Police Bhavan Kalaburagi

Police Bhavan Kalaburagi

Tuesday, September 8, 2020

BIDAR DISTRICT DAILY CRIME UPDATE 08-09-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-09-2020

 

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 16/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಗೋಪಾಲರೆಡ್ಡಿ ತಂದೆ ಬಾಲರೆಡ್ಡಿ ಪುಲಗಾರ ವಯ: 65 ವರ್ಷ, ಜಾತಿ: ರೆಡ್ಡಿ, ಸಾ: ಶಾಪೂರ, ತಾ: ದೆಗಲೂರ (ಎಂ.ಎಸ್) ರವರ ಮಗಳಾದ ಉಜ್ವಲಾ ಇವಳಿಗೆ 2 ತಿಂಗಳಿನಿಂದ ತಲೆಯ ಹಿಂದಿನ ನರದ ತೊಂದರೆಯಾಗುತ್ತಿದ್ದು, ಫಿರ್ಯಾದಿ ಹಾಗೂ ಅಳಿಯರವರು ಸಹ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡಿಸಿದ್ದು ಆದರೂ ಸಹ ಅವಳ ಬೇನೆ ವಾಸಿಯಾಗಿರುವುದಿಲ್ಲ, ಅದೇ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಾನು ಸಾಯಬೇಕೆಂದು ದಿನಾಂಕ 07-09-2020 ರಂದು ಮನೆಯಲ್ಲಿ ಯಾರೂ ಇರಲಾರದ ಸಮಯದಲ್ಲಿ ಬಾಡಿಗೆ ಮನೆಯ ಛತ್ತಿಗೆ ಇರುವ ಕಬ್ಬಿಣದ ಕೊಂಡಿಗೆ ತನ್ನ ಓಡಣಿಯಿಂದ ಕುತ್ತಿಗೆ ನೇಣು ಹಾಕಿಕೊಂಡು ಮ್ರತಪಟ್ಟಿದ್ದು ಇರುತ್ತದೆ, ಅವಳ ಸಾವಿನಲ್ಲಿ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 55/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 07-09-2020 ರಂದು ಆರೋಪಿ ಮೋತಿಲಾಲ ತಂದೆ ಬನ್ಸಿಲಾಲ ಉಪಾಧ್ಯಾಯ ವಯ: 34 ವರ್ಷ, ಜಾತಿ: ಮಾಂಗರವಾಡಿ, ಸಾ: ದೀನದಯಾಳ ನಗರ ಬೀದರತನು ದೀನದಯಾಳ ನಗರದ ಹತ್ತಿರ ಯಾವುದೇ ಪರವಾನಿಗೆ ಇಲ್ಲದೇ ಸಾರ್ವಜನಿಕರಿಗೆ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕುಮಾರಿ.ಸಂಗೀತಾ ಪಿಎಸಐ(ಕಾಸೂ) ಮಾರ್ಕೇಟ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ದಾಳಿ ಮಾಡಿ ಆರೋಪಿಗೆ ದಸ್ತಗಿರಿ ಮಾಡಿಕೊಂಡು ಆತನಿಂದ 90 ಎಮ.ಎಲ ವುಳ್ಳ 48 ಓರಿಜಿನಲ ಚಾಯಿಸ್ ವಿಸ್ಕಿ ಟೆಟ್ರಾ ಪ್ಯಾಕಗಳು ಅ.ಕಿ 1680/- ರೂಪಾಯಿಗಳು ಬೆಲೆ ಬಾಳುವದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 120/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 07-09-2020 ರಂದು ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆ ಹತ್ತಿರ  ಮಲ್ಲಿಕಾರ್ಜುನ ಮೇತ್ರೆ ಸಾ: ಕಳಸದಾಳ ಈತನು ತನ್ನ ಚಹಾ ಅಂಗಡಿಯ ಪಕ್ಕದಲ್ಲಿ ಅಕ್ರಮವಾಗಿ ಸರಾಯಿ ಬಾಟಲಗಳನ್ನು ಮಾರಾಟ ಮಾಡುತ್ತಿದ್ದಾನೆಂದು ಮಹೇಂದ್ರಕುಮಾರ ಪಿ.ಎಸ್.ಐ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಹಾತ್ಮಾಗಾಂಧಿ ಸಕ್ಕರೆ ಕಾರ್ಖಾನೆ ಹತ್ತಿರದ ಮಲ್ಲಿಕಾರ್ಜುನ ಮೇತ್ರೆ ರವರ ಚಹಾ ಅಂಗಡಿಯ ಹತ್ತಿರ ಹೋಗಿ ಮರೆಯಾಗಿ ನಿಂತು ನೊಡಲು ಅಲ್ಲಿ ಆರೋಪಿ ಮಲ್ಲಿಕಾಜುರ್ನ ತಂದೆ ವಿಲಾಸರಾವ ಮೇತ್ರೆ ವಯ: 29 ವರ್ಷ, ಜಾತಿ: ಎಸ್.