ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 11-02-2020
ಸಿ.ಇ.ಎನ್ ಕ್ರೈಂ ಪೊಲೀಸ ಠಾಣೆ ಬೀದರ ಅಪರಾಧ ಸಂ.
03/2020, ಕಲಂ. 67(ಡಿ) ಐ.ಟಿ ಕಾಯ್ದೆ ಮತ್ತು 419, 420 ಐಪಿಸಿ :-
ದಿನಾಂಕ
10-12-2019 ರಿಂದ ದಿನಾಂಕ
23-01-2020 ರವರೆಗೆ ಫಿರ್ಯಾದಿ ಸಾಗರ
ತಂದೆ ಪ್ರಕಾಶ ದೇವಣಿ, ವಯ: 24 ವರ್ಷ, ಜಾತಿ: ಲಿಂಗಾಯತ, ಸಾ: ಜೇರಪೇಟ
ಹುಮನಾಬಾದ ಮೊಬೈಲ ಮೋಬೈಲ್
ನಂ. 9008342948 ನೇದಕ್ಕೆ
ಮೋಬೈಲ್ ನಂ.
8658203996, 08658204064, 9777743483, 7290831566 ಮತ್ತು 08744010546 ನೇದರಿಂದ ಅಪರಿಚಿತ
ವ್ಯಕ್ತಿ ಕರೆ ಮಾಡಿ
ಓಲ್ವೋ ಕಂಪನಿಯಲ್ಲಿ ನೌಕರಿ
ಕೊಡಿಸುವುದಾಗಿ ಸುಳ್ಳು
ಹೇಳಿ ನಂಬಿಸಿ ಅದಕ್ಕೆ
ವಿವಿಧ ರೀತಿಯ ಚಾರ್ಜ, ಪಾವತಿ ಮಾಡಬೇಕಾಗಿರುತ್ತದೆ ಅಂತ
ಹೇಳಿ ವಿವಿಧ ಬ್ಯಾಂಕ
ಖಾತೆಗಳಿಗೆ ಫಿರ್ಯಾದಿಯಿಂದ ಹಂತ
ಹಂತವಾಗಿ ಒಟ್ಟು 2,18,632/- ರೂಪಾಯಿ ಹಣ
ಹಾಕಿಸಿಕೊಂಡು ಮೋಸ
ಮಾಡಿರುತ್ತಾನೆಂದು ಕೊಟ್ಟ
ಫಿರ್ಯಾದಿಯವರ ದೂರಿನ
ಹೇಳಿಕೆ ಸಾರಾಂಶದ ಮೇರೆಗೆ
ದಿನಾಂಕ 10-02-2020 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ.
17/2020, ಕಲಂ. 379 ಐಪಿಸಿ :-
ದಿನಾಂಕ 20-01-2020 ರಂದು 0100 ಗಂಟೆಯಿಂದ 0300 ಗಂಟೆಯ ಅವಧಿಯಲ್ಲಿ
ಫಿರ್ಯಾದಿ ಶ್ರೀದೇವಿ ತಂದೆ ದೆಶಪ್ಪಾ ಬಿರಾದರ ಸಾ: ಮನೆ ನಂ. 9-5-490 ಹಳೆ ಆರ್ದಶ ಕಾಲೋನಿ, ಬೀದರ
ರವರ ಮನೆಯ ಮುಂದೆ ನಿಲ್ಲಿಸಿದ ಹೊಂಡಾ ಎಕ್ಟಿವಾ 5ಜಿ ಸ್ಕೂಟರ ಸಂ. ಕೆಎ-38/ವಿ-3792 ಅ.ಕಿ 47,500/- ರೂಪಾಯಿ ನೇದನ್ನು
ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ, ಸದರಿ ವಾಹನವನ್ನು ಎಲ್ಲಾಕಡೆಗೆ ಹುಡುಕಾಡಿದರೂ
ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಪಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 10-02-2020
ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ
ಸಂ. 17/2020, ಕಲಂ. 379 ಐಪಿಸಿ :-
ದಿನಾಂಕ 05-02-2020 ರಂದು 2230 ಗಂಟೆಯಿಂದ ದಿನಾಂಕ 06-02-2020 ರಂದು 0600 ಗಂಟೆಯ ಅವಧಿಯಲ್ಲಿ ಬೀದರ ನಗರದ ಮಾಧವನಗರದ ಫಿರ್ಯಾದಿ ಶ್ರೀನಿವಾಸ ತಂದೆ ದಯಾನಂದರಾವ ಸಾ: ಶರಣನಗರ ಕೆ.ಇ.ಬಿ ಹತ್ತಿರ ಬೀದರ ರವರು ತಮ್ಮ ತಮ್ಮನ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ ತನ್ನ ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ಡಬ್ಲು-3961 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಬಜಾಜ ಪಲ್ಸರ್ ಮೋಟರ ಸೈಕಲ ನಂ. ಕೆಎ-38/ಡಬ್ಲು-3961, 2)
ಚಾಸಿಸ್ ನಂ.
