ಮಟಕಾ
ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 10/01/2018 ರಂದು ಸುಧಾರಿತ ಗಸ್ತು ಸಂ 27 ಭೋಸಗಾ ಗ್ರಾಮದ ಬೀಟ್ ಸಿಬ್ಬಂದಿಯಾದ ರಾಣಬಾ ಸಿಹೆಚ್ ಸಿ-527 ರವರು ಭೋಸಗಾ ಗ್ರಾಮದ ಮಠ
ಮುಂದೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಬಾತ್ಮಿದಾರರಿಂದ ಮಾಹಿತಿ ಬಂದಿದೆ
ಅಂತ ತಿಳಿಸಿದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೋಸಗಾ
ಗ್ರಾಮದ ಹೊನ್ನಲಿಂಗೇಶ್ವರ ಮಠದ ಹತ್ತಿರ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ
ನಿಂತು ನೋಡಲು, ಮಠದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ
ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದುದನ್ನು
ಖಚಿತಪಡಿಸಿಕೊಂಡು . ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಪ್ಪಣ್ಣ ತಂದೆ
ಎಗಪ್ಪ ಹೂವಿನಳ್ಳಿ ಸಾ||ಭೋಸಗಾ ತಾ||ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2250/- ರೂಪಾಯಿ ನಗದು ಹಣ ಹಾಗೂ
ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಕ್ಕೆ ತೆಗೆದುಕೊಂಡು
ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ದಿನಾಂಕ 10-01-2018 ರಂದು ಮಧ್ಯಾನ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಲಾಲಗೇರಿ ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ
ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ
ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ
ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಾಲಗೇರಿ ಮಜ್ಜಿದ ದಿಂದ ಸ್ವಲ್ಪ ದೂರದಲ್ಲಿ ಹೋಗಿ
ನಿಂತುಕೊಂಡು ಮಜ್ಜಿದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ
ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ
ಬರೆದುಕೂಡುತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ
ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ
ವಿಚಾರಿಸಲು ಸದರಿಯವನು ಅಸಪಾಕ್ ಪಟೇಲ ತಂದೆ ಬುರಾನ ಪಟೇಲ ಸಾ: 11-11 ಲಾಲಗೇರಿ ಮಜ್ಜಿದ
ಹತ್ತಿರ ಬ್ರಹ್ಮಪೂರ ಕಲಬುರಗಿ. ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ
ಹತ್ತಿರ ನಗದು ಹಣ 1570, 4 ಮಟಕಾ ಬರೇದ ಚೀಟಿಗಳು , ಒಂದು ಬಾಲ ಪೇನ್ ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು
ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ದರೋಡೆಗೆ
ಹೊಂಚು ಹಾಕಿ ಕುಳಿತವರ ಬಂಧನ :
ಗ್ರಾಮೀಣ ಠಾಣೆ : ಶ್ರೀ ಎ. ವಾಜೀದ ಪಟೇಲ್ ಸಿ.ಪಿ.ಐ. ಗ್ರಾಮೀಣ ವೃತ್ತ ಕಲಬುರಗಿ ರವರು ದಿನಾಂಕ 10/01/2018 ರಂದು ರಾತ್ರಿ 12-30 ಗಂಟೆಯಿಂದ ಬೆಳಗಿನ
05-00 ಗಂಟೆಯವರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ ರವರು ಕಲಬುರಗಿ ನಗರದಲ್ಲಿ ಇರುವ ಎಲ್ಲಾ
ಹಿರಿಯ ಅಧಿಕಾರಿಗಳು ಮತ್ತು ಠಾಣಾಧಿಕಾರಿಗಳು ಇತ್ತೀತ್ತಲಾಗಿ ಹೆಚ್ಚುತ್ತಿರುವ ಸ್ವತ್ತಿನ
ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತಮ್ಮ, ತಮ್ಮ ಠಾಣಾ ಸರಹದ್ದಿನಲ್ಲಿ ವಿಶೇಷ
ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಪ್ರಕಾರ ನಾನು ಮತ್ತು ನಮ್ಮ
ಸಿಬ್ಬಂದಿಯೊಂದಿಗೆ ಗ್ರಾಮೀಣ ಪೊಲೀಸ ಠಾಣೆ
ಸರಹದ್ದಿನಲ್ಲಿ ವಿಶೇಷ ಗಸ್ತು ಕರ್ತವ್ಯದಲ್ಲಿ ನಿರತನಿದ್ದೆನು. ನನ್ನಂತೆ ಗ್ರಾಮೀಣ ಪೊಲೀಸ ಠಾಣೆಯ
ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಸಿಬ್ಬಂದಿಯವರೊಂದಿಗೆ ತಮ್ಮ ಠಾಣೆ ಜೀಪು ಕೆಎ 32 ಜಿ
485 ರಲ್ಲಿ ವಿಶೇಷ ಗಸ್ತು ಕರ್ತವ್ಯದಲ್ಲಿ
ನಿರತರಿದ್ದರು. ವಿಶೇಷ ರಾತ್ರಿ ಗಸ್ತು ಕರ್ತವ್ಯ
ನಿರ್ವಹಿಸುತ್ತಾ ಬೆಳಗಿನ ಜಾವ 04-15 ಗಂಟೆಗೆ ಹೀರಾಪೂರ ಕ್ರಾಸನಲ್ಲಿ ಬಂದಾಗ ನನಗೆ ಖಚಿತವಾದ ಮಾಹಿತಿ ಬಂದಿದ್ದೇನೆಂದರೆ, ನನ್ನ ವೃತ್ತದ
ಆಧೀನದಲ್ಲಿ ಬರುವ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆ ಹದ್ದಿಯಲ್ಲಿ ಬರುವ ಅಫಜಲಪೂರ ರೋಡಿನ
ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಮರೆಯಲ್ಲಿ ಕೆಲವು ಜನರು ಮುಖಕ್ಕೆ
ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ
ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸದರಿ
ವಿಷಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸಿ, ದಾಳಿ ಕುರಿತು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ನನ್ನಂತೆ ವಿಶೇಷ ಗಸ್ತು ಕರ್ತವ್ಯದಲ್ಲಿ ಕಲಬುರಗಿ
ಗ್ರಾಮೀಣ ಪೊಲೀಸ ಠಾಣೆಯ ಶ್ರೀ ಚಂದ್ರಶೇಖರ ಪಿ.ಎಸ್.ಐ. ಮತ್ತು ಅವರ ಜೊತೆಯಲ್ಲಿದ್ದ ಸಿಬ್ಬಂದಿಯೊಂದಿಗೆ ಹೀರಾಪೂರ ಕ್ರಾಸದಿಂದ ಬೆಳಗಿನ 05-30 ಗಂಟೆ ಸುಮಾರಿಗೆ ಬಿದ್ದಾಪೂರ ಕಾಲನಿ, ಹೈ ಕೋರ್ಟ ಕ್ರಾಸ ಮುಖಾಂತರವಾಗಿ ಬಾತ್ಮಿ ಸ್ಥಳ ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ
ಹೊರ ವಲಯದಲ್ಲಿ ನಾಗಲಿಂಗೇಶ್ವರ ಗುಡಿ ಇನ್ನೂ ಸ್ವಲ್ಪ ಮುಂದೆ ಇರುವಂತೆ ಜೀಪುಗಳು ನಿಲ್ಲಿಸಿ
ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು, ನಾಗಲಿಂಗೇಶ್ವರ ಗುಡಿಯ ದಕ್ಷಿಣ ದಿಕ್ಕಿನ ಮರೆಯಲ್ಲಿ ನಿಂತು
ನೋಡಲಾಗಿ ಸದರಿ ಗುಡಿಯ ಪಶ್ಚಿಮ ದಿಕ್ಕಿನ
ಹಿಂದುಗಡೆ ಗೋಡೆ ಮರೆಯಲ್ಲಿ 06 ಜನರು ನಿಂತಿದ್ದು
ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ
ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಅಧಿಕಾರಿ ಹಾಗೂ ಸಿಬ್ಬಂದ್ದಿಯವರಿಗೆ
ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 06 ಜನರನ್ನು ನನ್ನ
ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ದಾಳಿ ಮಾಡಿ ಹಿಡಿಯಲು 06 ಜನರು ಸಿಕ್ಕಿ ಬಿದ್ದಿದ್ದು.
ಸದರಿ 06 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ
ಒಬ್ಬನು ತನ್ನ ಹೆಸರು 1) ರಿಯಾಜ್ ತಂದೆ ರಸೂಲಸಾಬ್ ಬಿಜಲಿ
ಸಾ|| ಅಗರಖೇಡ ತಾ|| ಇಂಡಿ ಜಿಲ್ಲಾ||
ವಿಜಾಪೂರ ಅಂತಾ ತಿಳಿಸಿದನು.ಅವನ ಹತ್ತಿರ ಒಂದು
ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 2) ಮೌಲಾಲಿ ತಂದೆ ಮಹೆಬೂಬ್ ಬಿಜಲಿ ಸಾ||
ಅಗರಖೇಡ ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ
ತಿಳಿಸಿದನು .ಇತನ ಹತ್ತಿರ ಒಂದು ಖಾರದ ಪುಡಿ
ಪಾಕೇಟ , ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 3) ಹಸನ್ ತಂದೆ ಅಬ್ದುಲ್ ಬಾವಾ ಸಾ||
ಅಗರಖೇಡ ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ
ತಿಳಿಸಿದನು ಇತನ ಹತ್ತಿರ 25 ಫೀಟನ ಹಗ್ಗ, ಒಂದು
ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 4)ಶಿವಕುಮಾರ ತಂದೆ ಬಸಪ್ಪ ಡೊಳ್ಳಿ ಸಾ|| ಅಗರಖೇಡ ತಾ|| ಇಂಡಿ ಜಿಲ್ಲಾ|| ವಿಜಾಪೂರ ಅಂತಾ ತಿಳಿಸಿದನು.
ಇತನ ಹತ್ತಿರ ಒಂದು ಚಾಕು, ಒಂದು ಮುಖಕ್ಕೆ
ಕಟ್ಟಿಕೊಂಡ ಬಟ್ಟೆ ದೊರೆಯಿತು. 5) ಬಂಡೆಪ್ಪ ತಂದೆ ದೇವರಾಯ ಸಂಗೊಳ್ಳಿ ಸಾ|| ಅಂಬಲಗಾ ತಾ|| ಆಳಂದ
ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ
ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ತಾಜೋದ್ದೀನ ತಂದೆ ಮಹೆಬೂಬ್ ಸಾಬ್ ಭಾಗವಾನ್ ಸಾ|| ಅಂಬಲಗಾ
ತಾ|| ಆಳಂದ ಜಿಲ್ಲಾ|| ಕಲಬುರಗಿ ಅಂತಾ ತಿಳಿಸಿದನು.ಇತನ ಹತ್ತಿರ ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ ಕಟ್ಟಿಕೊಂಡ
ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 06 ಜನರು ವಿಜಾಪೂರ ದವರು ಇಲ್ಲಿ ಯಾಕೇ ನಿಂತಿದ್ದಿರಿ ಮತ್ತು ಯಾತಕ್ಕಾಗಿ
ಬಂದಿರುವಿರೀ ಅಂತಾ ವಿಚಾರಿಸಲೂ ಸಿಕ್ಕಿ ಬಿದ್ದ
ಎಲ್ಲರೂ ಕಲಬುರಗಿ ನಗರದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದು, ನಾವು ದುಡಿದ ಹಣದಿಂದ ಮೋಜು
ಮಸ್ತಿ ಮಾಡಲು ಮತ್ತು ಮನೆಗೆ ಕಳುಹಿಸಿಕೊಡಲು ಸಾಕಾಗುತ್ತಿಲ್ಲವಾದ್ದರಿಂದ ನಿನ್ನೆ ದಿನಾಂಕ 09-01-2017
ರಂದು ಸಂಜೆ ಸಮಯದಲ್ಲಿ ನಾವೆಲ್ಲರೂ ರಾಮ ಮಂದಿರ
ರಿಂಗ ರೋಡ ಕ್ರಾಸನಲ್ಲಿ ಮಾತಾಡಿಕೊಂಡಂತೆ ಇಂದು ದಿನಾಂಕ 10-01-2017 ರಂದು ಬೆಳಗಿನ ಜಾವ 03-00
