Police Bhavan Kalaburagi

Police Bhavan Kalaburagi

Friday, February 5, 2021

BIDAR DISTRICT DAILY CRIME UPDATE 05-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 05-02-2021

 

ಬಗದಲ ಪೊಲೀಸ್ ಠಾಣೆ ಅಪರಾಧ ಸಂ. 05/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 04-02-2021 ರಂದು ಫಿರ್ಯಾದಿ ಶರಿಫೋದ್ದಿನ್ ತಂದೆ ಮದರಸಾಬ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಬುಚನಳ್ಳಿ, ತಾ: ಜಹಿರಾಬಾದ, ಜಿ: ಮೇದಕ ರವರು ಮತ್ತು ಪೀರಭಕ್ಷ ತಂದೆ ಎಂಡಿ ಜೈನೋದ್ದಿನ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಬೂಚನಳ್ಳಿ ಇಬ್ಬರು ಕೂಡಿ ಘೋಡವಾಡಿಗೆ ಮೋಟಾರ ಸೈಕಲ ನಂ. ಎಪಿ-10/ಎ.ಟಿ-0512 ನೇದರ ಮೇಲೆ ಚಟನ್ನಳಿ-ಸಿರ್ಸಿ ಮಾರ್ಗವಾಗಿ ಹೋಗುತ್ತಿರುವಾಗ ಬೀದರ-ಮನ್ನಾಎಖೇಳಿ ರಸ್ತೆಯ ಚಟ್ನಳ್ಳಿ ಕ್ರಾಸ್ ಹತ್ತಿರ ಬಂದಾಗ ಹಿಂದಿನಿಂದ ಅಂದರೆ ಚಟ್ನಳ್ಳಿ ಕಡೆಯಿಂದ ಟ್ಯಾಕ್ಟರ್ ನಂ. ಎಂ.ಹೆಚ್-12/ಬಿ.ಕ್ಯೂ-1956 ನೇದರ ಚಾಲಕನಾದ ಆರೋಪಿಯು ತನ್ನ ಟ್ಯಾಕ್ಟರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಗೆ ಡಿಕ್ಕಿ ಮಾಡಿ ಟ್ಯಾಕ್ಟರ್ ನಿಲ್ಲಿಸಿದ ಹಾಗೇ  ಮಾಡಿ ಟ್ಯಾಕ್ಟರ್ ಸಮೇತ ಕಾಡವಾದ ಕಡೆಗೆ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಎಡಗಾಲ ಪಾದಕ್ಕೆ ಮತ್ತು ಮೋಣಕಾಲಿಗೆ ರಕ್ತಗಾಯವಾಗಿರುತ್ತದೆ, ಹಿಂದೆ ಕುಳೀತ ಪೀರಭಕ್ಷ ಇತನಿಗೆ ಎಡಗಾಲ ಮೋಣಕಾಲ ಕೆಳಗೆ ಭಾರಿ ಗುಪ್ತಗಾಯ, ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ಆಗ ಹಿಂದಿನಿಂದ ಬರುತ್ತಿದ್ದ ಎಂಡಿ ಜಮೀರಮಿಯ್ಯಾ ತಂದೆ ಸಮದಮಿಯ್ಯಾ ಸಾ: ಬುದೇರಾ ಮತ್ತು ಮುಜಬೊದ್ದಿನ ತಂದೆ ಮಂಜಲೇಮಿಯ್ಯಾ ಸಾ: ಬುದೇರಾ ಇಬ್ಬರು ನೋಡಿ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಪಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 15/2021, ಕಲಂ. 279, 338 ಐಪಿಸಿ :-

