Police Bhavan Kalaburagi

Police Bhavan Kalaburagi

Tuesday, January 2, 2018

BIDAR DISTRICT DAILY CRIME UPDATE 02-01-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-01-2018

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 01/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 01-01-2018 ರಂದು ಫಿರ್ಯಾದಿ ಕಸ್ತೂರಬಾಯಿ ಗಂಡ ಜಗನಾಥ@ ಜಗಪ್ಪಾ ಲಾಲಪನೊರ, ವಯ: 45 ವರ್ಷ, ಜಾತಿ: ಕಬ್ಬಲಿಗ, ಸಾ: ಮುಸ್ತಾಪೂರ ರವರ ಗಂಡ ಜಗನಾಥ ರವರಿಗೆ ಮುಸ್ತಾಪೂರ ಗ್ರಾಮದ ಹೊಲ ಸರ್ವೆ ನಂ. 50/2 ರಲ್ಲಿ 2 ಎಕ್ಕರೆ 31 ಗುಂಟೆ ಜಮೀನು ಇದ್ದು, ಸದರಿ ಜಮೀನು ಸಾಗುವಳಿ ಮಾಡಲು ಹಳ್ಳಿಖೇಡ(ಕೆ) ಗ್ರಾಮದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ 47,000/- ರೂಪಾಯಿ ಸಾಲ ಮಾಡಿ ಸದರಿ ಜಮೀನು ಸಾಗುವಳಿ ಮಾಡಿರುತ್ತಾರೆ, ಸದರಿ ಹೊಲದಲ್ಲಿ ಮಳೆ ಹೆಚ್ಚಾಗಿ ನೀರು ನಿಂತು ಬೇಳೆ ಹಾಳಾಗಿರುತ್ತದೆ, ಗಂಡ ಬ್ಯಾಂಕಿನಿಂದ ತಂದ ಸಾಲ ಹೇಗೆ ತಿರಿಸುವುದು ಅಂತಾ ಆಗಾಗ ಹೇಳುತ್ತಿದ್ದು ಹಾಗೂ ಗಂಡ ಆಗಾಗ ಸರಾಯಿ ಕುಡಿಯುವ ಚಟದವರಾಗಿದ್ದು, ಹೀಗಿರುವಾಗ ದಿನಾಂಕ 31-12-2017 ರಂದು ಗಂಡ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ನಂತರ ಹುಮನಾಬಾದಕ್ಕೆ ಹೋಗಿ ಅಂಗಡಿ ಮಾಡಿಕೊಂಡು ರಾತ್ರಿ ಮನೆಗೆ ಬಂದು ಊಟ ಮಾಡಿಕೊಂಡು ಹೊರಗೆ ಹೋಗಿ ಮತ್ತೆ ಮನೆಗೆ ಬಂದು ಮನೆಯಲ್ಲಿ ಮಲಗಿಕೊಂಡಿರುತ್ತಾರೆ, ನಂತರ ದಿನಾಂಕ 01-01-2018 ರಂದು ಫಿರ್ಯಾದಿಯು ತನ್ನ ಗಂಡನಿಗೆ ಎಬ್ಬಿಸಲು ಅವರು ಮಾತಾಡುವ ಸ್ಥತಿಯಲ್ಲಿ ಇರದೆ ತೊದಲು ಧ್ವನಿಯಲ್ಲಿ ಮಾತಾಡುವುದು ಮತ್ತು ಅವರ ತಲೆಯ ಹತ್ತಿರ ಒಂದು ಹುಲ್ಲಿಗೆ ಹೊಡೆಯುವ ಕ್ರೀಮಿನಾಶಕ ಔಷಧಿಯನ್ನು ನೋಡಿ ಫಿರ್ಯಾದಿಯು ಚಿರಾಡುವಾಗ ಮಗ ಹಾಗೂ ಇತರರು ಬಂದು ಗಂಡನಿಗೆ ಎಬ್ಬಿಸಲು ಅವರು ವಾಂತಿ ಮಾಡಿರುತ್ತಾರೆ, ನಂತರ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿ ಅಲ್ಲಿಂದ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತರುವಾಗ ದಿನಾಂಕ 01-01-2018 ರಂದು ದಾರಿಯ ಮಧ್ಯ ಮೃತಪಟ್ಟಿರುತ್ತಾರೆ, ಗಂಡ ಜಗನಾಥ@ಜಗಪ್ಪಾ ಅವರು ಈ ಮೂದಲು ಪಿ.ಕೆ.ಪಿ.ಎಸ್ ಹಳ್ಳಿಖೇಡ(ಕೆ) ಬ್ಯಾಂಕಿನಿಂದ ತೆಗೆದ ಸಾಲ ಹೇಗೆ ಕಟ್ಟುವುದು ಈ ವರ್ಷ ಹೊಲದಲ್ಲಿ ಬೆಳೆಗಳು ಸರಿಯಾಗಿ ಬೆಳೆದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹುಲ್ಲಿಗೆ ಹೋಡೆಯುವ ಕ್ರೀಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ವಗರೆ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2018, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 31-12-2017 ರಂದು 2030 ಗಂಟೆಗೆ ಬೆಳ್ಳುರಾದಿಂದ ಬೀದರ ವಾಯು ಸೇನೆ ಕೇಂದ್ರದ ಅಧಿಕಾರಿಯವರು ಕರೆ ಮುಖಾಂತರ ಮಾಹಿತಿ ತಿಳಿಸಿದ್ದೆನೆಂದರೆ ಬೀದರ ವಾಯುಸೇನಾ ತರಬೇತಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರು ಬೆಳ್ಳುರಾ ಶಿವಾರದ ಕೆರೆಯಲ್ಲಿ ಈಜಾಡಲು ಹೋಗಿ ಕೆರೆಯ ನೀರಿನಲ್ಲಿ ಮುಳುಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಬೆಳ್ಳೂರಾ ಶಿವಾರದ ಘಟನೆ ಸ್ಥಳಕ್ಕೆ ಹೋಗಿ ಮೃತ ಮೋಹನ ಇವನ ಮೃತದೇಹವನ್ನು ಕೆರೆ ನೀರಿನಿಂದ ತೆಗೆಯಲು ಅಗ್ನಿ ಶಾಮಕ ದಳ ಹಾಗು ಇತರೆ ಖಾಸಗಿ ಈಜು ನುರಿತರ ಸಹಾಯದಿಂದ ಪ್ರಯತ್ನಿಸಿದ್ದು ನಂತರ ದಿನಾಂಕ 01-01-2018 ರಂದು ಹೈದ್ರಾಬಾದನ ಎನ್ಡಿಆರ್ಎಫ್ ತಂಡದ ಸಹಾಯದಿಂದ ಮೃತದೇಹವನ್ನು ಕೆರೆ ನೀರಿನಿಂದ ತೆಗೆಯಲಾಯಿತು, ನಂತರ ವಾಯು ಸೇನೆ ಅಧಿಕಾರಿಯವರಾದ ಮನಮೋಹನ ಸಿಂಗ ಫ್ಲೈಟ್ ಲೆಫ್ಟಿನೆಂಟ್ ಸ್ಟೆಷನ್ ಸೆಕ್ಯೂರಿಟಿ ಆಫಿಸರ್, ಏರ್ ಫೋರ್ಸ್ ಸ್ಟೆಷನ್ ಬೀದರ ರವರು ತಮ್ಮ ಇಂಗ್ಲಿಷನಲ್ಲಿನ ಲಿಖಿತ ದೂರು ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ 31-12-2017 