ಅಪಘಾತ
ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ:
23/09/2019 ರಂದು ಬೆಳಿಗ್ಗೆ ನನ್ನ ತಂದೆಯು ಟಿ ವಿ ಎಸ್ ಎಕ್ಸ್ ಎಲ್ ಮೊ ಸೈ ನಂ ಕೆ ಎ - 32 ಎಸ್- 9203 ನೇದ್ದರ ಮೇಲೆ ಕಿರಾಣಿ ಸಾಮಾನು
ತರುತ್ತೇನೆ ಅಂತಾ ಹೇಳಿ ಶಹಾಬಾದಕ್ಕೆ
ಹೋಗಿದ್ದರು. 12-30 ಪಿ ಎಮ್ ಕ್ಕೆ ನನಗೆ
ಮಾಲಗತ್ತಿ ಹತ್ತಿರದ ಪಾನ್ ಡಬ್ಬಿಯ ಆನಂದ ಕೊಳ್ಳಿ ಇತನು ಫೋನ್ ಮಾಡಿ ತಮ್ಮ ತಂದೆಯವರು ನಡೆಸಿಕೊಂಡು ಬರುತ್ತಿದ್ದ ಮೋ
ಸೈ ಟಿ ವಿ ಎಸ್ ಎಕ್ಸ್ ಎಲ್ ಕ್ಕೆ ಮಾಲಗತ್ತಿ
ಕ್ರಾಸ್ ಹತ್ತಿರ ರಸ್ತೆ ಅಪಘಾವಾಗಿದೆ ಅಂತಾ ತಿಳಿಸಿರುತ್ತಾರೆ. ಸ್ಥಳಕ್ಕೆ ಹೋಗಿ ನೋಡಲಾಗಿ
ನಮ್ಮ ಕುಟುಂಬದವರಾದ ತಾಯಿ ಗುಂಡಮ್ಮ, ತಮ್ಮ
ರಾಜಕುಮಾರ ಮತ್ತು ಸುರೇಶ ಮಿರಾಜ್ ಕರ್ ಶಹಾಬಾದ
ಹಾಗೂ ಆನಂದಕೊಳ್ಳಿ ಮಲ್ಲಿಕಾರ್ಜುನ ಇಡಗಿ
ಇದ್ದರು. ರಸ್ತೆಯ ಎಡಬದಿಗೆ ಬಿದ್ದ ನಮ್ಮ
ತಂದೆಯನ್ನು ನೋಡಲಾಗಿ ಅವರ ಎಡಕಾಲಿಗೆ ಭಾರಿ ಗುಪ್ತ ಪೆಟ್ಟಾಗಿದ್ದು ಮತ್ತು ತಲೆಗೆ ಮುಖಕ್ಕೆ
ಪೆಟ್ಟಾಗಿ ಬಾಯಿ, ಕಿವಿ, ಮತ್ತು ಮೂಗಿನಿಂದ ರಕ್ತ
ಬಂದು ಮೃತಪಟ್ಟಿದ್ದರು ಅಲ್ಲೆ ಇದ್ದ ಆನಂದ
ಮಿರಾಜ್ ಕರ್ ಮತ್ತು ಮಲ್ಲಿಕಾರ್ಜುನ ಇಟಗಿ
ಇವರಿಗೆ ವಿಚಾರಿಸಲು ಗೊತ್ತಾಗಿದ್ದೇನೆಂದರೆ 12-30 ಪಿ ಎಮ್ ಸುಮಾರಿಗೆ ನಿಮ್ಮ ತಂದೆಯವರು ಟಿ ವಿ
ಎಸ್ ಎಕ್ಸ್ ಎಲ್ ಮೊ ಸೈ ನಂ ಕೆ ಎ - 32 ಎಸ್ – 9203 ನೇದ್ದರ ಮೇಲೆ ಕಿರಾಣಿ ಸಾಮಾನು
ತೆಗೆದುಕೊಂಡು ಬರುವಾಗ ಕ್ರಾಸ್ ಹತ್ತಿರ ಟರ್ನ್ ಮಾಡಿಕೊಂಡು ನಡೆದಾಗ ರಾವೂರು ರಸ್ತೆ ಕಡೆಯಿಂದ
ಒಬ್ಬ ಮೊ ಸೈ ಚಾಲಕ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಿಮ್ಮ ತಂದೆಯವರ ಮೊ ಸೈ ಕ್ಕೆ ಡಿಕ್ಕಿಪಡಿಸಿದ್ದರಿಂದ ನಿಮ್ಮ ತಂದೆಯವರ ಎಡಗಾಲಿಗೆ ಭಾರಿ ಗುಪ್ತಪೆಟ್ಟಾಗಿದ್ದು
ನೆಲಕ್ಕೆ ಬಿದ್ದು ಮೃತಪಟ್ಟಿರುತ್ತಾರೆ. ಮತ್ತು ಡಿಕ್ಕಿಪಡಿಸಿದವನ ಹೆಸರು ಮತ್ತು ವಿಳಾಸ ತಿಳಿದಿರುವುದಿಲ್ಲಾ ಡಿಕ್ಕಿಪಡಿಸಿದವನ
Super Splendar ಮೊ ಸೈ ನಂ ಕೆ ಎ 32 ಇ ಸಿ 1372
ಇರುತ್ತದೆ ಅಂತಾ ಮಾಹಿತಿ ನೀಡಿದ್ದುರುತ್ತಾರೆ ಅಂತಾ ಶ್ರೀ ನಾಗೇಂದ್ರ ತಂದೆ ಬಸಣ್ಣ ಸಾ:
ಮಾಲಗತ್ತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಕಳವು
ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ
ಮಹಾಂತೇಶ ತಂದೆ ಬಂಡೇಪ್ಪ ಬಿರಾದಾರ ಸಾ|| ಯಡ್ರಾಮಿ ತಾ|| ಯಡ್ರಾಮಿ
ರವರ ಮನೆಯ ಪಕ್ಕದಲ್ಲಿ ನಮ್ಮ ತಮ್ಮಂದಿರರಾದ ಬಸವರಾಜ
ಬಿರಾದಾರ, ಈರಣ್ಣ ಬಿರಾದಾರ ಇವರ ಮನೆಗಳು ಇರುತ್ತವೆ, ನಮ್ಮ ಮನೆಯ ಅಲ್ಮಾರಿಯಲ್ಲಿ 1,35,000/- ರೂ ನಗದು ಹಣ,
ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್,
ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಯಷ್ಟನ್ನು ಅಲ್ಮಾರಿಯಲ್ಲಿ ಇಟ್ಟಿದ್ದು ಇರುತ್ತದೆ, ನಿನ್ನೆ ದಿನಾಂಕ 23-09-2019 ರಂದು ನನ್ನ ಮಗಳು ಸವಿತಾ
ಇವಳ ಡಿಲೆವರಿ (ಹೆರಿಗೆ) ಸಲುವಾಗಿ ನಮ್ಮ
ಮನೆಯ ಬಾಗಿಲಗೆ ಕೀಲಿ ಹಾಕಿಕೊಂಡು ನಾನು ನನ್ನ ಹೆಂಡತಿ ಇಬ್ಬರು ಕೂಡಿ ಕಲಬುರಗಿಗೆ ದವಾಖಾನೆಗೆ ಹೋಗಿದ್ದೇವು,
ಇಂದು ದಿನಾಂಕ 25-09-2019 ರಂದು ಬೆಳಿಗ್ಗೆ
03;30 ಗಂಟೆ ಸುಮಾರಿಗೆ ನಮ್ಮ ತಮ್ಮ ಈರಣ್ಣ ಇವರು ನನಗೆ ಫೋನ ಮಾಡಿ ನಾನು ಇಂದು
ರಾತ್ರಿ ವೇಳೆಯಲ್ಲಿ 01;00 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆ ಮಾಡಲು
ಎದ್ದಾಗ ನಿಮ್ಮ ಮನೆಯ ಬಾಗಿಲ ಕೀಲಿ ಹಾಕಿದ್ದಿತ್ತು, ನಂತರ ಇದೀಗ ಪುನಹ ಮತ್ತೆ ಮೂತ್ರ ವಿಸರ್ಜನೆ ಮಾಡಲು ಎದ್ದು
ನೋಡಿದಾಗ ನಿಮ್ಮ ಮತ್ತು ಬಸವರಾಜ ಬಿರಾದಾರ ರವರ ಮನೆಯ ಬಾಗಿಲ ಕೊಂಡಿಯನ್ನು ಯಾರೋ ಕಳ್ಳರು ಮುರಿದು
