Police Bhavan Kalaburagi

Police Bhavan Kalaburagi

Sunday, October 18, 2020

BIDAR DISTRICT DAILY CRIME UPDATE 18-10-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-10-2020

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 22/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶೀಲಾ ಗಂಡ ಮೋಹನ ಗೋತ್ರೆ, ವಯ: 32 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕೂಡಂಬಲ ರವರ ಗಂಡನಾದ ಮೋಹನ ತಂದೆ ಶರಣಪ್ಪಾ ಗೋತ್ರೆ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕೂಡಂಬಲ ರವರಿಗೆ ಸೂಮಾರ ಎರಡು ವರ್ಷದಿಂದ ಆಗಾಗ ಎದೆ ನೋವು ಆಗುತ್ತಿರುತ್ತದೆ ಅಂತಾ ಖಾಸಗಿ ವೈದ್ಯಾಧಿಕಾರಿಯವರಲ್ಲಿ  ತೊರಿಸಿಕೊಂಡಿರುತ್ತಾರೆ, ಆದರೂ ಎದೆ ನೋವು ಕಡಿಮೆಯಾಗಿರುವುದಿಲ್ಲ, ಹೀಗಿರುವಾಗ ದಿನಾಂಕ 17-10-2020 ರಂದು ಗಂಡನಾದ ಮೋಹನ ರವರು ಎದೆ ನೋವು ಆಗುತ್ತಿದೆ ಅಂತಾ ತಿಳಿಸಿದಾಗ ಫಿರ್ಯಾದಿಯು ಕೈಯಿಂದ ಒರಸುತ್ತಾಮ್ಮ ಭಾವ ಯೋಹಾನ ಮತ್ತು ಮಾವ ಶರಣಪ್ಪಾ ರವರಿಗೆ ಕರೆದು ತಿಳಿಸಿದ್ದು, ನಂತರ ತನ್ನ ಗಂಡನಿಗೆ ಚಿಕಿತ್ಸೆ ಕುರಿತು ಮನೆಯಿಂದ ಹೊರಗಡೆ ತರುವಾಗ ಒಮ್ಮೆಲೆ ತಲೆ ಸುತ್ತು ಬಂದತಾಂಗಿ ಮನೆಯ ಪಡಸಾಲೆಯಲ್ಲಿ ಕೆಳಗೆ ಬಿದ್ದಾಗ ಗಂಡನ ಮೂಗಿಗೆ ಮತ್ತು ಮೇಲ್ಗಡೆ ತುಟೆಗೆ ರಕ್ತ ಬಂದಿರುತ್ತದೆ, ನಂತರ ಒಂದು ಖಾಸಗಿ ವಾಹನದಲ್ಲಿನ್ನ ಗಂಡನಿಗೆ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ತೊರಿಸಿದಾಗ ವೈದ್ಯಾಧಿಕಾರಿಯವರು ಗಂಡ ಮೋಹನ ರವರಿಗೆ ರವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ, ತನ್ನ ಗಂಡ ಮೋಹನ ರವರು ಹೃದಯಘಾತದಿಂದ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 141/2020, ಕಲಂ. 498(), 323, 324, 504, 506 ಜೊತೆ 34 ಐಪಿಸಿ :-

ಫಿರ್ಯಾದಿ ಸುನೀತಾ ಗಂಡ ಪ್ರಕಾಶ ಅಗಸೆನೋರ, ವಯ: 35 ವರ್ಷ, ಜಾತಿ: ಎಸ್.ಸಿ, ಸಾ: ಮುಸ್ತರಿ, ತಾ: ಚಿಟಗುಪ್ಪಾ ರವರ ಮದುವೆ 15 ವರ್ಷಗಳ ಹಿಂದೆ ಮುಸ್ತರಿ ಗ್ರಾಮದ ಪ್ರಕಾಶ ಅಗಸೆನೋರ, ವಯ: 45 ವರ್ಷ ರವರೊಂದಿಗೆ ಆಗಿದ್ದು, ಅವರಿಗೆ ಎರಡು ಗಂಡು ಹಾಗು ಮೂರು ಹೆಣ್ಣು ಮಕ್ಕಳಿರುತ್ತಾರೆ, ಕಳೆದ ಒಂದು ವರ್ಷದಿಂದ ಗಂಡ ನನಗೆ ಸರಾಯಿ ಕುಡಿದು ಬಂದು ಫಿರ್ಯಾದಿಗೆ ಹೊಡೆ ಬಡೆ ಮಾಡುತ್ತಿದ್ದು, ಫಿರ್ಯಾದಿಯ ತವರೂ ಮನೆಯವರು ಸುಮಾರು ಸಲ ಹೇಳಿದರೂ ಕೇಳದೇ ಹೊಡೆಬಡೆ ಮಾಡಿ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತು ಕಳೆದ ಒಂದು ತಿಂಗಳಿಂದ ನ್ನ ಐದು ಮಕ್ಕಳೊಂದಿಗೆ ನ್ನ ತವರೂರಾದ ರುಸ್ತಾಮಪೂರ ತಾ: ಚಿಂಚೋಳಿಯಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸವಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 17-10-2020 ರಂದು ಫಿರ್ಯಾದಿಯು ತನ್ನ ತಮ್ಮನಾದ ಸುರೇಶ ಇಬ್ಬರೂ ಮುಸ್ತರಿಗೆ ಮಕ್ಕಳ ಆಧಾರ ಕಾರ್ಡ ತೆಗೆದುಕೊಂಡು ಹೋಗಲು ಬಂದಾಗ ಮುಸ್ತರಿಯ ಮನೆ ಮುಂದೆ ರೋಡಿನ ಮೇಲೆ ಗಂಡನಾದ ಪ್ರಕಾಶ ಇತನು ಫಿರ್ಯಾದಿಗೆ ಇಲ್ಲಿಗ್ಯಾಕ ಬಂದ್ದಿದಿ ಅಂತಾ ಬೈದವನೇ ಅಲ್ಲೆ ಬಿದ್ದಿದ್ದ ಒಂದು ಕಟ್ಟಿಗೆ ತೆಗೆದುಕೊಂಡು ತಲೆಯಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ನಂತರ ಫಿರ್ಯಾದಿಯು ಕೆಳಗೆ ಬಿದ್ದಾಗ ಭಾವನಾದ ರಮೇಶ ತಂದೆ ರುದ್ರಪ್ಪಾ ಅಗಸೇನೋರ ವಯ: 48 ವರ್ಷ ಈತನು ಬಂದು ಬಾಯಿ ಮಾತಿನಿಂದ ಹೇಳಿದರೆ ಕೇಳುವದಿಲ್ಲ ಎನ್ನುತ್ತಾ ಕೈಯಿಂದ ಫಿರ್ಯಾದಿಯ ಕುತ್ತಿಗೆ ಒತ್ತಿರುತ್ತಾನೆ, ನೇಗೇಣಿ ಅಂಬಿಕಾ ವಯ: 40 ವರ್ಷ ಈಕೆಯು ಬಂದು ಹೋಡಿ ಈಕೆಗೆ ಬಹಳ ಸೊಕ್ಕು ಬಂದಿದೆ ಅಂತಾ ಬೈದಿರುತ್ತಾಳೆ, ನಂತರ ಜಗಳ ನೋಡಿದ ತಮ್ಮ ಸುರೇಶ ಹಾಗು ಮುಸ್ತರಿಯ ಶರಣಪ್ಪಾ ಬ್ಯಾಲಹಳ್ಳಿ ರವರು ಬಿಡಿಕೊಂಡಿರುತ್ತಾರೆ, ಅದಾದ ನಂತರ ಫಿರ್ಯಾದಿಯು ಬರುವಾಗ ಗಂಡ ಹಾಗು ಭಾವ ಇನ್ನೊಂದು ಸಲ ನಮ್ಮ ಮನೆ ಅಂಗಳದಲ್ಲಿ ಬಂದರೆ ನಿನಗೆ ಖತಂ ಮಾಡುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 65/2020, ಕಲಂ. 279, 337, 338 ಐಪಿಸಿ :-

ದಿನಾಂಕ 17-10-2020 ರಂದು ಫಿರ್ಯಾದಿ ಜಗನಾಥ ತಂದೆ ನರಸಿಂಗ್ ಕೋಟೆ ವಯ: 54 ವರ್ಷ, ಜಾತಿ: ಕೋಳಿ, ಸಾ: ತ್ರಿಪುರಾಂತ  ಬಸವಕಲ್ಯಾಣ ರವರು ತನ್ನ ಮಗನಾದ ವಿಶಾಲ ಇತನೊಂದಿಗೆ ಅಂಗಡಿಗೆ ಕಿರಾಣಿ ತರಲು ಹೋಗಿ ಕಿರಾಣಿ ತೆಗೆದುಕೊಂಡು ಮರಳಿ ಮನೆಗೆ ನಡೆದುಕೊಂಡು ರೋಡಿನ ಪಕ್ಕದಿಂದ ಹೋಗುತ್ತಿರುವಾಗ ಮಗ ವಿಶಾಲ ಮುಂದೆ ಹೋಗುತ್ತಿದ್ದು ಫಿರ್ಯಾದಿಯು ಅವನ  ಹಿಂದೆ   ನಡೆದುಕೊಂಡು  ಹೋಗುವಾಗ  ತ್ರಿಪುರಾಂತ ಲಕ್ಷ್ಮೀ ಮಂದಿರದ ಹತ್ತಿರ ಹಿಂದಿನಿಂದ ಅಂದರೆ ಮಡಿವಾಳ ಚೌಕ್ ಕಡೆಯಿಂದ ಮೋಟರ ಸೈಕಲ್ ಕೆಎ-51/ಇವ್ಹಿ-2732 ನೇದರ ಚಾಲಕನಾದ ಆರೋಪಿ ಶಿವಯೋಗಿ ತಂದೆ ರೇವಣಸಿದ್ದಪ್ಪಾ ಮಠಪತಿ ಸಾ: ತ್ರಿಪುರಾಂತ ಬಸವಕಲ್ಯಾಣ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಕಟ್ ಹೊಡೆದು ಮುಂದೆ ಮಗ ವಿಶಾಲ ಈತನಿಗೆ ಡಿಕ್ಕಿ ಮಾಡಿ ತಾನು ಕೂಡ ಮೋಟರ ಸೈಕಲ್ ಸಮೇತ ನೆಲಕ್ಕೆ ಬಿದ್ದಿರುತ್ತಾನೆ, ಸದರಿ ಅಪಘಾತದಿಂದ ವಿಶಾಲ ಈತನಿಗೆ ಎಡಗಾಲು ಪಾದದ ಮೇಲೆ ಭಾರಿ ರಕ್ತಗಾಯ, ತಲೆಗೆ ಬಲಗಡೆ ರಕ್ತಗಾಯ, ಎಡಗೈ ಮೊಣಕೈಗೆ ಹಾಗೂ ಬಲಗಡೆ ಬೆನ್ನಿನಲ್ಲಿ ತರಚಿದಗಾಯವಾಗಿರುತ್ತದೆ ಹಾಗೂ ಆರೋಪಿಗೆ ಬಲಗಡೆ ಹಣೆಗೆ ರಕ್ತಗಾಯ, ಬಲಗಾಲು ಮೊಣಕಾಲಿಗೆ ತರಚಿದಗಾಯ, ಎರಡು ಕೈ ಬೆರಳುಗಳಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ ಫಿರ್ಯಾದಿಯು ಗಾಯಗೊಂಡ ವಿಶಾಲ ಮತ್ತು  ಶಿವಯೋಗಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 89/2020, ಕಲಂ. 279, 337, 338 ಐಪಿಸಿ ಜೋತೆ 187 .ಎಮ್.ವಿ ಕಾಯ್ದೆ :-

