Police Bhavan Kalaburagi

Police Bhavan Kalaburagi

Tuesday, September 24, 2019

BIDAR DISTRICT DAILY CRIME UPDATE 24-09-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-09-2019

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 16/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಕಂಠೆಪ್ಪಾ ತಂದೆ ಶರಣಪ್ಪಾ ಬಿರಾದಾ ಸಾ: ಕುದಮುಡ, ತಾ: ಕಮಲಾಪೂರ, ಜಿ: ಕಲಬುರ್ಗಿ ರವರ ಮಗ ಹಾಗು ಸೊಸೆಯಾದ ಅನಿತಾ ಇಬ್ಬರು ಹಬ್ಬಕ್ಕೆ ಅಂತ ಪೂನಾದಿಂದ ಬಂದು ಸೊಸೆಗೆ ಹುಮನಾಬಾದದಿಂದ ಕಮಲಾಪೂರಕ್ಕೆ ಬಸ್ಸಿಗೆ ಕೂಡಿಸಿ ಮಗ ದಿನಾಂಕ 22-09-2019 ರಂದು ಬಸವಕಲ್ಯಾಣಕ್ಕೆ ಹೋಗಿರುತ್ತಾನೆ, ನಂತರ ಫಿರ್ಯಾದಿಗೆ ಗೊತ್ತಾಗಿದ್ದೆನೆಂದರೆ ಮಗನಾದ ಶರಣಬಸಪ್ಪ ಬಿರಾದಾರ ಇತನು ಬಸವಕಲ್ಯಾಣ ನಗರದ ಬಸವ ಮಹಾಮನೆ ಹತ್ತಿರ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ನಂತರ ದಿನಾಂಕ 23-09-2019 ರಂದು ಭೂಷಣ ರವರು ಕರೆ ಮಾಡಿ ತಿಳಿಸಿದ್ದು ನಾನು ಮತ್ತು ಸೋಸೆಯಾದ ಅನಿತಾ, ಮಗನಾದ ರೇವಣಸಿದ್ದಪ್ಪಾ ಮತ್ತು ಮ್ಮೂರ ಜನರಾದ ಸಿದ್ರಾಮಪ್ಪಾ, ಕಲ್ಲಪ್ಪಾ, ಸೂರ್ಯಕಾಂತ ಮತ್ತು ಮಲ್ಲಿಕಾರ್ಜುನ ರವರೆಲ್ಲರೂ ಕೂಡಿಕೊಂಡು ಬಸವಕಲ್ಯಾಣಕ್ಕೆ ಬಂದು ಬಸವಕಲ್ಯಾಣ ನಗರದ ಬಸವ ಮಹಾಮನೆ ಹತ್ತಿರ ಹೋಗಿ ನೋಡಲು ಮಗನಾದ ಶರಣಬಸಪ್ಪ ಬಿರಾದಾರ ಇತನು ಒಂದು ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಮಗ ಜೀವದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ಮಗನಾದ ಶರಣಬಸಪ್ಪ ಇತನ ಸಾವಿನ ಬಗ್ಗೆ ಯಾರ ಮೇಲು ಯಾವುದೇ ರೀತಿಯ ಸಂಶಯ ಇರುವುದಿಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 85/2019, ಕಲಂ. 143, 504, 307, 302 ಜೊತೆ 149 ಐಪಿಸಿ :-
ದಿನಾಂಕ 21-09-2019 ರಂದು ಫಿರ್ಯಾದಿ ಲಕ್ಷ್ಮೀ ಗಂಡ ಪ್ರಭಾಕರ ವಾಗ್ಲೆ ವಯ: 50 ವರ್ಷ, ಜಾತಿ: ಎಸ್.ಸಿ ಮಾದಿಗ, ¸Á: ಅಗ್ರಿಕಲ್ಚರ್ ಕಾಲೋನಿ ಬೀದರ ರವರ ಮಗನಾದ ಸಾವನಕುಮಾರ ವಾಗ್ಲೆ ತಂದೆ ಪ್ರಭಾರಕರ ವಾಗ್ಲೆ ವಯ: 28 ವರ್ಷ, ಸಾ: ಅಗ್ರಿಕಲ್ಚರ್ ಕಾಲೋನಿ ಗುಂಪಾ ಹತ್ತಿರ ಬೀದರ ಇತನು ಕಳೆದ ನಾಲ್ಕು ಐದು ವರ್ಷದ ಹಿಂದೆ ಶಾಹಗಂಜನ ವಸಂತಮಾಲಾ ಇಕೆಯೊಂದಿಗೆ ಪ್ರಿತಿಸಿ ಮದುವೆ ಮಾಡಿಕೊಂಡಿದ್ದು, ಸಾವನ ಇತನು ಸಾಮಾಜಿಕ ಕಾರ್ಯಗಳಲ್ಲಿ ಇರುವುದರಿಂದ ಆಗಾಮನೆಗೆ ಬರಲು ತಡವಾಗತ್ತದೆ, ತಡವಾದಾಗಲೆಲ್ಲಾ ಸೋಸೆ ಮಗನೊಂದಿಗೆ ಜಗಳವಾಡಿ ನೀನು ಸುಳ್ಳು ಹೇಳುತ್ತಿದ್ದಿ ಬೇರೆ ಹೆಣ್ಣಿನೊಂದಿಗೆ ನಿನ್ನ ಸಂಬಂಧ ಇದೆ ಅದಕ್ಕೆ ನೀನು ತಡವಾಗಿ ಬಂದು ಸುಳ್ಳು ನೆಪ ಹೇಳುತ್ತಿ ಎಂದು ಜಗಳ ತೆಗೆದಾಗ ಸೊಸೆಯ ತಂದೆ, ತಾಯಿ, ಸಂಬಂಧಿಕರು ಬಂದು ಫಿರ್ಯಾದಿಯೊಂದಿಗೆ ಜಗಳವಾಡುತ್ತಿದ್ದರು, ಇಂದಲ್ಲಾ ನಾಳೆ ಸರಿಯಾಗಬಹುದೆಂದು ಸುಮ್ಮನಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಸೊಸೆಯ ತಾಯಿ ಇಂದುಮತಿಗೆ ಹುಷಾರ ಇಲ್ಲದೆ ಇರುವುದರಿಂದ ಸೊಸೆ ಹೋಗಿ ಬರುತ್ತೇನೆ ಎಂದು ಹೇಳಿದ್ದರಿಂದ ಫಿರ್ಯಾದಿಯು ಅದಕ್ಕೂ ಸ್ವಲ್ಪ ದಿವಸ ತನ್ನ ತಾಯಿ, ತಂದೆಯೊಂದಿಗೆ ಇದ್ದು ನಮ್ಮೊಂದಿಗೆ ಸರಿಯಾಗಿ ಇರಬಹುದೆಂದು ತಿಳಿದು ಸಾವನ ಇವನೆ ಒಯ್ದು ಬಿಟ್ಟು ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 21-09-2019 ರಂದು ಸಾವನ ಇವನು ಫಿರ್ಯಾದಿಗೆ ಕರೆ ಮಾಡಿ ಮಮ್ಮಿ ನನ್ನ ಹೆಂಡತಿ ನನಗೆ ಕರೆ  ಮಾಡಿ ಬಾಯಿಗೆ ಬಂದಂತೆ ಬೈಯುತ್ತಿದ್ದಾಳೆ ನಿಮಗೆ ಬಿಡುವುದಿಲ್ಲಾವೆಂದು ಬೆದರಿಕೆ ºÁಕುತ್ತಿದ್ದಾಳೆ ಎಂದು ಹೇಳಿದ್ದು ಫಿರ್ಯದಿಯು ತನ್ನ ಸೊಸೆಗೆ ಕರೆ ಮಾಡಿ ಯಾಕೆ ಬೈಯುತ್ತಿದ್ದಿ ಅವನು ಮೊದಲೆ ಕೆಸ್ ಆಗಿದ್ದರಿಂದ ಟೆನಷನ್ದಲ್ಲಿದ್ದಾನೆ ನಿನ್ಯಾಕೆ ಬೈದಾಡುತ್ತಿದ್ದಿ ಎಂದು ಹೇಳಿದಾಗ ವಸಂತಮಾಲಾ ಇವಳು ಫಿರ್ಯಾದಿಗೂ ಸಹ ಬಾಯಿಗೆ ಬಂದಂತೆ ಬೈದು ನಿನಗೆ ಬಿಡುವುದಿಲ್ಲಾವೆಂದು