ಬಾಗಿಲ ತೆರೆದಿರುತ್ತಾರೆ, ನೀವು ಬೇಗ ಬನ್ನಿ ಅಂತಾ ಹೇಳಿದ ಕೂಡಲೆ ನಾನು
ನನ್ನ ಹೆಂಡತಿ ಇಬ್ಬರು ಕೂಡಿ ಮನೆಗೆ ಬಂದು ನಂತರ ನಮ್ಮ ತಮ್ಮಂದಿರಾದ ಈರಪ್ಪ, ಬಸವರಾಜ, ನಾಗಣ್ಣ ಬಿರಾದಾರ, ರವರು ಕೂಡಿ ನಮ್ಮ ಮನೆಯೊಳಗೆ ಹೋಗಿ ನೋಡಿದಾಗ ನಮ್ಮ ಅಲ್ಮಾರಿಯ ಬಾಗಿಲ ತೆರೆದಿತ್ತು,
ಅದರಲ್ಲಿದ್ದ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಮಾರಿಯಲ್ಲಿ ನಾವು ಇಟ್ಟಿದ 1,35,000/- ರೂ ನಗದು ಹಣ,
ಮತ್ತು ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಾಟ, ಗ್ಲಾಸ್,
ಪೂಜಾ ಮಾಡುವ ಆರ್ತಿ ಸಟ್, ಹೀಗೆ ಒಟ್ಟು ಒಂದು ಕೇ.ಜಿ ಬೆಳ್ಳಿ ಅ;ಕಿ; 30,000/- ರೂ ರಷ್ಟು ಇರಲಿಲ್ಲಾ, ನಂತರ ನಮ್ಮ ತಮ್ಮ ಬಸವರಾಜ ರವರಿಗೆ ವಿಚಾರಿಸಲಾಗಿ ಅವರ ಮನೆಯ ಅಲ್ಮಾರಿಯಲ್ಲಿದ್ದ
05 ಗ್ರಾಂ ಬಂಗಾರದ ಸಣ್ಣು ಮಕ್ಕಳ ಚೈನ ಅ;ಕಿ;
15,000/- ರೂ, ತಲಾ 02 ಗ್ರಾಮಿನ 2 ಉಂಗುರು
ಅ;ಕಿ; 10,000/- ರೂ, ನಗದು ಹಣ 30,000/- ರೂ, ನಮ್ಮ ಮತ್ತು ನಮ್ಮ ತಮ್ಮನ ಬಂಗಾರದ ಸಾಮಾನುಗಳು ಹಾಗು ಬೆಳ್ಳಿಯ ಸಾಮಾನುಗಳು ಮತ್ತು ನಗದ
ಹಣ ಹೀಗೆ ಒಟ್ಟು 2,20,000/- ರೂ ಕಿಮ್ಮತ್ತನಿವುಗಳನ್ನು ಯಾರೋ ಕಳ್ಳರು
ಇಂದು ದಿನಾಂಕ 25-09-2019 ರಂದು 01;00 ಎ.ಎಂ ದಿಂದ 03;30 ಎ.ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮತ್ತು ನಮ್ಮ ತಮ್ಮನ ಮನೆಯ ಬಾಗಿಲ ಕೊಂಡಿಯನ್ನು
ಮುರಿದು ಅಲ್ಮಾರಿಯಲ್ಲಿದ್ದ ನಗದು ಹಣ ಮತ್ತು ಬಂಗಾರ, ಬೆಳ್ಳಿಯ ಸಾಮಾನುಗಳನ್ನು
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ
ವಾಹನ ಕಳವು ಪ್ರಕರಣ :
