Police Bhavan Kalaburagi

Police Bhavan Kalaburagi

Sunday, August 23, 2020

BIDAR DISTRICT DAILY CRIME UPDATE 23-08-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-08-2020

 

ಜನವಾಡ ಪೊಲೀಸ್ ಠಾಣೆ ಅಪರಾಧ ಸಂ. 15/2020, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಸ್ವಾತಿ ಗಂಡ ದಾವಿದ್ ಮೇತ್ರೆ ವಯ: 23 ವರ್ಷ, ಜಾತಿ: ಕ್ರೀಶ್ಚಿಯನ್, ಸಾ: ಕಪಲಾಪೂರ(ಜೆ) ಗ್ರಾಮ, ತಾ: ಜಿ: ಬೀದರ ರವರ ಗಂಡನಾದ ದಾವಿದ್ ತಂದೆ ಘಾಳೆಪ್ಪಾ ಮೆತ್ರೆ ವಯ: 25 ವರ್ಷ ರವರು ಸಾರಾಯಿ ಕುಡಿಯುವ ಚಟದವರಿದ್ದು, ಹೀಗಿರುವಾಗ ದಿನಾಂಕ 22-08-2020 ರಂದು 0100 ಗಂಟೆಯಿಂದ 0630 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿಯವರ ಗಂಡ ಸಾರಾಯಿ ಕುಡಿದ ನಶೆಯಲ್ಲಿ ಮ್ಮ ಮನೆಯ ಬೇಡ್ ರೂಮಿನಲ್ಲಿ ವೈರಿನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ಘಟನೆಯ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 16/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 20-08-2020 ರಂದು ಫಿರ್ಯಾದಿ ಇಂದಮ್ಮ ಗಂಡ ಭೀಮಣ್ಣಾ ಮೂಳಕೆರೆ ಸಾ: ಕೊನ ಮೇಳಕುಂದಾ, ತಾ: ಭಾಲ್ಕಿ ರವರ ಗಂಡನಾದ ಭೀಮಣ್ಣಾ ತಂದೆ ತಿಪ್ಪಣ್ಣಾ ವಯ: 65 ವರ್ಷ ಇವರು ಒಕ್ಕಲುತನ ಕೆಲಸಕ್ಕೆಂದು ಮಾಡಿದ ಸಾಲವನ್ನು ಮರಳಿ ತಿರಿಸಲಾತದೇ ತನ್ನ ಮನಸ್ಸಿನ ಮೇಲೆ ಪರಿಣಾಮ ಹುಲ್ಲಿಗೆ ಹೊಡೆಯುವ ಔಷಧಿ ಸೇವಿಸಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22-08-2020 ರಂದು ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 37/2020, ಕಲಂ. 32, 34 ಕೆ.ಇ ಕಾಯ್ದೆ :-

ದಿನಾಂಕ 22-08-2020 ರಂದು ರುಪೇಶ ತಂದೆ ಭಗತರಾಜ ಕರಮಣಿಕರ ವಯ: 41 ವರ್ಷ, ಜಾತಿ: ಲಿಂಗಾಯತ, ಸಾ: ಗಾದಗಿ ಇತನು ತನ್ನ ಹೋಟಲ್ ಹತ್ತಿರ ಅಕ್ರಮವಾಗಿ ಸರಾಯಿ ಮಾರಾಟ ಮಾಡಲು  ಸಾಗಾಟ ಮಾಡುತ್ತಿದ್ದಾನೆಂದು ಸವಿತಾಪ್ರಿಯಾಂಕ ಪಿ.ಎಸ.ಐ ಬೀದರ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ದಾಳಿ ಮಾಡಿ ಸದರಿ ಆರೋಪಿತನಿಂದ 90 ಎಂ.ಎಲ್ ವುಳ್ಳ 48 ಓರಿಗಜಿನಲ್ ಚಾಯಿಸ್ ವಿಸ್ಕಿ ಅ.ಕಿ 1455/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ ಪೊಲೀಸ ಠಾಣೆ ಅಪರಾಧ ಸಂ. 51/2020, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 22-08-2020 ರಂದು ಫಿರ್ಯಾದಿ ಪ್ರೇಮಲಾಬಾಯಿ ಗಂಡ ಕೃಷ್ಣ ಪವಾರ ಸಾ: ಬಗದಲ () ತಾಂಡಾ ರವರ ಮಗಳಾದ ಅಶ್ವೀನಿ ವಯ: 09 ವರ್ಷ ಇವಳು ತಾಂಡಾ ಪ್ರೇಮಸಿಂಗ ರಾಠೋಡ ರವರ ಮಗಳಾದ ಕಾವೇರಿ ಇವಳೊಂದಿಗೆ ದನಗಳು ಮೇಯಿಸಲು ಬಗದಲ ಮೂರಾರ್ಜಿ ಶಾಲೆಯ ಕಡೆಗೆ ಕಳುಹಿಸಿ ಮರಳಿ ಮನೆಗೆ ರೋಡಿನ ಪಕ್ಕದಲ್ಲಿ ನಡೆದುಕೊಂಡು ಬರುವಾಗ ಬಗದಲ ತಾಂಡ ಮತ್ತು ಮೂರಾರ್ಜಿ ಶಾಲೆಯ ಮಧ್ಯದಲ್ಲಿರುವ ಕಾಶಿನಾಥ ತಂದೆ ರೇಖು ರವರ ಹೊಲದ ಹತ್ತಿರ ಇದ್ದ ಬ್ರೀಡ್ಜ ಮೇಲೆ ಮನ್ನಾಏಖೇಳ್ಳಿ ಕಡೆಯಿಂದ ಒಂದು ಅಪರಿಚಿತ ಕಾರ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಅಶ್ವೀನಿ ಇವಳಿಗೆ ಹಿಂದೆಯಿಂದ ಡಿಕ್ಕಿ ಮಾಡಿ ವಾಹನ ಸಮೇತ ಓಡಿ ಹೊಗಿರುತ್ತಾನೆ, ಸದರಿ ಅಪಘಾತದಿಂದ ಮಗಳು ಹಾರಿ ರೋಡಿನ ಮೇಲೆ ಬಿದ್ದಿದ್ದು, ಅವಳಿಗೆ ಹಣೆಯ ಮೇಲೆ ತರಚಿದ ರಕ್ತಗಾಯ, ಮೇಲಿನ ತುಟಿಗೆ ರಕ್ತಗಾಯ, ಎರಡು ಗಲ್ಲದ ಮೇಲೆ ತರಚಿದ ರಕ್ತಗಾಯವಾಗಿ 3 ಹಲ್ಲುಗಳು ಬಿದಿದ್ದು, ಬಲಗೈ ಮುಂಗೈಗೆ ತರಚಿದ ರಕ್ತಗಾಯ, ಗಟಾಯಿಗೆ ತರಚಿದ ರಕ್ತಗಾಯ, ಹೊಟ್ಟೆಯ ಮೇಲೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯ, ಎದೆಯ ಮೇಲೆ ಗುಪ್ತಗಾಯ, ಬಲಗಡೆ ಸೊಂಟದ ಮೇಲೆ ರಕ್ತಗಾಯ ಮತ್ತು ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಆಕೆಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಸಂತಪೂರ ಪೊಲೀಸ್ ಠಾಣೆ ಅಪರಾಧ ಸಂ. 58/2020, ಕಲಂ. 379 ಐಪಿಸಿ :-

ದಿನಾಂಕ 03-08-2020 ರಂದು 1230 ಗಂಟೆಯಿಂದ 1700 ಗಂಟೆಯ ಮದ್ಯದ ಅವಧಿಯಲ್ಲಿ ಫಿರ್ಯಾದಿ ಸಾಯಿನಾಥ ತಂದೆ ಪ್ರಭು ರಾಜಪುರೆ ವಯ: 36 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಾವದಗೇರಿ, ತಾ: ಜಿ: ಬೀದರ, ಸಾ: ಮಹಾರಾಜವಾಡಿ ರವರು ತನ್ನ ಸೂಜೂಕಿ ಆಕ್ಸೆಸ್ 125 ಮೋಟಾರ ಸೈಕಲ ನಂ. ಕೆಎ-38/ಡಬ್ಲೂ-2436, ಇಂಜಿನ್ ನಂ. ಎ.ಎಫ್.212019804, ಚಾಸಿಸ್ ನಂ. ಎಮ್.ಬಿ.8.ಡಿ.ಪಿ.11.ಎ.ಡಿ.ಕೆ.8.ಸಿ.93226 ಅ.ಕಿ 29,000/- ರೂ. ನೇದನ್ನು ಆಲೂರ(ಕೆ) ತಾಂಡಾ ರಸ್ತೆಯ ಮೇಲೆ ಆಲೂರ(ಕೆ) ಗ್ರಾಮದ ಬ್ರೀಜ ಹತ್ತಿರ ನಿಲ್ಲಿಸಿ ಹೋಲಕ್ಕೆ ಹೋಗಿ ಮರಳಿ ಬಂದು ಮೋಟಾರ ಸೈಕಲ ನೋಡಲಾಗಿ ಸದರಿ ಮೋಟಾರ ಸೈಕಲ ಇರಲಿಲ್ಲ, ಸದರಿ ಮೊಟಾರ್ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 22-08-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 108/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 22-08-2020 ರಂದು ಚಿಕ್ಕಲಚಾಂದಾ ಗ್ರಾಮದ ರಮೇಶ ಭೂರೆ ರವರ ಹೊಲದ ಹತ್ತಿರ ಸಾರ್ವಜನಿಕ ರೋಡಿನಲ್ಲಿ ಕೆಲವು ಜನರು ಇಸ್ಪೀಟ ಜೂಜಾಟಾ ಆಡುತಿದ್ದಾರೆಂದು ಮಹೇಂದ್ರಕುಮಾರ ಪಿ.ಎಸ್.ಐ. (ಕಾ.ಸೂ) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಕ್ಕಲಚಾಂದಾ ಗ್ರಾಮದ ರಮೇಶ ಭೂರೆ ರವರ ಹೊಲದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ರಮೇಶ ತಂದೆ ಬಸಪ್ಪಾ ಭೂರೆ ವಯ: 51 ವರ್ಷ, ಜಾತಿ: ಲಿಂಗಾಯತ, 2) ರಾಜಕುಮಾರ ತಂದೆ ಕಂಟೆಪ್ಪಾ ಹಜರಗೆ ವಯ: 38 ವರ್ಷ, ಜಾತಿ: ಲಿಂಗಾಯತ, 3) ಸಂತೀಷ ತಂದೆ ದಾದಾರಾವ ಮಾನೆ ವಯ: 41 ವರ್ಷ, ಜಾತಿ: ಮರಾಠಾ, 4) ಲಕ್ಷ್ಮಣ ತಂದೆ ಗುಂಡಾಜಿರಾವ ಖಾಶೇಂಪೂರೆ ವಯ: 35 ವರ್ಷ, ಜಾತಿ: ಮರಾಠಾ, 5) ಪಾಂಡುರಂಗ ತಂದೆ ವಿಶ್ವನಾಥ ಬಿರಾದಾರ ವಯ: 58 ವರ್ಷ, ಜಾತಿ: ಮರಾಠಾ, 6) ಲಕ್ಷ್ಮಣ ತಂದೆ ಮಾರಪ್ಪಾ ಭೊಸಲೆ ವಯ: 53 ವರ್ಷ, ಜಾತಿ: ಎಸ್.ಸಿ ಹೊಲಿಯಾ ಹಾಗೂ 7) ಶಿವಕುಮಾರ ತಂದೆ ವೈಜಿನಾಥ ಗೊಂಡಾ ವಯ: 30 ವರ್ಷ, ಜಾತಿ: ಎಸ್.ಟಿ ಗೊಂಡಾ ಎಲ್ಲರೂ ಸಾ: ಚಿಕ್ಕಲಚಾಂದಾ ಇವರೆಲ್ಲರೂ ದುಂಡಾಗಿ ಕುಳಿತು ಅಕ್ರಮವಾಗಿ ಹಣ ಹಚ್ಚಿ ಪಣತೊಟ್ಟು ಅಂದರ ಬಹಾರ ಪರೇಲ ಎಂಬ ನಸಿಬಿನ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 9300/- ರೂ ಹಾಗೂ 52 ಇಸ್ಪಿಟ ಎಲೆಗಳು ಪಂಚರು ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.