Police Bhavan Kalaburagi

Police Bhavan Kalaburagi

Friday, July 9, 2021

BIDAR DISTRICT DAILY CRIME UPDATE 07-07-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 07-07-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 40/2021, ಕಲಂ. ಮನುಷ್ಯ ಕಾಣೆ :-

ದಿನಾಂಕ 02-07-2021 ರಂದು 1200 ಗಂಟೆಯ ಸುಮಾರಿಗೆ ಫಿರ್ಯಾದಿ ರೋಬಿನ ತಂದೆ ಶರಣಪ್ಪಾ ಮೆತ್ರೆ ವಯ: 32 ವರ್ಷ, ಜಾತಿ: ಕ್ರಿಶ್ಚಿನ, ಸಾ: ನಾವದಗೇರಿ ಬೀದರ ರವರ ಹೆಂಡತಿಯಾದ ಸವೀತಾ ಗಂಡ ರೋಬಿನ ವಯ: 27 ವರ್ಷ ಇವಳು ಬೀದರ ನಗರದ ನಾವದಗೇರಿಯಲ್ಲಿರುವ ತಮ್ಮ ಮನೆಯಿಂದ ಹೋದವಳು ಮರಳಿ ಮನೆಗೆ ಬರದೆ ಕಾಣೆಯಾಗಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 06-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 118/2021, ಕಲಂ. 379 ಐಪಿಸಿ :-

ದಿನಾಂಕ 17-06-2021 ರಂದು 1830 ಗಂಟೆಯ ಸುಮಾರಿಗೆ ಫಿರ್ಯಾದಿ ಸಚೀನ ತಂದೆ ಆಕಾಶ ಕಾಯಿಕಿಣಿ ವಯ: 25 ವರ್ಷ, ಜಾತಿ: ಎಸ್.ಸಿ. ಮಾದಿಗ, ಸಾ: ಯರಬಾಗ, ಸದ್ಯ: ತಾಜ ಕಾಲೋನಿ ಬಸವಕಲ್ಯಾಣ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-56/ಜೆ-4201, ಚಾಸಿಸ್ ನಂ. MBLHAR071JHG41004, ಇಂಜಿನ್ ನಂ. HA10AGJHG48960, ಬಣ್ಣ, ಕಪ್ಪು ಬಣ್ಣ ಹಾಗೂ ಅ.ಕಿ 40,000/- ರೂ. ನೇದನ್ನು ಶಿವಾಜಿನಗರ ರೋಡಿಗೆ ಇರುವ ಸಿ.ಎಮ್.ಎಮ್ ಬಿ.ಎಡ್. ಕಾಲೇಜ್ ಹತ್ತಿರ ಮೈಕ್ರೋ ಫೈನಾನ್ಸ್ ಎದುರುಗಡೆ ನಿಲ್ಲಿಸಿ ತಾನು ಮೇಲೆ ಹೋಗಿ ತನ್ನ ಕೆಲಸ ಮುಗಿಸಿಕೊಂಡು ಮರಳಿ 1945 ಗಂಟೆಗೆ ತಾನು ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲು ತನ್ನ ಮೋಟಾರ ಸೈಕಲ್ ಇರಲಿಲ್ಲ, ನಂತರ ತನ್ನ ವಾಹನವನ್ನು ಎಲ್ಲಾ ಕಡೆಗೆ ಹುಡುಕಾಡಿದೂರ ಸಹ ಸಿಕ್ಕಿರುವುದಿಲ್ಲ, ಸದರಿ ವಾಹನವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 06-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: