ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-07-2021
ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 58/2021, ಕಲಂ. 323, 324, 354(B) 504, 506 R/w 34 IPC And 3(1)(r), 3(1)(s), 3(2) (va) SC/ST Act 1989 :-
ದಿನಾಂಕ 08-07-2021 ರಂದು 1205 ಗಂಟೆಗೆ ಆರೋಪಿತರಾದ 1) ಮಾಲಬಾ ತಂದೆ ರಾಮ ಪಾಂಡರವಾಡೆ ವಯ: 30 ವರ್ಷ, ಜಾತಿ: ಮರಾಠಾ, 2) ಅಂಕೋಶ ತಂದೆ ರಾಮ ಪಾಂಡವಾಡೆ ವಯ: 32 ವರ್ಷ, ಜಾತಿ: ಮರಾಠಾ ಇಬ್ಬರು ಸಾ: ಕಾಳಗಾಪುರ ಇವರಿಬ್ಬರು ಫಿರ್ಯಾದಿ ಸುರೇಖಾ ಗಂಡ ವಿಜಯಕುಮಾರ ಸಿಂಧೆ ವಯ: 30 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಕಾಳಗಾಪೂರ ರವರ ಮನೆಗೆ ಬಂದು ಮನೆಯ ಬಾಗಿಲನ್ನು ಬಡಿದು ನಿಮಗೆ ಹೊಡೆದು ಹಾಕುತ್ತೆನೆ, ಎಲ್ಲಿಬಿ ಹೊದರು ನಿಮಗೆ ಬಿಡುವುದಿಲ್ಲಾ ಅಂತ ಫಿರ್ಯಾದಿಯವರ ತಾಯಿಗೆ, ಅಕ್ಕನಿಗೆ, ತಂಗಿಗೆ ಅವಾಚ್ಯವಾಗಿ ಬೈದು ಫಿರ್ಯಾದಿಯ ಸಿರೆ ಹಿಡಿದು ಎಳೆದಾಡಿ ಕೈಹಿಡಿದು ನೂಕಿದ್ದು ಇರುತ್ತದೆ, ಆವಾಗ ಫಿರ್ಯಾದಿಯು ಕಿರುಚಿಕೊಂಡಾಗ ಬಡಿಗೆ ತಗೆದುಕೊಂಡು ಬಂದು ಮಾಲಬಾ ಇತನು ಫಿರ್ಯಾದಿಯ ಗಂಡನ ಬೆನ್ನಿನಲ್ಲಿ ಹೊಡೆದು ಗುಪ್ತಗಾಯ ಪಡಿಸಿ, ನಂತರ ಅಂಕೋಶ ಇತನು ವಿಜಯಕುಮಾರಗೆ ಹೊಡೆಯುತ್ತೆನೆ ಎಲ್ಲಿ ಇದ್ದಾನೆ ಅಂತಾ ಬೆದರಿಕೆ ಹಾಕಿದ್ದು ಇರುತ್ತದೆ, ನಂತರ ಫಿರ್ಯಾದಿಯು ಅಕ್ಕಳಾದ ಶೋಭಾ ಗಂಡ ಭರತ ಸಿಂಧೆ ಇವರಿಗೆ ಕರೆ ಮಾಡಿ ಕರೆಸಿದಾಗ ಅವರು ಹಾಗೂ ಅರ್ಚನಾ ಗಂಡ ಲಕ್ಷ್ಮೀಣ ಸಿಂಧೆ, ಗುರು ತಂದೆ ರಾಮರಾವ ಸುರ್ಯವಂಶಿ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೇಹಕರ ಪೊಲೀಸ್ ಠಾಣೆ ಅಪರಾಧ ಸಂ. 34/2021, ಕಲಂ. ಮನುಷ್ಯ ಕಾಣೆ (ಮಹಿಳೆ ಕಾಣೆ) :-
ದಿನಾಂಕ 07-07-2021 ರಂದು 1130 ಗಂಟೆಗೆ ಫಿರ್ಯಾದಿ ರಾಜಕುಮಾರ ತಂದೆ ಏಕನಾಥರಾವ ಪವಾರ ವಯ: 52 ವರ್ಷ, ಜಾತಿ: ಮರಾಠಾ, ಸಾ: ಸಾಯಗಾಂವ ರವರ ಮಗಳಾದ ಕಲ್ಪನಾ @ ಪಲ್ಲವಿ ಗಂಡ ನಾಮದೇವ ಬಿರಾದಾರ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೆ ಮನೆಯಿಂದ ಹೋಗಿರುತ್ತಾಳೆ, ಹೋಗುವಾಗ ಮನೆಯಲ್ಲಿ ಮಂಗಳಸೂತ್ರ ಮತ್ತು ಡೆತ ನೋಟ ಬರೆದಿಟ್ಟು ಹೋಗಿರುತ್ತಾಳೆ, ನಂತರ ಫಿರ್ಯಾದಿಯು ತಮ್ಮ ಮಗಳನ್ನು ನಮ್ಮೂರಲ್ಲಿ ಮತ್ತು ಇತರೆ ಸುತ್ತು-ಮುತ್ತ ಹಳ್ಳಿಗಳಲ್ಲಿ ಹುಡುಕಾಡಲು ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 08-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಖಟಕಚಿಂಚೊಳಿ ಪೊಲೀಸ್ ಠಾಣೆ ಅಪರಾಧ ಸಂ. 52/2021, ಕಲಂ. 379 ಐಪಿಸಿ :-
ಫಿರ್ಯಾದಿ ಅರುಣಕುಮಾರ ತಂದೆ ರಾಮಶೇಟ್ಟಿ ಅಲಶೆಟ್ಟಿ ವಯ: 47 ವರ್ಷ, ಜಾತಿ: ಲಿಂಗಾಯ, ಸಾ: ಖಟಕ ಚಿಂಚೋಳಿ ರವರ ಮೋಟಾರ ಸೈಕಲ ನಂ. ಕೆಎ-39/ಜೆ-7858 ನೇದನ್ನು ತನ್ನ ಮನೆಯ ಮುಂದೆ ಇರುವ ಸಿಸಿ ರಸ್ತೆಯ ಮೇಲೆ ನಿಲ್ಲಿಸಿರುವುದನ್ನು ದಿನಾಂಕ 02-07-2021 ರಂದು 2230 ಗಂಟೆಯಿಂದ 03-07-2021 ರಂದು 0700 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರಗೆ ದಿನಾಂಕ 08-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.