Police Bhavan Kalaburagi

Police Bhavan Kalaburagi

Wednesday, June 1, 2016

BIDAR DISTRICT DAILY CRIME UPDATE 01-06-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-06-2016

alUÀÄ¥Áà ¥ÉưøÀ oÁuÉ UÀÄ£Éß £ÀA. 98/2016, PÀ®A 87 PÉ.¦ PÁAiÉÄÝ :-
ದಿನಾಂಕ 31-05-2016 ರಂದು ಚಿಟಗುಪ್ಪಾ ಪಟ್ಟಣದ ಶಿವಾರದ ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಕೆಲವು ಜನರು ಹಣ ಹಚ್ಚಿ ಪಣ ತೋಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡುತ್ತಿದ್ದಾರೆ ಅಂತ ಮಹಾಂತೇಶ ಪಿಎಸ್ಐ ಚಿಟಗುಪಪ್ಆ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೇಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ ಸಾ: ಚಿಟಗುಪ್ಪಾ ರವರ ಹೊಲದ ಹತ್ತಿರ  ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಬಾಬಾ ತಂದೆ ನಬಿಸಾಬ ರಂಜೋಳವಾಲೆ, 2) ರಾಘವೆಂದರೆ ತಂದೆ ಸುಭಾಷ ಗಾಂಗಜಿ, 3) ಔದುತ ತಂದೆ ಮುಕುಂದರಾ ಗುತ್ತೆದಾರ, 4) ಸಲೋಹದ್ದಿನ ತಂದೆ ಅಲಿಮೋದ್ದಿನ ಬಡೆ, 5) ಮುಕುಂದರಾವ ತಂದೆ ಕೆಶವರಾವ ಗುತ್ತೆದಾರ, 6) ಭೀಮಣ್ಣಾ ತಂದೆ ನಾಗೇಂದ್ರರಾವ ಹಮಿಲಪೂರಕರ, 7) ಅಶೋಕ ತಂದೆ ದೇವರಾಯ ಬಬಡಿ 7 ಜನ ಎಲ್ಲರೂ ಸಾ: ಚಿಟಗುಪ್ಪಾ ಹಾಗೂ 8) ಖಿಜ್ಜರ ತಂದೆ ವಾಹಿದ ಅಲಿ ಸೈಯದ ಸಾ: ನೂರಖಾನ ತಾಲಿಮ ಬೀದರ ಇವರೆಲ್ಲರೂ ಸಾರ್ವಜನಿಕ ಸ್ಥಳದಲ್ಲಿ ಗೊಲಾಗಿ ಕುಳಿತು ಹಣ ಹಚ್ಚಿ ಪಣತೋಟು ನಸಿಬಿನ ಜೂಜಾಟ ಆಡುವುದು ಖಚಿತ ಮಾಡಿಕೊಂಡು ಅವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ 3300/- ರೂ. ನಗದು ಹಣ ಜಪ್ತಿ ಮಾಡಿಕೊಂಡು, ಸದರಿ ಆರೋಪಿರಿಗೆ ಹಣ ಹಚ್ಚಿ ಪಣ ತೋಟ್ಟು ಅಂದರ ಬಾಹರ ಎಂಬ ನಸಿಬಿನ ಜೂಜಾಟ ಆಡಲು ಸರಕಾರದ ಲೈಸನ್ಸ ಇದೇಯಾ ಅಂತ ವಿಚಾರಿಸಿದಾಗ ನಮ್ಮ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದರ, ಸದರಿ ಆರೋಪಿತರ ಮದ್ಯ ನೋಡಲು 52 ಇಸ್ಪೀಟ ಎಲೆಗಳು ಹಾಗೂ ನಗದು ಹಣ 3835/- ರೂಪಾಯಿ ಮತ್ತು ಜೂಜಾಟ ಆಡುವ ಸ್ಥಳದಲ್ಲಿ ಮೋಟಾರ ಸೈಕಲಗಳು ಹಾಗೂ ಕಾರ ಇದ್ದು ಸದರಿ ಟಾಟಾ ಇಂಡಿಕಾ ಕಾರ 1) ಎಪಿ-11/ಆರ್-7248 ಅ.ಕಿ 50,000/- ರೂ., 2) ಬಜಾಜ ಸಿ ಟಿ 100 ಮೊಟಾರ ಸೈಕಲ್ ಎಪಿ-29/ಜೆ-0849 ಅ.ಕಿ 10,000/- ರೂ., 3) ಹಿರೋ ಹೊಂಡಾ ಸ್ಪಲೆಂಡರ ಪ್ಲಸ ಮೊಟಾರ ಸೈಕಲ್ ನಂ. ಕೆಎ-32/ವಿ-7113 ಅ.ಕಿ 20,000/- ರೂ., 4) ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ಮೊಪೆಡ್ ಕೆಎ-39/ಕೆ-2133 ಅ.ಕಿ 15,000/- ರೂ., 5) ಟಿ.ವಿ.ಎಸ್ ಎಕ್ಸ್.ಎಲ್ ಹೆವಿ ಡ್ಯೂಟಿ ಮೊಪೆಡ್ ಕೆಎ-39/ಕ್ಯೂ-1447 ಅ.ಕಿ 15,000/- ರೂ., 6) ಬಜಾಜ್ ಪಲ್ಸರ್  ಮೊಟಾರ ಸೈಕಲ್ ನಂ. ಕೆಎ-38/ಆರ್-7065 ಅ.ಕಿ 40,000/- ರೂ., ಇದ್ದು ನೇದವುಗಳು ವಶಕ್ಕೆ ಪಡೆದು ಪಂಚರ ಸಮಕ್ಷಮ ತನಿಖೆಗಾಗಿ ಜಪ್ತಿ ಪಂಚನಾಮೆ ಕೈಗೊಂಡು, ಸದರಿ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 214/2016, PÀ®A 279, 338 L¦¹ 187 LJA« PÁAiÉÄÝ :-
ಪುಟ್ಟರಾಜ ತಂದೆ ಹುಲೆಪ್ಪಾ ಕಾಂಬಳೆ ವಯ: 40 ವರ್ಷ, ಜಾತಿ: ಎಸ್.ಸಿ (ದಲಿತ), ಸಾ: ಹಲಬರ್ಗಾ ರವರ ಓಣಿಯಲ್ಲಿ ಟ್ರಾಕ್ಟರಕ್ಕೆ ಟ್ಯಾಂಕರ್ ಅಳವಡಿಸಿಕೊಂಡು ತಂದಿದ್ದು, ಸದರಿ ಟ್ರಾಕ್ಟರ ನಂ. ಎಪಿ-36/ಯು-0279 ಇದ್ದು, ಸದರಿ ಟ್ಯ್ರಾಕ್ಟರ ಟ್ಯಾಂಕರದಿಂದ ಓಣಿಯ ಜನರು ನೀರು ತೆಗೆದುಕೊಂಡು ಹೋಗುತ್ತಿದ್ದು, ಫಿರ್ಯಾದಿ ಮತ್ತು ಫಿರ್ಯಾದಿಯ ಮಗನಾದ ಸುರೇಶ ಕಾಂಬಳೆ ಇಬ್ಬರೂ ಸದರಿ ಟ್ರ್ಯಾಕ್ಟರ್ ಟ್ಯಾಂಕನಿಂದ ನೀರು ತೆಗೆದುಕೊಂಡು ಹೋಗುತ್ತಿದ್ದು, ಹೀಗಿರುವಾಗ ದಿನಾಂಕ 31-05-2016 ರಂದು ಫಿರ್ಯಾದಿ ಮತ್ತು ಫಿರ್ಯಾದಿಯ ಮಗ ಟ್ಯಾಂಕರಿನ ತೊಟ್ಟಿಯಿಂದ ನೀರು ಹಿಡಿದುಕೊಳ್ಳುವಾಗ ಸದರಿ ಟ್ರಾಕ್ಟರ್ ಚಾಲಕನಾದ ಆರೋಪಿ ಉಮಾಕಾಂತ ತಂದೆ ಕಲ್ಯಾಣರಾವ ಸಾ: ಹಲಬರ್ಗಾ ಟ್ಯ್ರಾಕ್ಟರ - ಟ್ಯಾಂಕರಿನ ಹಿಂದೆ ಮುಂದೆ ನೋಡದೇ ನಿರ್ಲಕ್ಷತನ ವಹಿಸಿ ಬೇಜವಾಬ್ದಾರಿತನದಿಂದ ತನ್ನ ಟ್ರಾಕ್ಟರನ್ನು ಒಮ್ಮೆಲೇ ಹಿಂದಕ್ಕೆ ತೆಗೆದುಕೊಂಡಿದ್ದು, ಟ್ಯಾಂಕರ್  ಹಿಂದೆ ನೀರು ತುಂಬಿಕೊಳ್ಳುತ್ತಿದ್ದ ಫಿರ್ಯಾದಿಯ ಮಗನಿಗೆ ಡಿಕ್ಕಿ ಮಾಡಿದ್ದರಿಂದ ಮಗನಿಗೆ ಬಲಗಾಲಿನ ಸೊಂಟದಿಂದ ಮೋಳಕಾಲಿನವರೆಗೆ ಭಾರಿ ರಕ್ತಗಾಯ, ಬಲಗಾಲ ಹಿಮ್ಮಡಿಗೆ ರಕ್ತಗಾಯ, ಎಡಗಾಲಿನ ಹಿಮ್ಮಡಿಗೆ ರಕ್ತಗಾಯ,  ಮತ್ತು ತರಚಿದ ಗಾಯಗಿರುತ್ತದೆ, ತಕ್ಷಣ ಫಿರ್ಯಾದಿಯು ತನ್ನ ಮಗನಿಗೆ ಅಂಬುಲೆನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಅಶೋಕ ತಂದೆ ಮಲ್ಲಿಕಾರ್ಜುನ ಸಾ:ಮಳಖೇಡ ಇವರು ದಿನಾಂಕ: 31-05-2016 ರಂದು ಕಲಬುರಗಿಗೆ ಹೋಗಿ ಬರೋಣ ಅಂತ ಮನೆಯಿಂದ ಕಲಬುರಗಿಗೆ ಹೋಗಿ ಕಲಬುರಗಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಊರಿಗೆ ಹೋಗೋಣ ಅಂತ ಮಧ್ಯಾಹ್ನ 2-30 ಪಿಎಂ ಸುಮಾರಿಗೆ ಖರ್ಗೆ ಪೆಟ್ರೋಲ ಪಂಪ ಹತ್ತಿರ ಬಂದು ನಿಂತಾಗ ಅಲ್ಲಿ ಸೇಡಂಕ್ಕೆ ಹೋಗುವ ಸಲುವಾಗಿ ಸಮ್ಮೂರಿನ ಪರಿಚಯದವನಾದ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಕೆಎ-32 ಸಿ-2912 ನೇದ್ದರ ಕ್ರೂಜರನ್ನು ನಿಲ್ಲಿಸಿದ್ದು ಅದರಲ್ಲಿ ಊರಿಗೆ ಹೋಗುವ ಸಲುವಾಗಿ ನಾನು ಕುಳಿತುಕೊಂಡೆ ನನ್ನಂತೆ ಸುಮಾರು 8 ಜನರೂ ಕುಳಿತುಕೊಂಡರು. ನಾವು ಕುಳಿತುಕೊಂಡು ಹೊರಟ ಕ್ರೂಜರನ್ನು ಮಲ್ಲಿಕಾರ್ಜುನ ತಂದೆ ಶರಣಪ್ಪಾ ಮತ್ತಿಮೂಡ ಇತನೂ ಚಲಾಯಿಸುತ್ತಿದ್ದು  ನಾವು ಕುಳಿತುಕೊಂಡ ಕ್ರೂಜರ ಕಲಬುರಗಿಯಿಂದ ಸೇಡಂಕ್ಕೆ ಹೋಗುವ ರೋಡಿನ ಮುಖಾಂತರ ಹೊರಟು ಗುಂಡಗುರ್ತಿ ಗ್ರಾಮ ಕ್ರಾಸ ದಾಟಿ ಮುಂದಿರುವ ತಾಂಡಾದ ಸಮೀಪ ಹೋಗುತ್ತಿದಂತೆ ನಮ್ಮ ಎದುರುಗಡೆಯಿಂದ ಅಂದರೆ ಸೇಡಂ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ನಾವು ಕುಳಿತುಕೊಂಡು ಹೊರಟ ಕ್ರೂಜರಕ್ಕೆ ಒಮ್ಮೇಲೆ ಸೈಡಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಕ್ರೂಜರನ್ನು ರೋಡಿನ ಪಕ್ಕದಲ್ಲಿನ ಗಿಡಗಳಿಗೆ ಹೋಗಿ ಡಿಕ್ಕಿ ಪಡಿಸಿ ನಿಂತಿತು. ಈ ಅಪಘಾತದಲ್ಲಿ ನನಗೆ ಬಲಗಾಲಿಗೆ ಗುಪ್ತಗಾಯ ಹಾಗೂ ರಕ್ತಗಾಯವಾಗಿದ್ದು ಇತರೆ ಕಡೆ ತೆರಚಿದ ಗಾಯಗಳಾಗಿದ್ದು ಕ್ರೂಜರನಲ್ಲಿ ನನ್ನಂತೆ ಕುಳಿತು ಹೊರಟ  ಪ್ಯಾಸೆಂಜರಗಳಿಗೆ ಅವರ ಹೆಸರು ಕೇಳಿ ತಿಳಿಯಲು 1) ಶಿವುಕುಮಾರ ತಂದೆ ನಾಗಯ್ಯಾ ಸ್ವಾಮಿ ಸಾ:ಕಲಬುರಗಿ ಇತನಿಗೆ ಎದೆಯ ಮೇಲೆ ಹಾಗೂ ಡಕಿನ ಮೇಲೆ ಭಾರಿ ಗುಪ್ತ ಒಳಪೆಟ್ಟಾಗೊರುತ್ತದೆ. 2) ಎಂ.ಡಿ ಸೈದೊದ್ದೀನ ತಂದೆ ಸಿರಾಜೋದ್ದೀನ ಸಾ:ಪೂಜಾ ಕಾಲೋನಿ ಕಲಬುರಗಿ ಇತನಿಗೆ ಬಾಯಿಯಲ್ಲಿನ ಹಲ್ಲುಗಳು ಮುರಿದಿದ್ದು ಬಲ ಎದೆಯ ಪಕ್ಕದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ. 3) ಪ್ರವೀಣ ತಂದೆ ಹರಿದೇವ ಚಾಳಿ ಸಾ:ಟೆಂಗಳಿ ಇತನಿಗೆ ಮೂಗಿನ ಮೇಲೆ ರಕ್ತಗಾಯ ಹಾಗೂ ಇತರೆ ಕಡೆ ತೆರಚಿದ ಗಾಯಗಳಾಗಿರುತ್ತವೆ. 4) ಸೈಬಣ್ಣಾ ತಂದೆ ನಾಗಪ್ಪ ಸಾ:ಗುಂಡಗುರ್ತಿ ಇತನಿಗೆ ಎಡಗಣ್ಣಿನ ಮೇಲೆ ಗುಪ್ತಗಾಯ ಹಾಗೂ ಬಲಗಣ್ಣಿನ ಪಕ್ಕದಲ್ಲಿ ತೆರಚಿದ ಗಾಯ ಮೂಗಿನ ಹತ್ತಿರ ರಕ್ತಗಾಯ ಎದೆಯ ಬಲ ಪಕ್ಕದಲ್ಲಿ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ತಲೆಯಲ್ಲಿ ಭಾರಿ ಗುಪ್ತಗಾಯವಾಗಿದ್ದು ಬೆಹೋಶಾಗಿರುತ್ತಾನೆ. ನಂತರ ಕ್ರೂಜರ ಚಾಲಕನಿಗೆ ನೋಡಲಾಗಿ ಬಲಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಂತಾಗಿರುತ್ತದೆ. ಬಾಯಿಯಲ್ಲಿನ ಹಲ್ಲುಗಳು ಮುರಿದು ಭಾರಿ ರಕ್ತಗಾಯವಾಗಿರುತ್ತದೆ. ಎಡಗೈಗೆ ತೆರಚಿದ ಗಾಯವಾಗಿದ್ದು ತಲೆಗೆ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಂತರ ಇನ್ನೊಬ ನಮ್ಮ ಕ್ರೂಜರನಲ್ಲಿನ ವ್ಯಕ್ತಿಗೆ ನೋಡಲಾಗಿ ಬಲ ತಲೆಯಲ್ಲಿ ಭಾರಿ ರಕ್ತಗಾಯ ಬಲಗಣ್ಣಿನ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದು ಬಲಗೈ ಮುರಿದಂತಾಗಿರುತ್ತದೆ. ಎಡಗೈಗೆ ಗುಪ್ತಗಾಯ ಹಾಗೂ ತೆರಚಿದ ಗಾಯಗಳಾಗಿದ್ದು ಎದೆಯ ಎಡಭಾಗದ ಮೇಲೆ ಭಾರಿ ರಕ್ತಗಾಯವಾಗಿದ್ದು ಹಾಗೂ ಬಲಗಾಲಿನ ಮಂಡಿಯ ಹತ್ತಿರ ರಕ್ತಗಾಯ ಎಡಗಾಲಿಗೆ ತೆರಚಿದ ಗಾಯಗಳಾಗಿ ಬೆಹೋಶಾಗಿರುತ್ತಾನೆ. ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ವಲ್ಪ ಮುಂದಕ್ಕೆ ರೋಡಿನ ಮೇಲೆ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಲಾರಿ ನಂಬರ ನೋಡಲಾಗಿ ಎಪಿ-26 ಟಿಎ-3139 ಅಂತ ಇದ್ದು ನಾನು ಈ ಅಪಘಾತದ ಬಗ್ಗೆ ಮಲ್ಲಿಕಾರ್ಜುನ ತಂದೆ ಶರಣಪ್ಪಾ ಇವರಿಗೆ ಫೋನ ಮಾಡಿ ವಿಷಯ ತಿಳಿಸಿ ಜಿಜಿಎಚ ಆಸ್ಪತ್ರೆಗೆ ಬರಲು ತಿಳಿಸಿ  ನಂತರ ಅಂಬುಲೇನ್ಸಕ್ಕೆ ಫೋನ ಮಾಡಿ ಸ್ಥಳಕ್ಕೆ ಕರೆಯಿಸಿ ಅದರಲ್ಲಿ ನಮ್ಮೆಲ್ಲರಿಗೂ ಹಾಕಿಕೊಂಡು ಚಿಕಿತ್ಸೆ ಕುರಿತು ಕಲಬುರಗಿಯ ಜಿಜಿಎಚ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಮತ್ತಿಮೂಡ ವ:25 ಉ:ಕ್ರೂಜರ ಚಾಲಕ ಇತನೂ ಮೃತಪಟ್ಟಿರುತ್ತಾನೆ. ನನಗೆ ಹಾಗೂ ಇನ್ನೊಬ್ಬ ವ್ಯಕ್ತಿ ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ನಾವು ಜಿಜಿಎಚ ಆಸ್ಪತ್ರೆಯಲ್ಲಿ ಇನ್ನುಳಿದವರಿಗೆ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ವಶ :
ಜೇವರಗಿ ಠಾಣೆ : ದಿನಾಂಕ 01.06.2016 ರಂದು ರಾತ್ರಿ ಕೊಳಕೂರ ಗ್ರಾಮದ ಸಿಮಾಂತರದಲ್ಲಿ ಭೀಮಾ ನದಿಯ ದಡದಲ್ಲಿ ಟ್ರ್ಯಾಕ್ಟರ್ಗಳಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಮಾರಾಟಕ್ಕಾಗಿ ಸಾಗಿಸುತ್ತಿದ್ದಾರೆ ಅಂತ ಬಾತ್ಮಿ ತಿಳಿದು ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕೊಳಕೂರ ಗ್ರಾಮದ ಭೀಮಾ ನದಿಯ ದಡದ ಹತ್ತಿರ ಜೀಪನ್ನು ಮರೆಯಾಗಿ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ನಮ್ಮ ಹತ್ತಿರ ಇದ್ದ ಬ್ಯಾಟರಿ ಬೆಳಕಿನಲ್ಲಿ ನೊಡಲಾಗಿ ಟ್ರ್ಯಾಕ್ಟರ್ಗಳಲ್ಲಿ ಭೀಮಾ ನದಿಯಿಂದ ಮರಳು ತುಂಬುತ್ತಿದ್ದರು ನಾವು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಲು ಹೋದಾಗ ಅಲ್ಲಿದ್ದ ಟ್ರ್ಯಾಕ್ಟರ್ ಚಾಲಕರು  ಓಡಿ ಹೋಗ ಹತ್ತಿದರು ನಾವು ಬೆನ್ನಟ್ಟಿ ಹಿಡಿಯಲು ಪ್ರಯತ್ನ ಮಾಡಿದರು ಅವರು ಕತ್ತಲ್ಲಿ ಓಡಿ ಹೋದರು ಸಿಕ್ಕಿರುವದಿಲ್ಲಾ. ನಂತರ ಸ್ಥಳದಲ್ಲಿ ಇದ್ದ ಟ್ರ್ಯಾಕ್ಟರ್ ಪರಿಶೀಲಿಸಲು 1. ಟ್ರ್ಯಾಕ್ಟರ್ ನಂ ಕೆ.ಎ-32-ಟಿಎ-5001 ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00, ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು 2. ಜಾನಡೀರ್ ಕಂಪನಿಯ ಒಂದು ಹಸಿರು ಬಣ್ಣದ ಟ್ರ್ಯಾಕ್ಟರ್ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಮೇಲೆ ಇಂಜೀನ್ ನಂ py3029d346328  ಚೆಸ್ಸಿ ನಂ 1py5045dada015684, ನೇದ್ದು ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಇದ್ದು ಅ.ಕಿ 1000=00 ಆಗಬಹುದು ಟ್ರ್ಯಾಕ್ಟರ ಅ.ಕಿ. 2,00,000/- ಆಗಬಹುದು. ನೋಡಿದರೆ ಸದರಿ ಟ್ರ್ಯಾಕ್ಟರಗಳ ಚಾಲಕರು ಮತ್ತು ಮಾಲಿಕರು ಸರಕಾದಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಕಳ್ಳತನದಿಂದ ಮರಳು ಮಾರಾಟ ಮಾಡಲು ಸಾಗಿಸುತ್ತಿದ್ದ ಬಗ್ಗೆ ಕಂಡು ಬಂದಿದ್ದರಿಂದ ಸದರಿ ಎರಡು ಟ್ರ್ಯಾಕ್ಟರ್ ಗಳನ್ನು  ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 31-05-2016 ರಂದು ಮಣೂರ ಗ್ರಾಮದ ಭಿಮಾ ನದಿಯ ಹತ್ತಿರ ಇರುವ ಯಲ್ಲಮ್ಮನ ಗುಡಿಯ ಹತ್ತಿರ ಕೆಲವು ಜನರು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಿದರಾಯ ಭೋಸಗಿ ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ಮಾರ್ಗದರ್ಶನದಲ್ಲಿ ಮಣೂರ ಗ್ರಾಮದಲ್ಲಿ ನದಿಯಲ್ಲಿರುವ ಯಲ್ಲಮ್ಮ ದೇವಿಯ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಹತ್ತಿರ ಇರುವ ನದಿಯ ಬಾಜು ಸಾರ್ವಜನಿಕ ಸ್ಥಳದಲ್ಲಿ ಮೂರು ಜನರು ಕುಳಿತುಕೊಂಡು ತಮ್ಮ ತಮ್ಮ ಮುಂದೆ ಒಂದು ಪೇಪರನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ 10/- ರೂಪಾಯಿಗೆ 100/- ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರನ್ನು ಕರೆದು ತನ್ನ ಹತ್ತಿರ ಇದ್ದ ಒಂದು ಪೇಪರದಲ್ಲಿನ ಚಿತ್ರಗಳನ್ನು ತೋರಿಸಿ ಈ ಚಿತ್ರಗಳಿಗೆ ಪಣಕ್ಕೆ ಹಣ ಕಟ್ಟಿ, ಯಾವ ಚಿತ್ರ ಬರುತ್ತದೊ ಆ ಚಿತ್ರಕ್ಕೆ ಹಣ ಹಚ್ಚಿದವರಿಗೆ 10/- ರೂಪಾಯಿಗಳಿಗೆ 100/- ರೂಪಾಯಿಗಳನ್ನು ಕೊಡುತ್ತೇನೆ ಅಂತಾ ಹೇಳಿ ಜನರ ಮನವೋಲಿಸಿ ಅವರಿಂದ ಹಣ ಪಡೆದು ಜೂಜಾಟ ಆಡುತ್ತಿದ್ದರು. ಆಗ ನಾನು ಹಾಗೂ ನಮ್ಮ ಸಿಬ್ಬಂದಿ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ಸಂತೋಷ ತಂದೆ ಗೋವಿಂದ ನಾವಡೆ ಸಾ : ಮಣೂರ ಗ್ರಾಮ 2) ಮೌಲಾ ತಂದೆ ಮಹಿಬೂಬ ಶೇಖ್ ಸಾ|| ಹಿರೆ ಬೇನೂರ ಹಾ|| | ಹೈದ್ರಾ ತಾ|| ಅಕ್ಕಲಕೋಟ.3) ಶಿವು ತಂದೆ ಗಡ್ಡೆಪ್ಪ ಪೂಜಾರಿ ಸಾ|| ಮಣೂರ ಗ್ರಾಮ ಅಂತಾ ತಿಳಿಸಿದ್ದು, ಸದರಿಯವರ ವಶದಿಂದ ನಗದು ಹಣ ಒಟ್ಟು 810/- ರೂಪಾಯಿ ನಗದು ಹಣ ಹಾಗೂ 03 ಜೂಜಾಟದ ಪಪ್ಪು ಪ್ಲೇಯಿಂಗ ಪಿಕ್ಚರಸ್ ಅಂತಾ ಬರೆದ ಪೇಪರಗಳು ದೊರೆತಿರುತ್ತವೆ. ಸದರಿಯವುಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಚಂದ್ರಪ್ರಭಾ ಗಂಡ ಅವಿನಾಶ ನಾಗರಾಳೆ ಸಾ: ಪಿ&ಟಿ ಕಾಲನಿ ಜೆವರ್ಗಿ  ರಸ್ತೆ ಕಲಬುರಗಿ ಇವರನ್ನು  ದಿನಾಂಕ 18.02.2013 ರಂದು ನಮ್ಮ ತಂದೆ ತಾಯಿಯವರು ಬಸವಕಲ್ಯಾಣ ಗ್ರಾಮದ ಅವಿನಾಶ ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಲ್ಲಿ ವರನಿಗೆ ವರೋಪಚಾರ ಅಂತಾ 1 ವರೆ ಲಕ್ಷ ರೂಪಾಯಿ 15 ತೊಲೆ ಬಂಗಾರ ಹಾಗೂ ಗೃಹಪಯೋಗಿ ಸಾಮಾನುಗಳು ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನನ್ನ ಮದುವೆ ಆದ ಎರಡೇ ದಿವಸದಲ್ಲಿ ನನ್ನ ಗಂಡ ಅತ್ತೆ ಮಾವ ಎಲ್ಲರೂ ಕೂಡಿ ನೀನು ಬೆಳ್ಳಿ ಸಾಮಾನುಗಳು ತಂದಿರುವದಿಲ್ಲ ಕಡಿಮೆ ವರದಕ್ಷಿಣೆ ಹಣ ತಂದಿರುತ್ತೀ ಅಂತಾ ಹಿಂಸೆ ಕೊಟ್ಟಿರುವದರಿಂದ ನಾನು ನನ್ನ ತಂದೆ ತಾಯಿಗೆ ಹೇಳಿ ಮತ್ತೆ ತವರು ಮನೆಯಿಂದ 50 ಸಾವಿರ ರೂಪಾಯಿ ಕೊಡಿಸಿರುತ್ತೇನೆ.. ದಿನಾಂಕ 28.05.2016 ರಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ನನ್ನ ಗಂಡ ರಂಡಿ ನೀನು ನಿನ್ನ ತವರು ಮನೆಯಿಂದ 50 ಸಾವಿರ ರೂಪಾಯಿ ಮತ್ತು 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂದರ ತರುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿಯೇ ಬಿಡುತ್ತೇನೆ ಅಂತಾ ಅಂದವನೇ ಮನೆಯಲ್ಲಿರುವ ಚಾಕುವನ್ನು ತೆಗೆದುಕೊಂಡು ನನ್ನ ಗದ್ದದ ಕೆಳಗಡೆ ಎಡ ಎದೆಯ ಮೇಲ್ಬಾಗಕ್ಕೆ ಮತ್ತು ಕೆಳಗಡೆ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಬಾಗಕ್ಕೆ ಹೊಡೆದಿರುತ್ತಾನೆ ಆಗ ನಾನು ಚೀರಾಡುವದನ್ನು ಕಂಡು ನಮ್ಮ ಅಕ್ಕಪಕ್ಕದ ಮನೆಯವರು ಬಂದು ಅವನಿಂದ ನನಗೆ ಬಿಡಿಸಿಕೊಂಡು ನನಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.  ಕಾರಣ ನನಗೆ ಮದುವೆ ಆದಾಗಿನಿಂದಲೂ ತವರು ಮನೆಯಿಂದ 50 ಸಾವಿರ ರೂಪಾಯಿ 2 ತೊಲೆ ಬಂಗಾರ ತೆಗೆದುಕೊಂಡು ಬಾ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ನನ್ನ ಅತ್ತೆ ಮಾವ ಹಾಗೂ ಚಾಕುವಿನಿಂದ ನನ್ನ ದೇಹದ ಎಲ್ಲಾ ಭಾಗಕ್ಕೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿದ ನನ್ನ ಗಂಡ ಅವಿನಾಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.