ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 11-10-2020
ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 131/2020 ಕಲಂ 20(ಎ)
ಎನ್.ಡಿ.ಪಿ.ಎಸ್. ಕಾಯ್ದೆ :-
ದಿನಾಂಕ10-10-2020 ರಂದು 0900 ಗಂಟೆಗೆ ಗಂಟೆಗೆ ಮಹಾಂತೇಶ ಲಂಬಿ ಪಿ.ಎಸ್.ಐ (ಕಾ.ಸೂ) ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಪಂಡರಿ ತಂದೆ ಚಂದ್ರಪ್ಪಾ ಬುರಾನಪೂರೆ ಸಾ/ ಕೊಡಂಬಲ ಈತನು ಕೊಡಂಬಲ ಗ್ರಾಮದ ಹೊಲ ಸರ್ವೆ ನಂ:112/4 ನೇದರಲ್ಲಿ ಅಕ್ರಮವಾಗಿ ತನ್ನ ಕಬ್ಬಿನ ಹೊಲದಲ್ಲಿ ಗಾಂಜಾ ಬೆಳೆಯನ್ನು ಬೆಳೆದ ಬಗ್ಗೆ ಖಚಿತ ಬಾತ್ಮಿ ಬಂದಿದ್ದು, ಬಾತ್ಮಿ ವಿಷಯ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿತನಾದ
ಪಂಡರಿ ತಂದೆ ಚಂದ್ರಪ್ಪಾ ಬುರಾನಪೂರೆ ವಯ: 40 ವರ್ಷ ಜಾತಿ: ಕಬ್ಬಲಿಗ, : ಒಕ್ಕಲುತನ, ಸಾ/ ಕೊಡಂಬಲ
ಇವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.
ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 71/2020 ಕಲಂ 457, 380
ಐಪಿಸಿ :-
ದಿನಾಂಕ : 10-10-2020 ರಂದು 0815 ಗಂಟೆಗೆ ಫಿರ್ಯಾದಿತರಾದ ಶ್ರೀ ಚಂದ್ರಶೇಖರ ತಂದೆ ಮಾಧವರಾವ ಪಾಟಿಲ ವಯ.57 ವರ್ಷ ಜಾತಿ. ಮರಾಠಾ ಉ. ಮಹಾಲಕ್ಷ್ಮೀ ಮಂದಿರ ಕಮೀಟಿಯ ಅಧ್ಯಕ್ಷಕರು ಸಾ.ತೂಗಾಂವ(ಹೆಚ್) ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸದರ ಸಾರಂಶವೆನೆಂದರೆ. ದಿನಾಂಕ 10-10-2020 ರಂದು ರಾತ್ರಿ 0200 ಗಂಟೆಯಿಂದ 0400 ಗಂಟೆಯ ಮಧ್ಯದಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮಂದಿರದಲ್ಲಿ ದಾನ ಪೆಟ್ಟಿಗೆ ಒಡೆದು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ದಾನ ಪೆಟ್ಟಿಗೆಯನ್ನು ಫೆಬ್ರುವರಿಯಲ್ಲಿ ಒಡೆದು ಹಣ ತೆಗೆದುಕೊಂಡಿದ್ದು ನಂತರ ಲಾಕಡೌನ ಇದ್ದ ಪ್ರಯುಕ್ತ ದಾನ ಪೆಟ್ಟಿಗೆಯಲ್ಲಿ ಜಾಸ್ತಿ ಹಣ ಇರಲಿಲ್ಲಾ ಎಷ್ಟು ಹಣ ಕಳ್ಳತನ ಆಗಿದೆ ಅಂತ ಗೊತ್ತಿರುವುದಿಲ್ಲಾ ಈ ಬಗ್ಗೆ ಅಪರಿಚಿತ ಕಳ್ಳರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ
ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 137/2020 ಕಲಂ 78 (111) ಕೆ.ಪಿ.
ಎಕ್ಟ :-
ದಿನಾಂಕ 10/10/2020ರಂದು 1600 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ನನಗೆ ಖಚೀತ ಬಾತ್ಮಿ ಬಂದಿದ್ದೇನೆಂದರೆ, 3 ಜನ ವ್ಯಕ್ತಿಗಳು ಬೀರಿ (ಬಿ) ಗ್ರಾಮದ ರಾಜಕುಮಾರ ಕರಕಾಳೆ ರವರ ಮನೆಯ ಹತ್ತಿರ ಸಾರ್ವಜನಿಕರಿಂದ 1 ರೂಪಾಯಿಗೆ 90 ರೂಪಾಯ ಕೊಡುತ್ತೇನೆ ಅಂತ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತಿದ್ದಾರೆ ಅಂತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿದಾಗ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿಗಳಿಗೆ ಹಿಡಿದು ಅವರ ಹೆಸರು ವಿಳಾಸ ಮಟಕಾ ಚೀಟಿಗಳು ನಗದು ಹಣ ನೋಡಲು ರಾಜಕುಮಾರ ತಂದೆ ಬೀರಶೇಟ್ಟಿ ಕರಕಾಳೆ ವಯ 50 ಜಾತಿ ಲಿಂಗಾಯತ , ಆಟೊ ಚಾಲಕ ಸಾ/ ಬೀರಿ(ಬಿ) ಇದ್ದು ಅಂತಾ ತಿಳಿಸಿದನು. ಆತನ ಹತ್ತಿರ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ನಂಬರಗಳು ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಸಿಕ್ಕಿರುತ್ತವೆ ಅಂಗ ಝಡ್ತಿ ಮಾಡಲು ಇತನ ಹತ್ತಿರ 3000/- ರೂಪಾಯಿ ಇರುತ್ತವೆ, ಗುರಲಿಂಗ ಸಂಜಿವಕುಮಾರ ಮಠಪತಿ ವಯ 28 ಜಾತಿ ಸ್ವಾಮಿ ಉ, ಕೂಲಿ ಸಾ/ ಬೀರಿ(ಬಿ) ಇದ್ದು . ಆತನ ಹತ್ತಿರ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ನಂಬರಗಳು ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಸಿಕ್ಕಿರುತ್ತವೆ ಅಂಗ ಜಡ್ತಿ ಮಾಡಲು ಆತನ ಹತ್ತಿರ 3500/- ರೂಪಾಯಿ ಇರುತ್ತವೆ, ಉಸ್ಮಾನ ತಂದೆ ಛೋಟುಮಿಯ್ಯಾ ಸೈಯದ ವಯ 30 ಜಾತಿ ಮುಸ್ಲಿಂ ಉ, ಟ್ರ್ಯಾಕ್ಟರ ಚಾಲಕ ಸಾ/ ಬೀರಿ (ಬಿ) ಆತನ ಹತ್ತಿರ ನೋಡಲು ಆತನ ಹತ್ತಿರ ನಾಲ್ಕು ಬಿಳಿ ಹಾಳೆಯಲ್ಲಿ ಮಟಕಾ ನಂಬರಗಳು ಬರೆದ ಚೀಟಿಗಳು ಮತ್ತು ಒಂದು ಬಾಲ ಪೆನ್ನ ಸಿಕ್ಕಿರುತ್ತವೆ ಅಂಗ ಝಡ್ತಿ ಮಾಡಲು ಇತನ ಹತ್ತಿರ 3500/- ರೂಪಾಯಿ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 72/2020 ಕಲಂ 15(ಎ), 32(3)