ಹೇಳಿ ಕರೆಯನ್ನು ಕಟ್ ಮಾಡಿರುತ್ತಾಳೆ, ಪುನ್ಹ ರಾತ್ರಿ ಸಾವನ ಇತನು ಕರೆ ಮಾಡಿ ನನ್ನ ಹೆಂಡತಿ ನನಗೆ ಕರೆ ಮಾಡಿ ಬೈಯುತ್ತಿದ್ದಾಳೆ ನೀನು ಮಾತಾಡು ಎಂದು ಕರೆಯನ್ನು ಕಾನ್ಫರೆನ್ಸನಿಂದ ಫೋನಿಗೆ ಹಚ್ಚಿ ಕೊಟ್ಟಾಗ ಫಿರ್ಯಾದಿಯು ಮಾತಾಡುವಷ್ಟರಲ್ಲಿ ಬಾಯಿಗೆ ಬಂದಂತೆ ಬೈದು ಮುಂದಿನಿಂದ ಬಾ ನಿನ್ನ ಬಳಿ ಎಷ್ಟು ಮಂದಿ ಹರಾ ನೊಡತಾ ಎಲ್ಲರಿಗೂ ಜೈಲಿಗೆ ಹಾಕತಾ ಎಂದು ಬೈಯುತ್ತಿದ್ದಾಗ ಸಾವನ ಇತನು ಆಯಿತು ಮಮ್ಮಿ ಅವಳು ಇದ್ದಲಿಗೆ ಹೋಗುತ್ತೇನೆ ಎಂದು ಹೇಳಿ ಕರೆ ಕಟ್ ಮಾಡಿದ್ದು, ರಾತ್ರಿ 2230 ಗಂಟೆ ಸುಮಾರಿಗೆ ಮಗ ಅವಿನಾಶ ಇವನು ಫಿರ್ಯಾದಿಗೆ ಕರೆ ಮಾಡಿ ಅಣ್ಣ ಸಾವನ ಇವನಿಗೆ ಆರೋಪಿತರಾದ ಅವನ ಹೆಂಡತಿ ವಸಂತಮಾಲಾ, ಭಾವ ಯೇಸು, ಮಾವ ಮನೋಹರ, ಅತ್ತೆ ಇಂದುಮತಿ ಹಾಗೂ ಅವರ ಸಂಬಂಧಿಕ ಅನಿಲ ಎನ್ನುವರು ಕೂಡಿ ಅಣ್ಣನ ಕೊಲೆ ಮಾಡುವ ಉದ್ದೇಶದಿಂದ ಬಡಿಗೆ, ರಾಡನಿಂದ ಅತ್ತಿಗೆಯ ಮನೆಯಲ್ಲಿ ಹೊಡೆದಿರುತ್ತಾರೆ ಭಾರಿ ರಕ್ತಗಾಯಗಳಾಗಿ, ಮೈಯಲ್ಲಾ ರಕ್ತ ಆಗಿ ಬೀದರ ಸರಕಾರಿ ಆಸ್ಪತ್ರೆಗೆ ಎಮರಜೆನ್ಸಿ ವಾರ್ಡನಲ್ಲಿ ದಾಖಲು ಮಾಡಿರುತ್ತಾರೆ ಎಂಬ ವಿಷಯವನ್ನು ನನಗೆ ನೋಹಾನ್ ತಂದೆ ಮುಲ್ತಾನಿ ಮತ್ತು ಜಾರ್ಜ ಎನ್ನುವವರು ತಿಳಿಸಿದ್ದಾರೆ ಎಂದು ಹೇಳಿದಾಗ ಫಿರ್ಯಾದಿಯು ಕೂಡಲೆ ಮನೆಯಿಂದ ಬೀದರ ಸರಕಾರಿ ಆಸ್ಪತ್ರೆಗೆ ಬಂದು ನೋಡಲು ಅಲ್ಲಿನ ಎಮರಜೆನ್ಸಿ ವಾರ್ಡಲ್ಲಿ ಸಾವನ ಇತನು ಚಿಕಿತ್ಸೆ ಪಡೆಯುತ್ತಿದ್ದು ಅವನು ಬೇಹೋಷ ಇದ್ದು ಅವನಿಗೆ ನೋಡಲು ಅವನ ತಲೆಗೆ, ಮುಖಕ್ಕೆ, ರಾಡ್, ಬಡಿಗೆಯಿಂದ ಹೊಡೆದಂತೆ ಭಾರಿ ರಕ್ತಗಾಯಗಳು ಇದ್ದು, ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಕ್ಕೆ ಕಳುಹಿಸಿದಾಗ ಫಿರ್ಯಾದಿ ಮತ್ತು ಸಂಬಂಧಿ ಜೀವನ ಕೂಡಿ ಅಂಬುಲೆನ್ಸನಲ್ಲಿ ಸಿಟಿಜನ್ ಆಸ್ಪತ್ರೆಗೆ ತಂದು ದಾಖಲಿಸಿ ಇನ್ನು ಹೆಚ್ಚಿನ ಚಿಕಿತ್ಸೆ ಕುರಿತು ಓಮನಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ, ನಂತರ ಸಾವನಕುಮಾರ ವಾಗ್ಲೆ ಇವನು ಚಿಕಿತ್ಸೆ ಕಾಲಕ್ಕೆ ಗುಣ ಆಗಲಾರದೆ ಓಮನಿ ಆಸ್ಪತ್ರೆ ಕುಕಟಪಲ್ಲಿ ಹೈದ್ರಾಬಾದದಲ್ಲಿ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಿ..ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ. 30/2019, ಕಲಂ. 419, 420 ಐಪಿಸಿ ಮತ್ತು 66(ಸಿ) (ಡಿ) .ಟಿ. ಕಾಯ್ದೆ :-
ಫಿರ್ಯಾದಿ ರಾಮಕೃಷ್ಣ ತಂದೆ ಅಂಬ್ರೇಶರಾವ ಘನಾತೆ ಸಾ: ದರ್ಜಿಗಲ್ಲಿ ಬೀದರ ರವರು ಎಸ್.ಬಿ. ಬ್ಯಾಂಕ ಉಸ್ಮಾನ ಗಂಜ ಬ್ರ್ಯಾಂಚ್ನಲ್ಲಿ ಉಳಿತಾಯ ಖಾತೆ ಸಂ. 62468199636 ನೇದ್ದು ಹೊಂದಿದ್ದು, ಸದರಿ ಖಾತೆಗೆ ಫಿರ್ಯಾದಿಯು ಡೇಬಿಟ್ ಕಾರ್ಡ ನಂ. 5211 0800 2272 3999 ನೇದ್ದನ್ನು ಹೊಂದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 21-09-2019 ರಂದು ಮುಂಜಾನೆ 0800 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಡೇಬಿಟ್ ಕಾರ್ಡ ತೆಗೆದುಕೊಂಡು ಹಣ ಡ್ರಾ ಮಾಡುವ ಸಲುವಾಗಿ ಬೀದರ ಡಿಸಿಸಿ ಬ್ಯಾಂಕ ಹತ್ತಿರ ಇರುವ .ಸಿ..ಸಿ. ಬ್ಯಾಂಕನ .ಟಿ.ಎಮ್ ಸೆಂಟರನಲ್ಲಿ ಹೋಗಿ ತನ್ನ .ಟಿ.ಎಮ್ ಕಾರ್ಡನ್ನು ಮಶೀನಿನಲ್ಲಿ ಹಾಕುವಾಗ ಹಿಂದಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಅಲ್ಲಿಗೆ ಬಂದು ಐಸಾ ನಹೀ ಡಾಲನಾ ಅಂತಾ ಸುಳ್ಳು ಹೇಳಿ, ಫಿರ್ಯಾದಿಯ ಗಮನ ಬೇರೆ ಕಡೆ ಸೆಳೆದು, ಅವನು ಫಿರ್ಯಾದಿಯ ಡೇಬಿಟ್ ಕಾರ್ಡನ್ನು ತಾನು ಇಟ್ಟುಕೊಂಡು ಅವನ ಹತ್ತಿರ ಇದ್ದ ಅದೆ ತರಹದ ಇನ್ನೊಂದು .ಟಿ.ಎಮ್ ಕಾರ್ಡನ್ನು ಫಿರ್ಯಾದಿಗೆ ನೀಡಿ ಅಲ್ಲಿಂದ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಸದರಿ .ಟಿ.ಎಮ್ ಕಾರ್ಡ ಮಶೀನಿನಲ್ಲಿ ಹಾಕಿ 2-3 ಸಲ ಹಣ ತೆಗೆಯಲು ಪ್ರಯತ್ನಿಸಿದಾಗ ಹಣ ಬಂದಿರುವುದಿಲ್ಲ ಆಗ ಫಿರ್ಯಾದಿಯು .ಟಿ.ಎಮ್ ಮಶೀನನಲ್ಲಿ ಏನಾದರು ತೊಂದರೆ ಇರಬಹುದು ಅಂತ ತಿಳಿದು ಅಲ್ಲಿಂದ £ï.ಎಸ್.ಎಸ್.