ಕೊಲೆ ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 26/04/2018 ರಂದು ಯಶರಾಜ ಮತ್ತು ಆತನ ಹೆಂಡತಿ ಅರ್ಚನಾ ಇಬ್ಬರು ಅರ್ಚನಾ ಅಕ್ಕ ಅನೀತಾ ಇವರ ಕಮಲ ನಗರದಲ್ಲಿ
ಇರುವ ಮನೆಗೆ ಹೋಗಿದ್ದು ರಾತ್ರಿ ನಮ್ಮ ಸೋಸೆ ಅರ್ಚನಾ ಇವಳು ನಮಗೆ ಅಂದಾಜು 10-30 ಗಂಟೆಯ ಸುಮಾರಿಗೆ ಫೋನ ಮಾಡಿ ಯಶರಾಜ ಇತನು ಬೆಳ್ಳಿಗೆ 11-00
ಗಂಟೆಗೆ ಬಾಂಬೆಗೆ ಹೋಗಲು ಬಸ್ ಟಿಕೇಟ ತರುತ್ತೆನೆ ಅಂತ ಹೇಳಿ ಮನೆಯಿಂದ ಹೋದವನು ಈಗಿನವರೆಗೆ
ಮನೆಗೆ ಬಂದಿರುವದಿಲ್ಲ ನಿಮ್ಮ ಕಡೆ ಬಂದಿರುತ್ತಾನೆ ಹೇಗೆ ಅಂತ ಕೇಳಿದಾಗ ನಾವು ನಮ್ಮ ಮನೆಗೆ
ಬಂದಿರುವುದಿಲ್ಲ ಅಂತ ತಿಳಿಸಿದೇವು. ನಮ್ಮ ಮಗನಿಗೆ ನಾವು ಎಲ್ಲಾ ಕಡೆ ಹುಡುಕಾಡಿದೇವು ಮಗನ ಬಗ್ಗೆ
ಯಾವುದೆ ಮಾಹಿತಿ ದೊರೆಯದೆ ಇರುವದರಿಂದ ನಮ್ಮ ಸೋಸೆ ಅರ್ಚನಾ ಇವಳು ಗ್ರಾಮೀಣ ಪೊಲೀಸ ಠಾಣೆಗ
ದಿನಾಂಕ 05/05/2018 ರಂದು ಹೋಗಿ ನಮ್ಮ ಮಗ ಕಾಣೆಯಾದ ಬಗ್ಗೆ ದೂರು
ನೀಡಿದ್ದು, ನಮ್ಮ ಸೊಸೆಯ ದೂರಿನ ಆಧಾರವಾಗಿ ಗ್ರಾಮೀಣ ಪೊಲೀಸ ಠಾಣೆ
ಪ್ರಕರಣ ದಾಖಲಾಗಿದ್ದು ಕಾಣೆಯಾದ ನಮ್ಮ ಮಗ ಯಶರಾಜ
ಈತನ ಪತ್ತೆ ಕಾರ್ಯಾದಲ್ಲಿ ಇರುವಾಗ 2019 ನೇ ಸಾಲಿನ ಫೆಬ್ರುವರಿ
ತಿಂಗಳಲ್ಲಿ ಒಂದು ದಿವಸ ನಮ್ಮ ಅಣ್ಣನಾದ ಶಿವಾನಂದ ಮಾಳಗಿ ಇವರು ನನಗೆ ಫೋನ ಮಾಡಿ ಯಶರಾಜನಿಗೆ
ಕಪನೂರ ಏರಿಯಾದವರಾದ 1] ನಿಂಗಪ್ಪ ತಂದೆ ಸಾಯಿಬಣ್ಣಾ ಕೊಳ್ಳುರು 2)
ಶಿವುಕುಮಾರ @ ಶಿವಪ್ಪ ತಂದೆ ತುಳಜಪ್ಪ ಹಂಗರಗಿ 3)
ಶಹಾಬೋದ್ದಿನ ತಂದೆ ಫತ್ರುಸಾಬ 4) ಸೂರ್ಯಕಾಂತ @
ಸೂರ್ಯ ತಂದೆ ಅಂಬಾರಯ ಬೆಳಕೋಟೆ 5) ಪ್ರಫುಲಕುಮಾರ @
ಪಪ್ಪು @ ದಾದಾ ತಂದೆ ಅರ್ಜುನ ಡಾಂಗೆ 6) ಶಿವಯೋಗಿ @ ಛೇ ತಂದೆ ಕುಪೇಂದ್ರ ಭಂಕೂರ 7) ಕಾಶಪ್ಪ ಹಂಗರಗಿ 8) ಪುಟ್ಯಾ 9) ಸುಭಾಷ