ಕೆ.ಇ ಎಕ್ಟ
ದಿನಾಂಕ: 10-10-2020 ರಂದು 1200 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ ಸಾಯಗಾಂವ ತಾಂಡದ ಹತ್ತಿರ ಮೇಹಕರ ರೋಡಿಗೆ ರೋಶನ ಧಾಬಾದ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಕುಡಿಯಲು ಅನವು ಮಾಡಿಕೊಟ್ಟಿದ್ದು ಇರುತ್ತದೆ ಅಂತ ಖಚಿತ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿಯೊಂದಿಗೆ 1300 ಗಂಟೆಗೆ ಸಾಯಗಾಂವ ತಾಂಡದ ಬಸವನವಾಡಿ ಕ್ರಾಸ ಹತ್ತಿರ ಜೀಪ ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಸಾಯಗಾಂವ ತಾಂಡದ ರೋಡಿಗೆ ಇರುವ ರೋಶನ ಧಾಭಾದ ಎದುರಿಗೆ ಸಾರ್ವಜನಿಕ ಸ್ಥಳದಲ್ಲಿ ಜನರು ಕುಳಿತುಕೊಂಡು ಸಾರಾಯಿ ಕುಡಿಯುತ್ತಿದ್ದರು. ಖಚಿತ ಪಡಿಸಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಲು ಹೋಗುವಾಗ ಅವರೆಲ್ಲರು ಸಮವಸ್ತ್ರ ನೋಡಿ ಓಡಿ ಹೋಗಿದ್ದು ಅಲ್ಲಿಯೇ ಟೇಬಲ ಮೇಲೆ ಸಾರಾಯಿ ಇಟ್ಟುಕೊಂಡು ನಿಂತಿದ್ದ ಒಬ್ಬ ವ್ಯಕ್ತಿ ಸಹ ಓಡುತ್ತಿದ್ದಾಗ ಅವನಿಗೆ ಹಿಡಿದುಕೊಂಡು ಅವನಿಗೆ ಓಡಿ ಹೋಗದಂತೆ ಎಚ್ಚರಿಸಿ ನಂತರ ಅವನ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ರಮೇಶ ತಂದೆ ಮಿಟ್ಟು ರಾಠೋಡ ವಯ: 40 ವರ್ಷ ಜಾ:ಲಮಾಣಿ ಉ: ಹೊಟೆಲ್ ಕೆಲಸ ಸಾ: ಸಾಯಗಾಂವ ತಾಂಡ ಅಂತ ತಿಳಿಸಿರುತ್ತಾನೆ. ಅವನ ವಶದಿಂದ 1) 180 ಎಮ್. ಎಲ್ ಸಾಮಥ್ರ್ಯವುಳ್ಳ ಒಟ್ಟು 09 ಮ್ಯಾಕ ಡ್ಯುವೇಲ್ಸ(ಎಮ್.ಸಿ) ಸಾರಾಯಿ ಬಾಟಲಗಳು ಅ: ಕಿ: 1784/- ಇನ್ನೊಂದು ಕ್ಯಾರಿಬ್ಯಾಗನಲ್ಲಿ 2) 180 ಎಮ್.ಎಲ್. ಸಾಮಥ್ರ್ಯವುಳ್ಳ 10 ಇಂಪೆರಿಯಲ್ ಬ್ಲೂ ಸಾರಾಯಿ ಬಾಟಲಗಳು ಅ: ಕಿ 1982/- ಹೀಗೆ ಒಟ್ಟು ಅ: ಕಿ: 3766/- ನೇದು ಸಾರಾಯಿ ಬಾಟಲಗಳು , 180 ಎಮ್. ಎಲ್ ಸಾಮಥ್ರ್ಯವುಳ್ಳ ಒಟ್ಟು 09 ಮ್ಯಾಕ ಡ್ಯುವೇಲ್ಸ(ಎಮ್.ಸಿ) ಸಾರಾಯಿ ಬಾಟಲಗಳು ಇನ್ನೊಂದರಲ್ಲಿ 2) 180 ಎಮ್.ಎಲ್. ಸಾಮಥ್ರ್ಯವುಳ್ಳ 10 ಇಂಪೆರಿಯಲ್ ಬ್ಲೂ ಬಾಟಲಗಳು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ದಿನಾಂಕ
10-10-2020 ರಂದು 1830
ಗಂಟೆಗೆ ಫಿಯರ್ಾದಿ ಮಹ್ಮದ ಆರೀಫ ತಂದೆ ಅಬ್ದುಲ ಗಫೂರ ಶೇಕ ವಯ 35
ವರ್ಷ ಜಾತಿ ಮುಸ್ಲಿಂ ಉದ್ಯೋಗ ಮೌಜನ ಕೆಲಸ ಸಾ: ಅಟ್ಟೂರ ಗ್ರಾಮ ಸಧ್ಯ ಗೌಸ ನಗರ ಹಂಸಾ ಮಸೀದ
ಕಲಬುಗರ್ಿ ಇವರು ಠಾಣೆಗ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಅಟ್ಟೂರ
ಗ್ರಾಮದಲ್ಲಿ ದಿ: 8-09-2020
ರಂದು 2300 ಗಂಟೆಯಿಂದ ದಿ: 19-09-2020
ರಂದು 0230 ಗಂಟೆಯ ಮಧ್ಯ
ಅವಧಿಯಲ್ಲಿ ಮನೆಯ ಬಾಗಿಲನ ಕೀಲಿ
ಮುರಿದಿದ್ದು ಅಡುಗೆಯ ಮನೆಯಲ್ಲಿಯ ಗ್ಯಾಸ ಸ್ಟೋ
ಮತ್ತು ಸೀಲಿಂಡರ್ ಅಲಮಾರಿಯಲ್ಲಿ ಇಟ್ಟಿದ ಒಂದು
ತೊಲೆಯ ಬಂಗಾರದ ಜೀರಾ ಮಣಿ ಮತ್ತು 8
ತೊಲೆಯ ಚೈನ ಇರಲಿಲ್ಲಾ. ಹಾಗೂ ಅಲಮಾರಿಯಲ್ಲಿ ಇದ್ದ ಸಾರಿಗಳು ಕೂಡ ಇರಲಿಲ್ಲಾ. ಹಾಗೂ ಪಕ್ಕದಲ್ಲಿ
ಇರುವ ಇನ್ನೊಂದು ಕೊಣೆಯಲ್ಲಿ ಹೋಗಿ ನೋಡಲು ಕೊಣೆಯಲ್ಲಿ ಇಟ್ಟಿದ ಮನೆಯ ವಸ್ತುಗಳಾದ ಹಾಂಡಾ
ಬಾಂಡೆಗಳು ಕೂಡ ಇರಲಿಲ್ಲಾ. ಯಾರೋ ಕಳ್ಳರು
ದಿನಾಂಕ 18-09-2020
ರಂದು ರಾತ್ರಿ 11-00 ಪಿ ಎಮ್ ಗಂಟೆಯಿಂದ
ದಿನಾಂಕ 19-09-2020 2-30 ಎಮ್
ಎಮ್ ಗಂಟೆಯ ಮಧ್ಯ ಅವಧಿಯಲ್ಲಿ ಬಾಗಿಲಿನ ಕೀಲಿ
ಮುರಿದು ಕೊಣೆಯಲ್ಲಿ ಬಂಗಾರದ ಜೀರಾ ಮಣಿಗಳು ಅ:
ಕಿ: 48,000/- ರೂಪಾಯಿ,
ಬೆಳ್ಳಿಯ
ಚೈನ 8 ತೊಲೆ ಅ:ಕಿ: 3,200/-,
ಗ್ಯಾಸ
ಸ್ಟೋವ, ಸಿಲೇಂಡರ್ ಅ: ಕಿ: 6,000/-
ಮತ್ತು
ಮನೆಯ ವಸ್ತುಗಳಾದ ಹಾಂಡಾ ಬಾಂಡೆ ಹಾಗೂ ಸಾರಿಗಳು ಸೇರಿ ಒಟ್ಟು 40,000/-
ರೂಪಾಯಿ
ಹೀಗೆ ಒಟ್ಟು 97,200/-
ರೂಪಾಯಿ
ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.