Police Bhavan Kalaburagi

Police Bhavan Kalaburagi

Tuesday, November 20, 2018

BIDAR DISTRICT DAILY CRIME UPDATE 20-11-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 20-11-2018

ºÉÆPÁæuÁ ¥Éưøï oÁuÉ C¥ÀgÁzsÀ ¸ÀA. 97/2018, PÀ®A. 376, 354(J), 506 L¦¹ eÉÆvÉ 4 & 12 ¥ÉÆÃPÉÆìà PÁAiÉÄÝ :-
ಒಂದು ವರ್ಷದಿಂದ ಆರೋಪಿ ವಿಠಲ ತಂದೆ ಲಕ್ಷ್ಮಣರೆಡ್ಡಿ ಅರಧಾವಾಡ್ ಇತನು ಫಿರ್ಯಾದಿಯು ಶಾಲೆಗೆ ಹೋಗುವಾಗ, ಗುಡಿಗೆ ಹೋಗುವಾಗ, ನೀರಿಗೆ ಹೋಗುವಾಗ ಹಿಂಬಾಲಿಸುವುದು, ನೋಡುವುದು ನಿನ್ನನ್ನು ಮದುವೆಯಾಗುತ್ತೇನೆ ಅಂತ ಫುಸಲಾಯಿಸುತ್ತ ಹಿಂದೆ ಹಿಂದೆ ಸುತ್ತುತ್ತಿದ್ದನು ಮತ್ತು ಫಿರ್ಯಾದಿಯ ಮನೆಯಲ್ಲಿ ಯಾರು ಇಲ್ಲದಾಗ ಮನೆಗೆ ಬಂದು ನಿನಗೆ ಮದುವೆಯಾಗುತ್ತೇನೆಂದು ಹೇಳುತ್ತಿದ್ದನು, ಫಿರ್ಯಾದಿಯು ಏಷ್ಟೋ ಸಲ ನಿರಾಕರಿಸಿದರು ಆರೋಪಿಯು ಅದೇ ರೀತಿ ಮಾಡುತ್ತ ಬಂದಿರುತ್ತಾನೆ, ಈ ವರ್ಷ ಜೂನ್ ತಿಂಗಳಲ್ಲಿ ಫಿರ್ಯಾದಿಯ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಆರೋಪಿಯು ಮನೆಗೆ ಬಂದು ಮದುವೆ ಮಾಡಿಕೊಳ್ಳುತ್ತೇನೆಂದು ನಂಬಿಸಿ ಫಿರ್ಯಾದಿಯು ಬೇಡವೆಂದರು ಫಿರ್ಯಾದಿಯೊಂದಿಗೆ ಹಠ ಸಂಭೋಗ ಮಾಡಿರುತ್ತಾನೆ, ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಜೀವಸಹಿತ ಬೀಡುವುದಿಲ್ಲಾ ಅಂತ ಬೇದರಿಕೆ ಹಾಕಿರುತ್ತಾನೆ, ನಂತರ ಆರೋಪಿಯು ಆಗಾಗ ಮನೆಗೆ ಬಂದು ಹೋಗುವುದು ಮಾಡುವುದನ್ನು ಫಿರ್ಯಾದಿಯ ತಾಯಿ, ಅಕ್ಕ, ಅಣ್ಣ ಇವರಿಗೆ ಗೊತ್ತಾಗಿದ್ದು, ಅವರೆಲ್ಲರೂ ಆಕೆಯು ಇನ್ನು ಚಿಕ್ಕವಳಿದ್ದಾಳೆ ಅವಳ ಹಿಂದೆ ಏಕೆ ಸುತ್ತುತ್ತಿದ್ದಿ ಅಂತ ಬುದ್ಧಿ ಹೇಳಿರುತ್ತಾರೆ, ಫಿರ್ಯಾದಿಯ ಅಕ್ಕ ಇವಳ ಬಾಣಂತನ ಇದ್ದುದ್ದರಿಂದ ಫಿರ್ಯಾದಿಯು 4 ತಿಂಗಳು ತನ್ನ ಅಕ್ಕಳ ಹತ್ತಿರ ಉಳಿದುಕೊಂಡು ದೀಪಾವಳಿ ಹಬ್ಬಕ್ಕೆ ತಮ್ಮೂರಿಗೆ ಬಂದಿದ್ದು, ಹೀಗಿರುವಲ್ಲಿ ಆರೋಪಿಯು ದಿನಾಂಕ 15-11-2018 ರಂದು ಫಿರ್ಯಾದಿಯ ಮನೆಗೆ ಬಂದು ಫುಸಲಾಯಿಸಿ ಮನೆಯಿಂದ ತಮ್ಮೂರ ಭವಾನಿ ಗುಡಿಯ ಹತ್ತಿರ ಕರೆದುಕೊಂಡು ಹೋಗಿ ನಡೆ ಮದುವೆ ಮಾಡಿಕೊಳ್ಳೊಣ ಅಂತ ಕೈಹಿಡಿದು ಏಳೆಯುವಾಗ ಫಿರ್ಯಾದಿಯು ಚೀರುವ ಗುಲ್ಲು ಕೇಳಿ ಫಿರ್ಯಾದಿಯ ಅಣ್ಣ ಹಾಗು ಇತರೆ ಜನರು ಬರುವುದನ್ನು ನೋಡಿ ಆರೋಪಿಯು ಅಲ್ಲಿಂದ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-11-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 292/2018, ಕಲಂ. 498 (ಎ), 143, 147, 323, 504, 506 ಜೋತೆ 149 ಐಪಿಸಿ :-
ಫಿರ್ಯಾದಿ ಅನಿತಾ ಗಂಡ ಮನೊಜಕುಮಾರ ಶಿಂಧೆ ವಯ: 33 ವರ್ಷ, ಜಾತಿ: ಎಸ್.ಸಿ ಹೋಲಿಯಾ, ಸಾ: ಹೊಕ್ರಾಣಾ, ತಾ: ಔರಾದ (ಬಿ) ರವರಿಗೆ ಗಂಡ ಅನೇಕ ದಿವಸಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರಿಂದ ಫಿರ್ಯಾದಿಯು ತೊಂದರೆ ತಾಳದೆ ತನ್ನ ತವರು ಮನೆಯಾದ ಭಾಲ್ಕಿಯ ಸಿಧಾರ್ಥ ನಗರಕ್ಕೆ ಬಂದು ತವರು ಮನೆಯಲ್ಲಿ ಉಳಿದಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 19-11-2018 ರಂದು ಆರೋಪಿತರಾದ ಗಂಡ 1) ಮನೋಜಕುಮಾರ ತಂದೆ ಗುಂಡೇರಾವ ಶೀಂಧೆ, ಭಾವಂದಿರಾದ 2) ನಾಗನಾಥ ತಂದೆ ಗುಂಡೇರಾವ ಶೀಂಧೆ, 3) ವಿಜಯಕುಮಾರ ತಂದೆ ಗುಂಡೇರಾವ ಶೀಂಧೆ, ಅತ್ತೆ 4) ಚಂದ್ರಾಬಾಯಿ ಗಂಡ ಗುಂಡೇರಾವ ಶೀಂಧೆ, ನೆಗೇಣಿ 5) ಲಕ್ಷ್ಮಿಬಾಯಿ ಗಂಡ ನಾಗನಾಥ ಶೀಂಧೆ ಹಾಗೂ 6) ಗಂಡನ ಸೋದರಸೊಸೆಯ ಗಂಡ ಮಹಾದೇವ ಶೀಂಧೆ ರವರು ಸಮಾನ ಉದ್ದೇಶದಿಂದ ಆಕ್ರಮ ಕೂಟ ರಚಿಸಿಕೊಂಡು ಫಿರ್ಯಾದಿಯವರ ತವರು ಮನೆಗೆ ಬಂದು ಅವಾಚ್ಯವಾಗಿ ಬೈದು ಕೈಗಳಿಂದ ಹೋಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥ÉưøÀ oÁuÉ C¥ÀgÁzsÀ ¸ÀA. 103/2018, PÀ®A. 78(3) PÉ.¦ PÁAiÉÄÝ ºÁUÀÆ 420 L¦¹ :-
ದಿನಾಂಕ 19-11-2018 ರಂದು ಆಲಗೂಡ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮೋಸ ಮಾಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ನಸೀನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಸಲಿಂಗಪ್ಪಾ ಪಿಎಸ್ಐ ಮಂಠಾಳ ಪೊಲೀಸ್ ಠಾಣೆ ರವರಿಗೆ ಮಾಹಿತಿ ಸಿಕ್ಕ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಆಲಗೂಡ ಗ್ರಾಮದ ಬಸನಿಲ್ದಾಣ ಹತ್ತಿರ ಹೋಗಿ ರೋಡಿನ ಪಕ್ಕದಲ್ಲಿರುವ ಅಂಗಡಿಗಳ ಮರೆಯಾಗಿ ನಿಂತು ನೋಡಲು ಅಲ್ಲಿ ಆಲಗೂಡ ಗ್ರಾಮದ ಶಿವಾಜಿ ಚೌಕ ಹತ್ತಿರ ಸಾರ್ವಜನಿಕರ ರೋಡಿನ ಮೇಲೆ ಆರೋಪಿ ನಾಗೇಶ ತಂದೆ ಸಿದ್ದಪ್ಪ ಹೊದಲೂರೆ ವಯ: 33 ವರ್ಷ, ಜಾತಿ: ಲಿಂಗಾಯತ, ಸಾ: ಆಲಗೂಡ ಇತನು ಸಾರ್ವಜನಿಕರಿಗೆ ಮಟಕಾ ಎಂಬ ನಸೀನ ಜೂಜಾಟದ ನಂಬರ ಬರೆಯಿಸಿರಿ 1 ರೂಪಾಯಿಗೆ 80 ರೂಪಾಯಿ ಪಡೆಯಿರಿ ಅಂತ ಕೂಗುತ್ತಾ ಸಾರ್ವಜನಿಕರಿಗೆ ಕರೆದು ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವದನ್ನು ಸ್ವಲ್ಪ ದೂರದಿಂದ ಗಮನಿಸಿ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಗೆ ಹಿಡಿದುಕೊಂಡಾಗ ಮಟಕಾ ಬರೆಯಿಸುತ್ತಿದ್ದ ಜನರು ಓಡಿ ಹೋಗಿದ್ದು, ನಂತರ ಪಂಚರ ಸಮಕ್ಷಮದಲ್ಲಿ ನಾಗೇಶ ಇವನಿಗೆ ವಿಚಾರಿಸಲು ಅವನು ತಿಳಿಸಿದ್ದೇನೆಂದರೆ ತಾನು ಸಾರ್ವಜನಿಕರಿಗೆ ಮೊಸ ಮಾಡುವ ಉದ್ದೇಶದಿಂದ 1 ರೂಪಾಯಿ 80 ರೂಪಾಯಿ ಕೊಡುತ್ತೇನೆಂದು ಸಾರ್ವಜನಿಕರಿಂದ ಹಣ ಪಡೆದು ಮಟಕ ಎಂಬ ನಸಿಬಿ ಜುಜಾಟದ ನಂಬರ ಬರೆದುಕೊಳ್ಳುತ್ತಿದ್ದೇನೆಂದು ತಿಳಿಸಿದನು, ತಾನು ಮಟಕಾ ಬರೆದು ಸಂಗ್ರಹಿಸಿದ ಹಣದ ಪಟ್ಟಿಯನ್ನು ಮಟಕಾ ಬುಕ್ಕಿ ಸೋಮನಾಥ ತಂದೆ ಬಾಬು ರಗಟೆ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಆಲಗೂಡ, ಸದ್ಯ: ಉಮರ್ಗಾ ಈತನಿಗೆ ಕೊಡುತ್ತೇನೆಂದು ಹೇಳಿದನು, ದೂರದಲ್ಲಿ ನಿಂತ್ತಿದ್ದ ಒಬ್ಬ ಸಾರ್ವಜನಿಕನು ಆತನು ಮೊಸದಿಂದ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆಂದು ಹಣ ಪಡೆದು ಕೊಡದೆ ಮೊಸ ಮಾಡುತ್ತಾನೆಂದು ಕುಗಾಡುತ್ತಿದ್ದನು, ನಂತರ ಪಂಚರ ಸಮಕ್ಷಮ ಅವನ ಅಂಗ ಜಡತಿ ಮಾಡಿದಾಗ ಅವನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 3000/- ರೂಪಾಯಿ ನಗದು ಹಣ ಮತ್ತು ಒಂದು ಮಟಕಾ ಚೀಟಿ ಹಾಗು ಒಂದು ಬಾಲ್ ಪೇನ್ ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.