ಹಂಗರಗಿ ಹಾಗೂ ಇತರರು ಸೇರಿ ರಾಮನಗರ ರಿಂಗ ರೋಡ ಸಮರ್ಥ ವೈನಶಾಪ ಹತ್ತಿರ ಸರಾಯಿ ಕುಡಿಯಲು ಹೋದಾಗ
ಅಲ್ಲಿ ಇವರು ಯಶರಾಜ ನೊಂದಿಗೆ ಜಗಳ ತೆಗೆದು ಅವನಿಗೆ ಆಟೋದಲ್ಲಿ ಅಪಹರಿಸಿಕೊಂಡು ಹೋಗಿ ಕೊಲೆ ಮಾಡಿ
ಶವ ಹೂತಿಟ್ಟಿರುವ ಬಗ್ಗೆ ಚೌಕ ಪೊಲೀಸ ಠಾಣೆಯ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿಯಾದಾಗ ಪೊಲೀಸರ
ಮುಂದೆ ಒಪ್ಪಿಕೊಂಡಿರುವ ಬಗ್ಗೆ ಮತ್ತು ಈ ಸುದ್ದಿ ದಿನ ಪತ್ರಿಕೆಯಲ್ಲಿ ಬಂದಿರುವ ಬಗ್ಗೆ ನಮಗೆ
ತಿಳಿಸಿರುತ್ತಾರೆ. ನಂತರ ನಾವು ಸಹಿತ ಚೌಕ ಪೊಲೀಸ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ವಿಚಾರಿಸಿದಾಗ
ನಮ್ಮ ಮಗನಿಗೆ ಇವರು ಅಪಹರಿಸಿ ಕೊಲೆ ಮಾಡಿ ಶವ
ಹೂತಿಟ್ಟಿರುವ ಬಗ್ಗೆ ವಿಚಾರಣೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ ಎಂದು ತಿಳಿಸಿರುತ್ತಾರೆ . ಕಾರಣ
ನಮ್ಮ ಮಗನಿಗೆ ಅಪಹರಿಸಿ ಕೊಲೆ ಮಾಡಿ ಶವವನ್ನು ಹೂತಿಟ್ಟಿರುವ ಈ ಮೇಲ್ಕಂಡವ ವಿರುದ್ದ ಕಾನೂನು
ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನಾಗಮ್ಮಾ ಗಂಡ ಭಾಸ್ಕರ ಆಳಗೇರಾ ಸಾ:ತಾರಾಪೂರ ಮುಂಬಯಿ
ಹಾ:ವ:ಶಿವಶಕ್ತಿ ನಗರ ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ :
ಚೌಕ ಠಾಣೆ
: ಶ್ರೀ ಅಂಬಾರಾಯ
ತಂದೆ ಶ್ರೀಮಂತರಾಯ ಕೆರೂರ ಸಿ.ಪಿ.ಸಿ 1133 ಸಾ : ಸಂಚಾರಿ ಪೊಲಿಸ್ ಠಾಣೆ-2 ಕಲಬುರಗಿ ರವರು ದಿನಾಂಕ
: 04-05-2019 ರಂದು ಸಾಯಂಕಾಲ 7=00 ಗಂಟೆಯಿಂದ ರಾತ್ರಿ 10=00 ಗಂಟೆ ವರೆಗೆ ಚೌಕ ಸರ್ಕಲ್ ಸಂಚಾರಿ
ಪಾಯಿಂಟ ಕರ್ತವ್ಯದ ಮೇಲೆ ಇರುವಾಗ ರಾತ್ರಿ 8=20 ಗಂಟೆ ಸುಮಾರಿಗೆ ಒಂದು ಮೋಟರ ಸೈಕಲ್ ಸವಾರ ತನ್ನ
ಮೋಟರ ಸೈಕಲ್ ಮೇಲೆ ಹಿಂದೆ ಒಬ್ಬರಿಗೆ ಕೂಡಿಸಿಕೊಂಡು ಹುಮನಾಬಾದ ಬೇಸ್ ರೋಡ ಕಡೆಯಿಂದ ಚಲಾಯಿಸಿಕೊಂಡು
ಬಂದು ಚೌಕ ಸರ್ಕಲ್ ಹತ್ತಿರ ಒಮ್ಮೇಲೆ ತನ್ನ ಮೋಟರ
ಸೈಕಲ್ ಅಡ್ಡ ಹಚ್ಚಿ ನಿಲ್ಲಿಸಿ ಟ್ರಾಫಿಕ್ ಚಾಮ್ ಮಾಡಿದ್ದರಿಂದ ಅದನ್ನು ನೋಡಿ ನಾನು ಸುಗಮ ಸಂಚಾರಗೊಳಿಸುವ
ಕುರಿತು ಮೋಟರ ಸೈಕಲ್ ಸವಾರನ ಹತ್ತಿರ ಹೋಗಿ ಮೋಟರ ಸೈಕಲ್ ರಸ್ತೆ ಪಕ್ಕದಲ್ಲಿ ತೆಗೆದುಕೊಳ್ಳಲು ಹೇಳಿದಾಗ
ನೀ ಏನು ಕೇಳುತ್ತಿ ಬೋಸಡಿ ಮಗನೆ ಅಂತಾ ಬೈದು ನನ್ನ ಕಪಾಳದ ಮೇಲೆ 3-4 ಸಲ ಹೊಡೆಯುತ್ತಿದ್ದಾಗ ಶರಣು
ಪಪ್ಪು ಮತ್ತು ಶಿವಪ್ರಭು ಪಾಟೀಲ ಸಾ : ಮಹಾಗಾಂವ ಇವರು ಬಂದು ಆತನಿಗೆ ಹಿಡಿದು ಬಿಡಿಸುತ್ತಿದ್ದಾಗ
ಆತನು ನೀನು ದಿನಾಲು ಇಲ್ಲಿಯೇ ನೌಕರಿ ಮಾಡಲು ಬರುತ್ತಿ ಮಗನೇ ನಿನಗೆ ಬಿಡಲ್ಲಾ ನಿನಗೆ ಖಲಾಸ ಮಾಡಿ ಬಿಡುತ್ತಿನಿ ಅಂತಾ ನನಗೆ ಜೀವ ಬೆದರಿಕೆ
ಹಾಕಿರುತ್ತಾನೆ. ಅಷ್ಠರಲ್ಲಿ ಆತನ ಜೊತೆಗೆ ಇರುವವನು
ಮೋಟರ ಸೈಕಲ್ ತೆಗೆದುಕೊಂಡು ಹೊರಟು ಹೋದನು. ನನಗೆ ಹೊಡೆದವನು ಹೆಸರು ವಿಚಾರಿಸಲು ಆತನ ಹೆಸರು ಆನಂದ ತಂದೆ ರಾಮಚಂದ್ರ ಮೋರೆ ಸಾ : ಪುಟಾಣಿ
ಗಲ್ಲಿ ಕಲಬುರಗಿ ಅಂತಾ ಹೇಳಿದನು. ಕಾರಣ ಆನಂದ ತಂದೆ ರಾಮಚಂದ್ರ ಮೋರೆ ಈತನು ಮೋಟರ ಸೈಕಲ್ ಚಲಾಯಿಸಿಕೊಂಡು
ಬಂದು ಚೌಕ್ ಸರ್ಕಲ್ ಹತ್ತಿರ ಸಾರ್ವಜನಿಕ ರೋಡ ಮೇಲೆ ಮೋಟರ ಸೈಕಲ್ ಅಡ್ಡ ಹಚ್ಚಿ ನಿಂತು ಟ್ರಾಫಿಕ್
ಜಾಮ್ ಮಾಡಿ ಕರ್ತವ್ಯದ ಮೇಲೆ ಇರುವ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕಪಾಳಕ್ಕೆ ಹೊಡೆದು ಜೀವ
ತೆಗೆಯುವ ಬೇದರಿಕೆ ಹಾಕಿ ನನ್ನ ಮೇಲೆ ಹಲ್ಲೆ ಮಾಡಿ ಆನಂದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.