ಕೆ ಕಾರ್ಖಾನೆಗೆ ಕರ್ತವ್ಯಕ್ಕೆ ಹೋಗುವಾಗ 0816 ಗಂಟೆಯ ಸುಮಾರಿಗೆ ಫಿರ್ಯಾದಿಯ ಅಕೌಂಟದಿಂದ 20,000/- ವಿತ್ ಡ್ರಾಲ್ ಆದ ಬಗ್ಗೆ ಮತ್ತು 20,000/- ಅಮರೇಶ ಎಂಬುವವರ ಅಕೌಂಟಿಗೆ ಟ್ರಾನ್ಸಫರ ಆದ ಬಗ್ಗೆ ಸಂದೇಶ ಬಂದಿರುತ್ತವೆ, ಕಾರಣ ಫಿರ್ಯಾದಿಯ ಗಮನ ಬೇರೆ ಕಡೆ ಸೆಳೆದು ಮೋಸದಿಂದ ಫಿರ್ಯಾದಿಯ ಓರಿಜಿನಲ್ .ಟಿ.ಎಮ್ ಕಾರ್ಡ ತೆಗೆದುಕೊಂಡು ಫಿರ್ಯಾದಿಯ ಅಕೌಂಟದಿಂದ ಒಟ್ಟು 40,000/- ರೂ ತೆಗೆದುಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 65/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 23-09-2019 ರಂದು ಬೀದರ ನಗರದ ಶಹಾ ಗಂಜ್ ಕಮಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತು ಹೊಗಿ ಬರುವ ಜನರಿಗೆ ಕರೆದು ನಮ್ಮ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ ಗೆ 90/- ರೂ ಕೂಡುತ್ತೇವೆ ಅಂತ ಕುಗಿ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾರೆ ಅಂತ ಪ್ರಭಾಕರ ಪಾಟೀಲ್ ಪಿ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಶಹಾ ಗಂಜ ಕಮಾನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಪ್ರಭು ತಂದೆ ಗಣಪತಿ ವಯ: 44 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಫತ್ತೆಪೂರ, ತಾ: ಜಿ: ಬೀದರ ಹಾಗೂ 2) ಆಬೇದ ತಂದೆ ಸಿರಾಜ ಅಹ್ಮದ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 1-1-47 ದರ್ಗಾಪೂರಾ ಬೀದರ ಇವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರಿಗೆ ಹಿಡಿಯಲು ಆಬೇದ ಇತನು ಓಡಿ ಹೋಗಿರುತ್ತಾನೆ, ನಂತರ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 1130/- ರೂ ಮತ್ತು ಒಂದು ಬಾಲ ಪೆನ್ನು, ಎರಡು ಮಟಕಾ ಚೀಟಿ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: