Police Bhavan Kalaburagi

Police Bhavan Kalaburagi

Saturday, July 4, 2020

BIDAR DISTRICT DAILY CRIME UPDATE 04-07-2020



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 04-07-2020

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 38/2020 ಕಲಂ 279, 337, 338, 304 ()  ಐಪಿಸಿ :-

ದಿನಾಂಕ 03/07/2020 ರಂದು ಮದ್ಯಾಹ್ನ 1430 ಗಂಟೆಯ ಸುಮಾರಿಗೆ ಫಿರ್ಯಾದಿ ನಾಜೀಯಾ ಬೇಗಂ ಗಂಡ ಮೋಹ್ಮದ್ ರಿಯಾಜ ಗುತ್ತೆದಾರ ಸಾ|| ಮರಖಲ್  ಮತ್ತು ಇವರ ಗಂಡ ಮೊಹ್ಮದ್ ರಿಯಾಜ ತಂದೆ ಅಬ್ದುಲ್ ಸತ್ತಾರ ಮತ್ತು ಮಗಳಾದ ನಹಿಮಾ ವಯ|| 7 ವರ್ಷ ರವರು ಮ್ಮ ಹಿರೋ ಹೊಂಡಾ ಸಿಡಿ ಡಿಲಕ್ಸ್ ಮೋಟಾರ್ ಸೈಕಲ್ ನಂಬರ ಕೆಎ-38/ಕೆ- 9541 ನೇದರ ಮೇಲೆ ಮರಖಲದಿಂದ ಮೈಲೂರದಲ್ಲಿರುವ  ಅತ್ತೆ ಮಾವನ ಮನೆಗೆ ಹೊಗುತ್ತಿದ್ದು   ಮರಖಲ್ ಬೀದರ ರೋಡಿನ  ರಾಜಕುಮಾರ ಪಾಟೀಲ್ ರವರ ಹೊಲದ ಹತ್ತಿರ ಬಂದಾಗ ಇವರ ಎದುರುಗಡೆ ಬೀದರ ಕಡೆಯಿಂದ ಹಿರೋ ಹೊಂಡಾ ಫ್ಯಾಶನ್ ಪ್ರೋ ಮೋಟಾರ್ ಸೈಕಲ್ ನಂಬರ ಕೆಎ-41/ಎಲ್ – 8419 ನೇದರ ಮೇಲೆ ಇಬ್ಬರೂ ಜನರು ಕುಳಿತುಕೊಂಡು ಬರುತ್ತಿದ್ದು, ಅದರ ಚಾಲಕ ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದಿರವರ ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದ   ಮೋಟಾರ್ ಸೈಕಲದೊಂದಿಗೆ ಕೆಳಗಡೆ ಬಿದ್ದಿದ್ದು,  ಸಣ್ಣಪುಟ್ಟ ಗಾಯಗಳಾಗಿದ್ದು, ನಹಿಮಾ ಇವಳಿಗೆ ತಲೆಯ ಮೇಲೆ ರಕ್ತಗಾಯ, ಮತ್ತು  ಗಂಡ ಮೋಹ್ಮದ್ ರಿಯಾಜ ರವರಿಗೆ ತಲೆ ಎಡಭಾಗದಲ್ಲಿ ಭಾರಿ ರಕ್ತಗಾಯ, ತಲೆಯ ಮೇಲಭಾಗದಲ್ಲಿ ರಕ್ತಗಾಯ, ಬಲಕಣ್ಣಿನ ರೆಪ್ಪೆಗೆ ಕಂದುಗಟ್ಟಿದ ಗಾಯವಾಗಿ ಮಾತನಾಡಲಾರದ ಸ್ಥತಿಯಲ್ಲಿ ಬಿದ್ದಿದ್ದರು. ಡಿಕ್ಕಿ ಪಡಿಸಿದ ಮೋಟಾರ್ ಸೈಕಲ್ ಚಾಲಕನಿಗೆ ಹೆಸರು ವಿಚಾರಿಸಲು ಅವರು ತಮ್ಮ ಹೆಸರು ಸಂತೋಷ ತಂದೆ ಕಾಶಿನಾಥ ಮೇತ್ರೆ ಜನವಾಡ ಗ್ರಾಮ ಅಂತಾ ತಿಳಿಸಿದ್ದು, ಅವರಿಗೆ ಎಡಕಾಲಿಗೆ ಭಾರಿ ರಕ್ತಗಾಯ, ಗುಪ್ತಗಾಯ, ಗಟಾಯಿಗೆ ರಕ್ತಗಾಯ, ಮುಖದ ಮೇಲೆ ತರಚಿದ ಗಾಯವಾಗಿದ್ದು, ಅವರ ಹಿಂದುಗಡೆ ಕುಳಿತ್ತಿದ್ದ ಹೆಣ್ಣು ಮಗಳಿಗೆ ಅವರ ಹೆಂಡತಿ ಅವರ ಹೆಸರು ವಿಚಾರಿಸಲು ಅವರು ತಮ್ಮ ಹೆಸರು ಅಂಬೀಕಾ ಗಂಡ ಸಂತೋಷ ಮೇತ್ರೆ ಜನವಾಡ ಗ್ರಾಮ ಅಂತಾ ತಿಳಿಸಿದ್ದು, ಅವರ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ರಕ್ತಗಾಯ, ಬಲಕೈ ಭುಜಕ್ಕೆ ಗುಪ್ತಗಾಯವಾಗಿದ್ದು, ಅಷ್ಟರಲ್ಲಿ ಬೀದರ ಕಡೆಯಿಂದ ತಮ್ಮ ಮೋಟಾರ್ ಸೈಕಲ್ ಮೇಲೆ ಬರುತ್ತಿದ್ದ   ನಸೀರ ತಂದೆ ನಬೀಸಾಬ ಯರನಳ್ಳೆ, ರವರು ಘಟನೆ ಕಣ್ಣಾರೆ ನೋಡಿ  108 ಅಂಬುಲೇನ್ ವಾಹನಕ್ಕೆ ಫೋನ್ ಮಾಡಿ ಕೆರೆಯಿಸಿ ಅದರಲ್ಲಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದಿದ್ದು, ಫಿರ್ಯಾದಿ ಗಂಡ ಮೊಹ್ಮದ್ ರಿಯಾಜ ರವರಿಗೆ ಮದ್ಯಾಹ್ನ 1530 ಗಂಟೆಯ ಸುಮಾರಿಗೆ ವೈಧ್ಯರು ನೋಡಿ ಅವರು ಮೃತಪಟ್ಟಿರುತ್ತಾರೆ ಅಂತಾ ತಿಳಿಸದರು.  ಸದರಿ ಘಟನೆಯು ಎದುರುಗಡೆಯಿಂದ ಮೋಟಾರ ಸೈಕಲ್ ನಂಬರ ಕೆಎ-41/ಎಲ್ -8419 ನೇದರ ಚಾಲಕ ಸಂತೋಷ ಮೇತ್ರೆ ರವರು ತಮ್ಮ ಮೋಟಾರ್ ಸೈಕಲ್ ಅತಿವೇಗ  ಹಾಗು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು  ಮೋಟಾರ್ ಸೈಕಲಗೆ ಡಿಕ್ಕಿಪಡಿಸಿದ್ದರಿಂದಲೆ ಜರುಗಿದ್ದು ಸಂತೋಷ ಮೇತ್ರೆ ಮತ್ತು ಅವರ ಮೋಟಾರ್ ಸೈಕಲ್ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 26/2020 ಕಲಂ 379 ಐಪಿಸಿ:-

