ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ಜಾವೀದ
ಇತನು ಕಲಬುರಗಿಯಲ್ಲಿರುವ ತನ್ನ ಹೆಂಡತಿ ಮನೆಗೆ ಹೋಗುವ ಕುರಿತು ಜೇವರಗಿಯಿಂದ ಮೋಟಾರ ಸೈಕಲ ನಂಬರ
ಕೆಎ-32/ಇಹೆಚ್-6770 ನೇದ್ದನ್ನು ಚಲಾಯಿಸಿಕೊಂಡು
ಕಲಬುರಗಿಗೆ ಹೋಗುವ ಕುರಿತು ರೋಡ ಎಡಗಡೆಯಿಂದ ತನ್ನ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಜೈಲ
ಸಮೀಪ ಬರುವ ಇಂದುಮತಿ ಲೇಔಟ ಎದರು ರೋಡ ಮೇಲೆ ಎದುರನಿಂದ ಮೋಟಾರ ಸೈಕಲ ನಂ ಕೆಎ-32/ಇಯು-3831 ನೇದ್ದರ ಸವಾರನು ತನ್ನ ಮೋಟಾರ
ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಜಾವೀದ ಇತನ ಮೋಟಾರ
ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಜಾವೀದ ಇತನು ಭಾರಿಗಾಯ ಹೊಂದಿ ಸ್ಥಳದಲ್ಲಯೇ
ಮೃತಪಟ್ಟಿದ್ದು ಅಪಘಾತ ಮಾಡಿದ ಮೋಟಾರ ಸೈಕಲ ಸವಾರನಿಗೂ ಸಣ್ಣ ಪುಟ್ಟಗಾಯಗಳಾಗಿದ್ದು ಆತನು ತನ್ನ
ಮೋಟಾರ ಸೈಕಲ ಅಲ್ಲಿ ಬಿಟ್ಟು ಹೋಗಿರುತ್ತಾನೆ ಅಂತಾ ಶ್ರೀ ಮಹ್ಮದ ವಾಜೀದ ತಂದೆ ಲಾಲ ಅಹ್ಮದ
ಖುರೇಷಿ ಸಾ: ಖಾಜಾ ಕಾಲೋನಿ ಜೇವರಗಿ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆ
01 ರ ಗುನ್ನೆ ನಂ 71/2019 ಕಲಂ 279, 304 (ಎ) ಐ.ಪಿ.ಸಿ ಸಂ 187 ಐಎಮವಿ ಆಕ್ಟ ಪ್ರಕರಣ ಪ್ರಕರಣ ದಾಖಲಿಸಲಾಗಿದೆ.
ಸಂಚಾರಿ ಠಾಣೆ 01 : ದಿನಾಂಕ 11.06.2019 ರಂದು ರಾತ್ರಿ ಮೃತ ವಿಜಯಕುಮಾರ
ಇತನು ತಾನೂ ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32/ಇಯು-5652 ನೇದ್ದರ ಹಿಂದುಗಡೆ ಸಂಜೀವ ಇವರನ್ನು ಕೂಡಿಸಿಕೊಂಡು ಹೊನ್ನಕಿರಣಗಿ
ಗ್ರಾಮದಿಂದ ತೋನಸಳ್ಳಿ (ಎಸ್) ಗ್ರಾಮ ಶಹಾಬಾದ ಕ್ರಾಸ ಮುಖಾಂತರವಾಗಿ ಜೇವರಗಿ ಕಡೆಗೆ ಹೋಗುವ ಕುರಿತು ತನ್ನ ಮೋಟಾರ ಸೈಕಲ ಅತೀವಾಗವಾಗಿ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಹೊನ್ನಕಿರಣಗಿ ಗ್ರಾಮದ ಸಿಮಾಂತರ ಹತ್ತೀರ ರೋಡ ಮೇಲೆ
ತನ್ನ ಮುಂದುಗಡೆ ಹೋಗುತ್ತಿರುವ ಯಾವದೋ ಒಂದು ಟ್ರ್ಯಾಕ್ಟರ ವಾಹನದ ಟ್ರ್ಯಾಲಿಗೆ ಹಿಂದಿನಿಂದ ಡಿಕ್ಕಿಪಡಿಸಿ
ಅಪಘಾತ ಮಾಡಿ ಭಾರಿಗಾಯಹೊಂದಿ ಸ್ಥಳದಲ್ಲಿಯೇ ಮೃತಪಟಟ್ಟಿರುತ್ತಾನೆ ಅಂತಾ ಶ್ರೀ ಸಂಜೀವ ತಂದೆ ಶರಣಪ್ಪಾ
ಅಡವಿ ಸಾ: ನೆಲೋಗಿ ಗ್ರಾಮ ತಾ: ಜೇವರಗಿ ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆ 01 ರ ಗುನ್ನೆ ನಂ 70/2019 ಕಲಂ 279, 304
(ಎ) ಐ.ಪಿ.ಸಿ ನೇದ್ದರ
ಪ್ರಕಾರ ಪ್ರಕರಣ ದಾಖಲಿಸಲಾಗಿದೆ.