Police Bhavan Kalaburagi

Police Bhavan Kalaburagi

Monday, July 30, 2018

BIDAR DISTRICT DAILY CRIME UPDATE 30-07-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 30-07-2018

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 100/2018, ಕಲಂ. 279, 338, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 29-07-2018 ರಂದು ಫಿರ್ಯಾದಿ ನೂರಜಹಾಬೇಗಂ ಗಂಡ ಎಮ್ ಡಿ ಸಲಿಂ ಬಳಗಾರ ವಯ: 43 ವರ್ಷ, ಜಾತಿ: ಮುಸ್ಲಿಂ, ಸಾ: ಇಂದಿರಾ ನಗರ ಹುಡಗಿ, ತಾ: ಹುಮನಾಬಾದ., ಜಿಲ್ಲಾ: ಬೀದರ ರವರು ತನ್ನ ಗಂಡ ಎಮ್.ಡಿ ಸಲಿಂ ಇಬ್ಬರೂ ಕೂಡಿಕೊಂಡು ಕೂಲಿ ಕೆಲಸ ಮಾಡಲು ಮನೆಯಿಂದ ಕಾಲ ನಡಿಗೆಯಲ್ಲಿ ನಡೆದುಕೊಂಡು ಹುಡಗಿ ಗ್ರಾಮಕ್ಕೆ ಹೋಗಿ ಕೂಲಿ ಕೆಲಸವನ್ನು ಮುಗಿಸಿಕೊಂಡು ಮರಳಿ ಮನೆಗೆ ಬರುವ ಪ್ರಯುಕ್ತ ಕಾಲ ನಡಿಗೆಯಲ್ಲಿ ರೋಡಿನ ಬದಿಯಲ್ಲಿ ನಡೆದುಕೊಂಡು ಮನೆಗೆ ಬರುತ್ತಿದ್ದಾಗ ಹುಡಗಿ ಗ್ರಾಮದ ಬ್ರಿಜ್ ಹತ್ತಿರ ಹೋದಾಗ ಅದೇ ಸಮಯಕ್ಕೆ ತಮ್ಮೂರ ಮಹೆಬೂಬ ತಂದೆ ಪಾಶಾಮಿಯಾ ಮಚಕುರಿ ರವರು ತನ್ನ ಬೈಸಿಕಲ್ ನಿಧಾನವಾಗಿ ರೋಡಿನ ಬದಿಯಲ್ಲಿ ಚಲಾಯಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂ. 65 ಹೈದ್ರಾಬಾದ - ಸೋಲಾಪುರ ರೋಡಿನ ಮೇಲೆ ಹಿಂದಿನಿಂದ ಅಂದರೆ ಸೋಲಾಪುರ ಕಡೆಯಿಂದ ಅಪರಿಚಿತ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಗಂಡ ಮತ್ತು ತಮ್ಮೂರ ಎಮ್.ಡಿ ಮಹೆಬೂಬ ಇವರುಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದ ಫಿರ್ಯಾದಿಯ ಗಂಡನ ತಲೆಗೆ ಗಂಭೀರ ರಕ್ತಗಾಯ ಮತ್ತು ಬಲಗಾಲ ಮೊಣಕಾಲ ಕೆಳಗೆ ಗಂಭೀರ ಗುಪ್ತಗಾಯಗಳು ಆಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾರೆ, ಮಹೆಬೂಬ ಇವರಿಗೆ ಎಡಗಾಲ ಕಪಗಂಡದ ಮೇಲೆ ಗಂಭೀರ ರಕ್ತಗಾಯ, ಹಣೆಯ ಮೇಲೆ ಸಾದಾ ರಕ್ತಗಾಯ ಮತ್ತು ಹೊಟ್ಟೆಯ ಎಡಗಡೆಗೆ ಗಂಭೀರ ಗುಪ್ತಗಾಯಗಳು ಆಗಿದು ಪ್ರಜ್ಞೆ ಇಲ್ಲದೇ ರೋಡಿನ ಮೇಲೆ ಬಿದ್ದಿರುತ್ತಾನೆ, ನಂತರ ಮಹೆಬೂಬ ಇವನಿಗೆ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 79/2018, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 29-07-2018 ರಂದು ಚಿಕ್ಕನಾಗಾಂವ ಗ್ರಾಮದಲ್ಲಿ  ಗ್ರಾಮ ಪಂಚಾಯತ ಕಟ್ಟೆಯ ಮೇಲೆ ಕರೆಂಟ ಲೈಟಿನ ಬೆಳಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ನಸೀಬಿನ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಶಿರೋಮಣಿ ಪಿಎಸ್ಐ ಮುಡಬಿ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಚಿಕ್ಕನಾಗಾಂವ ಗ್ರಾಮದ ಗ್ರಾಮ ಪಂಚಾಯತಯಿಂದ ಸ್ವಲ್ಪ ದೂರದಲ್ಲಿ ಸಿಬ್ಬಂದಿ ಹಾಗು ಪಂಚರೊಂದಿಗೆ ಹೋಗಿ ದುಂಡಾಗಿ ಕುಳಿತು ಇಸ್ಪಿಟ ಆಡುತ್ತಿದ್ದ ಆರೋಪಿತರಾದ 1) ಶರಣಪ್ಪಾ ತಂದ ಶಂಕರ ಕೊಟ್ಟರಗಿ ವಯ: 32 ವರ್ಷ, ಜಾತಿ: ಲಿಂಗಾಯತ, 2) ಮಲ್ಲಪ್ಪಾ ತಂದೆ ಕಾಶಪ್ಪಾ ನಾಟೀಕರ್ ವಯ: 30 ವರ್ಷ, ಜಾತಿ: ಕಬ್ಬಲಿಗ, 3) ಶರಣಪ್ಪಾ ತಂದೆ ನಿಂಗಶಟ್ಟೆಪ್ಪಾ ಬಸಟ್ಟಿ ವಯ: 42 ವರ್ಷ, ಜಾತಿ: ಲಿಂಗಾಯತ, 4) ಶ್ರೀಶೈಲ್ ತಂದೆ ವಿಜಯಕುಮಾರ ಕಮನೂರ ವಯ: 31 ವರ್ಷ, 5) ಭೀಮಶಾ ತಂದೆ ಶಿವಶರಣಪ್ಪಾ ಹೀರನಾಗಾಂವ, 6) ಶಿವಶರಣಪ್ಪಾ ತಂದೆ ರೇವಣಸಿದ್ದಪ್ಪಾ ತಮ್ಮಶಟ್ಟಿ ವಯ: 60 ವರ್ಷ, ಹಾಗೂ 7) ಪ್ರಾಶಂತ ತಂದೆ ಬೋಜಪ್ಪಾ ಬಿರಾದಾರ ವಯ: 30 ವರ್ಷ, ಜಾತಿ: ಲಿಂಗಾಯತ ಎಲ್ಲರೂ ಸಾ: ಚಿಕ್ಕನಾಗಾಂವ  ಇವರೆಲ್ಲರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ಹಣ 2650/- ರೂ. ಹಾಗೂ 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: