Police Bhavan Kalaburagi

Police Bhavan Kalaburagi

Monday, May 6, 2019

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ:05/05/2019 ರಂದು ಅಫಜಲಪೂರ ಪಟ್ಟಣದ ರಾಜಶೇಖರ ಹಿರೇಮಠ ರವರ ಹೋಲದ ಮೇಟಗಿಯಲ್ಲಿ ಲೈಟಿನ ಬೇಳಕಿನಲ್ಲಿ ಇಸ್ಪಿಟ-ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ರಾಜಶೇಖರ ಹೀರೆಮಠ ರವರ ಹೊಲದ ಮೇಟಗಿ ಮರೆಯಲ್ಲಿ ನಿಂತು ನೋಡಲು ಮೇಟಗಿ ಮುಂದೆ ಲೈಟಿನ ಬೆಳಕಿನಲ್ಲಿ  07 ಜನರು ದುಂಡಾಗಿ ಕುಳಿತು ಅಂದರಗೆ 50 ಬಾಹರಗೆ 50 ಅಂತ ಅಂದರ ಬಾಹರ ಇಸ್ಪಿಟ ಜೂಜಾಟ ಆಡುತ್ತಿರುವದನ್ನು ಖುದ್ದಾಗಿ ನೋಡಿ  ಮಾನ್ಯ ಡಿ,ಎಸ್.ಪಿ.ಸಾಹೇಬರು ಆಳಂದ ರವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಹೋದಾಗ ಒಬ್ಬ ಓಡಿ ಹೋಗಿದ್ದು 06 ಜನ ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಗುರು  2)ಚಿದಾನಂದ ತಂದೆ ಈರಣ್ಣ ಬಡಿಗೇರ 3)ರಾಮಚಂದ್ರ ತಂದೆ ಧರ್ಮಣ್ಣ ಘಂಟೆ ಸಾ||ಅಫಜಲಪೂರ 4)ರುದ್ರಪ್ಪ ತಂದೆ ನಿಂಗಪ್ಪ ಯಲಗೋಡ ಸಾ||ಬ್ರಹ್ಮ ದೇವರಮಡು ತಾ||ಸಿಂದಗಿ ಹಾ||ವಾ||ಅಫಜಲಪೂರ 5)ಭಿಮರಾಯ ತಂದೆ ಅಶೋಕ ಬಬಲಾದ ಸಾ||ಅಫಜಲಪೂರ 6)ಶಿವಾನಂದ ತಂದೆ ಜಗದೇವಪ್ಪ ಅವಟೆ ಸಾ||ಅಫಜಲಪೂರ ಅಂತಾ ತಿಳಿಸಿದರು ಸದರಿಯವರನ್ನು ವಶಕ್ಕೆ ಪಡೆದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 10,300/-ರೂ ನಗದು ಹಣ ಮತ್ತು 52 ಇಸೀಟ ಎಲೆಗಳು ಎಲ್ಲವುಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನರೋಣಾ ಠಾಣೆ : ದಿನಾಂಕ 05/05/2019 ರಂದು ಲಾಡಚಿಂಚೋಳಿ ಹನುಮಾನ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಜೂಜಾಟಕ್ಕೆ ಹಣ ಪಣಕಿಟ್ಟು ಆಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬ ಆಳಂದ ಹಾಗೂ ಮಾನ್ಯ ಸಿಪಿಐ ಆಳಂದ ರವರ ಮಾರ್ಗದರ್ಶನದಂತೆ ಬಾತ್ಮಿ ಬಂದ ಸ್ಥಳವಾದ ಲಾಡಚಿಂಚೋಳಿದ ಹನುಮಾನ ದೇವಸ್ಥಾನದ ಕಟ್ಟೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ದೇವಸ್ಥಾನದ  ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 11 ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪಿಟ ಪಣಕ್ಕೆ ಹಣ ಹಚ್ಚಿ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1)ಶಾಂತಪ್ಪಾತಂದೆ ಧರ್ಮಣ್ಣಾ ಪೂಜಾರಿ, 2)ಶ್ರೀಶೈಲ್ ತಂದೆ ಬಸಣ್ಣಾ ಪಡಶೆಟ್ಟಿ, 3)ಅಣ್ಣಪ್ಪಾತಂದೆ ಮುತ್ತಪ್ಪಾ ಉದ್ದನ, 4)ಶಂಭುಲಿಂಗ ತಂದೆ ಸಿದ್ದಣ್ಣಾ ಜಮಾದಾರ, 5)ಈರಣ್ಣಾ ತಂದೆ ಸಿದ್ರಾಮಪ್ಪಾ ಚಿಕ್ಕಬಸ್ತಿ 6)ನೀಲಕಂಠ ತಂದೆ ಭೀಮಶ್ಯಾ ಹವಾಣಿ, 7)ಸಿದ್ರಾಮಪ್ಪಾತಂದೆ ಭೀಮಶ್ಯಾ ಚಿಕ್ಕಬಸ್ತಿ, 8)ಯಲ್ಲಪ್ಪಾತಂದೆ ಬೀರಣ್ಣಾ ಬಾಳಿ, 9)ಬಸಯ್ಯಸ್ವಾಮಿ ತಂದೆ ಸಿದ್ದಯ್ಯ ಮಠಪತಿ, 10)ಷಡಕ್ಷರಿ ತಂದೆ ವೀರಯ್ಯ ಸ್ವಾಮಿ 11)ಸಂಗಮನಾಥ ತಂದೆ ಶರಣಬಸಪ್ಪಾಮೈಂದರ್ಗಿ, ಸಾ:ಎಲ್ಲರೂ ಲಾಡಚಿಂಚೋಳಿ ಅಂತಾ ತಿಳಿಸಿದ್ದು ಸದರಿಯವರನ್ನು ವಶಕ್ಕೆ ಪಡೆದು ಸದರಿಯವು ಜೂಜಾಟಕ್ಕೆ ಬಳಸಿದ  ನಗದು ಹಣ 4610/- ರೂಪಾಯಿ ಮತ್ತು 52 ಇಸ್ಪಿಟ ಎಲೆಗಳನ್ನು ವಶಕ್ಕೆ ಪಡೆದು ಸದರಿಯವರೊಂದಿಗೆ ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ: 05/05/2019 ರಂದು ಬೇಳಿಗ್ಗೆ 10-30 ಗಂಟೆ ಸುಮಾರಿಗೆ ನನ್ನ ಗಂಡನು ಕೂಲಿ ಕೇಲಸಕ್ಕೆ ಹೋಗುತ್ತೇನೆ ಅಂತ ನಮ್ಮ ಮನೆಯಿಂದ ಹೋಗಿರುತ್ತಾನೆ. ನಂತರ ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ರಾಜಕುಮಾರ ತಂದೆ ರಮೇಶ ಸಂಗೊಳಗಿ ರವರು ಪೊನ ಮಾಡಿ ನನಗೆ ತಿಳಿಸಿದ್ದೆನಂದರೆ ಈಗ ಮದ್ಯಾಹ್ನ 12-15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ಮಂಜುನಾಥ ತಂದೆ ಗುರಣ್ಣ ಮನ್ಮಿ ಇಬ್ಬರು ಕೂಡಿಕೊಂಡು ಊಟ ಮಾಡಲೆಂದು ರಾಜಕುಮಾರ ಮಾಡಿಯಾಳ ರವರ ದಾಬಾಕ್ಕೆ ಹೋಗಬೆಕೆಂದು ನನ್ನ ಮೋಟಾರ ಸೈಕಲ ಮೇಲೆ ಹೋಗುತ್ತೀರುವಾಗ ಅಫಜಲಪೂರ-ಕಲಬುರ್ಗಿ ರೋಡಿಗಿರುವ ನೀರಾವರಿ ಆಪೀಸ್ ಹತ್ತೀರ ಇರುವ ಕೇನಾಲ ಹತ್ತೀರ ನಿನ್ನ ಗಂಡನು ನಿರಾವರಿ ಆಪೀಸ ಕಡೆಯಿಂದ ರೊಡಿನ ದಂಡೆಯಿಂದ ನಡೆದುಕೊಂಡು ಅಫಜಲಪೂರ ಕಡೆಗೆ ಹೊರಟಿದ್ದಾಗ ಅವನ ಹಿಂದಿನಿಂದ ಟ್ರ್ಯಾಕ್ಟರ ಇಂಜಿನ್ ನಂಬರ ಕೆ.-32 ಟಿಬಿ-4117 ನೇದ್ದು ಅಫಜಲಪೂರ ಕಡೆ ಹೊರಟಿದ್ದು ಸದರಿ ಟ್ರ್ಯಾಕ್ಟರ ಇಂಜಿನನ್ನು ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಬಸವರಾಜನಿಗೆ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿರುತ್ತಾನೆ ಆಗ ಬಸವರಾಜನು  ರೊಡಿನ ದಂಡೆಯಲ್ಲಿ ಬಿದ್ದಿದ್ದರಿಂದ ಸದರಿ ಟ್ರ್ಯಾಕ್ಟರನ ದೊಡ್ಡ ಟಾಯರ ಬಸವರಾಜನ ಶರಿರದ ಮೇಲೆ ಹಾಯ್ದಿರುತ್ತದೆ ಆಗ ನಾನು ಮತ್ತು ಮಂಜು ಇಬ್ಬರು ಬಸವರಾಜ ಹತ್ತೀರ ಹೋಗಿ ನೋಡಲು ಅವನ ಮುಖಕ್ಕೆ ರಕ್ತಗಾಯವಾಗಿ ಎದೆಗೆ ಮತ್ತು ಹೊಟ್ಟೆಗೆ ಭಾರಿ ಒಳಪೆಟ್ಟಾಗಿರುತ್ತದೆ.ನಾವು ಬಸವರಾಜನಿಗೆ ಒಂದು ಟಂಟಂದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ದವಾಖಾನೆಗೆ ಕರೆದುಕೊಂಡು ಬರುತ್ತಿದ್ದೆವೆ ಅಂತ ತಿಳಿಸಿದ ಮೇರೆಗೆ ನಾನು ಮತ್ತು ರಾಜು ನಾಗೂರ ಇಬ್ಬರು ಕೂಡಿಕೊಂಡು ಅಫಜಲಪೂರ ಸರಕಾರಿ ದವಾಖಾನೆಗೆ ಹೋಗಿ ನನ್ನ ಗಂಡನಿಗೆ ಮತ್ತು ಅವನಿಗೆ ಆಗಿರುವ ಗಾಯ ಗಳನ್ನುನೋಡಿರುತ್ತೇವೆ ನನ್ನ ಗಂಡನಿಗೆ ಪರಿಕ್ಷಿಸಿದ ವೈದ್ಯರು ಅವನನ್ನು ಹೆಚ್ಚಿನ ಚಿಕತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನಾನು ಮತ್ತು ರಾಜು ನಾಗೂರ,ರಾಜಕುಮಾರ ಸಂಗೊಳಗಿ ರವರು ಕೂಡಿಕೊಂಡು ನನ್ನ ಗಂಡನಿಗೆ 108 ವಾಹನದಲ್ಲಿ ಕಲಬುರ್ಗಿಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ 1-45 ಗಂಟೆ ಸುಮಾರಿಗೆ ಗೋಬ್ಬುರ(ಬಿ) ಗ್ರಾಮದ ಹತ್ತಿರ ಮೃತ ಪಟ್ಟಿರುತ್ತಾನೆ. ಅಂತಾ ಶ್ರಿಮತಿ ಜಗದೇವಿ ಗಂಡ ಬಸವರಾಜ @ ಬಸು ಕೋಳಕೂರ ಸಾ: ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ 01 : ಶ್ರೀ ರಾಜೇಂದ್ರಕುಮಾರ ತಂದೆ ಪದ್ಮರಾಜ ಇಜಾರಿ ರವರು ದಿನಾಂಕ 03-05-2019 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಆರ.ಪಿ ಸರ್ಕಲ ಮತ್ತು ರಾಮ ಮಂದಿರ ರಿಂಗ ರೋಡ ಮದ್ಯದಲ್ಲಿ ಬರುವ ಸಂತೋಷ ನಗರ ಕಾಲೋನಿ ಕ್ರಾಸ ಹತ್ತೀರ ರೋಡ ಪಕ್ಕದಲ್ಲಿ ನನ್ನ ಮೋಟಾರ ಸೈಕಲ ನಂ ಕೆಎ-32/ಇಆರ್-9092 ನೇದ್ದನ್ನು ನಿಲ್ಲಿಸಿ ದತ್ತಪ್ಪಾ ಇವರ ಪಾನ ಶಾಪ ಹತ್ತೀರ ನಾನು ಇರುವಾಗ ಮಹೀಂದ್ರಾ ಜೀಪ ನಂ ಕೆಎ-32/ಪಿ-1860 ನೇದ್ದರ ಚಾಲಕನು ರಾಮ ಮಂದಿರ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರೋಡ ಮೇಲೆ ಜೀಪ ರೋಡ ಎಡ ಬಲ ತಿರುಗಿಸುತ್ತಾ ಬಂದು ರೋಡ ಪಕ್ಕದಲ್ಲಿ ನಿಲ್ಲಿಸಿದ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಹಾಗೆ ಮುಂದೆ ಹೋಗಿ ರೋಡ ಡಿವೈಡರಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ತನ್ನ ಜೀಪಿನ ಮುಂದಿನ ಗಾಲಿ ಕಟ್ ಆಗಿದ್ದರಿಂದ ಜೀಪನ್ನು ಅಲ್ಲೆ ನಿಲ್ಲಿಸಿ ಅದರ ಚಾಲಕ ಹೋಗಿದ್ದು ನನ್ನ ಮೋಟಾರ ಸೈಕಲ ಪೂರ್ತಿಯಾಗಿ ಡ್ಯಾಮೇಜ ಆಗಿತ್ತು ಅಲ್ಲಿ ನನಗೆ ತಿಳಿದು ಬಂದಿದ್ದೆನೆಂದರೆ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಜೀಪ ಚಾಲಕನು ಮುಕ್ತಾ ಟಾಕೀಜ್ ಮತ್ತು ರೆಡ್ಡಿ ಪೆಟ್ರೊಲ ಪಂಪ ಭಾಗದಲ್ಲಿ ಬೇರೆ ವಾಹನಗಳಿಗೂ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಅಲ್ಲಿ ಕೆಲವು ಜನರಿಗೆ ಗಾಯಗಳು ಆಗಿರುತ್ತವೆ ಅಂತಾ ಗೋತ್ತಾಗಿರುತ್ತದೆ. ಅವರ ಹೆಸರು ಅವರ ವಾಹನಗಳ ಸಂಖ್ಯೆ ಮತ್ತು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಚಾಲಕನ ಹೆಸರು ನನಗೆ ಗೋತ್ತಾಗಿರುವದಿಲ್ಲ ಅಪಘಾತ ಪಡಿಸಿದ ಚಾಲಕನನ್ನು ನೋಡಿದ್ದು ಮುಂದೆ ನೋಡಿದಲ್ಲಿ ಗುರ್ತಿಸುತ್ತೆನೆ. ನನ್ನ ಮೋಟಾರ ಸೈಕಲ ನಂ ಕೆಎ-32/ಇಆರ್-9092 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಮೋಟಾರ ಸೈಕಲ ಡ್ಯಾಮೇಜ್ ಮಾಡಿದ್ದು ಹಾಗೂ ಇತರ ವಾಹನಗಳಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅವರಿಗೆ ಗಾಯಗೊಳಿಸಿ ತನ್ನ ವಾಹನ ಅಲ್ಲೆ ಬಿಟ್ಟು ಓಡಿ ಹೋದ ಜೀಪ ನಂಬರ ಕೆಎ-32/ಪಿ-1860 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.