ದಿನಾಂಕ 17-10-2020 ರಂದು ವಿಶಾಲ ತಂದೆ ವಿಲಾಸರಾವ ಕಸ್ತುರೆ ಇತನು ತನ್ನ ಮೊಟಾರ ಸೈಕಲ ನಂ. ಎಮ್.ಎಚ್-12/ಎಫ್.ಎಲ್-5638 ನೇದರ ಮೇಲೆ ಹೋಕ್ರಾಣಾದಿಂದ ಎಕಂಬಾ ಗ್ರಾಮಕ್ಕೆ ಬಂದು ಅವನ ಮೋಟಾರ ಸೈಕಲ ಮೇಲೆ ಫಿರ್ಯಾದಿ ಜ್ಞಾನೇಶ್ವರ ತಂದೆ ಶಿವಾಜಿ ರಾಠೋಡ ಸಾ: ಎಕಂಬಾ, ತಾ: ಔರಾದ(ಬಿ) ರವರಿಗೆ ಮತ್ತು ಗಣೇಶ ತಂದೆ ಉಮಾಕಾಂತ ಪಾಟೀಲ ಇಬ್ಬರಿಗೆ ಕೂಡಿಸಿಕೊಂಡು ಔರಾದನಲ್ಲಿ ದಾಬಾದಲ್ಲಿ ಊಟ ಮಾಡಿ ಬರೋಣಾ ಅಂತ ಮೂವರು ಬರುವಾಗ ವಿಶಾಲ ಇತನು ತನ್ನ ಮೊಟಾರ ಸೈಕಲ ಚಲಾಯಿಸಿಕೊಂಡು ಮೂವರು ಎಕಂಬಾದಿಂದ ಔರಾದಗೆ ಬರುವಾಗ ದುಡುಕನಾಳಗಣೇಶಪುರ ಮಧ್ಯ ಬ್ರಿಜ್ಜ ಹತ್ತಿರ ತಿರುವಿನಲ್ಲಿ ಎದುರಿನಿಂದ ಕ್ರೋಜರ ಜೀಪ ನಂ. ಕೆಎ-17/ಎಮ್-4386 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಫಿರ್ಯಾದಿಯು ಕುಳಿತ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಮೂವರು ಮೋಟಾರ ಸೈಕಲ ಸಮೇತ ರೋಡಿನ ಮೇಲೆ ಬಿದ್ದಾಗ ಫಿರ್ಯಾದಿಗೆ ಬಲಗಾಲ ಮೋಳಕಾಲಗೆ ಗುಪ್ತಗಾಯ, ತರಚಿದಗಾಯ ಹಾಗೂ ಗಣೇಶ ಇತನಿಗೆ ಎಡಗಾಲ ಮೋಳಕಾಲ ಕೆಳಗೆ ಪಿಂಡ್ರಿಗೆ ಭಾರಿ ಗುಪ್ತಗಾಯ ಮತ್ತು ವಿಶಾಲ ಇತನಿಗೆ ಎಡಗೈ ಮುಂಗೈ ಹಾಗೂ ಮೋಳಕೈ ಮಧ್ಯದಲ್ಲಿ ಭಾರಿ ಗುಪ್ತಗಾಯ, ಎಡಗಣ್ಣಿಕೆಳಗೆ ತರಚಿದ ಗಾಯ, ಬಲಗೈ ಮುಂಗೈಗೆ ಗುಪ್ತಗಾಯ, ಎಡಮೋಳಕಾಲಿಗೆ ತರಚಿದ ಗುಪ್ತಗಾಯವಾಗಿರುತ್ತದೆ, ನಂತರ ಸಂಜಿವ ಪಾಟೀಲ ಹುಲ್ಯಾಳ ಮತ್ತು ಮಾರುತಿ ಮಾಹಾರಾಜವಾಡೆ ಗಣೇಶಪುರ () ಇವರುಗಳು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಂದು ಔರಾದ(ಬಿ) ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 86/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 17-10-2020 ರಂದು ಹಳ್ಳಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನಿಕ ಸ್ಥಳದಲ್ಲಿ ಗೋಲಾಕಾರವಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾಹರ್ ಎಂ ಇಸ್ಪಿಟ ಜೂಜಾಟ ಆಡುತ್ತಿದ್ದಾರೆಂದು ವಸೀಮ ಪಟೇಲ್ ಪಿ.ಎಸ್.ಐ (ಕಾ.ಸು) ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳ್ಳಿ ಗ್ರಾಮದ ಹನುಮಾನ ಮಂದಿರದ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಹನುಮಾನ ಮಂದಿರದ ಹತ್ತಿರ ಆರೋಪಿತರಾದ ಗಣೇಶ ತಂದೆ ವಿಠ್ಠಲರಾವ ಭೋಸಲೆ ವಯ: 45 ವರ್ಷ, ಜಾತಿ: ಮರಾಠಾ, ಸಾ: ಖಾನಾಪೂರ(ಕೆ) ಇತನು ಹಾಗೂ ಇನ್ನೂ 5 ಜನ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಅಂದರ ಬಾರಹ ಎಂ ನಶಿಬಿನ ಇಸ್ಪಿಟ್  ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಸದರಿಯವರು ಇಸ್ಪಿಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 7,000/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.