Police Bhavan Kalaburagi

Police Bhavan Kalaburagi

Wednesday, January 20, 2021

BIDAR DISTRICT DAILY CRIME UPDATE 20-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-01-2021

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ರುಣಾ ಗಂಡ ಶಿವರಾಜ ಸಂಗೇವಾರ ವಯ: 42 ವರ್ಷ, ಜಾತಿ: ಸಿಂಪಿಗೆ, ಸಾ: ಸಂತೊಷ ಕಾಲೋನಿ ಔರಾದ(ಬಿ) ರವರ ಗಂಡನಾದ ಶಿವರಾಜ ತಂದೆ ತುಕಾರಾಮ ಸಂಗೇವಾರ ವಯ: 55 ವರ್ಷ, ಜಾತಿ: ಸಿಂಪಿಗೆ, ಸಾ: ಸಂತೊಷ ಕಾಲೋನಿ ಔರಾದ(ಬಿ) ರವರು ಮನೆಯಲ್ಲಿ ಮಗಳಿಗೆ ಶೂಗರ ಕಾಯಿಲೆ ಚಿಕಿತ್ಸೆಗಾಗಿ ಎಷ್ಟೆ ಹಣ ಖರ್ಚು ಮಾಡಿದರೂ ಮಗಳ ಕಾಯಿಲೆ ವಾಸಿಯಾಗಿರುವುದಿಲ್ಲ ಮತ್ತು ತನ್ನ ಕಾಲಿಗೆ ಗ್ಯಾಂಗ್ರಿನ ಆಗಿ ಎಡಗಾಲಿನ 2 ಬೆರಳುಗಳು ಕಟ್ಟಾಗಿ ನ್ನೂ ಕಾಲು ಕಟ್ಟ ಮಾಡಲು 1 ರಿಂದ 2 ಲಕ್ಷ ಹಣದ ಅವಶ್ಯಕತೆ ಇದೆ ಹಣವನ್ನು ಹೇಗೆ ಸಂಗ್ರಹಿಸಬೇಕು ಅಂತ ಮಾನಸೀಕವಾಗಿ ಜಿಗುಪ್ಸೆಗೊಂಡು ತಾನು ಬಾಡಿಗೆಯಿಂದ ಪಡೆದ ಟೇಲರ ಅಂಗಡಿಯಲ್ಲಿ ದಿನಾಂಕ 18-01-2021 ರಂದು 2200 ಗಂಟೆಯಿಂದ ದಿನಾಂಕ 19-01-2021 ರಂದು 0700 ಗಂಟೆಯ ಮದ್ಯದ ಅವಧಿಯಲ್ಲಿ ಕುತ್ತಿಗೆಗೆ ಬಟ್ಟೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ತನ್ನ ಗಂಡನ ಮರಣದ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 04/2021, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 19-01-2021 ರಂದು ಸುಧಾಕರ ತಂದೆ ಕಾಶಿನಾಥ ಕೇಳದೊಡ್ಡಿ ವಯ: 30 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಬಸಂತಪೂರ, ತಾ: & ಜಿ: ಬೀದರ ರವರ ತಮ್ಮನಾದ ಓಂಕಾರ ತಂದೆ ಕಾಶಿನಾಥ ಕೇಳದೊಡ್ಡಿ ವಯ: 28 ವರ್ಷ ಇತನು ಅಷ್ಟುರದಿಂದ ಗುಮ್ಮಾಕ್ಕೆ ಮೋಟಾರ ಸೈಕಲ ನಂ. ಎಪಿ-28/ಬಿಯು-6618 ನೇದರ ಮೇಲೆ ಬರುವಾಗ ಗುಮ್ಮಾ ಶಿವಾರದ ಹಣಮಂತ ಪಾಟೀಲ ರವರ ಹೋಲದ ಹತ್ತಿರ ಮಾಳೆಗಾಂವ ರಸ್ತೆಯ ಮೇಲೆ ಎದುರಿನಿಂದ ಅಪರಿಚಿತ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರ ನೇದನ್ನು ಅತೀವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಓಂಕಾರ ಇತನಿಗೆ ಅಪಘಾತಪಡಿಸಿ ಓಡಿ ಹೋಗಿರುತ್ತಾನೆ, ಸದರಿ ಅಪಘಾತದಿಂದ ಓಂಕಾರ ಇತನ ತಲೆಗೆ ಭಾರಿ ರಕ್ತಗಾಯ, ಎಡಭೂಜಕ್ಕೆ ಭಾಗಿ ಗುಪ್ತಗಾಯ ಮತ್ತು ಬಲಗಾಲ ಮೋಳಕಾಲಿಗೆ ರಕ್ತಗಾಯವಾಗಿ ಸ್ಥಳದಲ್ಲಿಯೇ ಮ್ರತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. 279, 304(ಎ) ಐಪಿಸಿ :-

