ಮಾಡಿರುತ್ತೇವೆ ಎಂದು ತಿಳಿಸಿದರು. ಆಗ ನಾನು ಸದರಿ ನನಗೆ ಪೋನ್ ಮಾಡಿದವರಗೆ ಸದರಿ ವ್ಯೆಕ್ತಿ ನಮ್ಮ ಮೌಸಿಯ ಮಗನಾದ ಕಲ್ಯಾಣಿ ಇರುತ್ತಾನೆ ನಾವು ಈಗಲೆ ಬರುತ್ತೇವೆ, ನಾವು ಬರುವವರೆಗೆ ಶವವನ್ನು ತಗೆಯಬೇಡಿ ಅಲ್ಲೆ ಬಿಡಿ ಎಂದು ತಿಳಿಸಿರುತ್ತೇನೆ. ನಂತರ ಸದರಿ ವಿಷಯವನ್ನು ಮೈಂದರ್ಗಿಯ ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ಎಕ್ಸಿಡೆಂಟ್ ಆದ ಜಾಗಕ್ಕೆ ಬರಲು ತಿಳಿಸಿರುತ್ತೇನೆ. ರಾತ್ರಿ 8:00 ಗಂಟೆಗೆ ಸುಮಾರಿಗೆ ಎಕ್ಸಿಡೆಂಟ ಆದ ಜಾಗಕ್ಕೆ ಬಂದು ನೋಡಲಾಗಿ, ನಮ್ಮ ಮೌಸಿಯ ಮಗನಾದ ಕಲ್ಯಾಣಿಯ ಶವ ಇದ್ದು, ಅವನ ಮುಖಕ್ಕೆ ಬಲ ಕಪಾಳಿನಿಂದ ಗದ್ದದ ಒರೆಗೆ ಭಾರಿ ರಕ್ತಗಾಯ ಹಾಗೂ  ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ನಮ್ಮ ಅಣ್ಣನು ಚಲಾಯಿಸಿಕೊಂಡು ಬರುತ್ತಿದ್ದ ಹಿರೋ ಹೊಂಡಾ ಸಿಡಿ ಡಿಲೆಕ್ಸ ಮೋಟರ ಸೈಕಲ ನಂ ಕೆಎ-32 ಟಿಆರ್-9739 ಇದ್ದು, ಡಿಕ್ಕಿ ಪಡಿಸಿದ ಜೆ.ಸಿ,ಬಿ ಸ್ಥಳದಲ್ಲೆ ಇದ್ದು, ಅದರ ಚೆಸ್ಸಿ ನಂ 5602200 ಇಂಜೆನ್ ನಂ 336/40106/0/195683 ಅಂತಾ ಇರುತ್ತದೆ. ಸದರಿ ಡಿಕ್ಕಿಪಡಿಸಿದ ಜೆ.ಸಿ.ಬಿ ಚಾಲಕನ ಬಗ್ಗೆ ವಿಚಾರಿಸಲಾಗಿ, ಜೆ.ಸಿ.ಬಿ ಚಾಲಕನ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಅಂತಾ ಶ್ರೀ ರವಿಕುಮಾರ ತಂದೆ ಶರಣಬಸಪ್ಪ ಯಳಸಂಗಿ ಸಾ|| ನಿಂಬರ್ಗಾ ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.