ಎಮ್.ಡಿ.2.ಎ.11.ಸಿ.ವಾಯ್.0.ಕೆ.ಸಿ.ಬಿ.43229, 3) ಇಂಜಿನ್ ನಂ.
ಡಿ.ಹೆಚ್.ವಾಯ್.ಸಿ.ಕೆ.ಬಿ.74569, 4) ಮಾಡಲ್: 2019, 5) ಬಣ್ಣ: ಕಪ್ಪು ಬಣ್ಣ ಹಾಗೂ 6) ಅ.ಕಿ 48,000/- ರೂ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ
ಸಾರಾಂಶದ ಮೇರೆಗೆ ದಿನಾಂಕ 10-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ. 498
(ಎ), 323, 504, 506 ಜೊತೆ
149 ಐಪಿಸಿ ಮತ್ತು ಕಲಂ.
4 ಡಿ.ಪಿ ಕಾಯ್ದೆ
:-
ಫಿರ್ಯಾದಿ ಭಾಗ್ಯಶ್ರೀ@ಭಾಗಮ್ಮಾ ಗಂಡ ರಮೇಶ ಮೇತ್ರೆ ಸಾ: ಮನೆ ನಂ. 48 ವರ್ಷ, ಸಾ: ಶಿವಾಜಿ ನಗರ ಗುಂಪಾ ಹಿಂದೆ ಶಾಂತಪ್ಪಾ ಜಿ.ಪಾಟೀಲ ಮನೆಯ ಹತ್ತಿರ ಬೀದರ ರವರ ಮದುವೆ ಬೀದರ ನಗರದ ರಮೇಶ ತಂದೆ ಮಲ್ಲಿಕಾರ್ಜುನ ಇವನೊಂದಿಗೆ ದಿನಾಂಕ 01-05-2016 ರಂದು ಬೀದರ ನಗರದಲ್ಲಿರುವ ಎಸ್ಆರ್ಎಸ್ ಫಂಗಶನ್ ಹಾಲಿನಲ್ಲಿ ತಂದೆಯವರು ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆ ಸಮಯದಲ್ಲಿ ತಂದೆಯವರು ಫಿರ್ಯಾದಿಗೆ 5 ತೊಲೆ ಬಂಗಾರದ ಆಭರಣಗಳು, ಪಲ್ಲಂಗ, ಅಲಮಾರಾ ಹಾಗು ಇತರೆ ಬೆಲೆ ಬಾಳು ಸಾಮಾನುಗಳನ್ನು ಉಡುಗೋರೆಯಾಗಿ ನೀಡಿರುತ್ತಾರೆ, ಮದುವೆಯಾಗಿ 6 ತಿಂಗಳವರೆಗೆ ಗಂಡ ರಮೇಶ ಹಾಗು ಅವನ ಮನೆಯವರು ಚನ್ನಾಗಿ ನೋಡಿಕೊಂಡು ಸುಖವಾಗಿ ಸಂಸಾರ ಮಾಡಿರುತ್ತಾರೆ, ಮದುವೆಯಾದ ಮರು ವರ್ಷದಲ್ಲಿ ಗಂಡನ ಮನೆಯವರು ಹಳೆ ಮನೆಯ ಮೇಲೆ ಒಂದನೆ ಮಹಡಿ ಕಟ್ಟಲು ಪ್ರಾರಂಭಿಸಿ ಆರೋಪಿತರಾದ ಗಂಡ ರಮೇಶ, ಅತ್ತೆ ಲಲಿತಾ ಹಾಗೂ ಮಾವ ಮಲ್ಲಿಕಾರ್ಜುನ ಇವರೆಲ್ಲರು ಕೂಡಿ ಫಿರ್ಯಾದಿಗೆ ನಿಮ್ಮ ತಂದೆ ಮದುವೆ ಸಮಯದಲ್ಲಿ ನಮಗೆ ಏನು ವರದಕ್ಷಿಣೆ ಅಂತ ಕೊಟ್ಟಿಲ್ಲಾ ಆದ್ದರಿಂದ ನಮಗೆ ಈ ಮನೆ ಕಟ್ಟಲು ಹಣ ಕಡಿಮೆ ಬಿಳುತ್ತಿದೆ, ನೀನು ತವರು ಮನೆಗೆ ಹೋಗಿ 5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತ ಹೇಳಿದ್ದು, ಆಗ ಫಿರ್ಯಾದಿಯು ತನ್ನ ಗಂಡನಿಗೆ ಹೋದ ವರ್ಷನೆ ನಮ್ಮ ತಂದೆಯವರು ಸಾಲ ಮಾಡಿ ಮದುವೆ ಮಾಡಿದ್ದಾರೆ, ಈಗ ಅವರು ಎಲ್ಲಿಂದ ಹಣ ಕೊಡಬೇಕು ಅಂತ ಹೇಳಿದಾಗ ಗಂಡ ರಮೇಶ ಇವನು ನೀನು ನನಗೆ ಎದರು ಮಾತನಾಡುತ್ತಿ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ, ಹೊಡೆಯುವಾಗ ಅತ್ತೆ ಮತ್ತು ನೇಗಣಿ ಒತ್ತಿ ಹಿಡಿದಿರುತ್ತಾರೆ, ಅಂದಿನಿಂದ ಫಿರ್ಯಾದಿಯು ಮನೆ ಕೆಲಸ ಮಾಡಿದರೂ ಅದರಲ್ಲಿ ಏನಾದರೂ ತಪ್ಪು ಹಚ್ಚಿ ನಿನಗೆ ಸರಿಯಾಗಿ ಮನೆಯ ಕೆಲಸ ಮಾಡಲು ಬರುವುದಿಲ್ಲಾ, ನಿಮ್ಮ ತಂದೆ ತಾಯಿಯವರು ಹೀಗೆ ಕಲಿಸಿದ್ದಾರೆ ಅಂತ ಹಿಯಾಳಿಸಿ ಅವಾಚ್ಯ ಪದಗಳನ್ನು ಬಳಸಿ ಬೈದು ಹೊಡೆ ಬಡೆ ಮಾಡುತ್ತಾ ಬಂದಿರುತ್ತಾರೆ, ಅಲ್ಲದೆ ಫಿರ್ಯಾದಿಯು ಕೆಲಸ ಮಾಡಿ ಸಂಪಾದಿಸಿ ಬ್ಯಾಂಕಿನಲ್ಲಿಟ್ಟ 8 ಲಕ್ಷ ರೂಪಾಯಿ ಹಣ ಎಟಿಎಮ್ ಮತ್ತು ಆಲ್ಲೈನ್ ಮುಖಾಂತರ ಫಿರ್ಯಾದಿಗೆ ಹೇಳದೆ ಕೇಳದೆ ಹಣ ತೆಗೆದುಕೊಂಡಿರುತ್ತಾರೆ, 2018 ನೇ ಸಾಲಿನಲ್ಲಿ ಜೂನ್ ತಿಂಗಳಲ್ಲಿ ಸದರಿ ಆರೋಪಿತರು ನೀನು ನಿಮ್ಮ ತಂದೆಯ ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬರುವವರೆಗೆ ನಮ್ಮ ಮನೆಯಲ್ಲಿ ಇರಬ್ಯಾಡ ಅಂತ ಹೊಡೆ ಬಡೆ ಮಾಡಿ ಮನೆಯಿಂದ ರಾತ್ರಿ ಹೊರಗೆ ಹಾಕಿರುತ್ತಾರೆ, ನಂತರ ತಂದೆ ಬಂದು ಹುಣಚಗೇರಾ ಗ್ರಾಮಕ್ಕೆ ಕರೆದುಕೊಂಡು ಹೋಗಿರುತ್ತಾರೆ, ಹೀಗಿರುವಾಗ ದಿನಾಂಕ 15-12-2019 ರಂದು ಫಿರ್ಯಾದಿಯು ತಮ್ಮ ತವರು ಮನೆ ಹುಣಚಗೇರಾ ಗ್ರಾಮದಲ್ಲಿದ್ದಾಗ ಆರೋಪಿತರಾದ ಗಂಡ ರಮೇಶ, ಭಾವ ಸುರೇಶ ಮತ್ತು ಅತ್ತೆ ಲಲಿತಾಬಾಯಿ ಇವರು ಮೂವರು ಬಂದು ಹಣ ತೆಗೆದುಕೊಂಡು ಬಾ ಅಂತ ಹೇಳಿ ಕಳುಹಿಸಿದರೂ ನೀನು ಹಣ ತರದೆ ಇಲ್ಲೇ ಬಿದ್ದಿದಿ ಅಂತ ಕೂದಲು ಹಿಡಿದು ಜಿಂಜಾಮುಷ್ಟಿ ಮಾಡಿ ಕೈಯಿಂದ ಬೆನ್ನಿನಲ್ಲಿ ಹೊಡೆಯಲು ಪ್ರಾರಂಭಿಸಿದಾಗ ತಂದೆ ತಾಯಿ ಬಿಡಿಸಲು ಬಂದಾಗ ಅವರಿಗೂ ನೂಕಿ ಕೊಟ್ಟು ತಂದೆಗೆ 5 ಲಕ್ಷ ರೂಪಾಯಿ ಕೊಟ್ಟರೆ ನಿನ್ನ ಮಗಳಿಗೆ ನಮ್ಮ ಮನೆಗೆ ಕಳುಹಿಸಿಕೊಡು ಇಲ್ಲದಿದ್ದರೆ ನಿನ್ನ ಮನೆಯಲ್ಲಿ ಇಟ್ಟುಕೋ ಅಂತ ಚಿರಾಡಿ ಪುನಃ ಫಿರ್ಯಾದಿಗೆ ಹೊಡೆಯುತ್ತಿರುವಾಗ ಪಕ್ಕದ ಮನೆಯವರಾದ ಜರೆಪಾ ಕುಂದೆ, ಶಿವಕುಮಾರ ಮತ್ತು ಶರೀಪ ಖುರೇಷಿ ಇವರು ಜಗಳ ಬಿಡಿಸಿರುತ್ತಾರೆ, ಸದರಿ ಆರೋಪಿತರು ಫಿರ್ಯಾದಿಗೆ ನೀನು ವರದಕ್ಷಿಣೆ ತರದೆ ನಮ್ಮ ಮನಗೆ ಬಂದರೆ ನಿನಗೆ ಜೀವ ಸಹಿತ ಸುಟ್ಟು ಹಾಕುತ್ತೇವೆ ಅಂತ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 10-02-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ.
15/2020, ಕಲಂ. 143, 147,
148, 323, 324, 498(ಎ),
326, 504, 506, ಜೊತೆ 149
ಐಪಿಸಿ ಮತ್ತು 3 & 4 ಡಿ.ಪಿ
ಕಾಯ್ದೆ
:-
ಫಿರ್ಯಾದಿ ಪೂಜಾ ಗಂಡ ಮುಕೇಶ ಪಾಟೀಲ ವಯ: 20 ವರ್ಷ,
ಸಾ: ತಳವಾಡ,
(ಎಂ) ರವರಿಗೆ ಮುಕೇಶ ಪಾಟೀಲ ತಂದೆ ಶಂಕರರಾವ ಪಾಟೀಲ್ ಸಾ: ತಾಂಬಳವಾಡಿ, ತಾ: ನಿಲಂಗಾ, ಜಿ: ಲಾತೂರ ಇವರೊಂದಿಗೆ ದಿನಾಂಕ 10-06-2017 ರಂದು
5,00,000/-
ರೂ. ಹಾಗೂ
6 ತೊಲೆ
ಬಂಗಾರ ಮತ್ತು ಇನ್ನಿತರೆ ಮನೆಯ ಎಲ್ಲ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ, ಆದರೇ
ಧನದಾಹಿಗಳಾದ ಗಂಡ ಮತ್ತು ಮನೆಯವರು ಮದುವೆಯಾದ 1-2 ದಿನಗಳಿಂದಲೆ ಹಣಕ್ಕಾಗಿ ಪೀಡಿಸಲು
ಪ್ರಾರಂಬಿಸಿರುತ್ತಾರೆ, ಮದುವೆ ದಿನ ಸಹ 30,000/- ರೂ. ಹಣ ನೀಡಲು ಕಡಿಮೆ ಆದ ಸಂದರ್ಭದಲ್ಲಿ ಮದುವೆ ನಿಲ್ಲಿಸಲು
ಮುಂದಾಗಿದ್ದರು, ಮದುವೆಯಾದ 2-3 ದಿನಗಳಿಂದ ಹಣಕ್ಕಾಗಿ ಫಿರ್ಯಾದಿಗೆ ಹೊಡೆಯುವದು, ಬೈಯುವದು
ಗಂಡ ಮುಕೇಶ ಮತ್ತು ಅತ್ತೆ ಸಿದ್ದಮ್ಮಾಬಾಯಿ, ಮಾವ
ಶಂಕರರಾವ,
ಮೈದುನ
ದೀಪಕ ಹಾಗೂ ನಾದನಿ ರೇಣುಕಾ ಗಂಡ ಮಾರುತಿ, ರೇಖಾ ಗಂಡ ಅಶೋಕ ಮತ್ತು ನಾದನಿಯ ಗಂಡನಾದ ಮಾರುತಿ, ಅಶೋಕ
ತಂದೆ ಈಶ್ವರ ಎಲ್ಲರು ಸೇರಿ ದೈಹಿಕ ಹಿಂಸೆ ನೀಡುತ್ತಿದ್ದರು, ಫಿರ್ಯಾದಿಯು ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ತೊಟ್ಟಿಲು
ಕಾರ್ಯಕ್ರಮಕ್ಕೆ ಹಣ ನೀಡಿದರೆ ಮಾತ್ರ ಬರುತ್ತೇವೆಂದು ಹೇಳಿದ್ದರಿಂದ ತೊಟ್ಟಿಲು ಕಾರ್ಯಕ್ರಮದ ದಿನಸ
2 ತೊಲೆ
ಬಂಗಾರ ನಿಡಿರುತ್ತಾರೆ, ಮದುವೆ ಖರ್ಚಿಗೆ ತಾಯಿ ಮನೆಯನ್ನು ಮಾರಾಟ ಮಾಡಿ ವರದಕ್ಷಿಣೆ ಹಣ ಮತ್ತು ಮದುವೆ
ಖರ್ಚು ನೀಡಿರುತ್ತಾರೆ, ಪಂಚಮಿ ಹಬ್ಬದ ಸಂದರ್ಭದಲ್ಲಿ ಕರೆದುಕೊಂಡು ಹೊಗುವಂತೆ ಹೇಳಿದಾಗ ಹಣ ನೀಡಿದರೆ
ಮಾತ್ರ ಕರೆದುಕೊಂಡು ಹೊಗುತ್ತೇನೆಂದು ಹೇಳಿದ್ದರಿಂಧ ತಾಯಿ ಮಹಿಳಾ ಸ್ವಸಹಾಯ ಸಂಘದಿಂದ 45,000/- ರೂ.
ಹಣ ಸಾಲ ಪಡೆದು ಬಳಿ ಇದ್ದ 5000/- ರೂ. ಸೇರಿಸಿ ಒಟ್ಟು 50,000/- ರೂ. ಹಣ ಗಂಡನಿಗೆ
ನೀಡಿದಾಗ ಫಿರ್ಯಾದಿಗೆ ಕರೆದುಕೊಂಡು ಹೊಗಿರುತ್ತಾರೆ, ನಂತರ ದಿನಾಂಕ 20-10-2018 ರಂದು
ಸದರಿ ಆರೋಪಿತರೆಲ್ಲರೂ ಸೇರಿ ಒತ್ತಾಯ ಪೂರ್ವಕ ಫಿರ್ಯಾದಿಗೆ ಹೈದ್ರಾಬಾದನಲ್ಲಿ ವಾಸಿಸುತ್ತಿರುವ ಮನೆಯ
ಮೇಲಂತಸ್ತಿಗೆ ಎಳೆದುಕೊಂಡು ಹೋಗಿ ಕೊಲೆ ಮಾಡುವ ಉದ್ದೇಶದಿಂದ ಕೆಳಗೆ ನೂಕಿ ಕೊಟ್ಟಿರುತ್ತಾರೆ, ಸದರಿ
ಘಟನೆಯಲ್ಲಿ ಫಿರ್ಯಾದಿಯ ಬೆನ್ನಲಬು ಎಲ್-5 ಮುರಿದಿರುತ್ತದೆ ಮತ್ತು ಬಲಗಾಲು ಹಿಮ್ಮಡಿ ಸಹ ಮುರಿದಿದ್ದು
ಹಾಗೂ ತಲೆಯ ಎಡಭಾಗದಲ್ಲಿ ರಕ್ತಗಾಯವಾಗಿ ರಕ್ತ ಹೆಪ್ಪು ಗಟ್ಟಿರುತ್ತದೆ ಮತ್ತು ಎಡಗಣ್ಣಿನ ಕೆಳಭಾಗದ
ಎಲಬು ಮುರಿದಿರುತ್ತದೆ, ಇಂದಿಗು ಸಹ ಫಿರ್ಯಾದಿಯು ಚಿಕಿತ್ಸೆ ಪಡೆಯುತ್ತಿದ್ದು, ಹೀಗಿರಲು ದಿಪಾವಳಿಯಲ್ಲಿ
ಫಿರ್ಯಾದಿಯವರ ತಾಯಿ ಸದರಿ ಆರೋಪಿತರಿಗೆ ಹಬ್ಬಕ್ಕೆ ಕರೆಯಸಿದಾಗ ಅವರೆಲ್ಲರು ಬಂದು ಮರಳಿ ಹೊಗುವಾಗ
ಹಣ ತೆಗೆದುಕೊಂಡು ಬಂದರೆ ಮಾತ್ರ ಬರುವಂತೆ ಇಲ್ಲವಾದರೆ ಇಲ್ಲೆ ಸಾಯಿ ಎಂದು ಹೇಳಿ ಹೊಗಿರುತ್ತಾರೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 10-02-2020 ರಂದು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.