ದಿನಾಂಕ 03/07/2020 ರಂದು 1800 ಗಂಟೆಗೆ ಸಂಜೀವಕುಮಾರ ತಂದೆ ಅಣ್ಣೆಪ್ಪಾ ಜೆಟಗೊಂಡ್ ವಯ-41|| ಶಾಖಾಧಿಕಾರಿ ಜೆಸ್ಕಾಂ ಕಮಠಾಣಾ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸಾರಾಂಶವೆನೆಂದರೆ ಈ ಮೇಲಿನ ವಿಷಯದ ಬಗ್ಗೆ ನಾನು  ಸಂಜೀವಕುಮಾರ ತಂದೆ ಅಣ್ಣೆಪ್ಪಾ ಜೆಟಗೊಂಡ್ ವಯ-41|| ಶಾಖಾಧಿಕಾರಿ ಜೆಸ್ಕಾಂ ಕಮಠಾಣ ರವರು ನೀಡಿದ ದೂರಿನ ಸಾರಾಂಶವೆನಂದರೆ  ದಿನಾಂಕ 02/07/2020 ರಂದು ಮುಂಜಾನೆ 0900 ಗಂಟಗೆ  ವೆಂಕಟ ತಂದೆ ವಿಠಲ ಸಾ|| ವಿದ್ಯಾನಗರ ಬೀದರ ಎಂಬುವವರು   ಫೋನ ಮಾಡಿ ಯದಲಾಪೂರ   ಶಿವಾರದಲ್ಲಿನ ಬ್ರಹ್ಮಕುಮಾರಿ ಆಸ್ರಮದಿಂದ ಪ್ರಕಾಶ ಕೊಟೆ ರವರ ಹೋಲದ  ವರೆಗೆ ಅಳವಡಿಸಿದ ವಿದ್ಯುತ ತಂತಿಯನ್ನು ಕಳುವು ಆಗಿರುತ್ತದೆ ಅಂತ ತಿಳಿಸಿದ ಮೇರೆಗೆ   ಮುಂಜಾನೆ 1030 ಗಂಟೆಗೆ  ನಮ್ಮ ಲೈನಮ್ಯಾನ ಮೋಹ್ಮದ ಅಹ್ಮದ ರವರೋಂದಿಗೆ  ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಯದಲಾಪೂರ ಶಿವಾರದಲ್ಲಿನ ಬ್ರಹ್ಮಕುಮಾರಿ ಆಸ್ರಮದಿಂದ ಪ್ರಕಾಶ ಕೋಟೆ ರವರ ಹೋಲದ  ವರೆಗೆ ಇದ್ದ್ 11 ವಿದ್ಯುತ ಕಂಬಕ್ಕೆ ಅಳವಡಿಸಿದ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ ಕಳವು ಮಾಡಿಕೊಂಡು ಹೋದ ವಿದ್ಯುತ ತಂತಿಯ ಅಂದಾಜು ಕಿಮತ್ತು ರೂ. 46000/-ಆಗುತ್ತದೆ.   ಈ ಘಟನೆ  ದಿನಾಂಕ 30/06/2020 ಮತ್ತು 01/07/2020 ರ ರಾತ್ರಿ ವೇಳೆಯಲ್ಲಿ  ಯಾರೋ ಅಪರಿಚಿತ ಕಳ್ಳರು 11 ವಿದ್ಯುತ ಕಂಬಕ್ಕೆ ಅಳವಡಿಸಿದ ಎಲ್.ಟಿ  ವಿದ್ಯುತ ತಂತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂಖ್ಯೆ 97/2020 ಕಲಂ 379 ಐಪಿಸಿ :-     
          
ದಿನಾಂಕ:03/07/2020 ರಂದು 1830 ಗಂಟೆಗೆ ಫಿರ್ಯಾದಿ ಸಂತೋಷ ತಂದೆ ಸತೀಷ ದಿಕೊಂಡ, ವಯ: 28, ಜಾತಿ: ಪದ್ಮಶಾಲಿ, : ಕೂಲಿ  ಸಾ/ ಹುಸೇನಿ ಆಲಂ ಗಲ್ಲಿ ಚಿಟಗುಪ್ಪಾ, ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ  ಸಾರಾಶವೇನೆಂದರೆದಿನಾಂಕ 15/05/2020 ರಂದು ಮುಂಜಾನೆ 10;30 ಗಂಟೆ ಸುಮಾರಿಗೆ ತನ್ನ ಮೊಟಾರ ಸೈಕಲ್ ನಂಬರ ಕೆ.ಎ.32ಇ.ಜೆ-3417 ಹೀರೊಹೊಂಡಾ ಶೈನ್ ಆದರ ಅಂ.ಕಿ. 40000/- ಸಾವಿರ ರುಪಾಯಿದನ್ನು ಯಾರೋ ಕಳ್ಳರು  ಚಿಟಗುಪ್ಪಾ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಹತ್ತಿರ ನಿಲ್ಲಿಸಿ ನಿಲ್ಲಿಸಿ ನನ್ನ ಖಾಸಗಿ ಕೆಲಸದಲ್ಲಿ ನಿರತರಾಗಿದ್ದು ಸಮಯದಲ್ಲಿ   ವಾಹನವು ಯಾರೊ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.   ವಾಹನವನ್ನು ಅಲ್ಲಿ ಇಲ್ಲಿ ಹುಡಿಕಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನನ್ನ ಮೋಟಾರ ಸೈಕಲ ನಂಬರ  ಕೆ.ಎ.32ಇ.ಜೆ-3417ನೇದನ್ನು ಯಾರೊ ಅಪರಿಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮಾರ್ಕೇಟ ಪೊಲೀಸ ಠಾಣೆ ಬೀದರ ಯುಡಿಆರ್ ಸಂಖ್ಯೆ 7/2020 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ:03/07/2020 ರಂದು 1400 ಗಂಟೆಯಿಂದ 1600 ಗಂಟೆಯ ಅವಧಿಯಲ್ಲಿ ಬೀದರ ನಗರದ ನರಸಿಂಹ ಝರಣಾ ದೇವಸ್ಥಾನದ ಮುಂದೆ ಇರುವ ಪಾರ್ಕಿಂಗ ಎದುರುಗಡೆ   ಇಂದಮ್ಮಾ ಗಂಡ ತುಳಸಿರಾಮ ದೊಡ್ಡೆ ವಯ:40 ವರ್ಷ ಜಾ:ಎಸ್.ಸಿ(ಮಾದಿಗ) ಉ:ಪಾರ್ಕಿಂಗ ಕೆಲಸ ಸಾ:ನಾವದಗೇರಿ ಬೀದರ ಇವಳು ಫಿಟ್ಸ್ ಬೇನೆ ಬಂದು ಕಾಲು ಜಾರಿ ಭಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ  ಅಂತಾ ಫಿರ್ಯಾದಿಯ ಅಕ್ಕ ಸಿದ್ದಮ್ಮಾ ತಂದೆ ಶರಣಪ್ಪಾ ಬಡಗೆ ವಯ:35 ವರ್ಷ ಜಾ:ಎಸ್.ಸಿ(ಮಾದಿಗ) ಉ:ಅಡುಗೆ ಮಾಡುವ ಕೆಲಸ ಸಾ:ನಾವದಗೇರಿ ಬೀದರ ರವರು ನೀಡಿದ   ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 148/2020 ಕಲಂ 87 ಕೆ.ಪಿ. ಕಾಯ್ದೆ ;-

