Police Bhavan Kalaburagi

Police Bhavan Kalaburagi

Tuesday, November 19, 2019

BIDAR DISTRICT DAILY CRIME UPDATE 19-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 19-11-2019

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 130/2019, ಕಲಂ. 379 ಐಪಿಸಿ :-
ಫಿರ್ಯಾದಿ ಮಾರುತಿ ತಂದೆ ಮಾನಸಿಂಗ ಆಡೆ ವಯ: 55ರ್ಷ, ಸಾ: ಹಳೆ ಗಂಜ ಔರಾದ(ಬಿ) ರವರ ಮಗನಾದ ಸಂಜು ತಂದೆ ಮಾರುತಿ ಆಡೆ ಇತನು ಅಶೋಕ ಲಿಲ್ಯಾಂಡ್ ಕಂಪನಿಯ ಲಾರಿ ನಂ. ಆರ್.ಜೆ-14/ಸಿಜಿ-7345 ಇಂಜಿನ್ ನಂ. ಪಿಎನ್ಎಚ್515139 ತ್ತು ಚೆಸ್ಸಿ ನಂ ಪಿಎನ್ಎ087967, .ಕಿ 5 ಲಕ್ಷ ರೂ. ನೇದನ್ನು ಖರಿದಿಸಿದ್ದು ಇರುತ್ತದೆ, ಹೀಗಿರುವಾಗ ಪಿüರ್ಯಾದಿಯು ದಿನಾಂಕ 19-09-2019 ರಂದು 1800 ಗಂಟಗೆ ಸದರಿ ಲಾರಿಯನ್ನು ಹಳೆ ಗಂಜ ಎರಿಯಾದಲ್ಲಿ ನಿಲ್ಲಿಸಿ ತಮ್ಮ ಮನೆಗೆ ಹೋಗಿ ಮರು ದಿನ ಬೆಳಗ್ಗೆ 0500 ಗಂಟೆಗೆ ಬಂದು ನೋಡಲು ಇರಲಿಲ್ಲ, ಆಗ ಹಳೆ ಗಂಜ ಎರಿಯಾದ ಎಲ್ಲಾ ಕಡೆ ಕೂಡಲೆ ಹುಡುಕಾಡಿದ್ದು ಎಲ್ಲಿಯು ಲಾರಿ ಕಂಡು ಬಂದಿಲ್ಲ, ದರಿ ಲಾರಿಯನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-11-2019 ರಂದು ಪ್ರಕರಣ ದಾಖಲಿಸಿಕೊಂಡು  ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ಗರ ಪೊಲೀಸ್ ಠಾಣೆ ಅಪರಾಧ ಸಂ. 161/2019, ಕಲಂ. 379 ಐಪಿಸಿ :-
ದಿನಾಂಕ 31-10-2019 ರಂದು ಫಿರ್ಯಾದಿ ಚಂದ್ರಕಾಂತ ತಂದೆ ಸಿದ್ದಪ್ಪ ಕಾರಬಾರೆ : 28 ರ್ಷ, ಜಾತಿ: ಲಿಂಗಾಯತ, ಸಾ: ಎರನಳ್ಳಿ, ತಾ: ಬೀದರ, ದ್ಯ: ಚನಬಸವೇಶ್ವರ ಗರ ಬೀದರ ರವರ ಮಾವರವರ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಆರ್-9135 ನೇದನ್ನು ತೆಗೆದುಕೊಂಡು ಬಂದು ಬೀದರ ಗರದ ಅಕ್ಕಮಹಾದೇವಿ ಕಾಂಪ್ಲೆಕ್ಸ್ಎದುರಿಗೆ ನಿಲ್ಲಿಸಿ ಅಲ್ಲೆ ಎದುರಿಗೆ ಇರುವ .ಸಿ..ಸಿ. ಬ್ಯಾಂಕಿನಲ್ಲಿ ಹೋಗಿ ಮರಳಿ ಹೊರಗೆ ಬಂದು ನೋಡಿದಾಗ ದರಿ ಮೋಟಾರ್ ಸೈಕಲ ಇರಲಿಲ್ಲ, ನಂತರ ಪಿüರ್ಯಾದಿಯು ಎಲ್ಲಾ ಕಡೆಗೆ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ ವಿ 1) ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ ನಂ. ಕೆಎ-38/ಆರ್-9135, 2) ಚಾಸಿಸ್ ನಂ. ಎಮ್.ಬಿ.ಎಲ್.ಹೆಚ್..10.ಬಿ.ಡಬ್ಲು.ಎಫ್.4.ಜಿ.01380, 3) ಇಂಜಿನ್ ನಂ. ಹೆಚ್..10..ಡಬ್ಲು.ಎಫ್.4.ಜಿ.01319, 4) ಮಾಡಲ್ 2015, 5) ಬಣ್ಣ: ಕಪ್ಪು ಬಣ್ಣ ಹಾಗೂ 6) .ಕಿ 30,000/- ರೂ., ಆಗಿರುತ್ತದೆ ಅಂತ ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 146/2019, ಕಲಂ. ನುಷ್ಯ ಕಾಣೆ :-
ದಿನಾಂಕ 15-11-2019 ರಂದು ಫಿರ್ಯಾದಿ ಲಕ್ಷ್ಮೀ ಗಂಡ ನಾಮದೇವ ವಯ 35 ವರ್ಷ, ಸಾ: ತಳವಾಡ(ಕೆ) ತಾ: ಭಾಲ್ಕಿ ರವರ ಮಗನಾದ ದೀಪಕ ತಂದೆ ನಾಮದೇವ ವಯ 23 ವರ್ಷ ಈತನು ಫಿರ್ಯಾದಿಯವರಿಗೆ ತಿಳಿಸಿದ್ದೇನೆಂದರೆ ನಾನು ಭಾಲ್ಕೆಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಹೊಗಿ ಪ್ರತಿ ದಿವಸದಂತೆ ರಾತ್ರಿಯಾದರು ಮನೆಗೆ ಬರಲಿಲ್ಲಾ, ಇನ್ನು ಬರಬಹುದು ಅಂತ ರಾತ್ರಿ ಫಿರ್ಯಾದಿ ಹಾಗೂ ಫಿರ್ಯಾದಿಯವರ ಗಂಡ ಮನೆಯಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 16-11-2019 ರಂದು ಬೆಳಿಗ್ಗೆ ಎದ್ದು ನೊಡಲು ದೀಪಕ ಈತನು ಮನೆಗೆ ಬಂದಿರಲಿಲ್ಲಾ, ನಂತರ ಫಿರ್ಯಾದಿಯು ತಮ್ಮೂರಲ್ಲಿ, ತಮ್ಮ ಸಂಬಂಧಿಕರ ಮನೆಯಲ್ಲಿ ಹಾಗೂ ಆತನ ಗೆಳೆಯ ಶಮೋದ್ದಿನ ತಂದೆ ಖುದಬುದ್ದಿನ ಇವರಿಗೆ ಭೇಟ್ಟಿ ಮಾಡಿ ತನ್ನ ಮಗನ ಬಗ್ಗೆ ವಿಚಾರಿಸಲು ನನಗೆ ಯಾವುದೆ ಮಾಹಿತಿ ಇರುವುದಿಲ್ಲಾ ಅಂತ ತಿಳಿಸಿದನು, ನಂತರ ಫಿರ್ಯಾದಿಯು ತನಮ್ಮ ಸಂಬಂಧಿಕರ ಗ್ರಾಮಗಳಿಗೆ ಹೊಗಿ ವಿಚಾರಿಸಲು ದೀಪಕ ಈತನ ಬಗ್ಗೆ ವಿಚಾರಿಸಲು ಆತನ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲಾ, ಕಾರಣ ದೀಪಕ ಈತನು ದಿನಾಂಕ 15-11-2019 ರಂದು 1200 ಗಂಟೆಗೆ  ಭಾಲ್ಕೆಶ್ವರ ಸಕ್ಕರೆ ಕಾರ್ಖಾನೆಗೆ ಕೆಲಸಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೊಗಿ ಕಾಣೆಯಾಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 61/2019, ಕಲಂ. 279, 337, 338 ಐಪಿಸಿ :-
ದಿನಾಂಕ 18-11-2019 ರಂದು ಫಿರ್ಯಾದಿ ಬಾಲಿಕಾ ಗಂಡ ಸತಿಷ ಚಾಲಕ, ವಯ 47 ವರ್ಷಮ ಸಾ: ವೆಂಕಟೇಶ್ವರ್ ನಗರ, ಬೀದರ ರವರು ತನ್ನ ಗಂಡನ ಜೊತೆಯಲ್ಲಿ ಮನೆಯಲ್ಲಿ ಊಟ ಮಾಡಿ ಫಿರ್ಯಾದಿಯು ಬೀದರನ ಡಯಟ್ ಕಾಲೇಜಗೆ ಹೋಗಿದ್ದು, ಗಂಡ ಸತೀಷ ಇವರು ಮಗನಾದ ಸಾಯಿ ಆನಂದ ಈತನ ಜೊತೆ ಮ್ಮ ಕಾರ್ ನಂ. ಕೆಎ-38/ಎಂ-5480 ನೇದ್ದರಲ್ಲಿ ಠಾಣಾ ಕುಶನೂರಕ್ಕೆ ಹೋಗಿರುತ್ತಾರೆ, ನಂತರ ಮಗ ಸಾಯಿ ಆನಂದ ಇತನು ಫಿರ್ಯಾದಿಗೆ ಕರೆ ಮಾಡಿ ಹೆಡಗಾಪೂರ ಕ್ರಾಸ್ ಹತ್ತಿರ ನಮ್ಮ ಕಾರ್ ಪಲ್ಟಿ ಆಗಿದ್ದು ನನಗೆ ಮತ್ತು ತಂದೆಯಾದ ಸತೀಷ ಇವರಿಗೆ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಅಂಬುಲೇನ್ಸದಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದೇವೆ ಅಂತ ತಿಳಿಸಿದ್ದರಿಂದ ಫಿರ್ಯಾದಿಯು ನೇರವಾಗಿ ಬೀದರ ಸರಕಾರಿ ಆಸ್ಪತ್ರೆಗೆ ಬಂದು ಆಸ್ಪತ್ರೆಯಲ್ಲಿ ಗಂಡ ಸತೀಷ ಇವರಿಗೆ ನೋಡಲಾಗಿ ಅವರು ಬೆಹುಷ್ ಇದ್ದು ಎಡಗಾಲಿನ ಪಾದದ ಮೇಲ್ಭಾಗದಲ್ಲಿ ರಕ್ತಗಾಯ, ಮೊಳಕಾಲಿನ ಹತ್ತಿರ ಭಾರಿ ಗುಪ್ತಗಾಯ, ತಲೆಯ ಮುಂಭಾಗದಲ್ಲಿ ರಕ್ತಗಾಯ ಹಾಗು ಭಾರಿ ಗುಪ್ತಗಾಯ, ಎಡಗಾಲಿನ ಪಾದಕ್ಕೆ ತರಚಿದ ಗಾಯ, ಎದೆಗೆ ಗುಪ್ತಗಾಯವಾಗಿರುತ್ತದೆ ಮತ್ತು ಮಗ ಸಾಯಿ ಆನಂದ ಈತನಿಗೆ ನೋಡಲು ಬಲಗಾಲಿನ ಹೆಬ್ಬೆರಳಿಗೆ ತರಚಿದ ರಕ್ತಗಾಯ, ಬಲಗೈ ಮೊಳಕೈಗೆ ಗುಪ್ತಗಾಯವಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.