ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-10-2020
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 40/2020, ಕಲಂ. 279, 338 ಮತ್ತು 304 (ಎ) ಐಪಿಸಿ :-
ದಿನಾಂಕ 26-10-2020 ರಂದು ಫಿರ್ಯಾದಿ ಪ್ರೀಯಾಂಕಾ ಗಂಡ ಶಿವಕುಮಾರ ಭಾವಿಕಟ್ಟಿ ವಯ: 20 ವರ್ಷ, ಜಾತಿ: ಎಸ.ಸಿ, ಸಾ: ಮನ್ನಳ್ಳಿ ರವರು ತನ್ನ ತವರು ಮನೆಯಾದ ಸಿಂದೋಲ್ ಗ್ರಾಮದಲ್ಲಿ ನನ್ನ ಎರಡನೆ ಮಗನ ತೊಟ್ಟಿಲು ಕಾರ್ಯಕ್ರಮ ಇದ್ದ ಪ್ರಯುಕ್ತ ತನ್ನ ಗಂಡನಾದ ಶಿವಕುಮಾರ ಮತ್ತು ಮೊದಲನೆ ಮಗನಾದ ಹರ್ಷವರ್ದನ ಮತ್ತು ಸಂಬಂಧಿಕರು ತೊಟ್ಟಿಲು ಕಾರ್ಯಕ್ರಮಕ್ಕೆ ಬಂದಿದ್ದು, ನಂತರ ಕಾರ್ಯಕ್ರಮ ಮುಗಿಸಿಕೊಂಡು ಗಂಡ ಹೀರೋ ಹೊಂಡಾ ಹಂಕ ಮೋಟಾರು ಸೈಕಲ್ ನೇದರ ಮೇಲೆ ತನ್ನ ಹಿರಿಯ ಮಗನಾದ ಹರ್ಷವರ್ದನ ವಯ: 01 ವರ್ಷ 06 ತಿಂಗಳ ಮಗು ಜೋತೆಯಲ್ಲಿ ಮನ್ನಳ್ಳಿಗೆ ಹೋಗುವಾಗ ಸಿಂದೋಲ್ ಬ್ರೀಜ್ ಹತ್ತಿರ ತನ್ನ ಗಂಡ ಮೋಟಾರು ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೀಜ್ ಹತ್ತಿರ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಸ್ಕಿಡ್ ಆಗಿ ಕೆಳಗೆ ಬಿದ್ದಿರುತ್ತಾರೆ, ಇದರಿಂದ ಗಂಡನಾದ ಶಿವಕುಮಾರ ಇವರಿಗೆ ತಲೆಯಲ್ಲಿ ಭಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಬಾಯಿಯಿಂದ ರಕ್ತ ಸೋರುತಿತ್ತು, ಬಲಗಣ್ಣು ಹುಬ್ಬಿಗೆ ಗುಪ್ತಗಾಯವಾಗಿ ಬಾವು ಬಂದಿರುತ್ತದೆ ಮತ್ತು ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ ಹಾಗೂ ಮಗನಾದ ಹರ್ಷವರ್ದನ ಇತನಿಗೆ ಹೊಟ್ಟೆಯ ಕೆಳಭಾಗದಲ್ಲಿ ಹೊಟ್ಟೆ ಹರಿದು ಭಾರಿ ರಕ್ತಗಾಯವಾಗಿರುತ್ತದೆ, ನಂತರ ಹಿಂದೆ ಬರುತ್ತಿರುವ ಸಂಬಂಧಿಕರು ಸದರಿ ಘಟನೆ ನೋಡಿ 108 ಅಂಬುಲೇನ್ಸಗೆ ಕರೆಯಿಸಿ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ವೈಧ್ಯಾದೀಕಾರಿಗಳು ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಗೆ ಹೋಗಲು ತಿಳಿಸಿದ ಮೇರೆಗೆ ತನ್ನ ಗಂಡನಿಗೆ ಹೈದ್ರಾಬಾದನ ಮಲ್ಲಾರೆಡ್ಡಿ ನಾರಾಯಣ ಆಸ್ಪತ್ರೆ ಸುರ್ರಾರಮ್ ಮೆಡ್ಚಲ್ ಹೈದ್ರಾಬಾದ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಮತ್ತು ಮಗ ಹರ್ಷವರ್ದನ್ ಇತನಿಗೆ ನಿಲೋಫರ್ ಹೈದ್ರಾಬಾದ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ನಂತರ ಗಂಡನಾದ ಶಿವಕುಮಾರ ಈತನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27-10-2020 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 34/2020, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಈಶ್ವರಮ್ಮಾ ಗಂಡ ನವನಾಥ ವಯ: 40 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಖುಷಿ ನಗರ, ನಾವದಗೇರಿ ಬೀದರ ರವರ ಮಗಳಾದ ಶಿವಕಾಂತಾ ವಯ: 22 ವರ್ಷ ಇವಳು ಬಿ.ಇ.ಡಿ ವಿದ್ಯಾಭ್ಯಾಸ ಮಾಡುತ್ತಾಳೆ, ಹೀಗಿರುವಾಗ ದಿನಾಂಕ 12-10-2020 ರಂದು ರಾತ್ರಿ ಎಲ್ಲರೂ ಊಟ ಮಾಡಿ ಮಲಗಿಕೊಂಡಾಗ ರಾತ್ರಿ ಅಂದಾಜು 1230 ಗಂಟೆ ಸುಮಾರಿಗೆ ಶಿವಕಾಂತಾ ಇವಳು ರಾತ್ರಿ ಮೂತ್ರ ವಿಸರ್ಜನೆಗೆ ಎದ್ದು ಹೊರಗೆ ಹೋದವಳು ಮನೆಯೊಳಗೆ ಬಂದಿರುವುದಿಲ್ಲ ಅಂತ ಗಂಡನಾದ ನವನಾಥ ಮತ್ತು ತಮ್ಮನಾದ ಬುದ್ದ ತಂದೆ ಬಸವರಾಜ, ಮಗನಾದ ಶಿವಾನಂದ ರವರೆಲ್ಲರೂ ಕೂಡಿ ಬೀದರನ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಗುರುದ್ವಾರ, ಬೀದರ ನಗರ ಎಲ್ಲಾ ಕಡೆಗೆ ಹುಡುಕಾಡಿದರು ಪತ್ತೆಯಾಗಿರುವುದಿಲ್ಲ, ಅಲ್ಲದೇ ತಮ್ಮ ಸಂಬಂಧಿಕರೆಲ್ಲರಿಗೂ ವಿಚಾರಿಸಲಾಗಿ ಅವರಿಂದಲೂ ಸಹ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ನಂತರ ಮರು ದಿವಸ ಕಲಬುರ್ಗಿ, ವಿಜಯಪುರ, ಉಮರ್ಗಾ ಮತ್ತು ಬಸವಕಲ್ಯಾಣ ಇತರೆ ಎಲ್ಲಾ ಕಡೆಗೆ ಹುಡುಕಾಡಿದರೂ ಮಗಳು ಇಲ್ಲಿಯವರೆಗೆ ಪತ್ತೆ ಆಗಿರುವುದಿಲ್ಲ, ಅವಳು ಮನೆಯಿಂದ ಹೋಗುವಾಗ ಅವಳ ಮೈಮೇಲೆ ಗುಲಾಬಿ ಬಣ್ಣದ ನೂರಿ ಡ್ರೆಸ್, ಮೈಮೇಲೆ ಕಪ್ಪು ಬಣ್ಣದ ಸ್ವೇಟರ್ ಹಾಗೂ ಕೊರಳಲ್ಲಿ ಲಾಕಿಟ್ ಇರುತ್ತದೆ, ಅವಳು ಕನ್ನಡ, ಹಿಂದಿ, ಇಂಗ್ಲೀಷ್ ಮಾತನಾಡುತ್ತಾಳೆ, ಎಡ ಮತ್ತು ಬಲ ಕೆನ್ನೆಯ ಮೇಲೆ ಕಪ್ಪು ಮಚ್ಚೆಯ ಚುಕ್ಕೆ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 27-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 121/2020, ಕಲಂ. ಮನುಷ್ಯ ಕಾಣೆ :-
ದಿನಾಂಕ 24-10-2020 ರಂದು 0700 ಗಂಟೆ ಸುಮಾರಿಗೆ ಫಿರ್ಯಾದಿ ಮಹಾನಂದಾ ಗಂಡ ಶಿವಾನಂದಯ್ಯಾ ಸ್ವಾಮಿ ವಯ: 30 ವರ್ಷ, ಜಾತಿ: ಜಂಗಮ, ಸಾ: ಶಿವನಗರ (ದಕ್ಷಿಣ) ಬೀದರ ರವರ ಗಂಡನಾದ ಶಿವಾನಂದಯ್ಯಾ ಸ್ವಾಮಿ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ಶಿವನಗರ ದಕ್ಷಿಣ ಬೀದರ ರವರು ತಾನು ತುಳಜಾಪೂರಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಫಿರ್ಯಾದಿಗೆ ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿರುವುದಿಲ್ಲಾ, ತನ್ನ ಗಂಡನ ಬಗ್ಗೆ ತಮ್ಮ ಸಂಬಂಧಿಕರಿಗೆ ಕರೆ ಮಾಡಿ ವಿಚಾರಿಸಿದರೂ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ, ತನ್ನ ಗಂಡನ ಚಹರೆ ಪಟ್ಟಿ 1) ದುಂಡು ಮುಖ, ಅಗಲ ಹಣೆ, ಗೋಧಿ ಮೈಬಣ್ಣ, ನೇರವಾದ ಮೂಗು, ಎತ್ತರ 5 ಫಿಟ 7 ಇಂಚ, 2) ಮಾತನಾಡುವ ಭಾಷೆ :- ಕನ್ನಡ, ಇಂಗ್ಲೀಷ, ಹಿಂದಿ ಮತ್ತು ತೆಲಗು, 3) ಧರಿಸಿದ ಬಟ್ಟೆ :- ಪಿಂಕ ಕಲರ್ ಚೆಕ್ಸ ಫುಲ್ ಶರ್ಟ, ಬ್ಲ್ಯೂ ಜೀನ್ಸ ಪ್ಯಾಂಟ್ ಹಾಗೂ 3) ಅವರ ಹತ್ತಿರ ಒಂದು ಕೆಂಪು ಬೂದಿ ಬಣ್ಣದ ಕಾಲೇಜ ಬ್ಯಾಗ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 35/2020, ಕಲಂ. 498(ಎ), 323, 504 ಜೋತೆ 34 ಐಪಿಸಿ :-
