ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-07-2020
ಬಸವಕಲ್ಯಾಣ
ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 10/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಮಹೇಶ ತಂದೆ ನಾಗರಾಜ ಜಾನಾಪುರೆ ವಯ:
29 ವರ್ಷ, ಜಾತಿ: ಎಸ್.ಸಿ
ಮಾದಿಗ,
ಸಾ: ಕಿಟ್ಟಾ
ಗ್ರಾಮ ರವರ
ತಮ್ಮನಾದ ಸಾಗರ ತಂದೆ ನಾಗರಾಜ
ಜಾನಾಪುರೆ ವಯ:
23 ವರ್ಷ
ಇತನು
ಸ್ವಲ್ಪ ಮಾನಸಿಕ
ಅಸ್ವಸ್ಥನಾಗಿದ್ದು ಆಗಾಗ ಮನೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಿದ್ದ,
ಹೀಗಿರುವಾಗ ದಿನಾಂಕ 22-07-2020 ರಂದು ಸಾಗರ ಇತನು
ಶೌಚಾಲಯಕ್ಕೆ ಹೊರಗೆ
ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿ
ಕಿಟ್ಟಾ ಶಿವಾರದಲ್ಲಿರುವ
ಹಳ್ಳದ ಹತ್ತಿರ ಇರುವ ಹುಣಚಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡಿರುವುದನ್ನು
ನೋಡಿ ಸಾಗರ ಇತನಿಗೆ
ಗಿಡದಿಂದ ಕೆಳಗೆ ಇಳಿಸಿ ನೋಡಲು ಜೀವ ಇದ್ದು ಆತನಿಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣ ಪಟ್ಟಣದ ಪಾಟೀಲ ಆಸ್ಪತ್ರೆಯಲ್ಲಿ ತೊರಿಸಿದಾಗ ವೈದ್ಯರು ಸಾಗರ ಇತನಿಗೆ ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ,
ತಮ್ಮ ಸಾಗರ
ಮಾನಸಿಕ ಆಸ್ವಸ್ಥನಾಗಿದ್ದು
ಆತನ ಮರಣದಲ್ಲಿ ಯಾರ
ಮೇಲೆ ಯಾವುದೇ ಸಂಶಯ
ಮತ್ತು ದೂರು
ಇರುವುದಿಲ್ಲಾ
ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ನಂ.
11/2020, ಕಲಂ. 174
ಸಿ.ಆರ್.ಪಿ.ಸಿ :-
ಫಿರ್ಯಾದಿ ಆಶಾರಾಣಿ ಗಂಡ ಸಿದ್ದಪ್ಪಾ ಹಂದಿಕೇರಿ ವಯ: 20 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಬೀರಾಬಾದ ವಾಡಿ, ತಾ: ಹುಮನಾಬಾದ ರವರ ಗಂಡನಾದ ಸಿದ್ದಪ್ಪಾ ತಂದೆ ರಾಜಪ್ಪಾ ಹಂದಿಕೇರಿ ವಯ: 28 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಕಬೀರಾಬಾದ ವಾಡಿ ಇತನು ಆಗಾಗ ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿದ ಸಮಯದಲ್ಲಿ ಹುಚ್ಚರಂತೆ ವರ್ತಿಸುವ ಸ್ವಭಾವದರಿದ್ದು, ಹೀಗಾಗಿ ಗಂಡ ದಿನಾಂಕ 21-07-2020 ರಂದು ಅಂದಾಜು 2300 ಗಂಟೆಯಿಂದ 2330 ಗಂಟೆಯ ಮದ್ಯಾವಧಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ತಮ್ಮ ಮನೆಯ ಬೆಡ್ ರೂಮಿನಲ್ಲಿರುವ ಸೀಲಿಂಗ್ ಫ್ಯಾನಿಗೆ ಬಿಳಿ ಲುಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಯು.ಡಿ.ಆರ್ ನಂ.
13/2020, ಕಲಂ. 174 ಸಿ.ಆರ್.ಪಿ.ಸಿ
:-
ಫಿರ್ಯಾದಿ ಶಾಂತಮ್ಮಾ
ಗಂಡ ನಾಗಯ್ಯಾ ಮಠಪತಿ ವಯ: 28 ವರ್ಷ,
ಜಾತಿ: ಸ್ವಾಮಿ, ಸಾ: ಜನತಾ ನಗರ ಹುಡಗಿ, ತಾ: ಹುಮನಾಬಾದ ರವರ ಗಂಡನಾದ ಸಿದ್ದಯ್ಯಾ ತಂದೆ ಶರಣಯ್ಯಾ ಮಠಪತಿ ವಯ: 32 ವರ್ಷ, ಜಾತಿ: ಸ್ವಾಮಿ, ಸಾ: ಜನತಾ ನಗರ ಹುಡಗಿ ಇತನು ಸರಾಯಿ ಕುಡಿಯವ
ಚಟದವನಾಗಿದ್ದು, ತನ್ನ ಗಂಡನಿಗೆ ಸರಾಯಿ ಕುಡಿಯುವದು ಬಿಡು ಅಂತಾ ಆಗಾಗ ಹೇಳುತ್ತಿದ್ದು ಆದರೂ ಸಹ
ಅವರು ಸರಾಯಿ ಕುಡಿಯುವದು ಬಿಟ್ಟಿರುವುದಿಲ್ಲಾ, ಹೀಗಿರುವಾಗ ದಿನಾಂಕ 22-07-2020 ರಂದು 0830 ಗಂಟೆಗೆ ಗಂಡ
ಸರಾಯಿ ಕುಡಿದು ಬಂದಾಗ ಯಾಕೆ ಮುಂಜಾನೆ ಸರಾಯಿ ಕುಡಿದು ಬಂದಿದ್ದಿ ಅಂತಾ ಅಂದು ತಾನು ರೊಡ್ಡಿ ಮಾಡುತ್ತಾ
ಕುಳಿತಿರುವಾಗ ಗಂಡ ಪಕ್ಕದ ಕೋಣೆಯಲ್ಲಿ ಹೋಗಿ ಹಗ್ಗದಿಂದ ಫ್ಯಾನಿಗೆ ನೇಣು ಹಾಕಿಕೊಂಡಿರುವದನ್ನು ಫಿರ್ಯಾದಿಯವರ
ಮಗ ನೋಡಿ ಮಮ್ಮಿ ಪಪ್ಪ ಯಾಕೋ ಈ ರೀತಿ ಮಾಡುತ್ತಿದ್ದಾನೆ ಅಂತಾ ತಿಳಿಸಿದ ಕೂಡಲೆ ಫಿರ್ಯಾದಿಯು ಹೋಗಿ
ನೋಡಲು ಗಂಡ ಪ್ಯಾನಿಗೆ ಹಗ್ಗದಿಂದ ನೇಣು ಹಾಕಿಕೊಂಡಿರುವದನ್ನು ನೋಡಿ ಚೀರಿ ಅಳುವಾಗ ಮನೆಯ ಎದುರಿಗೆ
ಇರುವ ಕಲಾವತಿ ಇವರು ಬಂದು ನೋಡಿ ಒಂದು ಕುಡಗೊಲಿನಿಂದ ಹಗ್ಗ ಕತ್ತರಿಸಿ ಇಳಿಸಿ ಇನ್ನೂ ಜೀವ
ಇರಬೇಕು ಅಂತಾ ಒಂದು ಆಟೋದಲ್ಲಿ ಹಾಕಿಕೊಂಡು ಆಸ್ಪತ್ರೆಗೆ ತಂದಾಗ ವೈದ್ಯರು ನೋಡಿ ಮೃತಪಟ್ಟಿರುತ್ತಾರೆಂದು
ತಿಳಿಸಿರುತ್ತಾರೆ, ಗಂಡ ಸರಾಯಿ ಕುಡಿದ ನಶೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ
ಮಾಡಿಕೊಂಡಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವದಿಲ್ಲಾ ಅಂತ
ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲಾಗಿದೆ.
ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 56/2020, ಕಂ. 279, 337,
338 ಐಪಿಸಿ :-
ದಿನಾಂಕ 22-07-2020 ರಂದು ಫಿರ್ಯಾದಿ ಅಂಕುಶ ತಂದೆ ಅಪ್ಪಾರಾವ
ಹಣಕುಣೆ ಸಾ: ಹಿರನಾಗಾಂವ ರವರ ತಮ್ಮನಾದ ಲೋಕೇಶ ತಂದೆ ಅಪ್ಪಾರಾವ ಹಣಕುಣೆ ಇತನು ತಮ್ಮೂರ ಸುದೀಪ
ತಂದೆ ವಿಜಯಕುಮಾರ ಭಂಡಾರಿ ಇತನ ಜೊತೆಯಲ್ಲಿ ಇಬ್ಬರು ಮೋಟಾರ್ ಸೈಕಲ ನಂ. ಕೆಎ-56/ಎಚ್-7210 ನೇದರ
ಮೇಲೆ ತಮ್ಮೂರಿಂದ ಬಟ್ಟೆ ತರಲು ಮುಡಬಿ ಗ್ರಾಮಕ್ಕೆ ಹೋಗುವಾಗ ಮೋಟಾರ್ ಸೈಕಲ್ ಲೋಕೇಶ ಇತನು
ಚಲಾಯಿಸುತ್ತಿದ್ದ ಆತ ತಮ್ಮೂರ ರಾಯಪ್ಪ ತಂದೆ ಶಿವಶರಣಪ್ಪ ಬಾಬನೋರ ಇವರ ಹೊಲದ ಹತ್ತಿರ ಮಡಬಿ
ಕಡೆಯಿಂದ ಪ್ಯಾಶನ ಪ್ರೋ ಮೋಟಾರ್ ಸೈಕಲ್ ಕೆಎ-56/ಈ-4402 ನೇದರ ಚಾಲಕನಾದ ಆರೋಪಿ ಆಕಾಶ ತಂದೆ
ದೇವಿದಾಸ ಜಾಧವ ಸಾ: ಕಾರಿಗುಂಡಿ ತಾಂಡಾ ಇತನು ತನ್ನ ವಾಹನವನ್ನು ಅತಿವೇಗ ಹಾಗೂ
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದಾಗ ಎರಡೂ ವಾಹನಗಳು ಮುಖಾ ಮುಖಿ ಡಿಕ್ಕಿಯಾಗಿರುತ್ತವೆ, ಸದರಿ
ಅಪಘಾತದಿಂದ ಲೋಕೇಶ ಇತನಿಗೆ ಹಣೆ ಮೇಲೆ ರಕ್ತಗಾಯ, ಮೂಗಿನ ಮೇಲೆ
ಎಡಗಡೆ ಗಲ್ಲದ ಮೇಲೆ ತರಚಿದ ರಕ್ತಗಾಯ, ಬಲಗಾಲು ಹೆಬ್ಬೆರಳಿಗೆ ರಕ್ತಗಾಯ, ಬಲಗಾಲು
ಮೊಳಕಾಲಿನಿಂದ ಕೆಳಗೆ ರಕ್ತಗಾಯವಾಗಿರುತ್ತದೆ ಹಾಗೂ ಸುದಿಪ ಇತನಿಗೆ ಯಾವುದೇ ಗಾಯಗಳಾಗಿರುವದಿಲ್ಲ
ಮತ್ತು ಆಕಾಶ ಇತನಿಗೆ ಬಲಗೈ ತೋರಬೆರಳಿಗೆ, ಮಧ್ಯದ ಬೆರಳಿಗೆ ರಕ್ತಗಾಯ, ಬಲಗಾಲು
ಹೆಬ್ಬರಳಿಗೆ ರಕ್ತಗಾಯ, ಬಲಗಾಲು ಪಾದದ ಮೇಲೆ ಜಾಯಿಂಟನಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ, ನಂತರ
ಅಪ್ಪಿ ಆಟೋದಲ್ಲಿ ಸುದೀಪ ಇಬ್ಬರಿಗೂ ಮುಡಬಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು
ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ
ಅಪರಾಧ ಸಂ. 99/2020, ಕಲಂ. 269 ಐಪಿಸಿ ಜೊತೆ 87 ಕೆ.ಪಿ ಕಾಯ್ದೆ :-
ದಿನಾಂಕ 22-07-2020
ರಂದು ಬಸವಕಲ್ಯಾಣ ನಗರದ ಆಟೋನಗರದಲ್ಲಿರುವ ಮಸಿದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೊರೊನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಈ ಬಗ್ಗೆ ನೀರ್ಲಕ್ಷ ವಹಿಸಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೊಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಕರೆ ಮುಖಾಂತರ ಸುನೀಲಕುಮಾರ ಪಿ.ಎಸ್.ಐ (ಕಾ&ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ಆಟೋನಗರದಲ್ಲಿರುವ ಮಸಿದಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿತರಾದ 1) ಯುಸುಫ್ ತಂದೆ
ಫತ್ರುಮಿಯ್ಯಾ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ರಾಜಪೂತ ಗಲ್ಲಿ ಬಸವಕಲ್ಯಾಣ, 2) ರಾಜೆಸಾಬ ತಂದೆ ಮಿರಾಸಾಬ ವಯ: 50 ವರ್ಷ, ಜಾತಿ: ಮುಸ್ಲಿಂ, 3) ಸೈಯದ ಕರಿಮ ತಂದೆ ಸೈಯದ ರಹಿಮಸಾಬ ವಯ: 44 ವರ್ಷ, ಜಾತಿ: ಮುಸ್ಲಿಂ, 4) ಇಸ್ಮಾಯಿಲ್ ತಂದೆ ಅಹ್ಮದಖಾನ ಉಂಟವಾಲೆ ವಯ: 55 ವರ್ಷ, ಜಾತಿ: ಮುಸ್ಲಿಂ, ಮೂವರು ಸಾ: ಬಬರಬಾಗ ಬಸವಕಲ್ಯಾಣ ಹಾಗೂ 5) ಖಾಜಾಮಿಯಾ ತಂದೆ ರಹಿಮಸಾಬ ವಯ: 55 ವರ್ಷ, ಜಾತಿ: ಮುಸ್ಲಿಂ, ಸಾ: ಛೀಲ್ಲಾಗಲ್ಲಿ ಬಸವಕಲ್ಯಾಣ ಇವರೆಲ್ಲರೂ ಗುಂಪಾಗಿ ಕುಳಿತುಕೊಂಡು ಕೊರೋನಾ ಸೊಂಕು ಹರಡಬಹುದು ಎಂದು ಗೊತ್ತಿದ್ದರು ಮಾಸ್ಕ್ ಧರಿಸದೇ ಮತ್ತು ಸಮಾಜಿಕ ಅಂತರ ಕಾಪಾಡದೆ ಈ ಬಗ್ಗೆ ನೀರ್ಲಕ್ಷ ವಹಿಸಿ ಇಸ್ಪಿಟ್ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ನಗದು ಹಣ 9600/- ರೂ ಮತ್ತು 52 ಇಸ್ಪಿಟ್ ಎಲೆಗಳನ್ನು
ತಾಬೆಗೆ
ತೆಗೆದುಕೊಂಡು,
ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.