ಗಂಟೆ ಸುಮಾರಿಗೆ ಎಲ್ಲರೂ ರಾಮ ಮಂದಿರ ರಿಂಗ ರೋಡ ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ದಾರಿಗೆ ಹೊರಟ
ಯಾವುದೋ ಲಾರಿಯಲ್ಲಿ ಕುಳಿತುಕೊಂಡು ಅಫಜಲಪೂರ ರೋಡಿನ ಶರಣಸಿರಸಗಿ ಸೀಮಾಂತರದ ಹೊರ ವಲಯದಲ್ಲಿ ಇರುವ
ನಾಗಲಿಂಗೇಶ್ವರ ಗುಡಿಯ ಹಿಂದುಗಡೆ ಮರೆಯಲ್ಲಿ ನಿಂತು
ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು
ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ಓಡಿ
ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು ಬಂದು ನಮ್ಮಗೇ
ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಶ್ರೀ ವಾಜೀದ ಪಟೇಲ ಸಿ,ಪಿ,ಐ, ಗ್ರಾಮೀಣ
ವೃತ್ತ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಚಂದ್ರಶೇಖರ ಪಿ.ಎಸ್.ಐ (ಕಾ.ಸೂ)
ಗ್ರಾಮೀಣ ಪೊಲೀಸ್ ಠಾಣೆ ಕಲಬುರಗಿ ರವರು ಸಿಬ್ಬಂದಿಯೊಂದಿಗೆ ದಿನಾಂಕ 09-01-2018 ರಂದು ರಾತ್ರಿ 12-00 ಗಂಟೆಯಿಂದ ಬೆಳಗಿನ
05-00 ಗಂಟೆಯವರೆಗೆ ಠಾಣಾ ಸರಹದ್ದಿನಲ್ಲಿ ವಿಶೇಷ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 04-30 ಗಂಟೆಗೆ ಆಳಂದ ಚೆಕ್ಕ ಪೋಸ್ಟ
ಸರ್ಕಲನಲ್ಲಿ ಬಂದಾಗ ನನಗೆ ಮಾಹಿತಿ
ಬಂದಿದ್ದೇನೆಂದರೆ, ನಮ್ಮ ಗ್ರಾಮೀಣ ಪೊಲೀಸ್ ಠಾಣೆ ಹದ್ದಯಲ್ಲಿ ಬರುವ ಹತಗುಂದಾ ಕ್ರಾಸ ರೋಡಿನ
ಬದಿಯಲ್ಲಿ ಕೆಲವು ಜನರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು
ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದಾರೆ ಅಂತಾ
ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಎಸ್.ಪಿ.ಸಾಹೇಬ ಕಲಬುರಗಿ, ಮಾನ್ಯ ಅಪರ ಎಸ್.ಪಿ.ಸಾಹೇಬ
ಕಲಬುರಗಿ, ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಕಲಬುರಗಕ ಮಾನ್ಯ ಸಿಪಿಐ ಗ್ರಾಮೀಣ ವೃತ್ತ
ಕಲಬುರಗಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಸಿಬ್ಬಂದಿ
ಮತ್ತು ಪಂಚರೊಂದಿಗೆ ಬೆಳಗಿನ 05-30 ಗಂಟೆ ಸುಮಾರಿಗೆ ಕೆರಿಭೋಸಗಾ ಕ್ರಾಸ, ಪಟ್ಟಣ ಕ್ರಾಸ
ಮುಖಾಂತರವಾಗಿ ಹತಗುಂದಾ ಕ್ರಾಸ್ ಇನ್ನೂ ಸ್ವಲ್ಪ
ಮುಂದೆ ಇರುವಂತೆ ಜೀಪು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ನಡೆದುಕೊಂಡು,ಹತಗುಂದಾ ಕ್ರಾಸ
ಎದುರುಗಡೆ ಇರುವ ಪಟ್ಟಣ ಮತ್ತು ಯಳವಂತಗಿ (ಕೆ)
ರೋಡಿನ ಎದುರುಗಡೆ ಇರುವ ಮಂಜುನಾಥ ಮತ್ತಿಮೂಡ ಹೊಲದ ಗಿಡಗಂಟಿಗಳ ಮರೆಯಲ್ಲಿ ನಿಂತು ನೋಡಲಾಗಿ
ಹತಗುಂದಾ ಗ್ರಾಮಕ್ಕೆ ಹೋಗುವ ಕ್ರಾಸ ರೋಡಿನ ಪಶ್ಚಿಮ ದಿಕ್ಕಿನ ಗಿಡ ಗಂಟಿಗಳ ಮರೆಯಲ್ಲಿ 08 ಜನರು
ನಿಂತಿದ್ದು ಅವರೆಲ್ಲರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ ಚಾಕು, ಬಡಿಗೆ, ರಾಡು, ಹಗ್ಗಾ, ಖಾರದ ಪುಡಿ
ಹಿಡಿದುಕೊಂಡು ನಿಂತಿದ್ದನ್ನು ಜೊತೆಯಲ್ಲಿ ಬಂದಿದ್ದ ಪಂಚರನ್ನು ಮತ್ತು ಸಿಬ್ಬಂದ್ದಿಯವರಿಗೆ
ತೋರಿಸಿ ಖಚಿತ ಪಡಿಸಿಕೊಂಡು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 08 ಜನರನ್ನು ನನ್ನ
ನಿದೆರ್ಶನದಂತೆ ಬೆಳಗಿನ 06-00 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿಯಲು 08 ಜನರು
ಸಿಕ್ಕಿ ಬಿದ್ದಿದ್ದು. ಸದರಿ 08 ಜನರು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ತೆಗೆಯಿಸಿ ಅವರ ಹೆಸರು
ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು 1) ಚಂದಪ್ಪ ತಂದೆ ಬಸಣ್ಣ ಪರೀಟ್ ಸಾ|| ಕರಜಗಿ
ತಾ|| ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಚಾಕು ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು.
2) ತಿಮ್ಮಣ್ಣ ತಂದೆ ಲಕ್ಷ್ಮಣ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಕ್ ಘತ್ತರಗಾ ಕಮನ್ ಹತ್ತಿರ
ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಖಾರದ ಪುಡಿ ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ
ದೊರೆಯಿತು. 3) ಲಕ್ಷ್ಮಣ ತಂದೆ ಗಿಡ್ಡಪ್ಪ ಗಾಡಿ ವಡ್ಡರ ಸಾ|| ಬಸವೇಶ್ವರ ಚೌಜ್ ಘತ್ತರಗಾ ಕಮನ್ ಹತ್ತಿರ
ಅಫಜಲಪೂರ ಜಿಲ್ಲಾ|| ಕಲಬುರಗಿ ಇತನ ಹತ್ತಿರ, 20
ಫೀಟನ ಹಗ್ಗ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 4) ಭಿಮಶ್ಯಾ ತಂದೆ ಗೋವಿಂದಪ್ಪ ನಿಂಬಾಳ್ಕರ್ ಸಾ||
ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಚಾಕು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ 5) ಹೈದರ್
ಸಾಬ್ ತಂದೆ ಲಾಡ್ಲೇ ಸಾಬ್ ಲದಾಫ್ ಸಾ|| ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ
ಒಂದು ಕಬ್ಬಿಣದ ರಾಡು , ಒಂದು ಮುಖಕ್ಕೆ
ಕಟ್ಟಿಕೊಂಡ ಬಟ್ಟೆ ದೊರೆಯಿತು. 6) ಗೋವಿಂದಪ್ಪ ತಂದೆ ದುರ್ಗಪ್ಪ ಪೀರಾಜಿ ಸಾ|| ನಿಂಬರ್ಗಾ ತಾ||
ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು
ಬಡಿಗೆ, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 7) ರಾಮಣ್ಣ ತಂದೆ ಭಿಮಶ್ಯಾ ಧೋತರೆ ಸಾ||
ನಿಂಬರ್ಗಾ ತಾ|| ಆಳಂದ ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಕಬ್ಬಿಣದ ರಾಡು, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. 8)ಗಜಾನಂದ
ತಂದೆ ಪುಂಡಲಿಕ ಮಾನೆ ಸಾ|| ಬಟ್ಟರಗಾ ತಾ|| ಆಳಂದ
ಜಿಲ್ಲಾ|| ಕಲಬುರಗಿ ಇತನ ಹತ್ತಿರ ಒಂದು ಖಾರದ
ಪಾಕೇಟ್, ಒಂದು ಮುಖಕ್ಕೆ ಕಟ್ಟಿಕೊಂಡ ಬಟ್ಟೆ ದೊರೆಯಿತು. ಆಗ ಸದರಿಯವರಿಗೆ ನೀವು 08 ಜನರು ಇಲ್ಲಿ
ಯಾಕೇ ನಿಂತಿದ್ದಿರಿ ಅಂತಾ ವಿಚಾರಿಸಲು ಸಿಕ್ಕಿ ಬಿದ್ದ
ಎಲ್ಲರೂ ನಿನ್ನೆ ದಿನಾಂಕ 08-01-2018 ರಂದು ಸಂಜೆ ಸಮಯದಲ್ಲಿ ನಾವೆಲ್ಲರೂ ಕಲಬುರಗಿ ಕೇಂದ್ರ ಬಸನಿಲ್ದಾಣದಲ್ಲಿ
ಮಾತಾಡಿಕೊಂಡಂತೆ ಇಂದು ದಿನಾಂಕ 09-01-2017 ರಂದು ಬೆಳಗಿನ ಜಾವ 03-00 ಗಂಟೆ ಸುಮಾರಿಗೆ ಪಟ್ಟಣ
ಕ್ರಾಸನಲ್ಲಿ ಎಲ್ಲರೂ ಸೇರಿಕೊಂಡು ಟಂಟಂ ಕೆಎ 32
A- 8941 ನೇದ್ದರಲ್ಲಿ ಕುಳಿತುಕೊಂಡು
ಹತಗುಂದಾ ಕ್ರಾಸಿಗೆ ಬಂದು, ಸ್ವಲ್ಪ ದೂರದಲ್ಲಿ ನಾವು ತಂದಿದ್ದ ಟಂಟಂ ನಿಲ್ಲಿಸಿ, ಸದರ
ಕ್ರಾಸನಲ್ಲಿ ಇರುವ ಗಿಡಗಂಟಿಗಳ ಮರೆಯಲ್ಲಿ ನಿಂತು
ಸದರಿ ರೋಡಿಗೆ ಹೋಗಿ ಬರುವ ವಾಹನ ಸವಾರರಿಗೆ ಹಗ್ಗ ಸಹಾಯದಿಂದ ಅಡ್ಡಗಟ್ಟಿ ನಿಲ್ಲಿಸಿ ಚಾಕು ಮತ್ತು
ರಾಡು, ಬಡಿಗೆ ತೋರಿಸಿ ಅವರಲ್ಲಿರುವ ಬಂಗಾರ ಮತ್ತು ಹಣ ಮೋಬೈಯಿಲ್ ದರೋಡೆ ಮಾಡಿಕೊಂಡು ನಾವು
ತಂದಿದ್ದ ಟಂಟಂನಲ್ಲಿ ಓಡಿ ಹೋಗಬೇಕೆಂದು ದರೋಡೆ ಮಾಡಲು ಹೊಂಚು ಹಾಕುತ್ತಾ ನಿಂತಿರುವಾಗ ತಾವುಗಳು
ಬಂದು ನಮಗೆ ಹಿಡಿದುಕೊಂಡಿರುವಿರಿ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ಬಾಳಪ್ಪ ಕಾಳೆ ಸಾ||ಉಡಚಣ ಹಟ್ಟಿ ರವರು ದಿನಾಂಕ 08/11/2017 ರಂದು ರಾತ್ರಿ ಮನೆಯಲಿದ್ದಾಗ ನಮ್ಮ ಗ್ರಾಮದ ರಮೇಶ ತಂದೆ ಸಿದ್ದು
ರುತ್ನೂರ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ಹಣಮಂತ ತಂದೆ ಸದಾಶಿವ
ಸೆಂಡಗೆ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ನಮ್ಮ ಗ್ರಾಮಕ್ಕೆ ಬರುತಿದ್ದಾಗ ನಮ್ಮ ಮುಂದೆ ನಿಮ್ಮ
ತಂದೆ ಭಾಳಪ್ಪ ಹಾಗು ಭೀರಣ್ಣ ಸಿಂದೆ ಇಬ್ಬರು ನಿಮ್ಮ ಮೋಟಾರ ಸೈಕಲ್ ನಂ ಕೆಎ-32 ಇಜೆ-5670 ನೇದ್ದರ ಮೇಲೆ ಹೊಲದಿಂದ
ಮನೆಗೆ ಹೋಗುತಿದ್ದರು ನಮ್ಮ ಗ್ರಾಮದ ಸಂಜಯ ತಂದೆ ಮಚೆಂದ್ರ ಸಂಜವಾಡ ರವರ ಹೊಲದ ಹತ್ತಿರ ಮುಖ್ಯ
ರಸ್ತೆ ಮೇಲೆ ಎದುರಿನಿಂದ ಒಬ್ಬ ಮೋಟಾರ್ ಸೈಕಲ್
ಸವಾರನು ತನ್ನ ಮೋಟಾರ್ ಸೈಕಲ್ ನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ
ಮುಂದೆ ಹೋಗುತಿದ್ದ ನಿಮ್ಮ ತಂದೆಯವರ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ
ಹಾಗು ಭೀರಣ್ಣ ಇಬ್ಬರು ರೋಡಿನ ಬಾಜು ಟೆಗ್ಗಿನಲ್ಲಿ ಬಿದ್ದು ಭಾರಿ ಗಾಯ ಹೊಂದಿರುತ್ತಾರೆ ನೀವು
ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಕಾಕನಾದ ಸಿದ್ದಣ್ಣ ತಂದೆ ಭೀಮಶ್ಯಾ ಕಾಳೆ ಇಬ್ಬರು
ಒಂದು ಖಾಸಗಿ ವಾಹನ ತಗೆದುಕೊಂಡು ಸ್ಥಳಕ್ಕೆ ಹೋಗಿ
ನೋಡಲಾಗಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಮೈ
ಕೈಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಭೀರಣ್ಣ ರವರಿಗೆ ತಲೆಗೆ ರಕ್ತಗಾಯ ಬಲ ಮೋಳಕಾಲಿಗೆ
ರಕ್ತಗಾಯವಾಗಿದ್ದು ಇರುತ್ತದೆ ಸದರಿ ಡಿಕ್ಕಿ
ಪಡಿಸಿದ ಸವಾರನು ತನ್ನ ಮೋಟಾರ ಸೈಕಲ್
ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಮೋಟಾರ್ ಸೈಕಲ್ ನಂಬರ ನೋಡಲಾಗಿ ಎಮ್ ಹೆಚ್ 13 ಸಿಆರ್ 1176 ಅಂತ ಇರುತ್ತದೆ. ನಂತರ
ನಾವೇಲ್ಲರು ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ತಂದೆ ಹಾಗು ಭೀರಣ್ಣ ಇಬ್ಬರಿಗೂ
ಖಾಸಗಿ ವಾಹನದಲ್ಲಿ ಹಾಕಿಕೊಂಡು ಸೋಲಾಪೂರದ GANGAMAI
ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಂದೆ ಇನ್ನೂ
ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತ ಪಡಿಸಿದ ಮೋಟಾರ್ ಸೈಕಲ್ ನಂ ಎಮ್ ಹೆಚ್ 13 ಸಿಆರ್ 1176 ನೇದ್ದರ ಸವಾರನಾದ ಅಶೋಕ
ತಂದೆ ಸೊನೆಬಾಪು ಪಾಟೀಲ ಸಾ||ರಾಜುರ ತಾ||ದಕ್ಷಿಣ ಸೊಲಾಪೂರ ಜಿ||ಸೋಲಾಪೂರ ಈತನು ತನ್ನ ಮೋಟಾರ್ ಸೈಕಲ್ ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ತಂದೆ ಹಾಗು ಭೀರಣ್ಣ ರವರು ಬರುತಿದ್ದ
ನಮ್ಮ ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ನಮ್ಮ ತಂದೆ ಹಾಗು ಭಿರಣ್ಣ ರವರಿಗೆ ಭಾರಿ ರಕ್ತಗಾಯ
ಪಡಿಸಿದ ಸವಾರನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.