ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಛತ್ರಪ್ಪ ತಂದೆ ರಾಜಪ್ಪ ಬೌಧ ವಯಾ 65 ಉ ವಕೀಲರು ಸಾ ಸಿಐಬಿ ಕಾಲೋನಿ ಶಕ್ತಿ ನಗರ ಗುಲಬರ್ಗಾ ರವರು ನಾನು ದಿನಾಂಕ 27/12/2011 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ವಕೀಲರ ಬಾರ ಅಸೋಸಿಯನದಿಂದ ನ್ಯಾಯಾಲಯದ ಕಡೆಗೆ ನಡೆದುಕೊಂಡು ಹೋಗುವಾಗ ಎದುರಿನಿಂದ ಸಂಜಯಕುಮಾರ ತಂದೆ ತುಕಾರಾಮ ನವಲೆ ವಯಾ 34 ಸಾ ಪ್ಲಾಟ ನಂ 70 ಸಾಯಿಬಾಬಾ ಲೇಔಟ ಶಕ್ತಿ ನಗರ ಗುಲಬರ್ಗಾ ಇತನು ಬಂದು ಕೈಯಿಂದ ಎಡಗಣ್ಣಿನ ಹುಬ್ಬಿನ ಮೆಲೆ ಹೊಡೆದು ಕಾಲಿನಿಂದ ಟೊಂಕದ ಮೇಲೆ ಜೊರಾಗಿ ಒದ್ದಾಗ ಆಯಾ ತಪ್ಪಿ ಕೆಳಗೆ ಬಿದ್ದಿರುತ್ತೆನೆ. ಕಿರಿಯ ವಕೀಲರು ನನಗೆ ಉಪಚಾರಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 219/11 ಕಲಂ 341, 323, 324, ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ನಾನು ಶ್ರೀ ರಾಜದೀಪ ತಂದೆ ಓಂಪ್ರಕಾಶ ಜೈನ ಇವರು ಜೇವರ್ಗಿ ಪಟ್ಟಣದ ಟಾಕಿಜ ರೋಡಿನ ಹತ್ತಿರ ಪೂಜಾ ಬಂಗಾರದ ಅಂಗಡಿ ಇದ್ದು ದಿನ ನಿತ್ಯ ವ್ಯಾಪಾರ ಮಾಡಿಕೊಂಡಿರುತ್ತೆನೆ ನಾನು ನಿನ್ನೆ ದಿನಾಂಕ 27-12-2011 ರಂದು ಎಂದಿನಂತೆ ವ್ಯಾಪಾರ ಮಾಡಿಕೊಂಡು ರಾತ್ರಿ 8-00 ಗಂಟೆಗೆ ನಾನು ಮತ್ತು ನನ್ನ ಅಂಗಡಿಯಲ್ಲಿ ಕೆಲಸ ಮಾಡುವ ಮಲ್ಲಿಕಾರ್ಜುನ ತಂದೆ ವೀರಭದ್ರಪ್ಪ ಅಂಕಲಿಗಿ ಇಬ್ಬರು ಅಂಗಡಿ ಬಂದ ಮಾಡಿ ಶೇಟರಗೆ ಕೀಲಿ ಹಾಕಿ ಮನೆಗೆ ಹೋಗಿರುತ್ತೆವೆ. ಬೆಳಗಿನ ಜಾವ ನಮ್ಮ ಪಕ್ಕದ ಅಂಗಡಿಯ ಗುರು ತಂದೆ ಮರೆಪ್ಪ ತಳವಾರ ಇತನು ನನಗೆ ಪೋನ ಮಾಡಿ ಹೇಳಿದ್ದೆನೆಂದರೆ, ನಿಮ್ಮ ಅಂಗಡಿ ಕಳ್ಳತನವಾಗಿರುತ್ತದೆ. ಅಂತಾ ತಿಳಿಸಿದ ಕೂಡಲೆ ನಾನು ಮತ್ತು ಮಲ್ಲಿಕಾರ್ಜುನ ಇಬ್ಬರು ಅಂಗಡಿಗೆ ಬಂದು ನೋಡಲಾಗಿ ಅಂಗಡಿಯ ಶೇಟರ ಕೀಲಿ ಮುರಿದಿತ್ತು ನಾವಿಬ್ಬರು ಒಳಗೆ ಹೋಗಿ ನೋಡಲಾಗಿ ಬೆಳ್ಳಿಯ ಸಾಮಾನುಗಳು ಇಟ್ಟಿದ್ದ ಅಲಾಮರಿಯಲ್ಲಿದ್ದ ಬೆಳ್ಳಿಯ ಕಾಲು ಚೈನುಗಳು ಕಾಲುಂಗುರಗಳು ಒಟ್ಟು 36 ಕೆ.ಜಿ. ತೂಕದ ಸಾಮಾನುಗಳು ಬಂಗಾರದ ಉಂಗುರುಗಳು ಬೆಂಡೊಲಿಗಳು ಹೀಗೆ 380 ಗ್ರಾಂ ತೂಕದ ಬಂಗಾರದ ಅಭಾರಣಗಳು ನಗದು ಹಣ 30.000 /- ಸಾವಿರ ರೂ. ಹಿಗೆ ಒಟ್ಟು 28.43.000/- ಕಿಮ್ಮತ್ತಿನ ಬಂಗಾರ ಆಭರಣಗಳು ಬೆಳ್ಳಿ ಆಭರಣಗಳು, ಸಾಮಾನುಗಳು ಯಾರೋ ಕಳ್ಳರು ಕಬ್ಬಿಣದ ರಾಡಿನಿಂದ ಅಂಗಡಿಯ ಶೇಟರಕ್ಕೆ ಹಾಕಿದ ಕೀಲಿ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 211/11 ಕಲಂ. 457.380 ಐ.ಪಿ.ಸಿ. ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.