ಟಿ ಗೊಂಡಾ, ಸಾ: ಕಳಸದಾಳ ಇತನು ತನ್ನ ಮುಂದೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ ಚೀಲದಲ್ಲಿ ಸರಾಯಿ ಬಾಟಲಗಳು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ನಿಂತಿರುವದನ್ನು ನೋಡಿ ಖಚಿತಪಡಿಸಿಕೊಂಡು ಆತನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಹಿಡಿದು ನಂತರ ಆತನ ಹತ್ತಿರವಿದ್ದ ಬಿಳಿ ಬಣ್ಣದ ಪ್ಲಾಸ್ಟೀಕ ಚೀಲದಲ್ಲಿ ಏನಿದ ? ಅಂತ ವಿಚಾರಿಸಿದಾಗ ಇದರಲ್ಲಿ ಸರಾಯಿ ಬಾಟಲಗಳು ಇರುತ್ತವೆ ಅಂತ ತಿಳಿಸಿದನು, ಈ ಸರಾಯಿ ಎಲ್ಲಿಂದ ತಂದ ಬಗ್ಗೆ ವಿಚಾರಿಸಿದಾಗ ಕಾಳ ಸಂತೆಯಲ್ಲಿ ತಂದು ಮಾರಾಟ ಮಾಡಲು ತೆಗೆದುಕೊಂಡು ಬಂದಿರುತ್ತೇನೆ ಅಂತ ತಿಳಿಸಿದನು, ಈ ಸರಾಯಿ ಸಾರ್ವಜನಿಕರಿಗೆ ಮಾರಾಟ ಮಾಡಲು ಸರಕಾರದಿಂದ ಯಾವುದಾದರು ಕಾಗದ ಪತ್ರಗಳು, ಪರವಾನಿಗೆ ಪತ್ರ ಇದೆಯೇ ಅಂತ ವಿಚಾರಿಸಿದಾಗ ಅವನು ನನ್ನ ಹತ್ತಿರ ಯಾವುದೆ ಪರವಾನಿಗೆ ಕಾಗದ ಪತ್ರಗಳು ಇರುವುದಿಲ್ಲಾ ಅಂತ ತಿಳಿಸಿರುತ್ತಾನೆ, ನಂತರ ಸದರಿ ಬಿಳಿ ಬಣ್ಣದ ಚೀಲದಲ್ಲಿದ್ದ ಸರಾಯಿ ಬಾಟಲಗಳು ಪರಿಶೀಲಿಸಿ ನೋಡಲು ಅದರಲ್ಲಿ 1) 180  ಎಂ.ಎಲ್ ವುಳ್ಳ 22 ಓಲ್ಡ ಟಾರ್ವನ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 1914/- ರೂ. ಮತ್ತು 90 ಎಂ.ಎಲ್ ವುಳ್ಳ 30 ಯು.ಎಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 1080/- ರೂ. ಹೀಗೆ ಎಲ್ಲಾ ಒಟ್ಟು 2994/- ರೂ. ಬೆಲೆ ಬಾಳವು ಸರಾಯಿ ಬಾಟಲಗಳು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 112/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 07-09-2020 ರಂದು ಬಸವಕಲ್ಯಾಣ ನಗರದ ರೇಣಾಗಲ್ಲಿಯಲ್ಲಿರುವ ವಾಟರ ಟ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆದು ಸುನಿಲಕುಮಾರ ಪಿ.ಎಸ್. (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್  ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ರೇಣಾಗಲ್ಲಿಯಲ್ಲಿರುವ ವಾಟರ ಟ್ಯಾಂಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ರೇಣಾಗಲ್ಲಿಯಲ್ಲಿರುವ ವಾಟರ ಟ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಫೇರೊಜ ತಂದೆ ವಹೀದಮೀಯ್ಯಾ ತಾಂಬೊಳೆವಾಲೆ ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಕರಿಂ ಕಲೋನಿ ಬಸವಕಲ್ಯಾಣ, 2) ಶಿರಾಜ ತಂದೆ ಹುಸೇನ ಖುರೈಷಿ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಖುರೈಷಿ ಕಾಲೋನಿ ಬಸವಕಲ್ಯಾಣ, 3) ಜಾಕೀರ ತಂದೆ ಸೈಯದ ರಹೀಮ ವಯ: 19 ವರ್ಷ, ಜಾತಿ: ಮುಸ್ಲಿಂ, ಸಾ: ಶಾ ನಗರ ಬಸವಕಲ್ಯಾಣ ಹಾಗೂ 4) ರಾಮ ತಂದೆ ಅಶೋಕ ಶಿಂದೆ ವಯ: 27 ವರ್ಷ, ಜಾತಿ: ಮರಾಠಾ, ಸಾ: ದೇಗಲೂರೆ ಗಲ್ಲಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತು ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 4,530/- ರೂ ಮತ್ತು 52 ಇಸ್ಪಿಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.