ದಿನಾಂಕ 04-02-2021 ರಂದು ಫಿರ್ಯಾದಿ ಖಬುಲಾ ತಂದೆ ರಾಜಮೊಹಮ್ಮದ ಬಿಸ್ತೆ ವಯ:  45 ವರ್ಷ, ಜಾತಿ: ಮುಸ್ಲಿಂ,  ಸಾ:  ಸೆಡೋ,  ತಾ:  ಹುಮನಾಬಾದ ರವರು ನ್ನ ಟ್ರ್ಯಾಕ್ಟರನ್ನು ಚಲಾಯಿಸಿಕೊಂಡು ಮನೆಯಿಂದ ಹೊಲಕ್ಕೆ ಹೋಗುವಾಗ ಸೆಡೋಳ ಗ್ರಾಮದ ವಿಠಲ ತಂದೆ ರಾಮರಾವ ಡುಕರೆ ರವರ ಮನೆಯ ಹತ್ತಿರ ಬಂದಾಗ ಅದೇ ಸಮಯಕ್ಕೆ ಎದುರಿನಿಂದ ಅಂದರೆ ಸೆಡೋಳ ಕ್ರಾಸ್ ಕಡೆಯಿಂದ ಒಂದು ಮೋಟಾರ್ ಸೈಕಲ್ ನಂ. ಎಪಿ-28/ಡಿ.ಡಬ್ಲು-2919 ನೇದರ ಚಾಲಕನಾದ ಆರೋಪಿ ವೆಂಕಟ ತಂದೆ ಕಾಶಿನಾಥ ಶೇರಿಕಾರ ಸಾ:  ಸುಲ್ತಾನಬಾದವಾಡ,  ತಾ: ಹುಮನಾಬಾದ ಇತನು ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರನ ಹಿಂದಿನ ಟೈರಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ, ನಂತರ ಫಿರ್ಯಾದಿಯು ಮೋಟಾರ್ ಸೈಕಲ್ ಚಾಲಕನಿಗೆ ನೋಡಲಾಗಿ ಆತನ ಬಲಗಾಲ ಮೊಣಕಾಲ ಕೆಳಗೆ ತೀವ್ರ ರಕ್ತಗಾಯವಾಗಿರುತ್ತದೆ, ನಂತರ ಗಾಯಾಳುವಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 286 ಐಪಿಸಿ ಮತ್ತು 9(ಬಿ)(1)(ಬಿ) ಸ್ಪೋಟಕಗಳ ಅಧಿನಿಯಮ-1884 :-

ದಿನಾಂಕ 04-02-2021 ರಂದು ಜನವಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದದ್ದಾಪುರ ಶಿವರಾದ ಜನವಾಡಾ-ದದ್ದಾಪುರ ಮದ್ಯ ಹೊರವಲಯದಲ್ಲಿನ ನಾಗರೆ ಸ್ಟೋನ್ ಕ್ರಸರ್ ಎದುರುಗಡೆ ಶ್ಚಿಮ ದಿಕ್ಕಿನ ಕಲ್ಲಿನ ಕ್ವಾರಿಯಲ್ಲಿ ಅಕ್ರಮ ಸ್ಪೋಟ ಮಾಡುವ ಬಗ್ಗೆ ಅಮರಪ್ಪಾ ಪೊಲೀಸ್ ನಿರೀಕ್ಷಕರು ಆಂತರಿಕ ಭದ್ರತಾ ವಿಭಾಗ, ಬೀದರ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ತಮ್ಮ ಸಿಬ್ಬಂದಿ ಹಾಗೂ ಜನವಡಾ ಪಿಎಸ್ಐ ಹಾಗೂ ಸಿಬ್ಬಂದಿಯವರೊಂದಿಗೆ ಜನವಾಡಾ ಗ್ರಾಮದ ಹೊರವಲಯದಲ್ಲಿರುವ ನಾಗರೆ ಸ್ಟೋನ್ ಕ್ರಸರ್ ಮತ್ತು ಕ್ವಾರಿ ಹತ್ತಿರ ತಲುಪಿದಾಗ ಪೊಲೀಸ್ ಜೀಪನ್ನು ನೋಡಿ ಅಲ್ಲಿದ್ದ ವ್ಯಕ್ತಿಗಳು ಚೆಲ್ಲಾಪಿಲ್ಲಿಯಾಗಿ ಓಡಿ ಹೊಗುವಷ್ಟರಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ರಾಜಶೇಖರ ತಂದೆ ಕಾಳಪ್ಪಾ ಚೌಹಾಣ ಸಾ: ಬೈಲಾಪುರ ತಾಂಡಾ, ತಾ: ಹುಣಸಗಿ, ಜಿ: ಯಾದಗೀರ ಅಂತಾ ತಿಳಿಸಿದನು, ಅಷ್ಟರಲ್ಲಿ ಕ್ರಸರ್ ಕಡೆಯಿಂದ ಬಂದ ಒಬ್ಬ ವ್ಯಕ್ತಿಯನ್ನು ವಿಚಾರಿಸಲಾಗಿ ಅವರು ತನ್ನ ಹೆಸರು ಅಜಯ ತಂದೆ ನಾಗನಾಥರಾವ ನಾಗರೆ ಮನಿಯಾರ ತಾಲೀಮ ಬೀದರ ಸ್ಟೋನ್ ಕ್ರಸರ್ ಮತ್ತು ಕ್ವಾರಿಯ ಮಾಲಕರ ಮಗನೆಂದು ತಿಳಿಸಿದ್ದು, ರಾಜಶೇಖ್ ಈತನಿಗೆ ಓಡಿ ಹೋದ ವ್ಯಕ್ತಿಗಳ ಹೆಸರು ವಿಚಾರಿಸಲು ಒಬ್ಬನ ಹೆಸರು ಅರುಣ ತಂದೆ ಮಲ್ಲಯ್ಯಾ ಸ್ವಾಮಿ, ಸಾ: ಗುಂಪಾ ಬೀದರ ಅಂತಾ ತಿಳಿಸಿದನು, ಸದರಿಯವರನ್ನು ಸ್ಪೋಟಕಗಳನ್ನು ಬಳಸಲು ನಿಮ್ಮ ಹತ್ತಿರ ಯಾವುದಾದರು ಕಾಗದ ಪತ್ರಗಳು ಇವೆಯೇ ಅಂತಾ ವಿಚಾರಿಸಲು ಅವರು ನಮ್ಮ ಹತ್ತಿರ ಯಾವುದೆ ಕಾಗದ ಪತ್ರಗಳು ಇರುವುದಿಲ್ಲ ಅಂತಾ ತಿಳಿಸಿದರು, ರಾಜಶೇಖರ ಮತ್ತು ಅಜಯ ನಾಗರೆ ರವರೊಂದಿಗೆ ಕ್ವಾರಿಯಲ್ಲಿ ಹೋಗಿ ನೋಡಲಾಗಿ ಅಲ್ಲಿ 1) ಒಂದು ರಟ್ಟಿನ ಬಾಕ್ಸನಲ್ಲಿ 9 ಲಿಕ್ವೀಡ್ ಜಿಲಿಟೀನ್ ಕಡ್ಡಿಗಳು, 2) ಸುಮಾರು 30 ಮೀಟರನಷ್ಟು ಸಂಪರ್ಕಕ್ಕೆ ಬೇಕಾಗುವ ಕೇಬಲ್, 3) ಒಂದು ರಟ್ಟಿನ ಕಾಟನನಲ್ಲಿ 60 ಡೇಟಾನೇಟರ್ಸ್ ಕೇಬಲನೊಂದಿಗೆ, 3) ಒಂದು ಮಗ್ಗರ ಇದ್ದು, ಸದರಿ ವಸ್ತುಗಳ ಬಗ್ಗೆ ಹಿಡಿದ ವ್ಯಕ್ತಿಗಳಿಗೆ ವಿಚಾರಿಸಲಾಗಿ ವಸ್ತುಗಳು ಕ್ವಾರಿಯಲ್ಲಿ ಕಲ್ಲುಗಳು ಸ್ಪೋಟಿಸಲು ಬಳಸುತ್ತಿದ್ದೆವೆ ಅಂತಾ ತಿಳಿಸಿದ್ದು, ಸದರಿ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 13/2021, ಕಲಂ. 457, 380 ಐಪಿಸಿ :-

ದಿನಾಂಕ 30-01-2021 ಮದ್ಯ ರಾತ್ರಿಯಲ್ಲಿ ಯಾರೋ ಅಪರಿಚಿತ ಕಳ್ಳರು ಹಂದ್ರಾಳ ಶಿವಾರದಲ್ಲಿರುವ ಟಾವರನ ಸೆಲ್ಟರ ಕೀಲಿ ಮುರಿದು ಒಳಗಡೆ ಇದ್ದ 24 ಬ್ಯಾಟರಿಗಳು ಅ.ಕಿ 21,000/- ಸಾವಿರ ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪಾ ಹಳ್ಳಿಖೆಡ ವಯ: 70 ವರ್ಷ, ಸಾ: ರಾಮಚಂದ್ರ ನಗರ ನೌಬಾದ, ಬೀದರ ರರು ನೀಡಿದ ದೂರಿನ ಮೇರೆಗೆ ದಿನಾಂಕ 04-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 14/2021, ಕಲಂ. 457, 380 ಐಪಿಸಿ :-

ಫಿರ್ಯಾದಿ ಶೀವಕುಮಾರ ತಂದೆ ರಾಮಚಂದ್ರ ಜಮಾದಾರ ವಯ: 45 ವರ್ಷ, ಜಾತಿ: ಎಸ್.ಟಿ ಕೊಳಿ, ಸಾ: ಬಂಬಳಗಿ, ಸದ್ಯ: ಹೈದ್ರಾಬಾದ ರವರು ಸುಮಾರು 6 ತಿಂಗಳ ಹಿಂದೆ ಬಂಬಳಗಿಯಲ್ಲಿರುವ ಮ್ಮ ಮನೆಗೆ ಕೀಲಿ ಹಾಕಿ ಕೂಲಿ ಕೆಲಸ ಮಾಡಲು ನ್ನ ಹೆಂಡತಿ ಚಂದ್ರಕಲಾ ಇಬ್ಬರು ಕೂಡಿ ಹೈದ್ರಾಬಾದಗೆ ಹೋದಾಗ ದಿನಾಂಕ 04-02-2021 ರಂದು 0130 ಗಂಟೆಗೆ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಮನೆಯಲ್ಲಿ ಪ್ರವೇಶ ಮಾಡಿ ಮನೆಯ ಕಿಲಿ ಮುರಿದು ಮನೆಯಲ್ಲಿ ಒಂದು ಕಬ್ಬಿಣದ ಪೆಟ್ಟಿಗೆಯ ಒಳಗೆ ಟ್ಟ 1) ಒಂದು ಬಂಗಾರದ ತಾಳಿ ಗುಂಡು 10 ಗ್ರಾಂ ಅ.ಕಿ 25,000/- ರೂ., 2) ಮೊಮ್ಮಗಳ ಬಂಗಾರದ ಕೀವಿಯೊಲೆ 5 ಗ್ರಾಮ ಅ.ಕಿ 10,000/- ರೂ., 3) ಕಾಲಿಗೆ ಹಾಕುವ ಬೇಳ್ಳಿ ಚೈನ 20 ತೊಲೆ ಅ.ಕಿ 15,000/- ರೂ. ಹೀಗೆ ಒಟ್ಟು 50,000/- ರೂಪಾಯಿ ಕಿಮ್ಮತ್ತಿನ ಬೇಲೆ ಬಾಳುವ ಬಂಗಾರ ಮತ್ತು ಬೇಳ್ಳಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.