ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-02-2020
ಗಾಂಧಿಗಂಜ ಪೊಲೀಸ್ ಠಾಣೆ ಬೀದರ
ಅಪರಾಧ ಸಂ. 13/2020, ಕಲಂ. 419, 420, 421, 423, 424, 465, 468,
471 ಜೊತೆ 120 ಐಪಿಸಿ
:-
ದಿನಾಂಕ 27-01-2020 ರಂದು ಬಸವರಾಜ ತಂದೆ
ಸಂಗಪ್ಪಾ ಸ್ವತಂತ್ರ ಹಿರಿಯ ಪ್ರಾಥಮೀಕ ಶಾಲೆ ಹಾರೂಗೇರಿ ಬೀದರದಲ್ಲಿ ಸಿ.ಪಿ.ಎ.ಡಿ ಶಿಕ್ಷಕನೆಂದು
ದಿನಾಂಕ
02-07-1988 ರಂದು ನೇಮಕಗೊಂಡು
ಅಕ್ಟೋಬರ
2005 ನೇ
ಸಾಲಿನವರೆಗೆ ಕರ್ತವ್ಯ ನಿರ್ವಹಿಸಿ 2005 ನೇ ಸಾಲಿನಿಂದ ಅನಧೀಕೃತ ಗೈರು ಹಾಜರಾಗಿದ್ದು ಈ
ಬಗ್ಗೆ ಬಿಇಓ ಮತ್ತು ಡಿ.ಡಿ.ಪಿ.ಐ ರವರಿಗೆ ಈ ಹಿಂದೆ ಮಾಹಿತಿ
ಸಲ್ಲಿಸಲಾಗಿತ್ತು, ನಂತರ ತಿಳಿದು ಬಂದಿದ್ದೆನೆಂದರೆ ಬಸವರಾಜ ತಂದೆ ಸಂಗಪ್ಪಾ ಇವರಿಗೆ ಬಿ.ಇ.ಓ. ಮತ್ತು ಡಿ.ಡಿ.ಪಿ.ಐ ರವರು ಸುಳ್ಳು
ಸೇವಾ ಪುಸ್ತಕ ಸೃಷ್ಟಿಸಿ ಅವರನ್ನು ಹೆಚ್ಚುವರಿ ಶಿಕ್ಷಕನೆಂದು ಬಸವತಿರ್ಥ ವಿದ್ಯಾಪೀಟ ಹಳ್ಳಿಖೆಡ(ಬಿ)ಗೆ ವರ್ಗಾಯಿಸಿ
ಸಂಬಂಳ ಸಂದಾಯ ಮಾಡುತ್ತಿದ್ದು ಇರುತ್ತದೆ, ನಂತರ ಶಿವಮೂರ್ತಿ ತಂದೆ ಮಾಣಿಕಪ್ಪಾ ಸಹಾಯಕ ಶಿಕ್ಷಕರು
ಸ್ವತಂತ್ರ ಹಿರಿಯ ಪ್ರಾಥಮೀಕ ಶಾಲೆ ಹಾರೂರಗೇರಿಯಲ್ಲಿ ಶಿಕ್ಷಕನೆಂದು ನೇಮಕಗೊಂಡು ನಂತರ ಸಂಸಾರಿಕ ಕಲಹದಿಂದ 1992 ರಿಂದ 1999 ರವರೆಗೆ ಗೈರು ಹಾಜರಾಗಿರುತ್ತಾರೆ,
ನಂತರ ಶಿವಮೂರ್ತಿ ಇವರು ಜಿಲ್ಲಾ ಮೇಲ್ಮನವಿ ಟ್ರಿಬೂನಲ್ ನಲ್ಲಿ ದಾವೇ ಸಂ. ಇ.ಎ.ಟಿ. ನಂ. 28/2005 ನೇದ್ದನು ಹುಡಿದ್ದು
ಅದನ್ನು ದಿನಾಂಕ
01-01-2008 ರಂದು ವಜಾಗೊಂಡಿರುತ್ತದೆ
ಪುನಃ ಪರಿಶಿಲಿನಾ ಅರ್ಜಿ ಸಂ. 10/2008 ನೇದ್ದು ಸಲ್ಲಿಸಿದ್ದು ಅದು
ಸಹ ವಜಾ ಗೊಂಡಿದ್ದು, ಆಗಿನ ಬಿ.ಇ.ಓ ಮತ್ತು ಡಿ.ಡಿ.ಪಿ.ಐ ರವರು ಸುಳ್ಳು