ರಂದು ಕೆರೆಯ ಹತ್ತಿರ ಹೋಗಿದ್ದು, ನಂತರ ಮೋಹನ ಹೊರತುಪಡಿಸಿ ಉಳಿದ ವಾಯು ಸೇನೆ ಯೋಧರಿಂದ ತಿಳಿದು ಬಂದಿದ್ದೆನೆಂದರೆ ಮೋಹನ ಇವರು ಈಜಾಡಲು ಕೆರೆಯ ಆಳ ನೀರಿನಲ್ಲಿ ಹೋಗಿದ್ದು ಕೆರೆಯ ನೀರಿನಲ್ಲಿ ಮುಳುಗಿರುತ್ತಾನೆ ಅಂತಾ ಗೊತ್ತಾಯಿತು, ನಂತರ ಜಿಲ್ಲಾ ಆಡಳಿತಕ್ಕೆ ಕರೆ ಮುಖಾಂತರ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಆ ಮೇರೆಗೆ ಮೃತದೇಹವನ್ನು ಹೊರತೆಗೆಯಲು ಜಿಲ್ಲಾ ಅಗ್ನಿಶಾಮಕ ದಳದವರಿಂದ ಮತ್ತು ಇತರೆ ತುರ್ತು ಸೇವೆಗಳಿಂದ ಪ್ರಯತ್ನಿಸಲಾಯಿತು ಮತ್ತು ಕಲಬುರ್ಗಿಯ ತಂಡದಿಂದ ಸಹ ಪ್ರಯತ್ನಿಸಲಾಯಿತು, ಕೊನೆಗೆ ಹೈದ್ರಾಬಾದನ  ಎನ್.ಡಿ.ಆರ್.ಎಫ್. ತಂಡದವರು ಜಿಲ್ಲಾ ಆಡಳಿತದವರ ಸಹಾಯದೊಂದಿಗೆ ವಿನಂತಿಸಿಕೊಂಡ ಮೇರೆಗೆ ಅವರು ಮೃತನ ಮೃತದೇಹವನ್ನು ದಿನಾಂಕ 01-01-2018 ರಂದು ಕೆರೆ ನೀರಿನಿಂದ ಹೊರತೆಗೆದರು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 01/2018, PÀ®A. 32, 34 PÉ.E PÁAiÉÄÝ :-
ದಿನಾಂಕ 01-01-2018 ರಂದು ಸಾಯಿ ಬಂಜಾರಾ ಧಾಬಾ ಹತ್ತರ ಒಬ್ಬನು ತನ್ನ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದೇ ಅನಧಿಕೃತವಾಗಿ ತಮ್ಮ ವಶದಲ್ಲಿ ಸರಾಯಿ ಮಾರಾಟ ಮಾಡುವ ಕುರಿತು ವಶದಲ್ಲಿ ಇಟ್ಟುಕೊಂಡು ಕುಳಿತಿದ್ದಾನೆ ಅಂತಾ ಶಂಕರ ಎ.ಎಸ್.ಐ ಭಾಲ್ಕಿ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಎ.ಎಸ.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರ ಜೋತೆ ಸಾಯಿ ಬಂಜಾರಾ ಧಾಬಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾಯಿ ಬಂಜಾರಾ ಧಾಬಾದ ಹತ್ತಿರ ಆರೋಪಿ ತುಳಸಿರಾಮ ತಂದೆ ಭಾನುದಾಸ ರಾಠೋಡ ವಯ: 32 ವರ್ಷ, ಜಾತಿ: ಲಮಾಣಿ, ಸಾ: ಭಂಡಾರ ಕುಮಟಾ ಕೀಶನ ನಾಯಕ ತಾಂಡಾ ತಾ: ಔರಾದ (ಬಿ) ಇತನು ತನ್ನ ವಶದಲ್ಲಿ ಒಂದು ಚೀಲದ ಗಂಟು ಇಟ್ಟುಕೊಂಡು ಕುಳಿತಿರುವಾಗ  ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಅವನ ವಶದಲ್ಲಿದ್ದ ಚೀಲ ಪರಿಶೀಲಿಸಿ ನೋಡಲು ಅದರಲ್ಲಿ 1) 180 ಎಂ.ಎಲ್ ವುಳ್ಳ 16 ಒಲ್ಡ್ ಟಾವರ್ನ ವಿಸ್ಕಿ ಮಧ್ಯದ ಪೇಪರ ಪಾಕೇಟಗಳು, 2) 180 ಎಂ.ಎಲ್ ವುಳ್ಳ 8 ಬ್ಯಾಗ್ ಪೈಪರ್ ಮಧ್ಯದ ಪೇಪರ ಪಾಕೇಟಗಳು, 3) 180 ಎಂ.ಎಲ್ ವುಳ್ಳ 6 ಮೆಕಡಾಲ್ ವಿಸ್ಕಿ ಮಧ್ಯದ ಪೇಪರ ಪಾಕೇಟಗಳು, 4) 180 ಎಂ.ಎಲ್ ವುಳ್ಳ 4 ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಮಧ್ಯದ ಬಾಟಲಿಗಳು, 5) 180 ಎಂ.ಎಲ್ ವುಳ್ಳ 8 ಮೆಕಡಾಲ್ ವಿಸ್ಕಿ ಮಧ್ಯದ ಬಾಟಲಿಗಳು, 06) 180 ಎಂ.ಎಲ್ ವುಳ್ಳ 4 ರಾಯಲ್ ಸ್ಟ್ಯಾಗ್ ವಿಸ್ಕಿ ಮಧ್ಯದ ಬಾಟಲಿಗಳು, 7) 180 ಎಂ.ಎಲ್ ವುಳ್ಳ 4 ಆಫಿಸರ್ಸ್ ಚಾಯಿಸ್ ವಿಸ್ಕಿ ಮಧ್ಯದ ಬಾಟಲಿಗಳು, 8) 180 ಎಂ.ಎಲ್ ವುಳ್ಳ 6 ಇಂಪೆರಿಯಲ್ ಬ್ಲ್ಯು ವಿಸ್ಕಿ ಮಧ್ಯದ ಬಾಟಲಿಗಳು, 9) 90 ಎಂ.ಎಲ್ ವುಳ್ಳ 7 ಮೆಕಡಾಲ್ ವಿಸ್ಕಿ ಮಧ್ಯದ ಬಾಟಲಿಗಳು, 10) 90 ಎಂ.ಎಲ್ ವುಳ್ಳ 7 ಇಂಪೆರಿಯಲ್ ಬ್ಲು ವಿಸ್ಕಿ ಮಧ್ಯದ ಬಾಟಲಿಗಳು, 11) 60 ಎಂ.ಎಲ್ ವುಳ್ಳ 9 ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಮಧ್ಯದ ಬಾಟಲಿಗಳು, 12) 90 ಎಂ.ಎಲ್ ವುಳ್ಳ 3 ರಾಯಲ್ ಸ್ಟ್ಯಾಗ್ ವಿಸ್ಕಿ ಮಧ್ಯದ ಬಾಟಲಿಗಳು ಹಾಗೂ 13) 650 ಎಂ.ಎಲ್ ವುಳ್ಳ 20 ಕಿಂಗ್ ಫಿಷರ್ ಸ್ಟ್ರಾಂಗ್ ಬಿಯರ್ ಬಾಟಲಿಗಳು ಇದ್ದವು, ಸದರಿ ಆರೋಪಿಗೆ ಮಧ್ಯದ ಬಾಟಲಿಗಳು ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಂದ ಪಡೆದ ಯಾವುದಾರು ಅನುಮತಿ ಪತ್ರ ಇದ್ದಲ್ಲಿ ಹಾಜರ ಪಡಿಸುವಂತೆ ತಿಳಿಸಿದಾಗ ತನ್ನ ಹತ್ತಿರ ಯಾವದೆ ಅನುಮತಿ ಪತ್ರ ಇರುವದಿಲ್ಲಾ ಅಂತಾ ತಿಳಿಸಿದರಿಂದ ಪಂಚರ ಸಮಕ್ಷಮ ಅವನ ವಶದಲ್ಲಿ ದೋರೆತ ಎಲ್ಲಾ ಮಧ್ಯದ ಬಾಟಲಿಗಳು ಅ.ಕಿ 11,792/- ರೂ ದಷ್ಟು, ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿಗೆ ವಶಕ್ಕೆ ತೆಗೆದುಕೊಂಡು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: