ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 06-07-2021
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 116/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 05-07-2021 ರಂದು ಭಾಲ್ಕಿ ನಗರದ ಎ.ಪಿ.ಎಂ.ಸಿ ಹಿಂದುಗಡೆ ವಾಸವಾಗಿರುವ ಸುಡುಗಾಡ ಸಿದ್ದ ಜನಾಂಗದವರು ವಾಸವಾದ ಗುಡಿಸಲುಗಳ ಹತ್ತಿರ ಒಬ್ಬ ವ್ಯಕ್ತಿ ತಮ್ಮ ಹತ್ತಿರ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸರಕಾರದಿಂದ ಅನುಮತಿ ಪಡೆಯದೇ ಅನಧೀಕೃತವಾಗಿ ಸಿಂದಿ ಮಾರಾಟ ಮಾಡುತ್ತಿದ್ದಾನೆಂದು ರಾಜಶೇಕರ ಪಿ.ಎಸ.ಐ (ಅ.ವಿ) ಭಾಲ್ಕಿ ನಗರ ಪೊಲಿಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಪಿಎಂಸಿ ಮಾರ್ಕೇಟ್ ತಲುಪಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸಂಜು ತಂದೆ ಮೊಗಲಪ್ಪಾ ಸಂಕೋಲೆ ವಯ: 40 ವರ್ಷ, ಜಾತಿ:ಸುಡಗಾಡ ಸಿದ್ದ, ಸಾ: ಎಪಿಎಂಸಿ ಮಾರ್ಕೇಟ್ ಹಿಂದುಗಡೆ ಭಾಲ್ಕಿ ಇತನು ಒಂದು ಸ್ಟೀಲ್ ಕ್ಯಾನಿನಲ್ಲಿ ಸಿಂದಿ ಮರಾಟ ಮಾಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿಎಸ್ಐ ರವರು ಸಿಬ್ಬಂದಿಯವರ ಸಹಾಯದಿಂದ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದು ವಿಚಾರಿಸಲು ಸದರಿ ಸಿಂದಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದು ನಂತರ ಸದರಿ ಸ್ಟೀಲ್ ಕ್ಯಾನನ್ನು ಪರಿಶಿಲಿಸಲು ಅದರಲ್ಲಿ ಅಂದಾಜು 10 ಲಿಟರನಷ್ಟು ಸಿಂದಿ ಅ.ಕಿ 600/- ರೂ. ಇದ್ದು ನೇದನ್ನು ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 43/2021, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 04-07-2021 ರಂದು ಫಿರ್ಯಾದಿ ಗುಲಾಮ್ ತಂದೆ ಮಂಜಲೆಸಾಬ ಆಟೋವಾಲೆ, ವಯ: 39 ವರ್ಷ, ಜಾತಿ: ಮುಸ್ಲಿಂ ಸಾ: ಜೇರಪೇಟ ಹುಮನಾಬಾದ ವವರು ತಮ್ಮೂರ ಸೈಯದ್ ಅಬುಬಕರ ತಂದೆ ಸೈಯದ್ ಸಲಿಂ ಸೈಯದ್ ವಯ: 17 ವರ್ಷ, ಜಾತಿ: ಮುಸ್ಲಿಂ ಮತ್ತು ಬಾಬಾ ತಂದೆ ರೆಹಮದಲಿ ಲಾಟೋಡಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಹುಮನಾಬಾದ ಮೂವರು ಕೂಡಿಕೊಂಡು ಆಟೋ ನಂ. ಕೆಎ-39/2362 ನೇದರಲ್ಲಿ ಖಾಸಗಿ ಕೆಲಸಕ್ಕೆ ಖೆರ್ಡಾ (ಬಿ) ಗ್ರಾಮಕ್ಕೆ ಹೋಗಿ ಮರಳಿ ಹುಮನಾಬಾದಗೆ ಹೋಗುವಾಗ ಆಟೋ ಫಿರ್ಯಾದಿ ಚಲಾಯಿಸಿಕೊಂಡು ಖೆರ್ಡಾ(ಬಿ) – ಧನ್ನೂರ ಮದ್ಯ ಇರುವ ಒಂದು ಬ್ರಿಡ್ಜ ಹತ್ತಿರ ಮೂತ್ರ ವಿಸರ್ಜನೆ ಮಾಡಲು ಆಟೋ ರೋಡಿನ ಪಕ್ಕದಲ್ಲಿ ನಿಲ್ಲಿಸಿ ರೋಡಿನ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಲು ಹೊರಟ ಸೈಯದ್ ಅಬುಬಕರ ತಂದೆ ಸೈಯದ್ ಸಲಿಂ ಸೈಯದ್ ಈತನಿಗೆ ಧನ್ನೂರ ಗ್ರಾಮದ ಕಡೆಯಿಂದ ಬರುತ್ತಿದ್ದ ಒಂದು ಕಾರ ನಂ. ಕೆಎ-36/ಎಮ್-2751 ಅತೀವೇಗ ಮತ್ತು ನಿಷ್ಕಾಳಜಿತನದಿಂದ ಬಂದು ಡಿಕ್ಕಿ ಮಾಡಿದ ಪ್ರಯುಕ್ತ ಆತನ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬಂದಿರುತ್ತದೆ, ನಂತರ ಆರೋಪಿಯು ತನ್ನ ಕಾರನ್ನು ನಿಲ್ಲಿಸದೇ ಹಾಗೇ ಓಡಿ ಹೋಗಿರುತ್ತಾನೆ, ನಂತರ ಗಾಯಗೊಂಡ ಸೈಯದ್ ಅಬುಬಕರ ಈತನಿಗೆ ಫಿರ್ಯಾದಿ ಹಾಗೂ ಬಾಬಾ ತಂದೆ ರೆಹಮದಲಿ ಲಾಟೋಡಿ ಮತ್ತು ಹಿಂದೆ ಬರುತ್ತಿದ್ದ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ ತಮ್ಮೂರ ಅಪ್ತಾಪ್ ತಂದೆ ರಬ್ಬಾಡಿ ಆಟೋವಾಲೆ, ಜುಬೇರ ತಂದೆ ಶಬ್ಬೀರ, ರವರೆಲ್ಲರೂ ಕೂಡಿಕೊಂಡು ಆಟೋದಲ್ಲಿ ಹಾಕಿಕೊಂಡು ಹಳ್ಳಿಖೇಡ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲಿಸಿ ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆ ನಂತರ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 05-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಲ್ಳಲಾಗಿದೆ.
No comments:
Post a Comment