ಸೇವಾ ಪುಸ್ತಕ ಸೃಷ್ಠಿಸಿ ಹೆಚ್ಚುವರಿ ಶಿಕ್ಷಕರೆಂದು ರಮಾಬಾಯಿ ಅಂಬೇಡ್ಕರ ಹಿರಿಯ ಪ್ರಾಥಮೀಕ ಶಾಲೆ
ಕಮಠಾಣಾಕ್ಕೆ ವರ್ಗಾವಣೆ ಮಾಡಿದ್ದು ಅದೇ ರೀತಿ ಸಾವಿತ್ರಿ ಇವರು 01-06-1997 ರಲ್ಲಿ ಸ್ವತಂತ್ರ
ಹಿರಿಯ ಪ್ರಾಥಮೀಕ ಶಾಲೆ ಅಂಬೇಡ್ಕರ ಕಾಲೋನಿ ಹಾರೂರಗೇರಿ ಬೀದರ ರವರು ದಿನಾಂಕ 01-06-1987 ರಂದು ನೇಮಕಗೊಂಡು
ಅದೇ ದಿನದಿಂದ ಗೈರು ಹಾಜರಾಗಿರುತ್ತಾರೆ ಆಗಿನ ಬಿ.ಇ.ಓ. ಮತ್ತು ಡಿ.ಡಿ.ಪಿ.ಐ. ರವರು ಸುಳ್ಳು ಸೇವಾ
ಪುಸ್ತಕ ಸೃಷ್ಠಿಸಿ ಸಿದ್ದಾರಾಮೇಶ್ವರ ಹಿರಿಯ ಪ್ರಾಥಮೀಕ ಶಾಲೆ ಚಿತ್ತಾಪೂರ ಶಾಹಾಬಾದಕ್ಕೆ ವರ್ಗಾವಣೆ
ಮಾಡಿದ್ದು, ಸದ್ಯ ಅವರು ಅಲ್ಲಿ ಸೇವೆ ಸಲ್ಲಿಸುತ್ತಿದ್ದು ಮತ್ತು ಸಂಬಳವನ್ನು ಸಹ ಪಡೆಯುತ್ತಿದ್ದಾರೆ
ಕಾರಣ
1) ಬಸವರಾಜ, 2) ಶಿವಮುರ್ತಿ, 3) ಸಾವಿತ್ರಿ ಹಾಗೂ
4)
ಸಿದ್ರಾಮಪ್ಪಾ
ನಿವೃತ ಬಿ.ಇ,ಓ ರವರ ವಿರುದ್ದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ.
11/2020, ಕಲಂ. 317 ಐಪಿಸಿ :-
ದಿನಾಂಕ
27-01-2020 ರಂದು 1400 ಗಂಟೆಗೆ ಪಿüರ್ಯಾದಿ ಪ್ರಕಾಶ ತಂದೆ ಮೈಲಾರಿ ಕಾಡಗೊಂಡ ಸಾ: ಸೋನಕೇರಾ ರವರು ತಮ್ಮೂರಿನಿಂದ ಹುಮನಾಬಾದಕ್ಕೆ ಬರುವಾಗ ತಮ್ಮೂರ ರವಿ ಕುಂಬಾರ ರವರ ಹೊಲದ ಬೇಲಿಯಲ್ಲಿ ಒಂದು ಶಿಶು ಅಳುವ ಶಬ್ದ ಕೇಳಿ ಹತ್ತಿರ ಹೋಗಿ ನೋಡಲು ಯಾರೋ ಅಪರಿಚಿತರು ಒಂದು ಹೆಣ್ಣು ಮಗುವಿಗೆ 4-5 ಗಂಟೆಗೆಳ ಹಿಂದೆ ಜನ್ಮ ನೀಡಿ ಬಿಟ್ಟು ಹೋದಂತೆ ಕಂಡು ಬಂದಿರುತ್ತದೆ, ಸದರಿ ಮಗುವಿಗೆ ಮೈ ತುಂಬ ಕೆಂಪು ಇರುವೆಯಾಗಿ ಅತಿಯಾಗಿ ಅಳುತ್ತಿರುವುದರಿಂದ ಮಗುವಿಗೆ ಹುಮನಾಬಾದ ಸರಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 12/2020, ಕಲಂ.
279, 338 ಐಪಿಸಿ :-
ದಿನಾಂಕ 27-0-2020 ರಂದು ಫಿರ್ಯಾದಿ ಬಳಿರಾಮ ತಂದೆ ವಿಠಲ ಹೈಬತೆ ವಯ 45 ವರ್ಷ, ಜಾತಿ: ಕುರುಬ, ಸಾ: ಸೋನಕೇರಾ, ತಾ: ಹುಮನಾಬಾದ ರವರು ತಮ್ಮ ಹೊಲದಲ್ಲಿ ಜನರಿಗೆ ಕೆಲಸಕ್ಕೆ ಹಚ್ಚಿದ್ದು, ಮಧ್ಯಾಹ್ನ ತಮ್ಮ ಅರ್ಜುನ ತಂದೆ ವಿಠಲ ಹೈಬತೆ ಇವನು ಕೂಲಿ ಕೆಲಸಕ್ಕೆ ಬಂದ ಜನರಿಗೆ ಕೊಡಲು ಹಣ ತರಲು ತನ್ನ ಮೋಟಾರ್ ಸೈಕಲ್ ಸಂ.
ಕೆಎ-39/ಆರ್-8120 ನೇದನ್ನು
ಚಲಾಯಿಸಿಕೊಂಡು ದುಬಲಗುಂಡಿ ಗ್ರಾಮಕ್ಕೆ ಹೋಗಿ ಎ.ಟಿ.ಎಮ್ ನಿಂದ ಹಣ ತೆಗೆದುಕೊಂಡು ಬರಲು
ಹೋಗಿ ಎ.ಟಿ.ಎಮ್ ನಿಂದ ಹಣ ತೆಗೆದುಕೊಂಡು ಮರಳಿ ಬರುವಾಗ ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಚಂದನಹಳ್ಳಿ ಕ್ರಾಸ್ ಹತ್ತಿರ ಬಂದು ತನ್ನ ಮೋಟಾರ್ ಸೈಕಲ್ ಸ್ಕೀಡ್ ಆಗಿ ತನ್ನಿಂದ ತಾನೆ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾನೆ,
ಕಾರಣ ಸದರಿ ಅಪಘಾತದಿಂದ ಆತನ ತಲೆಗೆ ತೀವ್ರ ರಕ್ತಗಾಯವಾಗಿ ಎರಡು ಕೀವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ, ನಂತರ
ಆತನಿಗೆ ತಮ್ಮನಿಗೆ
ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ
ಸಂ. 29/2020, ಕಲಂ. 279, 337, 338 ಐಪಿಸಿ :-
ದಿನಾಂಕ 27-01-2020 ರಂದು ಫಿರ್ಯಾದಿ ಸಂಗಮೇಶ ತಂದೆ ಗುರುನಾಥ, ಬೆಂಬಳಗೆ ವಯ: 26 ವರ್ಷ, ಜಾತಿ: ಲಿಂಗಾಯತ, ಸಾ: ಶರಣ ನಗರ ಅಗ್ನಿ ಶಾಮಕ ಠಾಣೆ ಹತ್ತಿರ, ಭಾಲ್ಕಿ ರವರು ತನ್ನ ಮೊಟಾರ್ ಸೈಕಲ ನಂ. ಕೆಎ-39/ಕೆ-5916 ನೇದ್ದರ ಹಿಂದೆ ತಮ್ಮ ತಾಯಿ ಸುಷಿಲಾಬಾಯಿ ವಯ: 65 ವರ್ಷ ರವರಿಗೆ ಕೂಡಿಸಿಕೊಂಡು ಶಿವಾಜಿ ಚೌಕ ಮುಖಾಂತರ ಹೋಗುತ್ತಿರುವಾಗ ಅಡತ ಹನುಮಾನ ಮಂದಿರದ ಹತ್ತಿರ ರಸ್ತೆಯ ಮೇಲೆ ಎದುರಿನಿಂದ ಒಂದು ಟಿ.ವಿ.ಎಸ. ಎಕ್ಸ.ಎಲ ಮೊಪೆಡ ನಂ. ಕೆಎ-39/ಆರ್-9583 ನೇದ್ದರ ಚಾಲಕನಾದ ಆರೋಪಿ ಧೊಂಡಿಬಾ ತಂದೆ ನಾಗಪ್ಪಾ ಗಾಯಕವಾಡ ಸಾ: ಕುರುಬಖೇಳಗಿ ಇತನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತದನಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೊಟಾರ್ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಗೆ ಎಡಗಾಲ ಪಾದದ ಮೇಲ್ಭಾಗದಲ್ಲಿ ಕಾಲು ಮುರಿದ ಭಾರಿ ಗಾಯ, ಎಡ ಭುಜದಲ್ಲಿ ಗುಪ್ತಗಾಯವಾಗಿರುತ್ತದೆ, ತಾಯಿ ಸುಷಿಲಾಬಾಯಿಗೆ ಬಲ ಭುಜದಲ್ಲಿ ಗುಪ್ತಗಾಯವಾಗಿರುತ್ತದೆ, ನಂತರ ಯಾರೋ 108 ಅಂಬುಲೆನ್ಸಗೆ ಕರೆ ಮಾಡಿದ್ದು ಅದರಲ್ಲಿ ಕುಳಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ
ನಗರ ಪೊಲೀಸ್ ಠಾಣೆ ಅಪರಾಧ ಸಂ. 30/2020, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಶಿರಿನಬೇಗಂ ಗಂಡ ಎಂ.ಡಿ ಇಬ್ರಾಹಿಂ ಲಕಡಿವಾಲೆ
ವಯ: 21 ವರ್ಷ, ಸಾ: ಹಿರೆಮಠ ಗಲ್ಲಿ ಭಾಲ್ಕಿ ರವರ ಗಂಡನಾದ ಎಂ.ಡಿ ಇಬ್ರಾಹಿಂ ಇವರು ಆಟೋ ಚಲಾಯಿಸಿಕೊಂಡಿದ್ದು,
ಗಂಡ ದಿನಾಂಕ 20-01-2020 ರಂದು 0900 ಗಂಟೆಗೆ ಆಟೋ ತೆಗೆದುಕೊಂಡು ಹೋಗಿದ್ದು,
ನಂತರ 1100 ಗಂಟೆಗೆ ಗಂಡನಿಗೆ ಕರೆ ಮಾಡಿದಾಗ ಫೋನ ಬಂದ ಆಗಿರುತ್ತದೆ, ಅವರು 2100 ಗಂಟೆಯಾದರೂ
ಮನೆಗೆ ಬಂದಿರುವದಿಲ್ಲ,
ನಂತರ ಫಿರ್ಯಾದಿಯು ತಮ್ಮ
ಸಂಬಂಧಿಕರಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ, ಗಂಡನ ಚಹರೆ ಪಟ್ಟಿ ದುಂಡು ಮುಖ, ಗೋಧಿ ಮೈಬಣ್ಣ, ನೆಟ್ಟಗೆ ಮೂಗು, ದೃಢವಾದ ಮೈಕಟ್ಟು ಇದ್ದು ಮನೆಯಿಂದ ಹೋಗುವಾಗ ಮೈಮೆಲೆ ಬ್ರೌನ ಕಲರ ಶರ್ಟ, ಕಪ್ಪು ಬಣ್ಣದ ಪ್ಯಾಂಟ ಧರಿಸಿರುತ್ತಾರೆ, ಕಾರಣ ಗಂಡ ಎಂ.ಡಿ ಇಬ್ರಾಹಿಂ ಅವರ ಬಗ್ಗೆ
ಸಾಕಷ್ಟು ಹುಡುಕಾಡಿ ಎಲ್ಲಾ ಕಡೆ ವಿಚಾರಿಸಲಾಗಿ ಯಾವುದೆ ಸುಳಿವು ಸಿಕ್ಕಿರುವದಿಲ್ಲ ಎಲ್ಲೋ
ಕಾಣೆಯಾಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-01-2020
ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.