ದಿನಾಂಕ 02/07/2020 ರಂದು 15:00 ಗಂಟೆಗೆ ಅಮರ ಕುಲಕಣರ್ಿ ಪಿ.ಎಸ್.ಐ(ಕಾಸೂ-1) ರವರು ಠಾಣೆಯಲ್ಲಿ ಇದ್ದಾಗ ಭಾಲ್ಕಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇರುವ ಹನುಮಾನ ಮಂದಿರದ ಹತ್ತಿರ ಕೆಲವು ಜನರು ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹನುಮಾನ ಮಂದಿರದ ಹತ್ತಿರ ಸಾರ್ವಜನೀಕ ಖುಲ್ಲಾ ಜಾಗೆಯಲ್ಲಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶೀಬಿನ ಇಸ್ಪೆಟ ಜೂಜಾಟ ಆಡುತ್ತಿರುವದನ್ನು ನೋಡಿ 15:45 ಗಂಟೆಗೆ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಒಬ್ಬೋಬ್ಬರ ಹೆಸರು ಮತ್ತು ವಿಳಾಸ ವಿಚಾರಿಸಲು ತಮ್ಮ ಹೆಸರು 1] ವಿಜಯಕುಮಾರ ತಂದೆ ಭೀಮರಾವ ಚವ್ಹಾಣ ಸಾ:ಧಾರಜವಾಡಿ ತಾಂಡಾ, 2] ಅನೀಲ ತಂದೆ ಶಿವಾಜಿರಾವ ಮಾನಕರಿ ಸಾ:ಧಾರಜವಾಡಿ, 3] ಖಂಡೆರಾವ ತಂದೆ ಜ್ಞಾನೇಶ್ವರ ಕುಟಮಲಗೆ ಸಾ:ಧಾರಜವಾಡಿ, 4] ಮಹಾದೇವ ತಂದೆ ನಾಮದೇವ ತಗಾರೆ ಸಾ:ಧಾರಜವಾಡಿ, 5] ಅನೀಲ ತಂದೆ ಶಂಕರ ಚ್ವಹಾಣ ಸಾ:ಧಾರಜವಾಡಿ ತಾಂಡಾ ಅಂತಾ ತಿಳಿಸಿದ್ದು ಸದರಿಯವರಿಗೆ ಪುನಃ ವಿಚಾರಣೆ ಮಾಡಲು ತಾವೆಲ್ಲರೂ ಹಣವನ್ನು ಪಣಕ್ಕೆ ಇಟ್ಟು ಪರೆಲ ಎಂಬ ನಶಿಬಿನ ಇಸ್ಪೇಟ ಜೂಜಾಟ ಆಡುತಿದ್ದ ಬಗ್ಗೆ ಒಪ್ಪಿ ಕೊಂಡಿದರಿಂದ ಸದರಿಯವರು ಇಸ್ಪೆಟ ಜೂಜಾಟದಲ್ಲಿ ತೋಡಗಿಸಿದ ಒಟ್ಟು ನಗದು ಹಣ 4350 ರೂ ಹಾಗು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ೆ ಜಪ್ತಿ ಪಂಚನಾಮೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.