Police Bhavan Kalaburagi

Police Bhavan Kalaburagi

Thursday, August 13, 2020

BIDAR DISTRICT DAILY CRIME UPDATE 13-08-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-08-2020

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ, ಯು.ಡಿ.ಆರ್ ಸಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸುಮನ ಗಂಡ ಪ್ರಕಾಶ ಕಾಂಬಳೆ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ರಾಮತೀರ್ಥ(ಕೆ) ರವರ ಗಂಡನಾದ ಪ್ರಕಾಶ ಕಾಂಬಳೆ ತಂದೆ ವಿಶ್ವನಾಥ ಕಾಂಬಳೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ರಾಮತೀರ್ಥ(ಕೆ) ಇವರಿಗೆ ಸುಮಾರು 3-4 ವರ್ಷಗಳಿಂದ ಹೊಟ್ಟೆ ಬೇನೆ ಇದ್ದು ಹೊಟ್ಟೆ ಬೇನೆ ಕಡಿಮೆ ಆಗದೆ ಇರುವುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-08-2020 ರಂದು 1300 ಗಂಟೆಯಿಂದ ದಿನಾಂಕ 12-08-2020 ರಂದು 0800 ಗಂಟೆಯ ಮಧ್ಯದ ಅವಧಿಯಲ್ಲಿ ರಾಮತೀರ್ಥ(ಕೆ) ಶಿವಾರದ ರಾಜೇಂದ್ರ ಬಿರಾದಾರ ಇವರ ಬಾವಿಯಲ್ಲಿ ಬಿದು್ದ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಮರಣದಲ್ಲಿ ಯಾರ ಮೇಲೆ ಯಾವುದೇ ದೂರು ಮತ್ತು ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 121/2020, ಕಲಂ. 364, 302 ಜೊತೆ 34 ಐಪಿಸಿ :-

ಆರೋಪಿತರಾದ ಆಕಾಶ ತಂದೆ ರಾಜಪ್ಪ ಹಾಗೂ ಅಶ್ವಿನ ತಂದೆ ರಾಜಪ್ಪ ಹಾಗೂ ಇತರ ಇಬ್ಬರೂ ಕೂಡಿ ಫಿರ್ಯಾದಿ ಅಂಜಮ್ಮಾ ಗಂಡ ಕಲ್ಯಾಣರಾವ ಸಾ: ಚಿಟ್ಟಾವಾಡಿ ರವರ ಮಗ ಮನೋಜ ಈತನು ಆಶಾರಾಣಿ ಇವಳಿಗೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡ ವಿಷಯದ ಬಗೆ ವೈಮನಸ್ಸಿನಿಂದ ದಿನಾಂಕ 11-08-2020 ರಂದು ಫಿರ್ಯಾದಿಯವರ ಮಗಳಾದ ಮಹೇಶ್ವರಿ ಇವಳಿಗೆ ಚಿಟ್ಟಾ ವಾಡಿಯಿಂದ ಒತ್ತಾಯದಿಂದ ಕರೆದುಕೊಂಡು ಹೋಗಿ ಕುತ್ತಿಗೆಗೆ ಅವಳ ಓಡಣಿಯಿಂದ ಬಿಗಿದು ಕೊಲೆ ಮಾಡಿ ಮರದ ಬುಡಕ್ಕೆ ಕಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 12-08-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೇಮಳಖೇಡಾ ಪೊಲೀಸ್ ಠಾಣೆ ಅಪರಾಧ ಸಂ. 38/2020, ಕಲಂ. 279, 337, 338 ಐಪಿಸಿ :-