ದಿನಾಂಕ 19-01-2021 ರಂದು ಫಿರ್ಯಾದಿ ಮಂಗಲಾಬಾಯಿ ಗಂಡ ಲಕ್ಷ್ಮಣ ಮೇತ್ರೆ ವಯ: 30 ರ್ಷ, ಜಾತಿ: ಎಸ.ಸಿ ಮಾದೀಗ, ಸಾ: ಕಿಟ್ಟಾ ರವರ ಅಜ್ಜ ಬಸವರಾಜ ತಂದೆ ಗೋವಿಂದ ಗವಾರೆ ವಯ: 75 ವರ್ಷ ಸಾ: ತಳಭೋಗ ಗ್ರಾಮ, ಸೋನಾಬಾಯಿ ಗಂಡ ಬಸಪ್ಪಾ ಸಾ: ತಳಭೋಗ ಹಾಗೂ ವಸಂತ ಢೊಲೆ, ಅವರ ಹೆಂಡತಿ ರವರು ಕೂಡಿಕೊಂಡು ತಳಭೋಗ ಗ್ರಾಮದ ಆಟೋ ನಂ. ಕೆಎ-39/5688 ನೇದರಲ್ಲಿ ಕುಳಿತುಕೊಂಡು ತಳಭೋಗ ಗ್ರಾಮದ ಬಸ್ಸ ನಿಲ್ದಾಣದಿಂದ ಬಸವಕಲ್ಯಾಣ ಕಡೆಗೆ ಪ್ರತಾಪುರ ಮಾರ್ಗವಾಗಿ ಹೋಗುವಾಗ ತಮ್ಮೂರ ಢೊಲೆ ರವರ ಹೊಲದ ಹತ್ತಿರ ಬಂದಾಗ ಅಜ್ಜ ರವರು ಕುಳಿತು ಬರುತ್ತಿದ್ದ ಸದರಿ ಆಟೋ ನೇದರ ಚಾಲಕನಾದ ಆರೋಪಿ ಅಜಯ ತಂದೆ ಬಲಭೀಮ ಸಸಾನೆ ಸಾ: ತಳಭೋಗ ಇತನು ತನ್ನ ಆಟೋವನ್ನು ಅತಿವೇಗವಾಗಿ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬರುವಾಗ ಆಟೋದ ಮಧ್ಯ ಸೀಟಿನ ಎಡಭಾಗದಲ್ಲಿ ಕೊನೆಯಲ್ಲಿ ಕುಳಿತ ಫಿರ್ಯಾದಿಯ ಅಜ್ಜ ಬಸವರಾಜ ರವರು ಆಟೋದಿಂದ ಕೆಳಗೆ ಬಿದ್ದಾಗ ಅವರಿಗೆ ಎರಡು ಕಾಲಿನ ಮೊಣಕಾಲಿಗೆ ರಕ್ತಗಾಯ, ಮೂಗಿನ ಮೇಲೆ, ಬಾಯಿ ಮೇಲೆ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದರಿಂದ ಅದೇ ಆಟೋದಲ್ಲಿ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ವೈಧ್ಯಾಧಿಕಾರಿಗಳು ನೋಡಿ ನಿಮ್ಮ ಅಜ್ಜ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.