¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 24-09-2016
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ.
16/2016, ಕಲಂ 174 ಸಿ.ಆರ್.ಪಿ.ಸಿ :-
ಫಿರ್ಯಾದಿ ರವಿ ತಂದೆ ತುಕರಾಮ ಲಂಬುನೋರ ವಯ: 32 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಸಿಂಧನಕೇರಾ ರವರ ಹಿರಿಯ ಮಗನಾದ ರುಬೀನ್ ವಯ: 8 ವರ್ಷ ಇತನು ತಮ್ಮೂರಿನ
ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾನೆ, ಹೀಗಿರುವಾಗ ದಿನಾಂಕ 23-299-2016
ರಂದು ರುಬೀನ್ ಇತನು ದಿನನಿತ್ಯದಂತೆ ಇತನು ಶಾಲೆಗೆ ಹೋಗಿ ಮರಳಿ 1630 ಗಂಟೆಯ ಸುಮಾರಿಗೆ ಮನೆಗೆ ಬಂದು ನಂತರ ಊರಿನಲ್ಲಿಯೇ
ಇರುವ ಫಿರ್ಯಾದಿಯ ಅಕ್ಕಳಾದ ಕಲಾವತಿ ಗಂಡ ಕರಬಸಪ್ಪಾ ಲಂಬುನೋರ ಇವಳ ಜೋತೆ ಅವಳ ಮನೆಗೆ ಹೋಗಿ ಅವನು ಮರಳಿ ಮನೆಗೆ ಬಂದಿರುವುದಿಲ್ಲ, ಆಗ ಫಿರ್ಯಾದಿಯು ಕಲಾವತಿ ಇವಳ ಮನೆಗೆ ಹೋಗಿ ವಿಚಾರಿಸಲು ಅವರು ತಿಳಿಸಿದ್ದೆನೆಂದರೆ ರುಬೀನ್
ಇತನು ಅಂದಾಜು 1745 ಗಂಟೆಯ ಸುಮಾರಿಗೆ ನಾನು ಮನೆಗೆ ಹೋಗುತ್ತೇನೆ ಅಂತ ತಿಳಿಸಿ ಸಾಯಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರದಿಂದ ಹಾದುಹೋಗುವ ಕಾಲು ದಾರಿ ಮುಖಾಂತರ ಹೋಗಿರುತ್ತಾನೆ ಅಂತ ತಿಳಿಸಿದರು, ಆಗ ಫಿರ್ಯಾದಿ
ಮತ್ತು ಫಿರ್ಯಾದಿಯ
ಹೆಂಡತಿ ನೀಲಮ್ಮಾ, ಅಕ್ಕಳಾದ ಕಲಾವತಿ ಹಾಗೂ ಗ್ರಾಮದವರಾದ ರಾಜು ತಂದೆ ವಿಶ್ವನಾಥ ಎಲ್ಲರೂ ಕೂಡಿ ಹುಡಕಾಡಲು ಕಾಲು ದಾರಿಯ ಪಕ್ಕದಲ್ಲಿ ತಮ್ಮೂರ ಜಾಫರಸಾಬ ತಂದೆ ಕರಿಮಸಾಬ ರವರ ಮನೆಯ ಹತ್ತಿರ ಸುತ್ತಲು ನೀರು ತುಂಬಿದ್ದರಿಂದ ಸದರಿರವರ ಮನೆ ಕಟ್ಟಲು ಕಾಲಂ ಹಾಕಲು ಅಂದಾಜು 05 ಅಡಿಯಲ್ಲಿ ತೇಗೆದಿದ್ದ ತಗ್ಗಿನಲ್ಲಿ ಮಳೆ ಹೆಚ್ಚಾಗಿ ನೀರು ತುಂಬಿದ್ದರಿಂದ ಕಾಲು ದಾರಿ ಕಾಣದೇ ಕಾಲು ಜಾರಿ ತಗ್ಗಿನ ನೀರಿನಲ್ಲಿ ಬೀದ್ದು ರುಬೀನ್
ಇತನು ಮೃತಪಟ್ಟಿದ್ದು ಇರುತ್ತದೆ, ಸದರಿ ಮೃತ ದೇಹ ಬ್ಯಾಟರಿಯ ಬೆಳಕಿನಲ್ಲಿ 1900 ಗಂಟೆಯ ಸುಮಾರಿಗೆ ನೋಡಿದ್ದು, ಸದರಿ ಘಟನೆ 1745 ಗಂಟೆಯಿಂದ 1845 ಗಂಟೆಯ ಅವಧಿಯಲ್ಲಿ ಜರಗಿರಬಹುದು, ಸದರಿ ಘಟನೆ ಅತಿವೃಷ್ಟಿ ಮಳೆಯಾಗಿದ್ದರಿಂದ ಎಲ್ಲಾ ಕಡೆಯು ಸಂಪೂರ್ಣವಾಗಿ ನೀರು ತುಂಬಿಕೊಂಡಿದ್ದು ಕಾಲು ದಾರಿ ಕಾಣದೇ ಆಕಸ್ಮಿಕವಾಗಿ ಜರಗಿದ್ದು ಇರುತ್ತದೆ ಅಂತ
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ
ನಂ. 149/2016, ಕಲಂ 279, 338, 427 ಐಪಿಸಿ :-