ದಿನಾಂಕ 12-08-2020 ರಂದು ಫಿರ್ಯಾದಿ ಮಾರುತಿ ತಂದೆ ಭೀಮಶಾ ಸತ್ವಾರ ವಯ: 35 ವರ್ಷ, ಜಾತಿ: ಕುರುಬ, ಸಾ: ಬೇಮಳಖೇಡಾ ರವರು ತಮ್ಮ ಗ್ರಾಮಕ್ಕೆ ಬರುವುದಕ್ಕಾಗಿ ಭಂಗೂರ ಗ್ರಾಮದಲ್ಲಿ ತಮ್ಮೂರಿನ ರೋಡಿನ ಮೇಲೆ ನಿಂತಿರುವಾಗ ಗ್ರಾಮದ ಮಹಾಂತಯ್ಯಾ ತಂದೆ ದೇಶಮುಖಯ್ಯಾ ಜಾಂಗಟಿ ವಯ: 46 ವರ್ಷ, ಜಾತಿ: ಜಂಗಮ, ಸಾ: ಬೇಮಳಖೇಡಾ ಇವರು ತನ್ನ ದ್ವಿಚಕ್ರ ವಾಹನ ನಂ. ಕೆಎ-39/ಆರ್-0637 ನೇದರ ಮೇಲೆ  ಗ್ರಾಮದ ಕಡೆಗೆ ಹೋಗುತ್ತಿರುವಾಗ ಫಿರ್ಯಾದಿಯು ಅವರಿಗೆ ತಡೆದು ನಿಲ್ಲಿಸಿ ಅವರ ದ್ವಿಚಕ್ರ ವಾಹನ ಹಿಂದೆ ಕುಳಿತುಕೊಂಡು ಗ್ರಾಮದ ಕಡೆಗೆ ಹೊಗುತ್ತಿರುವಾಗ ರವಿ ಮೈನಕ ರವರ ಹೊಲದ ಹತ್ತಿರ ಮಹಾಂತಯ್ಯಾ ಸ್ವಾಮಿ ಇವರು ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ವಾಹನ ಸ್ಕಿಡ್ ಆಗಿದ್ದರಿಂದ ಫಿರ್ಯಾದಿಯ ಬಲ ಹಣೆಯ ಮೇಲೆ, ಬಲ ಮೆಲುಕಿಗೆ, ಮೂಗಿನ ಮೇಲೆ ತರಚಿದ ರಕ್ತಗಾಯ ಮತ್ತು ಎರಡೂ ಕೈಗಳಿಗೆ ತರಚಿದ ರಕ್ತಗಾಯ ಮತ್ತು ಬಲ ಕಾಲಿನ ಮೊಳಕಾಲಿಗೆ ತರಚಿದ ರಕ್ತಗಾಯಗಳಾಗಿದ್ದು ಮತ್ತು ಮಹಾಂತಯ್ಯಾ ಇವರಿಗೆ ಬಲ ಹಣೆಯ ಮೇಲೆ ಮತ್ತು ಬಲಗಡೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು ಇರುತ್ತದೆ ಮತ್ತು ಬಲಗಾಲಿಗೆ, ಬಲಗೈಗೆ ತರಚಿದ ರಕ್ತಗಾಯಗಳಾಗಿರುತ್ತವೆ ಮತ್ತು ಅದೇ ಸಮಯಕ್ಕೆ ಭಂಗೂರ ಕಡೆಯಿಂದ ಬರುತ್ತಿದ್ದ ಗ್ರಾಮದ ಸಂಜುರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಇಬ್ಬರು ಬಂದು ಫಿರ್ಯಾದಿ ಮತ್ತು ಮಹಾಂತಯ್ಯಾ ಸ್ವಾಮಿ ಇವರ ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಇಬ್ಬರ ಮನೆಯವರು ಬಂದು ಮಹಾಂತಯ್ಯಾ ಇವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಕಡೆಗೆ ತೆಗೆದುಕೊಂಡು ಹೋಗಿರುತ್ತಾರೆ ಮತ್ತು ಫಿರ್ಯಾದಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 113/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 12-08-2020 ರಂದು ನಿಟ್ಟೂರ ಗ್ರಾಮದ ಹನುಮಾನ ಮಂದಿರದ ಅಗಸಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಒಂದು ರೂ. ಗೆ 80/- ರೂ ಕೊಡುತ್ತೆವೆಂದು ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ಮಟಕಾ ಜೂಜಾಟ ನಡೆಸುತ್ತಿದ್ದಾರೆಂದು ಚಿದಾನಂದ ಸೌದಿ ಪಿಎಸ್ಐ ಧನ್ನೂರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಿವಾಜಿ ಚೌಕದಿಂದ ಹನುಮಾನ ಮಂದಿರದ ಹತ್ತಿರ ಅಗಸಿ ಕಡೆಗೆ ಹೊಗಿ ಮರೆಯಾಗಿ ನಿಂತು ನೊಡಲು ನಿಟ್ಟೂರ ಗ್ರಾಮದ ಅಗಸಿ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಆರೋಪಿತರಾದ 1) ವೇಂಕಟರಾವ ತಂದೆ ಲಕ್ಷ್ಮಣರಾವ ಕಣಜೆಮನೆ ವಯ: 50 ವರ್ಷ, ಜಾತಿ: ಮರಾಠಾ ಮತ್ತು 2) ಈಶ್ವರ ತಂದೆ ವೇಂಕಟರಾವ ಕಣಜೆಮನೆ ವಯ: 28 ವರ್ಷ, ಜಾತಿ: ಮರಾಠಾ, ಇಬ್ಬರು ಸಾ: ನಿಟ್ಟೂರ ಇವರಿಬ್ಬರು ಒಂದು ರೂ. 80/- ರೂಪಾಯಿ ಕೊಡುತ್ತೆವೆಂದು ಕೂಗಿ ಕೂಗಿ ಜನರಿಗೆ ಆರ್ಕಷಣೆ ಮಾಡಿ ಜನರಿಗೆ ಕರೆಯುತ್ತಿರುವಾಗ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡಾಗ ಅಲ್ಲಿದ್ದ ಜನರು ಓಡಿ ಹೊಗಿರುತ್ತಾರೆ, ನಂತರ ಪಂಚರ ಸಮಕ್ಷಮ ಆರೋಪಿತರೆ ಅಂಗ ಜಡ್ತಿ ಮಾಡಲು ಅವರಿಂದ ನಗದು ಹಣ 760/- ರೂಪಾಯಿ, ಒಂದು ಮೊಬೈಲ ಫೊನ್, ಎರಡು ಬಾಲ್ ಪೆನ್ನ ಮತ್ತು ಮಟಕಾ ನಂಬರ ಬರೆದ 18 ಚೀಟಿಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಂತಾಕಿ ಪೊಲೀಸ್ ಠಾಣೆ ಅಪರಾಧ ಸಂ. 36/2020, ಕಲಂ. 454, 380 ಐಪಿಸಿ :-