ರೇವೂರ ಠಾಣೆ : ಶ್ರೀ ದಾನಯ್ಯ ತಂದೆ ಈರಯ್ಯ ಹಿರೇಮಠ ಸಾ||ಕುಮ್ಮನ ಶಿರಸಗಿ ತಾ||ಜೇವರ್ಗಿ. ರವರ ಹೆಸರಿನಲ್ಲಿ ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು ಅದರ ನಂ KA32-EP-5513 ಅದರ ಚಸ್ಸಿ ನಂ MBLHA10CGGHL43724 ಇಂಜನ್ ನಂ HA10ERGHL44793 ಅಂತಾ ಇರುತ್ತದೆ. ರೇವೂರ
(ಬಿ) ಗ್ರಾಮದ ನನಗೆ ಪರಿಚಯಸ್ಥರಾದ ಬಂಡೇಪ್ಪಾ ತಂದೆ ಬಸ್ಸಣ್ಣ ಮಾಳಗೆ ರವರ ಹತ್ತಿರ ನನಗೆ
ಕೆಲಸವಿದ್ದ ನಿಮೀತ್ಯ ನಾನು ದಿ:19/08/2019 ರಂದು ಸಾಯಂಕಾಲ 04:00 ಗಂಟೆ ಸುಮಾರಿಗೆ ನನ್ನ ಮೋಟರ
ಸೈಕಲ ಮೇಲೆ ರೇವೂರ (ಬಿ) ಗ್ರಾಮಕ್ಕೆ ಬಂದು ಬಂಡೇಪ್ಪಾ ಅವರಿಗೆ ಭೇಟಿಯಾಗಿ ಮರಳಿ ನಮ್ಮ
ಗ್ರಾಮಕ್ಕೆ ಹೋಗಬೇಕೆಂದಾಗ ರಾತ್ರಿಯಾಗಿದ್ದರಿಂದ ನಾನು ಬಂಡೇಪ್ಪಾರವರ ಮೆನೆಯಲ್ಲಿ
ಬಂಡೇಪ್ಪಾರವರೊಂದಿಗೆ ಉಟ ಮಾಡಿ 10:30 ಗಂಟೆ ಸುಮಾರಿಗೆ ಮಲಗಿಕೊಂಡಿರುತ್ತವೆ. ನನ್ನ ಮೋಟರ ಸೈಕಲ
ಬಂಡೇಪ್ಪಾ ರವರ ಮನೆಯ ಮುಂದೆ ನಿಲ್ಲಿಸಿದ್ದು ದಿನಾಂಕ:20/08/2019 ರಂದು ಬೆಳಿಗ್ಗೆ 05:00 ಗಂಟೆ
ಸುಮಾರಿಗೆ ಎದ್ದು ನನ್ನ ಮೋಟರ ಸೈಕಲ ನೋಡಲಾಗಿ ನಾನು ನಿಲ್ಲಿಸಿದ್ದ ಜಾಗದಲ್ಲಿ ನನ್ನ ಮೋಟರ ಸೈಕಲ
ಇರಲಿಲ್ಲ. ನಾನು ಬಂಡೇಪ್ಪಾ ಹಾಗೂ ಅವರ ತಮ್ಮನಾದ ಕಲ್ಯಾಣಿ ರವರಿಗೆ ಎಬ್ಬಿಸಿ ವಿಚಾರಿಸಲಾಗಿ ತಮಗೆ
ಗೋತ್ತಿರುವುದಲ್ಲಾ ಅಂತಾ ತಿಳಿಸಿದ್ದು, ನಂತರ ನಾನು ಬಂಡೇಪ್ಪಾ, ಕಲ್ಯಾಣಿ ಹಾಗೂ ರೇವೂರ (ಬಿ) ಗ್ರಾಮದ ಬಸವರಾಜ ಬಶೆಟ್ಟಿ ಎಲ್ಲರು ಕೂಡಿ
ರೇವೂರ ಗ್ರಾಮದಲ್ಲಿ ವಿಚಾರಿಸಿ ನಂತರ ಅತನೂರ, ಮಲ್ಲಾಬಾದ, ಮಹಾರಾಷ್ಟ್ರದ ದುಧನಿ
ಪಟ್ಟಣಕ್ಕೆ ಹೋಗಿ ವಿಚಾರಿಸಲಾಗಿ ನನ್ನ ಮೋಟರ ಸೈಕಲ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರವುದಲ್ಲಾ.
ನಾನು ನಮ್ಮ ಗ್ರಾಮಕ್ಕೆ ಹೋಗಿ ನನ್ನ ಮನೆಯವರಿಗೆ ಹಾಗು ನಮ್ಮ ಸಂಭಂದಿಕರಿಗೆ ನನ್ನ ಮೋಟರ ಸೈಕಲ
ಬಗ್ಗೆ ವಿಚಾರಿಸಿದ್ದು ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.