ಗಾಯಳು ಫಿರ್ಯಾದಿ ಪ್ರಶಾಂತ ತಂದೆ ಮಾಣಿಕ ನಾಗನಾಯ್ಕ್ ವಯ: 29 ವರ್ಷ,
ಜಾತಿ: ಮಾದಿಗ, ಸಾ: ಹಣಕುಣಿ ರವರು ತಮ್ಮೂರಿನ ಸೊಮಣ್ಣಾ ತಂದೆ ತುಕ್ಕಾರೆಡ್ಡಿ ರಾಚರಡ್ಡಿ ರವರು
ನಡೆಸುತ್ತಿದ್ದ ಟಾರಸ್ ಲಾರಿ ನಂ. ಕೆಎ-32/ಬಿ-5105 ನೇದರ ಮೇಲೆ ಒಂದು ತಿಂಗಳಿಂದ ಕ್ಲೀನರ್ ಅಂತಾ
ಕೆಲಸ ಮಾಡಿಕೊಂಡಿದ್ದು, ಸದರಿ ಲಾರಿ ಹೈದ್ರಾಬಾದ-ಮುಂಬೈ ಕಡೆಗೆ ನಡೆಸುತ್ತಾರೆ, ಹೀಗಿರುವಾಗ
ದಿನಾಂಕ 22-09-2016 ರಂದು ಹೈದ್ರಾಬಾದ ಕೊತುರದಲ್ಲಿ ಟಾರಸ್ ಲಾರಿ ನಂ-ಕೆಎ-32/ಬಿ-5105
ನೇದರಲ್ಲಿ ಕೊಯಿಲ್ ಬಂಡಲಗಳು ತುಂಬಿಕೊಂಡು ರಾತ್ರಿ ಹಣಕುಣಿ ಗ್ರಾಮಕ್ಕೆ ಬಂದು ಉಳಿದುಕೊಮಡು ನಂತರ
ದಿನಾಂಕ 23-0-2016 ರಂದು ಸದರಿ ಟಾರಸ ಲಾರಿ ನೇದನ್ನು ತಮ್ಮೂರ ಸೊಮಣ್ಣಾ ತಂದೆ ತುಕ್ಕಾರೆಡ್ಡಿ
ರಾಚರಡ್ಡಿ ವಯ: 38 ವರ್ಷ ರವರು ಸದರಿ ಲಾರಿ ಚಲಾಯಿಸುತ್ತಾ ಹುಮನಾಬಾದ ಮಾರ್ಗವಾಗಿ ಮುಂಬೈಗೆ
ಹೊಗುವಾಗ ಹಣಕುಣಿ-ಹುಮನಾಬಾದ ರೋಡಿನ ಮೇಲೆ ಆರೋಪಿ ಸೊಮಣ್ಣಾ ತಂದೆ ತುಕ್ಕಾರೆಡ್ಡಿ ರಾಚರಡ್ಡಿ ವಯ:
38 ವರ್ಷ, ಸಾ: ಹಣಕುಣಿ, ತಾ: ಹುಮನಾಬಾದ ರವರು ಸದರಿ ಲಾರಿಯನ್ನು ಅತಿ ವೇಗ ಮತ್ತು ಅಜಾರುಕತೆಯಿಂದ
ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಚಂದ್ರಕಾಂತ ತಂದೆ ಸಿದ್ರಾಮಪ್ಪಾ ಶೇರಿಕಾರ ರವರ
ಹೊಲದ ಹತ್ತಿರ ಇರುವ ರೋಡಿನ ಎಡ ಬದಿಯ ಕರೆಂಟ ಕಂಬಕ್ಕೆ ಡಿಕ್ಕಿ ಮಾಡಿ ಹಾನಿ ಪಡಿದ್ದು ಇರುತ್ತದೆ
ಮತ್ತು ಕಂಬ ಲಾರಿಯಲ್ಲಿ ಸಿಕಿಕೊಂಡು ದಸ್ತಗೀರ ಹಳ್ಳದ ಬ್ರಿಡ್ಜಿನಲ್ಲಿ ಪಲ್ಟಿ ಮಾಡಿರುತ್ತಾನೆ, ಅದರಿಂದ
ಫಿರ್ಯಾದಿಯ ಬಲಗಾಲ ಮೋಳಕಾಲ ಕೇಳಗೆ ಭಾರಿ ಗುಪ್ತಗಾಯವಾಗಿ ಮುರಿದಂತೆ ಮೇಲ ನೋಟಕ್ಕೆ
ಕಂಡಿರುತ್ತದೆ, ಎಡಗಾಲ ಪಾದದ ಮೇಲೆ ರಕ್ತಗಾಯ, ಎಡಗಡೆ ಕಿವಿಗೆ ರಕ್ತಗಾಯ ಹಾಗೂ ಬಲ ರೊಂಡಿಗೆ
ಗುಪ್ತಗಾಯವಾಗಿರುತ್ತದೆ, ಸದರಿ ಆರೋಪಿಯು ಲಾರಿಯಲ್ಲಿ ಸಿಲುಕಿದಾಗ ಊರಿನ ಗೊವಿಂದರೆಡ್ಡಿ ತಂದೆ
ಪ್ರಭುರೆಡ್ಡಿ ಸಂಕಟಿ ಮತ್ತು ರಾಜಪ್ಪಾ ತಂದೆ ಮಾಣಿಕ ನಾಗನಾಯ್ಕ್ ಇಬ್ಬರೂ ಬಂದು ನೋಡಿ ತೆಗೆದು
ಅವನಿಗೆ ಎಡ ತೊಡೆಗೆ ಗುಪ್ತಗಾಯ, ಎಡ ಮೋಳಕೈ ಹತ್ತಿರ ತರಚಿದ ಗಾಯವಾಗಿರುತ್ತದೆ, ನಂತರ ಫಿರ್ಯಾದಿಗೆ
ಚಿಕಿತ್ಸೆ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಹುಮನಾಬಾದಕ್ಕೆ ತಂದು ದಾಖಲಿಸಿರುತ್ತಾರೆ,
ಸದರಿ ಘಟನೆ ರಸ್ತೆ ಅಪಘಾತದಿಂದ ಜರಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ
ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.