Police Bhavan Kalaburagi

Police Bhavan Kalaburagi

Monday, July 30, 2018

BIDAR DISTRICT DAILY CRIME UPDATE 30-07-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-07-2018

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 100/2018, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 29-07-2018 ರಂದು ಫಿರ್ಯಾದಿ ನೂರಜಹಾಬೇಗಂ ಗಂಡ ಎಮ್ ಡಿ ಸಲಿಂ ಬಳಗಾರ ವಯ: 43 ವರ್ಷ, ಜಾತಿ: ಮುಸ್ಲಿಂ, ಸಾ: ಇಂದಿರಾ ನಗರ ಹುಡಗಿ, ತಾ: ಹುಮನಾಬಾದ., ಜಿಲ್ಲಾ: ಬೀದರ ರವರು ತನ್ನ ಗಂಡ ಎಮ್.ಡಿ ಸಲಿಂ ಇಬ್ಬರೂ ಕೂಡಿಕೊಂಡು ಕೂಲಿ ಕೆಲಸ ಮಾಡಲು ಮನೆಯಿಂದ ಕಾಲ ನಡಿಗೆಯಲ್ಲಿ ನಡೆದುಕೊಂಡು ಹುಡಗಿ ಗ್ರಾಮಕ್ಕೆ ಹೋಗಿ ಕೂಲಿ ಕೆಲಸವನ್ನು ಮುಗಿಸಿಕೊಂಡು ಮರಳಿ ಮನೆಗೆ ಬರುವ ಪ್ರಯುಕ್ತ ಕಾಲ ನಡಿಗೆಯಲ್ಲಿ ರೋಡಿನ ಬದಿಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಹುಡಗಿ ಗ್ರಾಮದ ಬ್ರಿಜ್ ಹತ್ತಿರ ಹೋದಾಗ ಅದೇ ಸಮಯಕ್ಕೆ ತಮ್ಮೂರ ಮಹೆಬೂಬ ತಂದೆ ಪಾಶಾಮಿಯಾ ಮಚಕುರಿ ರವರು ತನ್ನ ಬೈಸಿಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂ. 65 ಹೈದ್ರಾಬಾದ - ಸೋಲಾಪುರ ರೋಡಿನ ಮೇಲೆ ಹಿಂದಿನಿಂದ ಅಂದರೆ ಸೋಲಾಪುರ ಕಡೆಯಿಂದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಗಂಡ ಮತ್ತು ತಮ್ಮೂರ ಎಮ್.ಡಿ ಮಹೆಬೂಬ ಇವರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಗಂಡನ ತಲೆಗೆ ಗಂಭೀರ ರಕ್ತಗಾಯ ಮತ್ತು ಬಲಗಾಲ ಮೊಣಕಾಲ ಕೆಳಗೆ ಗಂಭೀರ ಗುಪ್ತಗಾಯಗಳು ಆಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ, ಮಹೆಬೂಬ ಇವರಿಗೆ ಎಡಗಾಲ ಕಪಗಂಡದ ಮೇಲೆ ಗಂಭೀರ ರಕ್ತಗಾಯ, ಹಣೆಯ ಮೇಲೆ ಸಾದಾ ರಕ್ತಗಾಯ ಮತ್ತು ಹೊಟ್ಟೆಯ ಎಡಗಡೆಗೆ ಗಂಭೀರ ಗುಪ್ತಗಾಯಗಳು ಆಗಿದು ಪ್ರಜ್ಞೆ ಇಲ್ಲದೇ ರೋಡಿನ ಮೇಲೆ ಬಿದ್ದಿರುತ್ತಾನೆ, ನಂತರ ಮಹೆಬೂಬ ಇವನಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 79/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 29-07-2018 ರಂದು ಚಿಕ್ಕನಾಗಾಂವ ಗ್ರಾಮದಲ್ಲಿ  ಗ್ರಾಮ ಪಂಚಾಯತ ಕಟ್ಟೆಯ ಮೇಲೆ ಕರೆಂಟ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಶಿರೋಮಣಿ ಪಿಎಸ್ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಕ್ಕನಾಗಾಂವ ಗ್ರಾಮದ ಗ್ರಾಮ ಪಂಚಾಯತಯಿಂದ ಸ್ವಲ್ಪ ದೂರದಲ್ಲಿ ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ದುಂಡಾಗಿ ಕುಳಿತು ಇಸ್ಪಿಟ ಆಡುತ್ತಿದ್ದ ಆರೋಪಿತರಾದ 1) ಶರಣಪ್ಪಾ ತಂದ ಶಂಕರ ಕೊಟ್ಟರಗಿ ವಯ: 32 ವರ್ಷ, ಜಾತಿ: ಲಿಂಗಾಯತ, 2) ಮಲ್ಲಪ್ಪಾ ತಂದೆ ಕಾಶಪ್ಪಾ ನಾಟೀಕರ್ ವಯ: 30 ವರ್ಷ, ಜಾತಿ: ಕಬ್ಬಲಿಗ, 3) ಶರಣಪ್ಪಾ ತಂದೆ ನಿಂಗಶಟ್ಟೆಪ್ಪಾ ಬಸಟ್ಟಿ ವಯ: 42 ವರ್ಷ, ಜಾತಿ: ಲಿಂಗಾಯತ, 4) ಶ್ರೀಶೈಲ್ ತಂದೆ ವಿಜಯಕುಮಾರ ಕಮನೂರ ವಯ: 31 ವರ್ಷ, 5) ಭೀಮಶಾ ತಂದೆ ಶಿವಶರಣಪ್ಪಾ ಹೀರನಾಗಾಂವ, 6) ಶಿವಶರಣಪ್ಪಾ ತಂದೆ ರೇವಣಸಿದ್ದಪ್ಪಾ ತಮ್ಮಶಟ್ಟಿ ವಯ: 60 ವರ್ಷ, ಹಾಗೂ 7) ಪ್ರಾಶಂತ ತಂದೆ ಬೋಜಪ್ಪಾ ಬಿರಾದಾರ ವಯ: 30 ವರ್ಷ, ಜಾತಿ: ಲಿಂಗಾಯತ ಎಲ್ಲರೂ ಸಾ: ಚಿಕ್ಕನಾಗಾಂವ  ಇವರೆಲ್ಲರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ಹಣ 2650/- ರೂ. ಹಾಗೂ 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 29.07.2018 ರಂದು ಸಾಯಂಕಾಲ ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ  ಸಂತೋಷ ಕಾಲೋನಿಯ ಸ್ಮಶಾನದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ  ಮೇರೆಗೆ ಶಿವಪುತ್ರಪ್ಪಾ .ಎಸ್‌‌.  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಹನುಮಾನ ದೇವರ ಗುಡಿಯ ಪಕ್ಕದ ಸಾರ್ವಜನಿಕ ಸ್ಥಳಲ್ಲಿ 7 ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬನು ಎಲೆಗಳನ್ನು ಹಾಕಿದ್ದು, ಒಬ್ಬನು ಅಂದರಕ್ಕೆ 20 ರೂಪಾಯಿ ಮತ್ತು ಇನ್ನೂಬ್ಬನು ಬಾಹರಕ್ಕೆ 20 ರೂಪಾಯಿ ಅಂತ ಕೂಗುತ್ತಾ ಕಣದಲ್ಲಿ ಹಣ ಹಾಕುತ್ತಿದ್ದು ಸದರಿಯವರು ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಟ ನಿರತರನ್ನು ವಶಕ್ಕೆ ಪಡೆದುಕೊಂಡು ನಂತರ ಸದರಿಯವರ ಹೆಸರು ವಿಳಾಸ ವಿಚಾರಿಸಲು 1) ಶಿವರಾಜ ತಂದೆ ವಿಶ್ವನಾಥ ಪರತಾಪೂರೆ ಸಾ|| ಸಂತೋಷ ಕಾಲೋನಿ ಆಳಂದ ರಸ್ತೆ ಕಲಬುರಗಿ 2) ಬಸವರಾಜ ತಂದೆ ಮಲ್ಕಪ್ಪ ಬಿರೆದಾರ ಸಾ|| ದೇವಿನಗರ ಕಲಬುರಗಿ  3) ಗುಂಡಪ್ಪ ತಂದೆ ಶಿವಶರಣಪ್ಪ ವಸ್ತಾರಿ ಸಾ|| ದೇವಿನಗರ ಆಳಂದ ರಸ್ತೆ ಕಲಬುರಗಿ 4) ಮೃತುಂಜಯ ತಂದೆ ಶಿವಬಸಯ್ಯ ಸ್ವಾಮಿ ಸಾ|| ಸಂತೋಷ ಕಾಲೋನಿ ಕಲಬುರಗಿ 5) ರೆವಣಸಿದ್ದಪ್ಪ ತಂದೆ ಶಂಕರ ಮಾವಗಾಂವಕರ್ ಸಾ|| ದೇವಿನಗರ ಕಲಬುರಗಿ 6) ಅಯ್ಯಣ್ಣ ತಂದೆ ಮಲ್ಕಪ್ಪ ಪಾಟೀಲ್ ಸಾ|| ಶೇಖರೋಜಾ ಕಲಬುರಗಿ  7) ಬಸಣ್ಣ ತಂದೆ ಶಿವಶರಣಪ್ಪ ಬಳೂರ  ಸಾ|| ದುಭಾಯಿ ಕಾಲೋನಿ ಕಲಬುರಗಿ  ಅಂತಾ  ತಿಳಿಸಿದ್ದು  ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ಹಣ 2200/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 28-07-2018 ರಂದು  ಕರಜಗಿ ಗ್ರಾಮದ  ಬಮ್ಮಲಿಂಗೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಗ್ರಾಮದ ಶ್ರೀ ಬಮ್ಮಲಿಂಗೇಶ್ವರ ಗುಡಿಯ ಹತ್ತಿರ ಖುಲ್ಲಾ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿದ್ದರು, ನಾವು ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜೂಜಾಡುತಿದ್ದ 14 ಜನರನ್ನು ಹಿಡಿದಿದ್ದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಹಣಮಂತ ತಂದೆ ತುಕಾರಾಮ ಸುಲ್ತಾನಪೂರ ಸಾ||ಕರಜಗಿ 2) ನಬಿಲಾಲ ತಂದೆ ಅಹ್ಮದಸಾಬ ಚಂದನ 3) ನಾಗಪ್ಪ ತಂದೆ ಸಾತಲಿಂಗಪ್ಪ ರೇವೂರ 4) ಧರ್ಮಣ್ಣ ತಂದೆ ಪಾಂಡು ಸುಲ್ತಾನಪೂರ 5) ಭೀಮಾಶಂಕರ ತಂದೆ ಕಲ್ಲಪ್ಪ ಕೋಳಿ 6) ಸುಭಾಷ ತಂದೆ ತುಕಾರಾಮ ಸುಲ್ತಾನಪೂರ 7) ಮುರ್ತುಸಾಬ ತಂದೆ ಮಹೇಬೂಬಸಾಬ ಜಮಾದಾರ 8)ಪುಂಡಲಿಕ ತಂದೆ ಮಲ್ಕಣ್ಣ ವಾಂಗೆ 9) ದತ್ತಾತ್ರೇಯ ತಂದೆ ವಿಠೋಬಾ ಸುಲ್ತಾನಪೂರ 10) ಶವರು ತಂದೆ ಶರಣಪ್ಪ ತಳವಾರ 11)ಅಶೋಕ ತಂದೆ ನಾಗಪ್ಪ ಮೇತ್ರೆ 12) ಶರಣು ತಂದೆ ರಾಮಶೇಟ್ಟಿ ಜಿಡ್ಡಗಿ 13) ಭೀಮರಾಯ ತಂದೆ ಗುರುಲಿಂಗಪ್ಪ ನಾವಿ 14) ಬಾಬುಸಾಬ ತಂದೆ ಅಲ್ಲಾಭಕ್ಷ ಜಮಾದಾರ ಸಾ|| ರಲಗಲರು ಕರಜಗಿ ಗ್ರಾಮ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು 2690/- ರೂ ನಗದು ಹಣ  ಮತ್ತು 52 