ಫಿರ್ಯಾದಿ ಸಂಗೀತಾ ಗಂಡ ಸಚಿನ ಲಾದಾನೋರ ವಯ: 24 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ನಾವದಗೆರಿ ಬೀದರ ರವರು 2 ವರ್ಷಗಳಿಂದ ನಾವದಗೇರಿಯ ಸಚಿನ ತಂದೆ ಅಮೃತ ಈತನೊಂದಿಗೆ ಪ್ರೀತಿ ಮಾಡಿದ್ದು, ಇಬ್ಬರು ದಿನಾಂಕ 13-08-2020 ರಂದು ಬೀದರ ನೊಂದಣಿ ಕಛೇರಿಯಲ್ಲಿ ಮದುವೆ ಮಾಡಿಕೊಂಡಿದ್ದು, ಮದುವೆ ಮಾಡಿಕೊಂಡ ಬಗ್ಗೆ ಸಚಿನ ತಂದೆ ಅಮೃತ ಇತನ ತಾಯಿ ಸರಸ್ವತಿ ಇವರು ಮದುವೆಗೆ ಒಪ್ಪಿಗೆ ನೀಡಿರುವುದಿಲ್ಲಾ, ಮದುವೆ ಮಾಡಿಕೊಂಡು ಇಬ್ಬರು ಬೇರೆ ಮನೆ ಮಾಡಿ ವಾಸವಾಗಿದ್ದು, ಗಂಡ ಮದುವೆಯಾದ ನಂತರ ದಿನಾಲು ಸರಾಯಿ ಕುಡಿದು ಬಂದು ನಿನ್ನೊಡನೆ ಸಂಸಾರ ಮಾಡುವುದಿಲ್ಲಾ, ನೀನು ನನಗೆ ಇಷ್ಟ ಇಲ್ಲಾ, ನನ್ನ ತಂದೆ ತಾಯಿಗೂ ಸಹ ನೀನು ಇಷ್ಟ ಇಲ್ಲಾ ಅಂತಾ ಬೈಯುವುದು, ಕೈಯಿಂದ ಹೊಟ್ಟೆಯಲ್ಲಿ ಮತ್ತು ಬೆನ್ನಿನಲ್ಲಿ ಹೊಡೆದು ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೋಡುತ್ತಾ ಬಂದಿರುತ್ತಾನೆ, ಅಲ್ಲದೆ ಮಾವ ಅಮೃತ್ತ, ಅತ್ತೆ ಸರಸ್ವತಿ ಇವರು ಸಹ ಮಗನ ಜೋತೆಯಲ್ಲಿ ನೀನು ಸಂಸಾರ ಮಾಡಬೇಡ ಆತನಿಗೆ ಬೇರೆ ಮದುವೆ ಮಾಡುತ್ತೆವೆ ನೀನು ನನ್ನ ಮಗನಿಗೆ ಬಿಟ್ಟು ಹೋಗು ಇನ್ನೊಂದು ಮದುವೆ ಮಾಡುತ್ತೇವೆ ಅಂತಾ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾರೆ, ಸದರಿ ವಿಷಯವನ್ನು ಫಿರ್ಯಾದಿಯು ತನ್ನ ತಂದೆ ಎಸೆಪ್ಪಾ, ತಾಯಿ ಚಿತ್ರಮ್ಮಾ, ಅಕ್ಕ ಜೀವಿತಾ ಗಂಡ ಶರಣಪ್ಪಾ ರವರಿಗೂ ತಿಳಿಸಿದಾಗ ಅವರೆಲ್ಲರೂ ಗಂಡನಿಗೆ ಹಾಗು ಅತ್ತೆ, ಮಾವನವರಿಗೆ ಹಿಗೇಕೆ ಅವಳಿಗೆ ತ್ರಾಸ ಕೋಡುತ್ತಿದ್ದಿರಿ ಅವರಿಬ್ಬರು ಪ್ರೀತಿ ಮಾಡಿ ಮದುವೆ ಮಾಡಿಕೊಂಡಿರುತ್ತಾರೆ ಅಂತಾ ಬುದ್ದಿವಾದ ಹೇಳಲು ಹೋದರೆ ಸಂಗೀತಾ ಇವಳಿಗೆ ಮಗನ ಜೋತೆ ಸಂಸಾರ ಮಾಡುವುದು ಬೇಡ, ಆತನಿಗೆ ಇನ್ನೊಂದು ಮದುವೆ ಮಾಡುತ್ತೇವೆ, ಇವಳು ನೋಡಲು ಚೆನ್ನಾಗಿಲ್ಲಾ ಅಂತಾ ಅವರೊಂದಿಗೂ ಸಹ ತಕರಾರು ಮಾಡಿರುತ್ತಾರೆ, ಗಂಡ ಇಂದಿಗೆ ಸುಮಾರು 2 ತಿಂಗಳಿಂದ ಫಿರ್ಯಾದಿಗೆ ಬಾಡಿಗೆ ಮನೆಯಲ್ಲಿಯೇ ಬಿಟ್ಟು ಹೇಳದೆ ಕೇಳದೆ ಬಿಟ್ಟು ಹೋಗಿರುತ್ತಾನೆ, ಫಿರ್ಯಾದಿಯು ದಿನಾಂಕ 17-10-2020 ರಂದು ತನ್ನ ಅತ್ತೆ ಮಾವನವರಿಗೆ ಸಚಿನನ ಬಗ್ಗೆ ವಿಚಾರಿಸಲು ಹೋದಾಗ ಅತ್ತೆ ಮಾವನವರು ನಮಗೇನು ಕೇಳುತ್ತಿ ನೀನು ಹಾಗು ನಿನ್ನ ಗಂಡ ಬೇರೆ ಮನೆ ಮಾಡಿ ವಾಸವಾಗಿರುತ್ತಿರಿ, ಅವನ ಬಗ್ಗೆ ನಮಗೆನು ಗೊತ್ತಿಲ್ಲಾ, ಅವನು ಎಲ್ಲಿ ಹೋಗಿರುತ್ತಾನೆ ಅಂತಾ ನಮಗೆ ಗೊತ್ತಿಲ್ಲಾ, ನೀನು ನಮ್ಮ ಮನೆಗೆ ಬರಬೇಡ ಅಂತಾ ಜಗಳ ಮಾಡಿ ಕಳುಹಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-10-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 79/2020, ಕಲಂ. 279, 337, 338 ಐಪಿಸಿ ಜೊತೆ 185, 177 ಐಎಂವಿ ಕಾಯ್ದೆ :-
ದಿನಾಂಕ 27-10-2020 ರಂದು ಫಿರ್ಯಾದಿ ನಾಗನಾಜ ತಂದೆ ನರಸಿಂಗ ಹಲಗೆನೋರ್ ಸಾ: ಜನತಾ ಕಾಲೋನಿ ಹುಮನಾಬಾದ ರವರು ತನ್ನ ಖಾಸಗಿ ಕೆಲಸದ ಪ್ರಯುಕ್ತ ಅಂಬೇಡ್ಕರ್ ವೃತ್ತದ ಕಡೆಗೆ ಹೋಗಲು ಆಟೋದ ದಾರಿ ಕಾಯುತ್ತಾ ಜನತಾ ಕಾಲೋನಿಯ ಲಕ್ಷ್ಮಣ ಭೋವಿ ರವರ ಮನೆಯ ಹತ್ತಿರ ನಿಂತಿರುವಾಗ ಅಕ್ಕನ ಮಗ ಆರೋಪಿ ನಂ. 1 ಸಂತೋಷ ತಂದೆ ಪ್ರಭು ಹಲಗೆನೋರ್ ಸಾ: ಜನತಾ ಕಾಲೋನಿ ಹುಮನಾಬಾದ ಇವನು ತನ್ನ ಸ್ಕೂಟಿ ಮೋಟಾರ್ ಸೈಕಲ್ ಸಂ. ಏಂ-39/ಕಿ-6774 ನೇದನ್ನು ಕಲ್ಲೂರ ರೋಡ ಬೈಪಾಸ್ ಹನುಮಾನ ಮಂದಿರದ ಕಡೆಯಿಂದ ರಾಂಗ್ ಸೈಡಿನಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ಚಿದ್ರಿ ಬೈ ಪಾಸ್ ಕಡೆಯಿಂದ ಮೋಟಾರ್ ಸೈಕಲ್ ಸಂಖ. ಏಂ-39/ಕಿ-7488 ನೇದರ ಚಾಲಕನಾದ ಆರೋಪಿ ನಂ. 2 ಸೂರ್ಯಕಾಂತ ತಂದೆ ನರಸಪ್ಪಾ ಹೇಳವಾ ಸಾ: ಸಿಂಧನಕೇರಾ ಇತನು ಸರಾಯಿ ಕುಡಿದ ಅಮಲಿನಲ್ಲಿ ತನ್ನ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇಬ್ಬರೂ ಮುಖಾಮುಖಿ ಡಿಕ್ಕಿ ಮಾಡಿಕೊಂಡು ತಮ್ಮ- ತಮ್ಮ ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿರುತ್ತಾರೆ, ಸದರಿ ಡಿಕ್ಕಿಯಿಂದ ಸಂತೋಷ ಇವನಿಗೆ ನೋಡಲಾಗಿ ಬಲಗಡೆ ಕಪಾಳಕ್ಕೆ ತೀವ್ರ ರಕ್ತಗಾಯವಾಗಿರುತ್ತದೆ ಹಾಗೂ ಸೂರ್ಯಕಾಂತ ಇತನಿಗೆ ಬಲಗಡೆ ಕಣ್ಣಿನ ಮೇಲೆ ಸಾದಾ ರಕ್ತಗಾಯವಾಗಿರುತ್ತದೆ, ನಂತರ ಇಬ್ಬರೂ ಗಾಯಾಳುಗಳಿಗೆ ಚಿಕಿತ್ಸೆ ಕುರಿತು ಒಂದು ಖಾಸಗಿ ವಾಹನದಲ್ಲಿ ಕೂಡಿಸಿಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 137/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 27-10-2020 ರಂದು ಕವಡಿಯಾಳ (ಎಸ್) ಗ್ರಾಮದ ರಾಜು ಧಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಮಾರುತಿ ಎ.ಎಸ್.ಐ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಎ.ಎಸ್.ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಕೌಡಿಯಾಳ (ಎಸ್) ಗ್ರಾಮದ ರಾಜು ಧಾಭಾದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಕೌಡಿಯಾಳ(ಎಸ್) ಗ್ರಾಮದ ರಾಜು ಧಾಭಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ರಾಮ ತಂದೆ ನರಸಿಂಗ ಬಿರಾದಾರ ವಯ: 27 ವರ್ಷ, ಜಾತಿ: ಕಬ್ಬಲಿಗ, ಸಾ: ಕೌಡಿಯಾಳ(ಎಸ್), ತಾ: ಬಸವಕಲ್ಯಾಣ ಹಾಗೂ 2) ಗೌಸ ತಂದೆ ಹೈದರಸಾಬ ದಾದು ವಯ: 32 ವರ್ಷ, ಜಾತಿ: ಮುಸ್ಲಿಂ, ಸಾ: ಹಳೆಯ ಆಟೋ ನಗರ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಒಮ್ಮೇಲೆ ದಾಳಿ ಮಾಡಿ ಇಬ್ಬರಿಗೂ ಹಿಡಿದುಕೊಂಡು ಅವರಿಂದ ನಗದು ಹಣ 5500/- ರೂ., 04 ಮಟಕಾ ಚೀಟಿ ಹಾಗು 2 ಬಾಲ್ ಪೆನ್ನು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 145/2020, ಕಲಂ. 420 ಜೊತೆ 34 ಐಪಿಸಿ :-
ದಿನಾಂಕ 26-10-2020 ರಂದು ದಸರಾ ಹಬ್ಬದ ನಿಮಿತ್ಯ ಫಿರ್ಯಾದಿ ಮಲ್ಲಪ್ಪಾ ತಂದೆ ಸಂಗಪ್ಪಾ ಇಟಗಿ ವಯ: 75 ವರ್ಷ, ಸಾ: ಶಿವನಗರ ಕಾಲೋನಿ ಹುಮನಾಬಾದ ರವರು ಭವಾನಿ ಮಂದಿರಕ್ಕೆ ತನ್ನ ಹಿರೋ ಪ್ಲೇಜರ ಮೋಟಾರ ಸೈಕಲ ನಂ. ಕೆಎ-39/ಆರ್-7039 ನೇದ್ದರ ಮೇಲೆ ಹೋಗಿ ಮರಳಿ ಮನೆಗೆ ಹೋಗುವ ಕುರಿತು ಹುಮನಾಬಾದ ಪಟ್ಟಣದ ಜೂನಿಯರ ಕಾಲೇಜ ಮುಂದೆ ಬಂದಾಗ ಫಿರ್ಯಾದಿಯವರ ಮೋಟಾರ ಸೈಕಲ ಎದರುಗಡೆ ಒಬ್ಬ ಅಪರಿಚಿತ ವ್ಯಕ್ತಿ ತನ್ನ ಪಲ್ಸರ ಮೋಟಾರ ಸೈಕಲ ತರಹ ಇರುವ ಮೋಟಾರ ಸೈಕಲ ತಂದು ಮುಂದೆ ನಿಲ್ಲಿಸಿ ಅಡ್ಡಗಟ್ಟಿ ಇನ್ನೊಬ್ಬ ದೂರದಲ್ಲಿ ನಿಂತಿದ್ದು ಫಿರ್ಯಾದಯವರ ಹತ್ತಿರವಿದ್ದ ವ್ಯಕ್ತಿ ನನಗೆ ನಾವು ಬೆಂಗಳೂರದಿಂದ ಬಂದಿರುತ್ತೇವೆ ಸರಕಾರ ನಮ್ಮನ್ನು ವಿಶೇಷ ತನಿಖೆಗೆ ಕಳಹಿಸಿರುತ್ತಾರೆ, ಹುಮನಾಬಾದ ನಗರದಲ್ಲಿ ರಾತ್ರಿ ಗದ್ದಲು ಆಗಿರುತ್ತದೆ ನೀವು ನಿಮ್ಮ ಬೈಕ ಓಪನ ಮಾಡಿರಿ ಎಂದು ಚೇಕ ಮಾಡಿದರು ಅಷ್ಟರಲ್ಲಿ ದೂರ ನಿಂತ ವ್ಯಕ್ತಿ ಹಿಂದಿ ಭಾಷೆಯಲ್ಲಿ ಫಿರ್ಯಾದಿಯ ಹತ್ತಿರವಿದ್ದ ವ್ಯಕ್ತಿಗೆ ಕರೆದು ಆತನಲ್ಲಿದ್ದ ಪ್ಯಾಕೇಡ ಮೋಬೈಲ ಎಲ್ಲ ಸುದಿರ್ಘವಾಗಿ ಚೇಕ ಮಾಡಿ ನಂತರ ಎಲ್ಲವನ್ನು ಹಿಂತಿರುಗಿಸಿದರು, ನಂತರ ಫಿರ್ಯಾದಿಗೆ ಎಲ್ಲವನ್ನು ನನಗೆ ಪಾಕೇಟದಿಂದ ಹಣ ಡೈರಿ ಉಂಗುರ ತೆದೆಗು ಕರ್ಚಿಫನಲ್ಲಿ ಇಡಲು ತಿಳಿಸಿದಾಗ ಫಿರ್ಯಾದಿಯು ತನ್ನ ಕೈಯಲ್ಲಿದ್ದ 1) 4 ಗ್ರಾಮ ಓಂ ಚಿನ್ಹೆ ಇರುವ ಒಂದು ಬಂಗಾರದ ಉಂಗುರ ಅ.ಕಿ 20,000/- ರೂಪಾಯಿ ಮತ್ತು 2) ಒಂದು 6 ಗ್ರಾಮ ಬಂಗಾರದ ಕೆಂಪು-ಕಂದು ಮಾಣಿಕ್ಯ ಹಳ್ಳ ಇರುವ ಉಂಗುರ ಅ.ಕಿ 30,000/- ರೂಪಾಯಿ ಮತ್ತು ಪ್ಯಾಕೇಟ, ಡೈರಿ ಎಲ್ಲವನ್ನು ಕರ್ಚಿಫನಲ್ಲಿ ಬೈಕ ಡಿಕ್ಕಿಯಲ್ಲಿ ಇಟ್ಟಾಗ ಅವರು ಮನೆಗೆ ಹೋಗಿ ತನಿಖೆ ಮುಗಿದಿದೆ ಎಂದು ತಿಳಿಸಿದರು, ಇನ್ನೋಬ್ಬ ವ್ಯಕ್ತಿ ಹಿಂದಿಯಲ್ಲಿ ಮನೆಗೆ ಹೋಗುವರೆಗೆ ಬೈಕ ನಿಲ್ಲಿಸಬೇಡಿ ಎಂದು ಎಚ್ಚರಿಕೆ ರೂಪದಲ್ಲಿ ತಿಳಿಸಿದರು, ನಂತರ ಫಿರ್ಯಾದಿಯು ಮನೆಗೆ ಬಂದು ಕರ್ಚಿಪ್ ತೆಗೆದು ನೋಡಿದಾಗ ಎರಡು ಬಂಗಾರದ ಉಂಗುರಗಳು ಇರಲಿಲ್ಲ, ಫಿರ್ಯಾದಿಯವರ ಹತ್ತಿರವಿದ್ದ ಬಂಗಾರದ ಉಂಗುರು ತನಿಖೆ ಮಡುತ್ತಿದ್ದೇವೆ ಅಂತಾ ತಿಳಿಸಿ ಫಿರ್ಯಾದಿಯವರ ಹತ್ತಿರ ಮೋಸದಿಂದ ತೆಗೆದುಕೊಂಡವರು ಎತ್ತರವಾಗಿ ಇದ್ದು ಕರಿ ಬಣ್ಣದ ಪ್ಯಾಂಟ ಬಿಳಿ ಶರ್ಟ, ಹೆಲ್ಮೇಟ ಹಾಕಿದ್ದು ಇರುತ್ತದೆ, ಫಿರ್ಯಾದಿಯು ಅವರಿಗೆ ನೀವು ಯಾರೂ ಅಂತಾ ವಿಚಾರಿಸಲು ಅವರು ಆಸ್ಪದ ನೀಡಲಿಲ್ಲ ನಾವು ವಿಶೇಷ ತನಿಖೆಗೆ ಬಂದಿರುತ್ತೇವೆ ಅಂತಾ ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.