Yadgir District Reported Crimes
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ ;- 355/2018. ಕಲಂಃ 341.447.427.504.506 ಸಂ:34 ಐಪಿಸಿ;- ದಿನಾಂಕ:24/07/2018 ರಂದು ಮುಂಜಾನೆ 11-30 .ಎ.ಎಂ ಕ್ಕೆ ಠಾಣೆಗೆ ಪಿಯರ್ಾದಿ ಶ್ರೀ ನಿಂಗಪ್ಪ ತಂದೆ ದ್ಯಾವಪ್ಪ ತಳವಾರ ವಯ|| 35 ಉ|| ಒಕ್ಕಲತನ ಜಾ|| ಕಬ್ಬಲಿಗ ಸಾ|| ಬಲಕಲ ತಾ|| ಶಹಾಪೂರ ರವರು ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಅಜರ್ಿ ಸಲ್ಲಿಸಿದ್ದೆನೆಂದರೆ ಬಲಕಲ ಗ್ರಾಮದ ಸಿಮಾಂತರದಲ್ಲಿ ನನ್ನದು 6 ಎಕರೆ ಜಮೀನು ಇದ್ದು ಆ ಜಮೀನಿನಲ್ಲಿ ಈಗ ಸುಮಾರು 30 ದಿವಸಗಳ ಹಿಂದೆ ಹತ್ತಿ ಬೀಜ ನೆಟ್ಟಿದ್ದು ಹತ್ತಿ ಬೆಳೆ ಈಗ ಬೆಳೆದಿದ್ದು ಅಂದಾಜು ಒಂದು ಗೇಣಿನಷ್ಟಾಗಿರುತ್ತದೆ. ಹಿಗಿದ್ದು ನಿನ್ನೆ ದಿನಾಂಕ: 23/07/2018 ರಂದು ಸಾಯಂಕಾಲ 5 ಪಿ.ಎಂ ದಿಂದ 7-00 ಪಿ.ಎಂದ ವರೆಗೆ ನಮ್ಮ ಹತ್ತಿ ಬೆಳೆಯ ಹೊಲದಲ್ಲಿ ಸುನೀಲಗೌಡ ತಂದೆ ಮಲಕರಡ್ಡಿ ಅರಕೇರಿ ಸಾ|| ತಂಗಡಗಿ ಹಾ|| ವ|| ಯಾದಗೀರ ಈತನು ತಂಗಡಗಿ ಗ್ರಾಮದ ಅವರ ಕಾಕನ ಮಗನಾದ ಮಲ್ಲು ತಂದೆ ಈಶಣ್ಣ , ಹಾಗೂ ಸಾಬಣ್ಣ ತಂದೆ ಹಣಮಂತ್ರಾಯ ಮರಮಕಲ್, ಅಮ್ಮಾಸಾ ತಂದೆ ಮದರಸಾಬ ಮರಮಕಲ್ ನಾಲ್ಕು ಜನರು ಕೂಡಿ ಅವರ ಕಾಕನ ಮಗನಾದ ಮಲ್ಲು ಈತನ ಟ್ರ್ಯಾಕ್ಟರ ತೆಗೆದುಕೊಂಡು ಬಂದು ಟ್ರ್ಯಾಕ್ಟರಕ್ಕೆ ಟಿಲ್ಲರ ಅಳವಡಿಸಿಕೊಂಡು ಬಂದವರೆ ನಮ್ಮ ಹತ್ತಿ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ತಾನು ತಂದ ಟ್ರ್ಯಾಕ್ಟರನಿಂದ ಟ್ರಿಲ್ಲರ ಹೊಡೆದು ನಮ್ಮ ಹತ್ತಿ ಬೆಳೆ ಹಾನಿ ಮಾಡಿರುತ್ತಾರೆ. ಇದನ್ನು ನೋಡಿದ ನಮ್ಮ ಪಕ್ಕದ ಹೊಲದ ಮಾನಮ್ಮ ಗಂಡ ಈರಪ್ಪ ಮುನಮುಟಗಿ ಇವಳು ನೊಡಿ ಅವಳ ಮಗನಾದ ಮರೆಪ್ಪ ತಂದೆ ಈರಪ್ಪ ಮುನಮುಟಗಿ ಈತನಿಗೆ ನನ್ನ ಬಳಿ ಕೊಟ್ಟು ಕಳುಹಿಸಿದ್ದು. ಈಶಪ್ಪನು ಬಂದು ನನಗೆ ವಿಷಯ ತಿಳಿಸಿದ ಮೇರೆಗೆ ನನು ಓಡಿ ಹೊಲಕ್ಕೆ ಹೋದಾಗ ನಮ್ಮ ಹೊಲದ ಹತ್ತಿರ ಗುಡಿಸಲದಲ್ಲಿ ಕುಳಿತ ಸುನೀಲಗೌಡ ಈತನು ನನಗೆ ನಮ್ಮ ಹೊಲದಲ್ಲಿ ಹೊಗದಂತೆ ತಡೆದು ನಿಲ್ಲಿಸಿ ನನಗೆ ಮಗನೆ ನಾವು ನಿಮ್ಮ ಅಪ್ಪನಿಗೆ ಹಣ ಕೊಟ್ಟಿದ್ದೆವು ಹೊಲ ನಮ್ಮದಿದೆ ನಾವೇನು ಬೆಕಾದರು ಮಾಡುತ್ತೆವೆ ನೀನ್ಯಾರು ಕೇಳವ ಅಂತ ಅಂದು ದಬ್ಬಿದನು ನಂತರ ನಿನೇನಾದರು ಹೊಲದಲ್ಲಿ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಸುನಿಲಗೌಡ ಮತ್ತು ಅವನೊಂದಿಗಿದ್ದ ಎಲ್ಲರೂ ಕೂಡಿ ಜೀವದ ಭಯ ಹಾಕಿದರು. ಸ್ವಲ್ಪ ಸಮಯದ ನಂತರ ತಾವು ತಂದ ಟ್ರ್ಯಾಕ್ಟರ ತಡಗೆದುಕೊಂಡು ಹೋದರು. ಇದಕ್ಕಿಂತ ಮುಂಚೆ 15 ದಿವಸಗಳ ಹಿಂದೆ ಸುನೀಲಗೌಡ ಈತನು ತಂಗಡಗಿಗೆ ನನಗೆ ಕರೆದು ನಿನ್ನ ಎರಡು ಪೋಟೊ, ಆಧಾರ ಕಾರ್ಡ ಕೊಡು ನಿನ್ನ ಹೆಸರಿನಲ್ಲಿ ಒಂದು ಬ್ಯಾಂಕಿನಲ್ಲಿ ಅಕಾಂಟ ತಗೆಸುತ್ತೆನೆ ಅಂತ ಹೇಳಿದನು ನಾನು ಆಗ ಆಯಿತು ಕೊಡುತ್ತೆನೆಂದು ಹೇಳಿ ಬಂದವನು ಮರಳಿ ಅವನ ಹತ್ತಿರ ಹೋಗಿರುವದಿಲ್ಲ. ಇದೆ ದ್ವೇಶದಿಂದ ನಿನ್ನೆ ದಿನಾಂಕ: 23/07/2014 ರಂದು ಸಾಯಂಕಾಲ 5-00 ಪಿಎಂ ಕ್ಕೆ ಬಲಕಲ್ ಗ್ರಾಮದ ನಮ್ಮ ಹೋಲಕ್ಕೆ ಬಂದು ನಮ್ಮ ಹೊಲದಲ್ಲಿ ಹಾಕಿದ ಹತ್ತಿ ಬೆಳೆಗೆ ಟ್ರ್ಯಾಕ್ಟರ ಟ್ರಿಲ್ಲರ ಹೊಡೆದಿರುತ್ತಾನೆ. ಹಾಗೂ ಈ ಹಿಂದೆ ನಮ್ಮ ತಂದೆ ಅವರ ಹತ್ತಿರ ಸಾಲ ಪಡೆದಿದ್ದರಿಂದ ಸುನೀಲಗೌಡನು ಈತನು ನಮ್ಮ ತಂದೆಗೆ ಪಿಡಿಸುತ್ತಿದ್ದರಿಂದ ನಮ್ಮ ತಂದೆ ತಾಯಿ ಇಬ್ಬರೂ ಕೂಡಿ ಸುನಿಲಗೌಡನಿಗೆ ಸುಮಾರು ವರ್ಷಗಳ ವರೆಗೆ ಹೊಲ ಲೀಜಿಗೆ ಕೊಟ್ಟಿದ್ದರು ನಂತರ ಈಗ 3 ವರ್ಷಗಳಿಂದ ಲೀಜ ಮುಗಿದ ನಂತರ ಸುನೀಲಗೌಡನು ನಮ್ಮ ಹೊಲ ನಮಗೆ ಕೊಟ್ಟಿದ್ದನು. ನಾವೆ ನಮ್ಮ ಹೊಲವನ್ನು ಸಾಗುವಳಿ ಮಾಡಿಕೊಂಡಿದ್ದೆವು. ಅದರು ಸಹ ನಮಗೆ ಬಿಡದೆ ಮತ್ತೆ ನಮ್ಮ ಹೊಲ ರಿಜಿಸ್ಟರ ಮಾಡಿಕೊಡಿರಿ ಅಂತ ಪಿಡಿಸುತ್ತಿದ್ದನು. ಆದರು ನಾವು ಸುಮ್ಮನಿದ್ದೆವು. ಕಾರಣ ನಮ್ಮ ಹೋಲಕ್ಕೆ ಬಂದು ಅಕ್ರಮ ಪ್ರವೇಶ ಮಾಡಿ ಟ್ರ್ಯಾಕ್ಟರ ಟಿಲ್ಲರದಿಂದ ಟ್ರಿಲ್ಲರ ಹೊಡೆದು ಕೆಳಲು ಹೋದ ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಸಿಲ್ಲಿಸಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:355/2018 ಕಲಂ: 341.447.427.504.506 ಸಂ: 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಖಲಿಸಿಕೊಂಡು ತನಿಖೆ ಕೈ ಕೊಂಡೆನು.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 356/2018. ಕಲಂಃ 87 ಕೆಪಿ ಆಕ್ಟ;- ದಿನಾಂಕ 24/07/2018 ರಂದು ಸಾಯಂಕಾಲ 5-35 ಪಿ.ಎಂ ಕ್ಕೆ ಸ. ತ. ಪಿಯಾದಿದಾರರಾದ ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು 6 ಜನ ಆರೋಪಿತರನ್ನು, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 24/07/2018 ರಂದು ಮದ್ಯಾಹ್ನ 3-00 ಪಿ,ಎಮ್ ಸುಮಾರಿಗೆ ಠಾಣೆಯಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ ಹಳಿಸಗರ ಶಹಾಪೂರದ ರೇವಣಸಿದ್ದೇಶ್ವರ ಮಠದ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕೂಡಿಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮರೇಗೆ ನಮ್ಮ ಠಾಣೆಯ ಸಿಬ್ಬಂಧಿಯವರಾದ ಹೊನ್ನಪ್ಪ ಹೆಚ್.ಸಿ-101 ಗಜೇಂದ್ರ ಪಿಸಿ-313, ಗಣೇಶ ಪಿಸಿ-294, ಬಸವರಾಜ ಪಿಸಿ- 346 ಅಮಗೊಂಡ ಎ.ಪಿ.ಸಿ.169, ರವರಿಗೆ ಬಾತ್ಮೀ ವಿಷಯ ತಿಳಿಸಿ ಹೋಗಿ ದಾಳಿ ಮಾಡಬೆಕೆಂದು ಎಂದು ತಿಳಿಸಿ ನಮ್ಮ ಠಾಣೆಯ ಸಿಬ್ಬಂದಿಯವರಾದ ದೇವರಾಜ ಸಿ.ಪಿ.