ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-09-2019
ಬೀದರ
ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 96/2019, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ
:-
ದಿನಾಂಕ 24-09-2019 ರಂದು ರೋಹಿತ ತಂದೆ ಪ್ರಕಾಶ ಜಾಧವ, ವಯ:
11 ವರ್ಷ,
ಜಾತಿ:
ಲಮಾಣಿ, ಸಾ: ಮುದೋಳ
ಥಾಂಡಾ ಈತನು ಸಾಯಿ ಸ್ಕೂಲ ಕಡೆಯಿಂದ ಜನವಾಡ ರೋಡ ಮುಖಾಂತರ ಹಾಸ್ಟಲ್ ಕಡೆಗೆ ಬರುತ್ತಿರುವಾಗ, ರಿಲಾಯನ್ಸ ಪೆಟ್ರೋಲ ಪಂಪ ಹತ್ತಿರ ಎದುರಿನಿಂದ ಮೊಟಾರ ಸೈಕಲ ನಂ.
ಕೆಎ-38/ವಿ-8845 ನೇದ್ದರ ಸವಾರನಾದ ಆರೋಪಿಯು ತನ್ನ
ವಾಹನವನ್ನು ಅತೀವೇಗ ಹಾಗು
ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿ, ಮೊಟಾರ ಸೈಕಲ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಪರಿಣಾಮ ರೋಹಿತ ಈತನಿಗೆ ಬಲಗಾಲ ಪಾದದ ಮೇಲೆ ಭಾರಿ ರಕ್ತಗಾಯ, ಬಲಗಣ್ಣಿಗೆ, ಬಲ ಗಲ್ಲಕ್ಕೆ ತರಚಿದ ಗಾಯವಾಗಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಸಾರಾಂಶದ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ನೂತನ ನಗರ
ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 134/2019, ಕಲಂ. 306 ಐಪಿಸಿ :-
ಫಿರ್ಯಾದಿ ಉಮಾರಾವ ತಂದೆ
ವಿಠಲರಾವ ರಾಠೋಡ,
ವಯ: 53 ವರ್ಷ, ಜಾತಿ: ಎಸ್.ಸಿ ಲಂಬಾಣಿ, ಸಾ: ಘಾಟಬೋರಳ ತಾಂಡಾ ರವರು
ಕೆಲಸಕ್ಕೆ ಹೋದಾಗ ಫಿರ್ಯಾದಿಯವರ ಚಿಕ್ಕಪ್ಪನ ಮಗನಾದ ಸಂತೋಷ ತಂದೆ ಪುರು ರಾಠೋಡ, ವಯ: 35 ವರ್ಷ ಈತನು ಫಿರ್ಯಾದಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ
ಫಿರ್ಯಾದಿಯ ಮನೆಯಲ್ಲಿ ಹೆಂಡತಿ ಒಬ್ಬಳೆ ಇರುವಾಗ ಬರುವುದು ಹೋಗುವುದು ಮಾಡುತ್ತಿದ್ದನ್ನು ಸದರಿ
ವಿಷಯ ಹೆಂಡತಿ ಕವಿತಾ ಇವಳು ಫಿರ್ಯಾದಿಗೆ ತಿಳಿಸಿದಾಗ ಫಿರ್ಯಾದಿಯು ಸಂತೋಷ ಇತನಿಗೆ ನಮ್ಮ
ಮನೆಯಲ್ಲಿ ನನ್ನ ಹೆಂಡತಿ ಒಬ್ಬಳೆ ಇದ್ದಾಗ ಏಕೆ ಮನೆಗೆ ಹೋಗುತ್ತಿದ್ದಿ ಅದು ಸರಿಯಿಲ್ಲ ಅಂತ
ತಿಳಿಸಿದರೂ ಸಹ ಸಂತೋ ಇತನು ಮನೆಗೆ ನಿರಂತರ ಬರುತ್ತಿದ್ದನು, ಈ ವಿಷಯದಲ್ಲಿ ಕವಿತಾ ಇಕೆಯು ತನ್ನ
ಮನಸ್ಸಿಗೆ ಬೇಜಾರು ಮಾಡಿಕೊಳ್ಳುತ್ತಿದ್ದಳು ಹಾಗು ಸಂತೋಷ ಈತನು ಈ ವಿಷಯದ ಬಗ್ಗೆ ಯಾರಿಗಾದರೂ
ಹೇಳಿದರೆ ನಿಮಗೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾನೆ, ಕಾರಣ ಈ ಬಗ್ಗೆ
ತಾಂಡಾದಲ್ಲಿ ಫಿರ್ಯಾದಿಯು ಸಂತೋಷ ಈತನಿಗೆ ಕರೆಯಿಸಿ ತಾಂಡಾದ ಜನರ ಮುಂದೆ ಪಂಚಾಯತಿ ಹಾಕಿದಾಗ
ಇನ್ನು ಮುಂದೆ ನಮ್ಮ ಮನೆಗೆ ಯಾವಾಗಲೂ ಬರುವುದಿಲ್ಲ ಅಂತ ಒಪ್ಪಿಕೊಂಡಿದ್ದು ಇರುತ್ತದೆ, ಅದಾದ
ನಂತರ ಸಹ ಮನೆಯಲ್ಲಿ ಹೆಂಡತಿ ಒಬ್ಬಳೇ ಇರುವಾಗ ಮನೆಗೆ ಬಂದು ನನ್ನೊಂದಿಗೆ ಬಾ ನಾವಿಬ್ಬರೂ ಬೇರೆ
ಕಡೆ ಹೋಗಿ ಮದುವೆ ಮಾಡಿಕೊಳ್ಳೊಣ ಎಂದು ಹೆಂಡತಿಗೆ ಸಂತೋಷ ಈತನು ಕಿರಕುಳ ನೀಡುತ್ತಿದ್ದನು,
ಹೀಗಿರುವಾಗ ದಿನಾಂಕ 24-09-2019 ರಂದು ಫಿರ್ಯಾದಿಯು
ಎಂದಿನಂತೆ ಮನೆಯಿಂದ ಕೆಲಸಕ್ಕೆ ಹೋದಾಗ ಫಿರ್ಯಾದಿಯ ಹೆಂಡತಿಯು ಆರೋಪಿ ಸಂತೋಷ ಈತನು ತನ್ನೊಂದಿಗೆ
ಮದುವೆ ಮಾಡಿಕೊಳ್ಳಲು ನೀಡುತ್ತಿದ್ದ ಕಿರಕುಳ ತಾಳಲಾರದೇ ಮನೆಯಲ್ಲಿ ಹಾಲಿನಲ್ಲಿನ ಛತ್ತಿನ
ಕಬ್ಬಿಣದ ಕೊಂಡಿಗೆ ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ
ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment