¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 23-07-2018
ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್
ನಂ. 14/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಅಂಬಿಕಾ ಗಂಡ ದಯಾನಂದ ಚನ್ನುರ ವಯ: 30 ವರ್ಷ, ಜಾತಿ: ಟೊಕರಿ ಕೊಳಿ, ಸಾ: ಕೂಡಂಬಲ, ತಾ: ಹುಮನಾಬಾದ ರವರ ಗಂಡ ದಯಾನಂದ ರವರು ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾರೆ, ಫಿರ್ಯಾದಿಯವರ ಅತ್ತೆಯಾದ ಜಗದೇವಿ ರವರ ಹೆಸರಿನಲ್ಲಿ ಕೂಡಂಬಲ ಗ್ರಾಮದ ಹೊಲ ಸರ್ವೆ ನಂ. 39 ರಲ್ಲಿ
3 ಎಕ್ಕರೆ
36 ಗುಂಟೆ ಮತ್ತು ಮಾವನವರ ಹೆಸರಿನಲ್ಲಿ ಸರ್ವೆ ನಂ. 22 ರಲ್ಲಿ
3 ಎಕ್ಕರೆ
11 ಗುಂಟೆ
ಜಮೀನು ಇರುತ್ತದೆ, ಸದರಿ ಜಮೀನು ಸಾಗುವಳಿ ಮಾಡಲು ಫಿರ್ಯಾದಿಯವರ ಗಂಡ ಅತ್ತೆ ಮಾವನವರ ಹೆಸರಿನಲ್ಲಿ ಕೂಡಂಬಲ ಪಂಜಾಬ ನ್ಯಾಶನಲ್ ಬ್ಯಾಂಕಿನಲ್ಲಿ
70,000/-
ರೂಪಾಯಿ ಸಾಲ ಮಾಡಿ ಸದರಿ ಜಮೀನು ಸಾಗುವಳಿ ಮಾಡಿರುತ್ತಾರೆ, ಸದರಿ ಹೊಲದಲ್ಲಿ ಹೊದ ವರ್ಷ ಬೆಳೆಗಳು ಸರಿಯಾಗಿ ಬೇಳೆದಿರುವುದಿಲ್ಲಾ, ಗಂಡ ಬ್ಯಾಂಕಿನಿಂದ ತಂದ ಸಾಲ ಹೇಗೆ ತಿರಿಸುವುದು ಅಂತಾ ಆಗಾಗ ಗೋಳಾಡುತ್ತಿದ್ದರು ಮತ್ತು ಆಗಾಗ ಸರಾಯಿ ಕುಡಿಯುವ ಕುಡಿಯುತ್ತಿದ್ದರು, ಹೀಗಿರುವಾಗ ದಿನಾಂಕ 22-07-2018
ರಂದು ಗಂಡ ಪ್ರತಿನಿತ್ಯದಂತೆ ಮುಂಜಾನೆ ಹೊಲಕ್ಕೆ ಹೋಗಿ ಕೆಲಸ ಮಾಡಿಕೊಂಡು ನಂತರ ಸಾಯಂಕಾಲ ಮನೆಗೆ ಬಂದಿರುತ್ತಾರೆ, ಫಿರ್ಯಾದಿಯು ಪಕ್ಕದ ಮನೆಯಲ್ಲಿ ಹೊದಾಗ ಮನೆಯಲ್ಲಿ ಗಂಡ ಹೊಲದಲ್ಲಿನ ಬೇಳೆಗಳಿಗೆ ಹೊಡೆಯುವ ಕ್ರೀಮಿನಾಶಕ ಔಷಧಿ ಸೇವನೆ ಮಾಡಿ ವಾಂತಿ ಮಾಡುತ್ತಿದ್ದಾಗ ಫಿರ್ಯಾದಿ ಮತ್ತು ಮನೆಯ ಪಕ್ಕದವರಾದ ನರಸಮ್ಮಾ ಮತ್ತು ಇತರರು ನೋಡಿ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದಾಗ ಚಿಕಿತ್ಸೆ ಫಲಕಾರಿಯಾಗದೆ ಫಿರ್ಯಾದಿಯವರ ಗಂಡ ಚಿಟಗುಪ್ಪಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಅವರು ಬ್ಯಾಂಕಿನಿಂದ ತೆಗೆದ ಸಾಲ ಹೇಗೆ ಕಟ್ಟುವುದು ಬೆಳೆಗಳು ಸರಿಯಾಗಿ ಬೆಳೆದಿಲ್ಲಾ ಅಂತಾ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕ್ರೀಮಿನಾಶಕ ಔಷಧಿ ಸೇವಿಸಿ ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ತರಹದ ಸಂಶಯ ವಗೈರೆ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.