ಸಿ 282 ರವರಿಗೆ ಇಬ್ಬರೂ ಪಂಚರನ್ನು ತಂದು ಹಾಜರು ಪಡಿಸಲು ಹೇಳಿದ ಮೇರೆಗೆ ಸದರಿಯವರು ಇಬ್ಬರು ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ 2] ಶ್ರೀ ನಿಂಗರಾಜ ತಂದೆ ಭೀಮರಾಯ ವ|| 24 ಜಾ|| ಲಿಂಗಾಯತ ಉ|| ಕೂಲಿಕೆಲಸ ಸಾ|| ಮಂಡಗಳ್ಳಿ ಹಾ|| ವ|| ಇಂದರಾ ನಗರ ಶಹಾಪೂರ ಇವರಿಗೆ ಹಾಜರು ಪಡಿಸಿದ ಮೇರೆಗೆ ಪಂಚರಿಗೆ ವಿಷಯ ತಿಳಿಸಿ. ನಮ್ಮ ಜೋತೆಯಲ್ಲಿ ಬಂದು ದಾಳಿಯ ಕಾಲಕ್ಕೆ ಪಂಚರಾಗಲು ಕೆಳಿಕೊಂಡ ಮರೇಗೆ ಒಪ್ಪಿಕೊಂಡಿದ್ದು ದಾಳಿ ಕುರಿತು ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಠಾಣೆಯಿಂದ 3-45 ಪಿ,ಎಮ್ ಕ್ಕೆ ಹೊರಟು ಹಳಿಸಗರದ ರೇವಣಸಿದ್ದೇಶ್ವರ ಮಠದ ಸ್ವಲ್ಪ ದೂರದಲ್ಲಿ 4-00 ಪಿ,ಎಮ್ ಕ್ಕೆ ಹೋಗಿ ಜೀಪಿನಿಲ್ಲಿಸಿ ಕೆಳಗಡೆ ಇಳಿದು ಹೋಗಿ ಸ್ವಲ್ಪ ದೂರದಲ್ಲಿ ಮಠದ ಮರೆಯಲ್ಲಿ ನಿಂತು ನೋಡಲಾಗಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತಿದ್ದರು ಜೂಜಾಟ ಆಡುತಿದ್ದವರಲ್ಲಿ ಒಬ್ಬನು ಅಂದರಕ್ಕೆ 50 ರೂಪಾಯಿ ಅಂದರೆ ಇನ್ನೊಬ್ಬನು ಬಾಹರಕ್ಕೆ 50 ರೂಪಾಯಿ ಅಂತ ಹೇಳಿ ಇಸ್ಪೇಟ್ ಏಲೆಗಳ ಸಹಾಯದಿಂದ ಜೂಜಾಟ ಆಡುತಿದ್ದರು, ಆಗ ನಾವು ಮತ್ತು ಪಂಚರು ಸದರಿಯವರು ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು, 4-10 ಪಿ,ಎಮ್ ಕ್ಕೆ ಸಿಬ್ಬಂದಿಯೊಂದಿಗೆ ಕೂಡಿ ಸದರಿಯವರ ಮೇಲೆ ದಾಳಿ ಮಾಡಲಾಗಿ ದಾಳಿಯಲ್ಲಿ 06 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ ಒಬ್ಬೊಬ್ಬರಾಗಿ ತಮ್ಮ ಹೆಸರುಗಳನ್ನು ಈ ಕೆಳಗಿನಂತೆ ಹೇಳಿರುತ್ತಾರೆ. 1] ಜಮೀರ ತಂದೆ ಸಾಬಿರ ಪಿರಾಗೋಳ ವಯ|| 32 ವರ್ಷ ಉ|| ಚಾಲಕ ಜಾ|| ಮುಸ್ಲಿಂ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿದನು ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 150-00 ರೂ ಸಿಕ್ಕವು 02) ಮಲ್ಲಪ್ಪ ತಂದೆ ಭೀಮರಾಯ ಸಂಗಾಪೂರದವರ ವಯ|| 38 ಉ|| ಚಾಲಕ ಜಾ|| ಬೇಡರ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿದನು ಈತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 100-00 ರೂ ಸಿಕ್ಕವು 03) ರಾಘವೇಂದ್ರ ತಂದೆ ಪ್ಯಾಟೆಪ್ಪ ಹೇಳೂರ ವಯ|| 25 ವರ್ಷ ಉ|| ಹಮಾಲಿ ಕೆಲಸ ಜಾ|| ಹೆಳೂರ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸದನು ಈತನ ಅಂಗ ಶೋಧನೆ ಮಾಡಲಾಗಿ ವನ ಹತ್ತಿರ 100-00 ರೂ ಸಿಕ್ಕವು 4) ಜಟ್ಟೆಪ್ಪ ತಂದೆ ಮಲ್ಲಪ್ಪ ಹೊಸಮನಿ ವಯ|| 28 ವರ್ಷ ಉ|| ವ್ಯಾಪಾರ ಜಾ|| ಕಬ್ಬಲಿಗ ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು ಈತನ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ 150-00 ರೂ ಸಿಕ್ಕವು 5) ಮರಲಿಂಗ ತಂದೆ ಸೋಮರಾಯ ಟಣಕೇದಾರ ವಯ|| 30 ವರ್ಷ ಉ|| ಒಕ್ಕಲತನ ಜಾ|| ಕುರುಬರ ಸಾ|| ಹಳಿಸಗರ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 200-00 ರೂ ಸಿಕ್ಕವು 6) ಸಯ್ಯದ ನಿಸಾರ ತಂದೆ ಸಯ್ಯದ ಮುಕ್ತಾರ ಸಯ್ಯದ ವಯ|| 22 ವರ್ಷ ಉ|| ಚಾಲಕ ಜಾ|| ಮುಸ್ಲಿಂ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿದನು ಈತನ ಅಂಗ ಶೋಧನೆ ಮಾಡಲಾಗಿ ಅವನ ಹತ್ತಿರ 250-00 ರೂಪಾಯಿ ಸಿಕ್ಕವು. ಕಣದಲ್ಲಿ 300-00 ರೂ ಹೀಗೆ ಒಟ್ಟು 1250/- ರೂಪಾಯಿ ಹಾಗೂ 52 ಇಸ್ಪೇಟ್ ಎಲೆಗಳನ್ನು ಒಂದು ಲಕೊಟೇಯಲ್ಲಿ ಹಾಕಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ 4-10 ಪಿ,ಎಮ್ ದಿಂದ 5-10 ಪಿ,ಎಂ ದ ವರೆಗೆ ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ಕೇಸಿನ ಪುರಾವೆ ಕುರಿತು ತಾಬೆಗೆ ತೆಗೆದುಕೊಂಡಿರುತ್ತೆನೆ. ಮತ್ತು ಜೂಜಾಟದಲ್ಲಿ ಸಿಕ್ಕ 06 ಜನರನ್ನು ತಾಬೆಗೆ ತೆಗೆದುಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 5-35 ಪಿ,ಎಮ್ ಕ್ಕೆ ಬಂದು ವರದಿಯನ್ನು ತಯ್ಯಾರಿಸಿ ಸಾಯಂಕಾಲ 6-40 ಪಿ,ಎಮ್ ಕ್ಕೆ 06 ಜನ ಆರೋಪಿತರನ್ನು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲನ್ನು ಹಾಜರು ಪಡಿಸಿ ಮುಂದಿನ ಕ್ರಮ ಕೈಕೊಳ್ಳುವಂತೆ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶವು ಅಸಂಜ್ಞೆಯ ಅಪರಾದವಾಗಿದ್ದರಿಂದ ಠಾಣೆಯ ಎನ್.ಸಿ.ನಂ:14/2018 ಕಲಂ 87 ಕೆಪಿ ಯ್ಯಾಕ್ಟ ನೇದ್ದು ದಾಖಲಿಸಿಕೊಂಡು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಸುರೇಶ ಕದಂ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7-30 ಪಿ.ಎಂ ಕ್ಕೆ ಬಂದು ಹಾಜರ ಪಡಿಸಿದ್ದರ ಮೇಲಿಂದ ಶಹಾಪೂರ ಠಾಣೆಯ ಗುನ್ನೆ ನಂ 356/2018 ಕಲಂ 87 ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 137/2018 ಕಲಂ 379 ಐ.ಪಿ.ಸಿ;- ದಿನಾಂಕ; 24/07/2018 ರಂದು 7-00 ಪಿಎಮ್ ಕ್ಕೆ ಪಿರ್ಯಾದುದಾರರಾದ ಶ್ರೀ ಶಿವರಾಮ ತಂ. ಮಲ್ಲಣ್ಣ ಕಟ್ಟಿಮನಿ ವಃ 47 ಜಾಃ ಉಪ್ಪಾರ ಉಃ ಎಲ್.ಐ.ಸಿ.ಏಜೆಂಟ ಸಾಃ ಸದರ ದರವಾಜ ಉಪ್ಪಾರವಾಡಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದು ಸದರಿ ದೂರು ಅಜರ್ಿಯ ಸಾರಾಂಸವೆನೆಂದರೆ ಇಂದು ದಿನಾಂಕ. 24/07/2018 ರಂದು ಮದ್ಯಾಹ್ನ 1-10 ಗಂಟೆ ಸುಮಾರಿಗೆ ನಾನು ಯಾದಗರಿ ಕೃಷಿಯೇತರ ಭೂಮಿ ಪರಿವರ್ತನೆಗಾಗಿ(ಎನ್.ಎ) ಸಲುವಾಗಿ ಕೋರ್ಟ ಎದುರುಗಡೆ ಇರುವ ನನ್ನ ಎಸ್.ಬಿ.ಐ ಬ್ಯಾಂಕ್ ಖಾತೆ ಸಂ: 36937993600 ನೇದ್ದರಿಂದ 1,40,000=00 ರೂ. ಡ್ರಾ ಮಾಡಿಕೊಂಡು ಪಾಸಬುಕ ಸಮೇತ ಕ್ಯಾಶಬ್ಯಾಗಿನಲ್ಲಿ ಇಟ್ಟುಕೊಂಡು ಬ್ಯಾಂಕಿನಿಂದ ಹೊರಗಡೆ ಬಂದು ಬ್ಯಾಂಕಿನ ಮುಂದುಗಡೆ ನಿಲ್ಲಿಸಿದ್ದ ನನ್ನ ಸೂಪರ ಸ್ಪ್ಲೆಂಡರ ಮೋ.ಸೈ. ನಂ.ಕೆಎ.32.ಯು-2620 ನೇದ್ದರ ಸೈಡಬ್ಯಾಗದಲ್ಲಿ ಇಟ್ಟು ನಾನು ಮೋ.ಸೈ. ಚಾಲು ಮಾಡಿಕೊಂಡು ಮುಂದೆ ಹೋಗಬೇಕೆನ್ನುವಷ್ಠರಲ್ಲಿ ಯಾರೋ ನನ್ನ ಮೋ.ಸೈಕಲನ ಸೈಡಬ್ಯಾಗನಿಂದ ಏನೋ ತೆಗೆದುಕೊಂಡಂತೆ ಆಗಿದ್ದು ಆದರೆ ನಾನು ಅದರ ಕಡೆಗೆ ಗಮನ ಕೊಡದೇ ಸ್ವಲ್ಪ ಮುಂದೆ ಮಹಾರಾಷ್ಟ್ರ ಬ್ಯಾಂಕ ಮುಂದೆ ನನಗೆ ಅನುಮಾನ ಬಂದು ನನ್ನ ಮೋ.ಸೈಕಲನ ಸೈಡಬ್ಯಾಗನಲ್ಲಿ ನೋಡಲಾಗಿ ಸೈಡಬ್ಯಾಗನಲ್ಲಿ ಇಟ್ಟಿದ್ದ 100/- ರೂಪಾಯಿಯ 1,00,000=00.ರೂ ಮತ್ತು 200/- ರೂಪಾಯಿಯ 40,000=00 (1,40,000=00) ರೂಪಾಯಿ ಹಣ ಕಾಣಿಸಲ್ಲಿಲ್ಲ. ಯಾರೋ ವ್ಯಕ್ತಿಯು ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿಕೊಂಡು ಬಂದು ನನ್ನ ಮೋ.ಸೈಕಲ ಸೈಡಬ್ಯಾಗದಲ್ಲಿ ಇಟ್ಟಿದ್ದನ್ನು ದೂರದಿಂದ ನೋಡಿ ನಾನು ಮೋ.ಸೈಕಲ ಚಾಲು ಮಾಡಿ ಮುಂದೆ ನೋಡುತ್ತಿರುವಾಗ ಹಿಂದಿನಿಂದ ಯಾರೋ ಕಳ್ಳರು ನನಗೆ ಗೊತ್ತಾಗದಂತೆ ನನ್ನ ಹಣದ ಕೈಚೀಲದ ಸಮೇತ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ಸೈಡಬ್ಯಾಗಗೆ ಸೈಡಲಾಕ್ ಇರುವುದಿಲ್ಲ. ನನ್ನ ಹಣವನ್ನು ಕಳ್ಳತನ ಮಾಡಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿರುವುದಿಲ್ಲ. ಸದರಿ ಘಟನೆಯು ಇಂದು ಮಧ್ಯಾಹ್ನ 1:15 ಗಂಟೆಯ ಸುಮಾರಿಗೆ ಆಗಿರಬಹುದು. ಸದರಿ ವಿಷಯವನ್ನು ನನ್ನ ಗೆಳೆಯರಾದ 1) ಅಯ್ಯಣ್ಣ ತಂದೆ ಭೀಮಪ್ಪ ಸುಂಗಲಕರ ಸಾ; ಅಂಬೇಡ್ಕರ ನಗರ ಮತ್ತು 2)ಸೋಮಶೇಖರ ತಂದೆ ಮಹಾಂತಪ್ಪ ಜಾಗಟೆ ಸಾ;ಲಕ್ಷ್ಮೀ ನಗರ ಯಾದಗಿರಿ ರವರಿಗೆ ಫೋನ ಮಾಡಿ ತಿಳಿಸಿದಾಗ ಅವರು ಕೂಡಾ ಸದರಿ ಸ್ಥಳಕ್ಕೆ ಬಂದಾಗ ಎಲ್ಲರೂ ಕೂಡಿ ಸುತ್ತಮುತ್ತ ಹುಡುಕಾಡಿದರೂ ಕೂಡಾ ಸಿಕ್ಕಿರುವುದಿಲ್ಲ. ಕಾರಣ ಎಲ್ಲಾ ಕಡೆ ಹುಡುಕಾಡಿ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸುತ್ತಿದ್ದು, ನಾನು ಇಂದು ಮಧ್ಯಾಹ್ನ 1-15 ಗಂಟೆ ಸುಮಾರಿಗೆ ಕೋರ್ಟ ಎದುರುಗಡೆಯಿರುವ ಭಾರತೀಯ ಸ್ಟೇಟ್ ಬ್ಯಾಂಕದಿಂದ 1,40,000=00 ರೂ ಹಣವನ್ನು ಡ್ರಾ ಮಾಡಿಕೊಂಡು ಮನೆಗೆ ಹೋಗಬೇಕೆನ್ನುತ್ತಿರುವಾಗ ಯಾರೋ ಕಳ್ಳರು ನನ್ನ 1,40,000=00 ರೂ. ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು ಪತ್ತೆ ಹಚ್ಚಿ ನನ್ನ ಹಣ ನನಗೆ ದೊರಕಿಸಿ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಸದ ಮೇಲಿಂದ ಇಂದು ದಿನಾಂಕ;24/07/2018 ರಂದು 7-00 ಪಿಎಮ್ ಕ್ಕೆ ಠಾಣೆಯ ಗುನ್ನೆ ನಂ.137/2018 ಕಲಂ.379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ ;- 113/2018 ಕಲಂ 87 ಕೆಪಿ ಯ್ಯಾಕ್ಟ;- ದಿನಾಂಕ 24/07/2018 ರಂದು 5.30 ಪಿಎಮ್ ಕ್ಕೆ ಆರೋಪಿತರೆಲ್ಲರೂ ಇಂಗಳಗಿ ಗ್ರಾಮದ ಶೇಕಪ್ಪ ಈತನ ಚಪ್ಪರದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 7 ಜನ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ 1250/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು 5.30 ಪಿಎಮ್ ದಿಂದ 6.30 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 07.00 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7.45 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 113/2018 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 220/2018 ಕಲಂ: 279, 304(ಎ) ಐಪಿಸಿ;- ಶ್ರೀ ದೇವರೆಡ್ಡಿ ತಂದೆ ನಾಗರೆಡ್ಡಿ ಖಾನಾಪುರ ಸಾ|| ಕೆಂಭಾವಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ, ದಿ: 24/07/2018 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ನನ್ನ ತಾಯಿ ನೀಲಮ್ಮ, ಹೆಂಡತಿ ಭಾಗ್ಯಶ್ರೀ ಎಲ್ಲರು ಮನೆಯಲ್ಲಿದ್ದಾಗ ಕರಡಕಲ್ ಗ್ರಾಮದ ನಾಗರೆಡ್ಡಿ ತಂದೆ ಚನ್ನಬಸವರೆಡ್ಡಿ ಮೇಟಿ ಇವರು ಫೋನ್ ಮಾಡಿ ನಮ್ಮ ತಂದೆ ನಾಗರೆಡ್ಡಿ ಇವರು ಕರಡಕಲ್ ಗ್ರಾಮದಿಂದ ಕರಡಕಲ್ ಬಸ್ ನಿಲ್ದಾಣದ ವರೆಗೆ ನಡೆದುಕೊಂಡು ಹೋಗುತ್ತಿರುವಾಗ ಕರಡಕಲ್ ಗ್ರಾಮದ ನಿಂಗಣ್ಣ ಪರಸನಳ್ಳಿ ಇವರ ಹೊಲದ ಪಕ್ಕದಲ್ಲಿ ನಮ್ಮ ತಂದೆಗೆ ಅಪಘಾತವಾಗಿದೆ ಅಂತ ತಿಳಿಸಿದಾಗ ನಾನು ಕೂಡಲೆ ಸ್ಥಳಕ್ಕೆ ಬಂದು ನೋಡಲು ನಮ್ಮ ತಂದೆಯವರಿಗೆ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ, ಎಡಗಾಲ ಮೊಳಕಾಲ ಕೆಳಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಸದರಿ ಘಟನೆ ಬಗ್ಗೆ ಅಲ್ಲಿಯೇ ಇದ್ದ ನಾಗರೆಡ್ಡಿ ಮೇಟಿ ಇವರಿಗೆ ಕೇಳಿ ವಿಚಾರಿಸಿ ತಿಳಿಯಲು ನಾಗರೆಡ್ಡಿ ಇವರು ತಮ್ಮ ಮೋಟರ ಸೈಕಲ್ ತೆಗೆದುಕೊಂಡು ಹೋಗುತ್ತಿದ್ದಾಗ ತಮ್ಮ ಮುಂದೆ ನನ್ನ ತಂದೆ ನಾಗರೆಡ್ಡಿ ಖಾನಾಪುರ ಇವರು ನಡೆದುಕೊಂಡು ರೋಡಿನ ಎಡಮಗ್ಗಲಿಗೆ ಹೋಗುತ್ತಿದ್ದಾಗ ಕರಡಕಲ್ ಕಡೆಯಿಂದ ಕರಡಕಲ್ ಗ್ರಾಮದ ಸಿದ್ದಣ್ಣ ತಂದೆ ನಿಂಗಪ್ಪ ಮಾಲಿ ಬಿರಾದಾರ ಈತನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಪಡಿಸಿದ್ದು ಆತನಿಗೂ ಸಹ ಗಾಯಗಳಾಗಿದ್ದು ಇರುತ್ತದೆ ಅಂತ ತಿಳಿಸಿದ್ದು ನನ್ನ ತಂದೆಗೆ ಅಪಘಾತಪಡಿಸಿದ ಮೋಟರ ಸೈಕಲ್ ಅಲ್ಲಿಯೇ ಬಿದ್ದಿದ್ದು ಅದರ ನಂಬರ ನೋಡಲಾಗಿ ಕೆಎ 33 ಎಸ್ 2447 ಅಂತ ಇರುತ್ತದೆ ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 220/2018 ಕಲಂ 279, 304(ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ ;-. 61/2018 ಕಲಂ: 323, 324, 354, 504, 506 ಸಂಗಡ 34 ಐ.ಪಿ.ಸಿ. ;- ಪಿಯರ್ಾದಿಯು ದಿನಾಂಕ:23/07/2018 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ದಾಸರಗೋಟ ಹಳ್ಳದಲ್ಲಿ ಕಲ್ಲಿನ ಮೇಲೆ ಬಟ್ಟೆ ತೊಳೆಯುವಾಗ ಶಿಲ್ಪಾ ಸಾಲವಾಡಗಿ ಇವಳು ನಾನು ಬಟ್ಟೆ ತೊಳೆಯುತ್ತೇನೆ ಕಲ್ಲು ಬಿಡು ಅಂತಾ ಕೇಳಿದ್ದು ಪಿಯರ್ಾದಿಯು ನನ್ನದಾದ ಮೇಲೆ ನೀನು ಬಟ್ಟೆಯನ್ನು ತೊಳೆದುಕೋ ಅಂತಾ ಅಂದಿದ್ದಕ್ಕೆ ಶಿಲ್ಪಾ ಇವಳು ಸಿಟ್ಟಿನಿಂದ ಮನೆಗೆ ಹೋಗಿ ತನ್ನ ಗಂಡನಾದ ಮುತ್ತಪ್ಪ ತಂದೆ ನರಸಪ್ಪ ಸಾಲವಾಡಗಿ & ಮಾವನಾದ ನರಸಪ್ಪ ತಂದೆ ನರಸಪ್ಪ ಸಾಲವಾಡಗಿ ಇವರನ್ನು ಮದ್ಯಾಹ್ನ 2:30 ಗಂಟೆಗೆ ಕರೆದುಕೊಂಡು ಬಂದು ಜಗಳ ತೆಗೆದು ನರಸಪ್ಪ ಈತನು ಈ ''ಸೂಳೀದು ಬಾಳ ಆಗ್ಯಾದ ಅಂತಾ ಅವಾಚ್ಚವಾಗಿ ಬೈದು'' ಅಲ್ಲೇ ಇದ್ದ ಬಡಿಗೆಯಿಂದ ಎಡ ಪಕ್ಕಡೆಗೆ & ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ಮುತ್ತಪ್ಪ ಈತನು ಕಲ್ಲಿನಿಂದ ಎಡಗೈಗೆ ಹೊಡೆದು ರಕ್ತಗಾಯಗೊಳಿಸಿದನು ಹಾಗೂ ಕೂದಲನ್ನು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿ ಕಾಲಿನಿಂದ ಬೆನ್ನಿಗೆ, ಪಕ್ಕಡಿಗೆ ಒದ್ದನು, ಆಗ ಮುತ್ತಮ್ಮ ಗಂಡ ಕಲ್ಲೇಶ ಸಾಲವಾಡಗಿ ಇವಳು ಜಗಳವನ್ನು ಬಿಡಿಸಲು ಬಂದಾಗ ಅಲ್ಲಿಗೆ ಬಂದ ಹವಳವ್ವ ಸಾಲವಾಡಗಿ & ಶಿಲ್ಪಾ ಸಾಲವಾಡಗಿ ಇವರುಗಳು ಕೂಡಿ ಮುತ್ತಮ್ಮ ಇವಳಿಗೆ ಕೂದಲನ್ನು ಹಿಡಿದು ಎಳೆದಾಡಿ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆದರು. ನರಸಪ್ಪ & ಮುತ್ತಪ್ಪ ಇವರುಗಳು ಈ ಸೂಳಿಯನ್ನು ಇಲ್ಲೆ ಖಲಾಸ ಮಾಡಿ ಬಿಡಬೇಕು ಅಂತಾ ಅವಾಚ್ಚ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ, ಜೀವ ಬೆದರಿಕೆ ಹಾಕಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಪಿಯರ್ಾದಿಯ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 136/2018 279,337 ಐಪಿಸಿ ಸಂ: 187 ಐಎಂವಿ ಯಾಕ್ಟ;- ದಿನಾಂಕ 23/07/2018 ರಂದು 10.20 ಪಿಎಂ ಕ್ಕೆ ಸರಕಾರಿ ಆಸ್ಪತ್ರೆ ಶಹಾಪೂರದಿಂದ ಪೋನ್ ಮೂಲಕ ಆರ್.ಟಿ.ಎ ಎಂ.ಎಲ್.ಸಿ ಇದೆ ಅಂತಾ ಮಾಹಿತಿ ಬಂದ ಮೇರೆಗೆ ನಾನು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬೇಟಿ ಮಾಡಿ ಗಾಯಾಳು ಪಿಯರ್ಾದಿ ಶ್ರೀ ರವಿಕುಮಾರ ತಂದೆ ನಾಗೇಶ್ವರ ರಾವ ವಯಾ:32 ವರ್ಷ ಜಾ: ಕಮ್ಮಾ ಉ: ಒಕ್ಕಲುತನ ಸಾ: ಲಕ್ಷ್ಮೀನಗರ ಶಹಾಪೂರ ತಾ: ಶಹಾಪೂರ ಜಿ: ಯಾದಗಿರಿ ಇವರ ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆ ಸಾರಂಶ ಏನಂದರೆ, ಇಂದು ದಿನಾಂಕ: 23/07/2018 ರಂದು ನಾನು ಮತ್ತು ಸತ್ಯನಾರಾಯಣರಾವ ತಂದೆ ರಾಮಚಂದ್ರ ರಾವ ಇಬ್ಬರು ಸಾ: ಶಹಾಪೂರ ಮತ್ತು ಈಶ್ವರ ತಂದೆ ಶ್ರೀನಿವಾಸರಾವ, ಶ್ರೀನಿವಾಸರಾವ ತಂದೆ ವಿ ರಾಜು, ಇಬ್ಬರು ಸಾ: ಭಿ.