ಇಸ್ಪೆಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಾಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 27-07-2018 ರಂದು  ಅಫಜಲಪೂರ ಠಾಣಾ ವ್ಯಾಪ್ತಿಯ ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮಣೂರ ಗ್ರಾಮದ ಭೀಮಾನದಿಯಲ್ಲಿರುವ ಯಲ್ಲಮ್ಮಾ ದೇವಿ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಯಲ್ಲಮ್ಮಾ ದೇವಿ ಗುಡಿಯ ಹತ್ತಿರ ಆವರಣದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ರಾಜಶೇಖರ ತಂದೆ ಶಾಂತಪ್ಪ ಎಮ್ಮೆನವರ 2) ಶರಣಬಸಪ್ಪ ತಂದೆ ನೀಲಕಂಠ ಮೋಸಲಗಿ ಸಾ|| ಇಬ್ಬರು ಮಣೂರ ತಾ||ಆಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ರಾಜಶೇಖರ ಈತನಿಂದ ಮಟಕಾ ಜೂಜಾಟಕ್ಕೆ ಸಂಬಂದ ಪಟ್ಟ 740/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ಒಂದು ಪೇನ್ನ ದೋರೆತವು. ಶರಣಬಸಪ್ಪ  ಈತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 530/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಫಜಲಪೂರ ಠಾಣೆ : ದಿನಾಂಕ 27-07-2018  ಅಫಜಲಪೂರ ಠಾಣಾ ವ್ಯಾಪ್ತಿಯ ಮಣೂರ ಗ್ರಾಮದ ಬಸ್ಸಸ್ಯಾಂಡ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ   ಇಬ್ಬನು ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ, ಮರೆಯಾಗಿ ನಿಂತು ನೋಡಲು, ಸಾರ್ವಜನಿಕ ಸ್ಥಳದಲ್ಲಿ ವಿದ್ಯುತ ಕಂಬದ ಕೆಳಗಡೆ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು,ಮಟಕಾ ಬರೆದುಕೊಳ್ಳುತ್ತಿದ್ದರು. ಆಗ ದಾಳಿ ಮಾಡಿ ಹಿಡಿದು ಸದರಿಯವರ ಹೆಸರು ವಿಳಾಸ ವಿಚಾರಿಸಲಾಗಿ 1) ರಾಜಶೇಖರ ನಾಗಪ್ಪ ತಂದೆ ಶಾಂತಪ್ಪ ಪಾಟೀಲ 2) ರಮೇಶ ತಂದೆ ಸಂಗಪ್ಪ ಬಿರಾದಾರ ಸಾ|| ಇಬ್ಬರು ಮಣೂರ ತಾ||ಆಫಜಲಪೂರ  ಅಂತಾ ತಿಳಿಸಿದರು ನಂತರ ಸದರಿಯವರ ಅಂಗ ಶೋಧನೆ ಮಾಡಲಾಗಿ ಜೂಜಾಟಕ್ಕೆ ಸಂಬಂದ ಪಟ್ಟ ನಗದು ಹಣ 2540/- ರೂ   ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು, ಪೇನ್ನಗಳು ದೋರೆತಿದ್ದು ಅಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ಚಂದ್ರಕಾಂತ ಭಾಸಗಿ ಸಾ:ಕೋಟನುರ ಡಿ ಕಲಬುರಗಿ ರವರ  ತವರು ಮನೆ ಚಿತ್ತಾಪುರ ತಾಲ್ಲೂಕಿನ ಚೊಂಚಿ ಗ್ರಾಮ ಇದ್ದು ನಮ್ಮ ತಂದೆ-ತಾಯಿ ಮೊದಲು ಮೃತ ಪಟ್ಟಿದ್ದು ನನಗೆ ಒಬ್ಬಳು ಶಿವಲಿಂಗಮ್ಮ ಎನ್ನುವ ಬುದ್ದಿಮಾಂದೆ ತಂಗಿ ಇದ್ದು ಅಂಬರೀಶ ಮತ್ತು ರೂಪೇಶ ಎನ್ನುವ ತಮ್ಮಂದಿರು ಇರುತ್ತಾರೆ. ನಮ್ಮ ತಂಗಿ ಶಿವಲಿಂಗಮ್ಮಾ ಇವಳು ಬುದ್ದಿಮಾಂದ್ಯ ಇರುವ ಕಾರಣ ನಮ್ಮ ಮನೆಯಲ್ಲಿ ನೋಡಿಕೊಳ್ಳಲು ಯಾರು ಇರದೆ ಇರುವದರಿಂದ ಈಗ ಸುಮಾರು ಒಂದುವರೆ ವರ್ಷದ ಹಿಂದೆ ಕಲಬುರಗಿ ನಗರದ ಸರ್ಕಾರಿ ಬುದ್ದಿಮಾಂದ್ಯ ಬಾಲಕಿಯರ ಬಾಲ ಮಂದಿರದಲ್ಲಿ ಪಾಲನೆ ಪೋಷಣೆಗಾಗಿ ಶೇರಿಕೆ ಮಾಡಿದ್ದು ಅವರು ನಮ್ಮ ತಂಗಿಗೆ ಚನ್ನಾಗಿ ಪಾಲನೆ ಪೋಷಣೆ ಮಾಡಿಕೊಂಡು ಬಂದಿದ್ದು ನಮ್ಮ ತಂಗಿಗೆ ಆರಾಮ ತಪ್ಪಿದಾಗ ಆಸ್ಪತ್ರೆಗೆ ಸೇರಿಕೆ ಮಾಡಿ ಯೋಗ್ಯ ಉಪಚಾರ ಮಾಡಿಸುತ್ತಾ ಬಂದಿರುತ್ತಾರೆ. ನಾನು ಆಗಾಗ ನಮ್ಮ ತಂಗಿಗೆ ಮಾತನಾಡಿಸಿಕೊಂಡು ಬಂದಿರುತ್ತೇನೆ. ದಿನಾಂಕ:28/07/2018 ರಂದು ಸರ್ಕಾರಿ ಬುದ್ದಿಮಾಂದ್ಯ ಬಾಲಕಿಯರ ಬಾಲಮಂದಿರದಿಂದ ನನಗೆ ಪೋನಮಾಡಿ ಶಿವಲಿಂಗಮ್ಮಾ ಇವಳಿಗೆ ಜ್ವರ ಬಂದು ಅಶ್ವಸ್ಥಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಎಂದು ತಿಳಿಸಿದ್ದು ನಾನು 12.00 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ತಂಗಿ ಆರಾಮ ತಪ್ಪಿ ಅಶ್ವಸ್ಥಳಾಗಿ ಉಪಚಾರ ಪಡಿಯುತ್ತಿದ್ದಳು ನಮ್ಮ ತಂಗಿಯ ಹತ್ತಿರ ನಿರ್ಮಲಾ ಮೇಡಮ ಮತ್ತು ಶಿವುಬಾಯಿ ಇವರು ಇದ್ದರು ರಾತ್ರಿ 9.30 ಗಂಟೆ ಸುಮಾರಿಗೆ ನಮ್ಮ ತಂಗಿ ಶಿವಲಿಂಗಮ್ಮಾ ಇವಳು ಉಪಚಾರ ಫಲಕಾರಿಯಾಗದೆ ಮೃತ ಪಟ್ಟಿರುತ್ತಾಳೆ. ಕಾರಣ ನನ್ನ ತಂಗಿ ಶಿವಲಿಂಗಮ್ಮಾ ಇವಳು ಬುದ್ದಿಮಾಂದ್ಯಳಿದ್ದು ಬಾಲಕಿಯರ ಬಾಲಮಂದಿರದಲ್ಲಿ ಪಾಲನೆ ಪೋಷಣೆಯಲ್ಲಿದ್ದಾಗ ಜ್ವರ ಬಂದು ಅನಾರೋಗ್ಯದಿಂದ ಬಳಲಿ ಮೃತ ಪಟ್ಟಿರುತ್ತಾಳೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಎಸುಬಾಯಿ ಗಂಡ ಸುಬಾಷ ಲೋಣಾರ  ಸಾ|| ಅಶೋಕ ನಗರ ಕರಜಗಿ ಗ್ರಾಮ ರವರ ಗಂಡನಾದ ಸುಬಾಷ ತಂದೆ ನಾತೋಜಿ ಲೋಣಾರ ಒಕ್ಕಲುತನದ ಕೆಲಸ ಮಾಡಿಕೊಂಡಿದ್ದನು. ನನ್ನ ಗಂಡನ ಅಣ್ಣ ತಮ್ಮರು ಒಟ್ಟು 4 ಜನರಿದ್ದು, ಎಲ್ಲರೂ ಬೇರೆ ಬೇರೆಯಾಗಿರುತ್ತಾರೆ. ನನ್ನ ಗಂಡನ ಹೆಸರಿಗೆ ಕರಜಗಿ ಸೀಮಾಂತರದಲ್ಲಿ 4 ಎಕರೆ ಜಮೀನು ಬಂದಿರುತ್ತದೆ. ನಾನು ಮತ್ತು ನನ್ನ ಗಂಡ ಸದರಿ ಹೊಲದಲ್ಲಿಯೆ ಕೆಲಸ ಮಾಡಿಕೊಂಡು ಉಪ ಜಿವನ ಸಾಗಿಸುತ್ತಿರುತ್ತೇವೆ. ಬಮ್ಮ  ಹಿರಿಯ ಮಗಳ ಮದುವೆ ಮಾಡಲು  ನನ್ನ  ಗಂಡನು ಹೊಲದ ಸಾಗುವಳಿ ಸಂಭಂದ ಎಸ್.ಬಿ. ಬ್ಯಾಂಕ ಮಣೂರದಲ್ಲಿ 2,20,000/- ರೂ ಬೆಳೆ ಸಾಲ, ಊರಿನವರ ಹತ್ತಿರ 4 ರಿಂದ 5 ಲಕ್ಷ ರೂಪಾಯಿ ಸಾಲ ಮಾಡಿರುತ್ತಾನೆ. ನಮ್ಮ ಸಂಸಾರ ಮತ್ತು ನಮ್ಮ ಮಕ್ಕಳ ವಿದ್ಯಾಬ್ಯಾಸ ನಮ್ಮ ಪಾಲಿಗೆ ಬಂದ 4 ಎಕರೆ ಜಮೀನಿನ ಮೇಲೆ ನಡೆದಿರುತ್ತದೆ. ದಿನಾಂಕ 28-07-2018 ರಂದು ರಾತ್ರಿ 10:00 ಗಂಟೆಗೆ ನನ್ನ ಗಂಡ ಊರಿನ ಜನರ ಹತ್ತಿರ ಹಣ ತಗೆದುಕೊಂಡಿದ್ದೇನೆ ಅದು ತಿರಿಸುವುದು ಹೇಗೆ ? ಸದ್ಯ ಹೊಲದಲ್ಲಿ ತೊಗರಿ ಬಿತ್ತಿದ್ದೇವೆ ಮಳೆನೂ ಸರಿಯಾಗಿ ಬರುತ್ತಿಲ್ಲ, ಹೀಗೆ ಆದರೆ ನಾನು ಸಾಲ ತೀರಿಸುವುದು ಹೇಗೆ ಎಂದು ಚಿಂತೆ ಮಾಡುತ್ತಾ ಬಹಳ ಹೊತ್ತು ಮಲಗದೆ ಚಿಂತೆ ಮಾಡುತ್ತಾ ಕುಳಿತಿದ್ದರು, ಆಗ ನಾನು ನನ್ನ ಗಂಡನಿಗೆ ಇಬ್ಬರೂ ಕೂಡಿ ಕೂಲಿ ನಾಲಿ ಮಾಡಿ ಸಾಲ ತೀರಿಸೋಣ ಏಮಿ ಆಗಲ್ಲ ಚಿಂತೆ ಮಾಡಬೇಡಿ ಎಂದು ಹೇಳಿರುತ್ತೇನೆ. ಆದರೆ ನನ್ನ ಗಂಡ ಯಾರ ಹತ್ತಿರ ಹಣ ತಗೆದುಕೊಂಡಿದ್ದೆನೆ ಎಂಬ ಬಗ್ಗೆ ಹೇಳಿರುವುದಿಲ್ಲ. ದಿನಾಂಕ 29-07-2018 ರಂದು ಬೆಳಗಿನಜಾವ 05:00 ಗಂಟೆಗೆ ನನ್ನ ಗಂಡ ಬಿರ್ಹಿರದೇಸೆಗೆ ಹೊಲದ ಕಡೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ. ನನ್ನಗಂಡ ಎಷ್ಟೊತ್ತಾದರೂ ಮನೆಗೆ ಬರದ ಕಾರಣ ನಾನು ಬೆಳಿಗ್ಗೆ 07:30 ಗಂಟೆಗೆ ನನ್ನ ಮಕ್ಕಳಾದ ಬಾಳಪ್ಪ ಮತ್ತು ಸವಿತಾ ಇವರನ್ನು ಹೊಲಕ್ಕೆ ಹೋಗಿ ನಿಮ್ಮ ಅಪ್ಪನನ್ನು ಕರೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಿರುತ್ತೇನೆ. ಹೊಲದಿಂದ ನನ್ನ ಮಕ್ಕಳು ಅಳುತ್ತಾ ಮನೆಗೆ ಬಂದು ಅಪ್ಪನಿಗೆ ಏನೋ ಆಗಿದೆ ಮಾತಾಡದೆ ವಾಂತಿ ಮಾಡಿಕೊಂಡು ಹೊಲದಲ್ಲಿ ಬಿದ್ದಿದ್ದಾನೆ. ನಾವು ಎಷ್ಟು ಎಬ್ಬಿಸಿದರೂ ಏಳುತ್ತಿಲ್ಲ ಎಂದು ಹೇಳಿದರೂ, ನಾನು ಗಾಬರಿಯಾಗಿ ನಾನು ಮತ್ತು ನಮ್ಮ ಸುರೇಶ ಹಣಮಂತ ಲೋಣಾರ, ಅಂಬೋಜಿ ತಂದೆ ಧರೇಪ್ಪ ನರಳೆ, ಹಾಗೂ ನನ್ನ ಗಂಡನ ತಮ್ಮಂದಿರಾ ಸಂಜೀವ, ದೊಂಡಿಬಾ, ಸಿದ್ದಪ್ಪ ಎಲ್ಲರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ನೋಡಲಾಗಿ ನನ್ನ ಗಂಡನು ಮೃತ ಪಟ್ಟಿದ್ದನು. ನನ್ನ ಗಂಡನ ಶವದ ಬಾಜು ಒಂದು ವಿಷದ ಬಾಟಲಿ ಹಾಗೂ ವಾಂತಿ ಮಾಡಿಕೊಂಡಿದ್ದನು, ನನ್ನ ಗಂಡನು ವಿಷ ಸೇವನೆ ಮಾಡಿ ಆತ್ಮಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ ಸಾ: ಅಫಜಲಪೂರ  ರವರು ದಿನಾಂಕ 24-07-2018 ರಂದು ಬೆಳಿಗ್ಗೆ ಚವಡಾಪೂರ ದಿಂದ ಅಫಜಲಪೂರಕ್ಕೆ ಬರುವಾಗ ಮಲ್ಲಾಬಾದ ಗ್ರಾಮದಾಟಿ ರೋಡಿನ ಬಾಜು ಒಬ್ಬ ವ್ಯಕ್ತಿ ಅಂದಾಜು 65 ವರ್ಷ ವಯಸ್ಸಿನ ವ್ಯಕ್ತಿ  ಅನಾರೋಗ್ಯದಿಂದ ಬಿದಿದ್ದು ನಾನು ಸದರಿಯವನಿಗೆ ಮಾತನಾಡಿಸಲು ಸದರಿಯವನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ ನಂತರ 108 ಅಂಬುಲೇನ್ಸಗೆ ಕರೆ ಮಾಡಿ ಅದರಲ್ಲಿ ಸದರಿ ವ್ಯಕ್ತಿಗೆ ಹಾಕಿಕೊಂಡು ಸರಕಾರಿ ಆಸ್ಪತ್ರೆ ಅಫಜಲಪೂರಕ್ಕೆ ತಂದು ಸೇರಿಕೆ ಮಾಡಿದ್ದು ವೈಧ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರ ಮೇರೆಗೆ ನಾನು  ಅಂಬುಲೇನ್ಸದಲ್ಲಿ ಹಾಕಿಕೊಂಡು ದಿನಾಂಕ 25-07-2018 ರಂದು ಸರಕಾರಿ  ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ದಿನಾಂಕ 29-07-2018 ರಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆಯಿಂದ ನನಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದೇನೆಂದರೆ ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಇದ್ದು ಬೆಳಿಗ್ಗೆ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು ಇರುತ್ತದೆ. ಕಾರಣ ಸದರಿ ವ್ಯಕ್ತಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿ ಯಾಗದೇ ಮೃತ ಪಟ್ಟಿದ್ದು ಸದರಿಯವನು ಮೃತ ಪಟ್ಟ ಬಗ್ಗೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಾನಸಪ್ಪ ತಂದೆ ದೇವಿಂದ್ರ ನಂದಿಹಳ್ಳಿ ಸಾ: ನರಿಬೋಳ ಗ್ರಾಮ ತಾ ; ಜೇವರಗಿ ರವರು ದಿನಾಂಕ; 28/07/2018 ರಂದು ಮದ್ಯಾಹ್ನ ನರಿಬೋಳ ಗ್ರಾಮದಲ್ಲಿ ಸಿಸಿ ರಸ್ತೆಯ ಚರಂಡಿಯ ಕಾಮಗಾರಿ ನಡೆದಿದ್ದು ಸದರಿ ಕಾಮಗಾರಿಯನ್ನು ನಮ್ಮ ಊರಿನ ಶರಣಪ್ಪ ಚಿಕ್ಕಜೇವರಗಿ ಈತನು ಇತರರೊಂದಿಗೆ ಕೂಡಿಕೊಂಡು ಸಿಟಿಸಿ ಕೆಲಸ ಮಾಡುತ್ತಿರುವಾಗ ನನ್ನ ತಮ್ಮ ಸೂರ್ಯಕಾಂತನು ಸದರಿ ಕಾಮಗಾರಿಯ ಕೆಲಸ ಮಾಡುವವರನ್ನು ಇಲ್ಲಿ ಜಾಗದಲ್ಲಿ ಚರಂಡಿ ನಿರ್ಮಿಸಿದರೆ ನೀರು ನನ್ನ ಮಾವನ ಮನೆಯಲ್ಲಿ ಬರುತ್ತವೆ. ಇಲ್ಲಿ ಚರಂಡಿ ಕೆಲಸ  ಮಾಡಬೇಡಿ ಎಂದು ಹೇಳಿದ್ದಕ್ಕೆ ಅಲ್ಲಿಯೇ ಇದ್ದ 01) ಶರಣಪ್ಪ ತಂದೆ ಹಣಮಂತ ಚಿಕ್ಕಜೇವರಗಿ 02) ಮಲ್ಲಪ್ಪ ತಂದೆ ಮೂಕಪ್ಪ ತಳಗೇರಿ 0) ಶರಣಬಸು ತಂದೆ ಮೂಕಪ್ಪ ತೆಳಗೇರಿ 04) ಅಭಿಮಾನ್ ತಂದೆ ಮೂಕಪ್ಪ ತಳಗೆರಿ 05) ಮಾರ್ತಂಡ ತಂದೆ ಮೂಕಪ್ಪ ತಳಗೇರಿ 06) ಮಲ್ಲಪ್ಪ ಕೊಳ್ಳೂರು 07) ಹಣಮಂತ ತಂದೆ ಮಹಾದೇವಪ್ಪ ಹೊಟ್ಟೆ 08) ಮಹಾದೇವ ತಂದೆ ಮಲ್ಲಪ್ಪ ಹೊಟ್ಟೆ ಎಲ್ಲರೂ ಸಾ: ನರಿಬೋಳ ಇವರೆಲ್ಲರು ಕೂಡಿ ಅಕ್ರಮ ಕೂಟ ಕಟ್ಟಿಕೊಂಡು ಬಂದವರೆ ನೀ ಏನು ಕೇಳುತ್ತಿ ಬೋಸಡಿ ಮಗನೆ ಎಂದು ಅವಾಚ್ಯವಾಗಿ ಬೈದು ಮಲ್ಲಪ್ಪ ಕೊಳ್ಳೂರ ಮತ್ತು ಹಣಮಂತ ಹೊಟ್ಟೆ ಇವರು ನನ್ನ ತಮ್ಮನಿಗೆ  ಹಿಡಿದಾಗ ಶರಣಬಸು ಈತನು ಕೊಲೆ ಮಾಢುವ ಉದ್ಧೇಶದಿಂದ ನನ್ನ ತಮ್ಮನ ತಲೆಯ ಮೇಲೆ ಬಡಿಗೆಯಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿರುತ್ತಾನೆ. ಮತ್ತು ಶರಣಪ್ಪ ಚಿಕ್ಕಜೇವರಗಿ ಈತನು ಕಲ್ಲಿನಿಂದ ತಲೆಯ ಮೇಲೆ ಮತ್ತು ಬಲ ಮಗ್ಗಲಿಗೆ ಹೊಡೆದನು. ಮಹಾದೇವ ಹೊಟ್ಟೆ ಈತನು ಹಣಮಂತ ಹೊಟ್ಟೆ ಇಬ್ಬರು ಅರೆ ಗಾಯ ಮಾಡಬೇಡರಿ ಜೀವನೇ ಹೊಡೆದು ಬಿಡರಿ ಎಂದು ಹೇಳಿದಾಗ ಅಭಿಮಾನ್ಯ ಈತನು ಬಡಿಗೆಯಿಂದ ನನ್ನ ತಮ್ಮನ ಎದೆಯ ಮೇಲೆ, ಮಗ್ಗಲಿಗೆ ಹೊಡೆದಿರುತ್ತಾನೆ. ಮಾರ್ತಂಡ ಈತನು ಕಲ್ಲಿನಿಂದ ಹೊಡೆದು ಕೊಲೆ ಮಾಡುವ ಉದ್ದೇಶದಿಂದ ಕಲ್ಲು ಎತ್ತಿ ಹಾಕಲು ಹೋದಾಗ ಅಲ್ಲಿಯೇ ಇದ್ದ ನಾನು ಮತ್ತು ನನ್ನ ಅತ್ತೆ ಲಕ್ಷ್ಮೀಬಾಯಿ ಗಂಡ ಶರಣಪ್ಪ ಜೈನಾಪೂರ ನನ್ನ ತಮ್ಮನ ಮಗಳಾದ ಅಂಬಿಕಾ, ಮತ್ತು ಮರೆಣ್ಣ ತಂದೆ ತಿಪ್ಪಣ್ಣ ತಳವಾರ, ಮಲ್ಲಿಕಾರ್ಜಿಉನ್ ತಂದೆ ದೊಡ್ಡಪ್ಪ ದೊಡಮನಿ ಮತ್ತು ಭೀಮಣ್ಣ ತಂದೆ ಕೃಷ್ಣಪ್ಪ ಹೊಟ್ಟೆ ಇವರೆಲ್ಲರೂ ಕೂಡಿ ಬಿಡಿಸಿಕೊಂಡೇವು. ನಂತರ ಅವರು ಮಗೆನೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ವಂಶ ಉಳಿಸುವದಿಲ್ಲ ಎಂದು ಜೀವದ ಭೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.