ದಿನಾಂಕ 12-08-2020 ರಂದು ಫಿರ್ಯಾದಿ ನರಸಾರೆಡ್ಡಿ ತಂದೆ ಈರೆಡ್ಡಿ ಡೊಂಗಾಲೆ ವಯ: 45 ವರ್ಷ, ಜಾತಿ: ರೆಡ್ಡಿ, ಸಾ: ಉಜನಿ ಗ್ರಾಮ ರವರು ವಡಗಾಂವ ರಸ್ತೆಯಲ್ಲಿರುವ ತಮ್ಮ ಹೊಲದಲ್ಲಿ ಕುರಿ ಸಾಕಾಣಿಕೆ ಕುರಿತು ಶೆಡ್ ಹಾಕುವ ಸಲುವಾಗಿ ತನ್ನ ಹೆಂಡತಿ ಇಮಲಮ್ಮಾ ಹಾಗೂ ಮಗ ಅಕ್ಷಯಕುಮಾರ, ಮಗಳು ಪೂಜಾ, ಅಳಿಯ ಸಂಗಾರೆಡ್ಡಿ ಎಲ್ಲರು ಹೊಲಕ್ಕೆ ಹೊಗಿದ್ದು, ನಂತರ ಹೊಲದಲ್ಲಿ ಹಾಕುತ್ತಿರುವ ಶೆಡ್ ಕೆಲಸಕ್ಕಾಗಿ ನೀರು ತರುವ ಕುರಿತು ಬಕೇಟ ಬೇಕಾಗಿರುವುದರಿಂದ ಅಕ್ಷಯಕುಮಾರ ಇತನಿಗೆ ಮನೆಗೆ ಕಳುಹಿಸಿದಾಗ ಮಗ ಮನೆಗೆ ಹೋಗಿ ನಂತರ ಆತನು ಭಯಭೀತನಾಗಿ ಓಡುತ್ತಾ ಮರಳಿ ಹೊಲಕ್ಕೆ ಬಂದು ತಿಳಿಸಿದ್ದೆನೆಂದರೆ ನಾನು ಮನೆಯ ಕೀಲಿ ತೆಗೆದು ಒಳಗೆ ಹೋದಾಗ ನಮ್ಮ ಮನೆಯಿಂದ ನಮ್ಮ ಬಾಜು ಮನೆಯ ಭಾಗ್ಯವಂತಿ ಗಂಡ ಸಂಜುಕುಮಾರ ಇಕೆಯು ಮನೆಯಿಂದ ಹೊರಗೆ ಬಂದು ನನಗೆ ನೂಕಿ ಹಾಕಿ ತನ್ನ ಸೀರೆಯ ಸೇರಗಿನಲ್ಲಿ ಗಂಟು ಕಟ್ಟಿಕೊಂಡು ಓಡಿ ಹೋಗಿರುತ್ತಾಳೆ ನಾನು ಮನೆಯಲ್ಲಿ ಹೋಗಿ ನೋಡಲು ನಮ್ಮ ಮನೆಯಲ್ಲಿರುವ ಅಲಮಾರಿಯ ಕೀಲಿ ತೆಗೆದ್ದಿದ್ದು ಅದರಲ್ಲಿರುವ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು  ಅಲಮಾರಿಯ ಲಾಕರ್ ತೆರೆದ್ದಿದ್ದು ಇರುತ್ತದೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಹೆಂಡತಿ, ಮಗಳು, ಅಳಿಯ ಎಲ್ಲರು ಬಂದು ಮನೆಯಲ್ಲಿ ನೋಡಲಾಗಿ ಮನೆಯಲ್ಲಿರುವ ಅಲಮಾರಿಯ ಡೋರ ತೆಗೆದಿದ್ದು ಅದರಲ್ಲಿರುವ ಸಾಮಾನುಗಳು ಕೆಳಗೆ ಬಿದ್ದಿದ್ದು ಅಲಮಾರಿಯಲ್ಲಿ 5,00,000/- ರೂ. ನಗದು ಹಣ ಮತ್ತು ಪೂಜಾ ಈಕೆಯ ಮದುವೆಯಲ್ಲಿ ಖರೀದಿ ಮಾಡಿರುವ 1) 25 ಗ್ರಾಂ  ಬಂಗಾರದ ಒಂದು ನೆಕ್ಲೆಸ್ ಅ.ಕಿ 75,000/- ರೂ., 2) 35 ಗ್ರಾಂ ಬಂಗಾರದ ಒಂದು ನಾನ್ ಅ.ಕಿ 1,05,000/- ರ., 3) 15 ಗ್ರಾಂ ಬಂಗಾರದ ಒಂದು ಗುಂಡ ಸರ ಅ.ಕಿ 45,000/- ರೂ., 4) ಒಂದು ಜೊತೆ ಕೀವಿಯಲ್ಲಿನ 5 ಗ್ರಾಂ ಹೂ ಅ.ಕಿ 15,000/- ರೂ. ಹಾಗೂ 5) ಒಂದು ಜೊತೆ ಕೀವಿಯಲ್ಲಿನ ಅರ್ದ ತೋಲೆ 5 ಗ್ರಾಂ ಝೂಮಕಾ ಅ.ಕಿ 15,000/- ಹಾಗೂ ಐಯಾರಿಯಲ್ಲಿ ಬಂದಿರುವ ಬೆಳ್ಳಿಯ ಕುಂಕುಮ ಡಬ್ಬಿಗಳು 40 ಗ್ರಾಂ ಅ.ಕಿ 2000/- ರೂಪಾಯಿ ಬೆಲೆಯುಳ್ಳದ್ದು ಹೀಗೆ ಎಲ್ಲಾ ಸೇರಿ ಒಟ್ಟು 7,57,000/- ರೂಪಾಯಿ ಬೇಲೆಯುಳ್ಳದ್ದು ಭಾಗ್ಯವಂತಿ ಗಂಡ ಸಂಜುಕುಮಾರ ಇವಳು ಮನೆಯ ಮೇಲಿಂದ ಒಳಗೆ ಹೋಗಿ ಕಳವು ಮಾಡಿಕೊಂಡು ಹೋಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ದೂರನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.