ಗುಡಿ ಎಲ್ಲರೂ ಕೂಡಿ ನಮ್ಮ ಖಾಸಗಿ ಕೆಲಸ ಕುರಿತು ನನ್ನ ಹೋಂಡೈ ಐ20 ಕಾರ ನಂ: ಕೆಎ-33 ಎಂ 6094 ನೇದ್ದರನ್ನು ತಗೆದುಕೊಂಡು ಗೋಗಿಗೆ ಬಂದಿದ್ದೆವು ಮರಳಿ ಶಹಾಪೂರಕ್ಕೆ ಹೋಗುತ್ತಿದ್ದಾಗ ನಾನೆ ನಮ್ಮ ಕಾರ ಚಲಾಯಿಸುತ್ತಿದ್ದೆನು. 08.50 ಪಿಎಂ ಸುಮಾರಿಗೆ ನಾನು ನಿದಾನವಾಗಿ ನನ್ನ ಕಾರನನ್ನು ರೋಡಿನ ಎಡಗಡೆಯಿಂದ ನಡೆಸಿಕೊಂಡು ಗೋಗಿ ಭೀ.ಗುಡಿ ರಸ್ತೆಯ ಗೋಗಿಯ ಪೆಟ್ರೋಲ ಬಂಕ ದಾಟಿದ ನಂತರ ಆಂದ್ರ ಕ್ಯಾಂಪ ಹತ್ತಿರ ಹೋಗುತ್ತಿದ್ದಾಗ, ಎದಿರುಗಡೆಯಿಂದ ಒಂದು ಕಾರ ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಸಂಪೂರ್ಣ ರಾಂಗ್ ಸೈಡಿನಲ್ಲಿ ಬಂದನು ನಾನು ನನ್ನ ಕಾರನ್ನು ರೋಡಿನ ಕೇಳಗೆ ಇಳಿಸಿ ಸೈಡಿಗೆ ತಗೆದುಕೊಂಡರೂ ಕೂಡ ರಾಂಗ್ ಸೈಡಲ್ಲಿ ಬಂದು ನಮ್ಮ ಕಾರಿಗೆ ಡಿಕ್ಕಿ ಪಡೆಸಿ ಅಪಘಾತ ಮಾಡಿದ ಅದರಿಂದಾಗಿ ನನ್ನ ಮೂಗಿಗೆ ಪೆಟ್ಟಾಗಿ ರಕ್ತ ಬಂದಿರುತ್ತದೆ. ಹೊಟ್ಟೆಗೆ ಒಳಪೆಟ್ಟಾಗಿರುತ್ತದೆ. ಹಾಗೂ ಬಲಗಾಲಿನ ತೊಡೆಗೆ ಒಳಪೆಟ್ಟಾಗಿರುತ್ತದೆ. ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶ್ರೀನಿವಾಸ ತಂದೆ ವಿ ರಾಜು ಸಂಕುರಾತ್ರಿ ಸಾ: ಬಿಗುಡಿ ಇವರಿಗೆ ಬಲ ಕಪಾಳಕ್ಕೆ, ತಲೆಗೆ, ಮತ್ತು ಕುತ್ತಗಿಗೆ ಒಳಪೆಟ್ಟಾಗಿರುತ್ತದೆ. ನನ್ನ ಪಕ್ಕದಲ್ಲಿ ಕುಳಿತ ಸತ್ಯನಾರಾಯಣ ಮತ್ತು ಅವರ ಹಿಂದೆ ಕುಳಿತ ಈಶ್ವರ ಇವರುಗಳಿಗೆ ಯಾವುದೆ ಗಾಯಗಳಾಗಿರುವದಿಲ್ಲ. ನಂತರ ನಾವೆಲ್ಲರೂ ಕೆಳಗೆ ಇಳಿದು ನೋಡಲಾಗಿ, ನಮ್ಮ ಕಾರಿನ ಬಲಗಡೆಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ನಮಗೆ ಡಿಕ್ಕಿ ಪಡೆಸಿದ ಕಾರ ಇಂಡಿಕಾ ವಿಸ್ತಾ ಕೆಂಪು ಬಣ್ಣದ ಕಾರ ಇದ್ದ ಅದರ ನಂಬರ: ಕೆಎ-36 ಎಂ:7340 ಅಂತಾ ಇರುತ್ತದೆ. ಕಾರ ಚಾಲಕನಿಗೆ ನೋಡಿ ವಿಚಾರಿಸಲಾಗಿ ಆತನು ತನ್ನ ಹೆಸರು ಹೊನ್ನಪ್ಪ ತಂದೆ ನಿಂಗಪ್ಪ ಎದರುಮನಿ ಶಖಾಪೂರ ತಾ: ಶಹಾಪೂರ ಅಂತಾ ತಿಳಿಸಿದನು. ಸದರಿ ಚಾಲಕ ಅಲ್ಲೆ ಇದ್ದನು ನಾವು ಆಸ್ಪತ್ರೆಗೆ ಹೊಗಬೇಕು ಅಂತಾ ಇನ್ನೊಂದು ಕಾರಿನಲ್ಲಿ ಹೋಗುವಷ್ಟರಲ್ಲಿ ಸದರಿ ಕಾರ ಚಾಲಕ ಕಾರನ್ನು ಬಿಟ್ಟು ಓಡಿ ಹೊಗಿದ್ದನು. ಪುನಃ ನೋಡಿದಲ್ಲಿ ಗುರುತಿಸುತ್ತೇವೆ. ನಂತರ ನಾವು ಇಬ್ಬರು ಶಹಾಪೂರ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ.
ನಮ್ಮ ಎದುರಿನಿಂದ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ನಮ್ಮ ಕಾರಿಗೆ ಡಿಕ್ಕಿ ಪಡೆಸಿದ ಕಾರ ನಂ: ಕೆಎ-33 36 ಎಂ:7340 ನೇದ್ದರ ಚಾಲಕ ಹೊನ್ನಪ್ಪ ತಂದೆ ನಿಂಗಪ್ಪ ಎದರುಮನಿ ಶಖಾಪೂರ ತಾ: ಶಹಾಪೂರ ಈತನ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಮರಳಿ ದಿನಾಂಕ; 24/07/2018 ರಂದು 00.45 ಎಎಂಕ್ಕೆ ಠಾಣೆಗೆ ಬಂದು ಠಾಣಾ ಗುನ್ನೆ ನಂ: 136/2018 ಕಲಂ: 279, 337 ಐಪಿಸಿ ಸಂ: 187 ಐಎಂವಿ ಯಾಕ್ಟ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.