ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 12-07-2021
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2021, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 10-07-2021 ರಂದು 0800 ಗಂಟೆಗೆ ಫಿರ್ಯಾದಿ ಜಗದೇವಿ ಗಂಡ ವೈಜಿನಾಥರೆಡ್ಡಿ ಯೆಲ್ಲರೆಡ್ಡಿ ವಯ: 50 ವರ್ಷ, ಜಾತಿ: ರೆಡ್ಡಿ, ಸಾ: ಹಂದ್ರಾಳ(ಕೆ) ರವರ ಮಗನಾದ ಉಮೇಶ ರೆಡ್ಡಿ ತಂದೆ ವೈಜಿನಾಥ ರೆಡ್ಡಿ ವಯ: 30 ವರ್ಷ, ಉ: ಲಾರಿ ಚಾಲಕ ಇತನು ಲಾರಿ ಮೇಲೆ ದಶರಥ ಇತನ ಜೊತೆ ಕೆಲಸಕ್ಕೆ ಮನೆಯಿಂದ ತಾಂಡೂರಕ್ಕೆ ಹೋಗಿ ಅಲ್ಲಿಂದ ಸಿಮೆಂಟ ಲೋಡ ಮಾಡಿಕೊಂಡು ಮರಳಿ ಮನೆಗೆ ಬಂದು ರಾತ್ರಿ ಮನೆಯಲ್ಲಿ ಉಳಿದು ನಂತರ ದಿನಾಂಕ 11-07-2021 ರಂದು ಸದರಿ ಲಾರಿ ಲೋಡನ್ನು ಅಹಮದ ನಗರಕ್ಕೆ ತೆಗೆದುಕೊಂಡು ಹೋಗುವ ಸಲುವಾಗಿ ಉಮೇಶ ಮತ್ತು ದಶರಥ ಇಬ್ಬರು ಗ್ರಾಮದಿಂದ ಲಾರಿಯನ್ನು ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿಯಿಂದ ಅಹಮದ ನಗರಕ್ಕೆ ಹೋಗುವಾಗ ಚಂಡಕಾಪೂರ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಉಮೇಶ ಈತನು ಲಾರಿ ಚಲಾಯಿಸುವಾಗ ಒಮ್ಮೆಲೆ ಎದೆ ಹಿಡಿದುಕೊಂಡಾಗ ದಶರಥ ಇತನು ಕೂಡಲೇ ಚಿಕಿತ್ಸೆ ಕುರಿತು ಅದೇ ಲಾರಿಯಲ್ಲಿ ಬಸವಕಲ್ಯಾಣಕ್ಕೆ ತರುವಾಗ ದಾರಿ ಮಧ್ಯದಲ್ಲಿ ಚಂಡಕಾಪೂರ ಹತ್ತಿರ ಉಮೇಶ ಇತನು ಹೃದಯಘಾತದಿಂದ ಮೃತಪಟ್ಟಿರುತ್ತಾನೆ, ತನ್ನ ಮಗನ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಅಥವಾ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 41/2021, ಕಲಂ. 32, 34 ಕರ್ನಾಟಕ ಅಬಕಾರಿ ಕಾಯ್ದೆ :-
ದಿನಾಂಕ 11-07-2021 ರಂದು ಶಾಹಪುರ ಗ್ರಾಮದಲ್ಲಿ ಬೋಮ್ಮಗೊಂಡೇಶ್ವರ ವೃತ್ತದ ಹತ್ತಿರ ಒಬ್ಬ ಹೆಣ್ಣು ಮಗಳು ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾಳೆಂದು ಮಲ್ಲಮ್ಮ ಆರ್.ಚೌಬೆ ಸಿಪಿಐ ಮಾರ್ಕೆಟ ವೃತ್ತ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಶಾಹಪೂರ ಗ್ರಾಮಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ರೋಡಿನ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತಳಾದ ಲಕ್ಷ್ಮೀ ಗಂಡ ತುಕ್ಕಯ್ಯಾ ವಯ: 50 ವರ್ಷ, ಜಾತಿ: ಈಡಗಾರ, ಸಾ: ಶಾಹಪುರ ಗ್ರಾಮ ಇವಳು ಒಂದು ಪ್ಲಾಸ್ಟಿಕ ಕ್ಯಾರಿ ಬ್ಯಾಗ ಹಿಡಿದುಕೊಂಡು ನಿಂತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಜೋತೆ ಸದರಿ ಆರೋಪಿತಳ ಮೇಲೆ ದಾಳಿ ಮಾಡಿ ಅವಳಿಗೆ ಅಲ್ಲೆ ಹಿಡಿದುಕೊಂಡು ಅವಳಿಗೆ ಪ್ಲಾಸ್ಟಿಕ ಕ್ಯಾರಿ ಬ್ಯಾಗನಲ್ಲಿ ಏನಿದೆ ಎಂದು ವಿಚಾರಿಸಲಾಗಿ, ಅವಳು ಇದರಲ್ಲಿ ಸರಾಯಿ ಇದೆ ಎಂದು ತಿಳಿಸಿದಾಗ ಅವಳಿಗೆ ನಿನ್ನ ಹತ್ತಿರ ಕಾಗದ ಪತ್ರಗಳು ಇವೆ ಎಂದು ವಿಚಾರಿಸಲಾಗಿ, ಅವಳು ನನ್ನ ಹತ್ತಿರ ಸರಾಯಿಗೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳು ಇರುವುದಿಲ್ಲಾ ಎಂದು ತಿಳಿಸಿದ ಮೇರೆಗೆ ಪಂಚರ ಸಮಕ್ಷಮ ಸದರಿ ಪ್ಲಾಸ್ಟಿಕ ಕ್ಯಾರಿ ಬ್ಯಾಗ ಪರಿಶೀಲಿಸಿ ನೋಡಲಾಗಿ, ಅದರಲ್ಲಿ 1) ಓರಿಜಿನಲ್ ಚೊಯಿಸ್ ವಿಸ್ಕಿ ಟೆಟ್ರಾ ಪ್ಯಾಕ 16 ಅ.ಕಿ 560/- ರೂ., 2) ಓಲ್ಡ್ ಟವರಿನ್ ವಿಸ್ಕಿ ಟೆಟ್ರಾ ಪ್ಯಾಕ 4 ಅ.ಕಿ 344/- ರೂ., 3) ಮೇಕಡ್ವಾಲ್ಸ್ ವಿಸ್ಕಿ 180 ಎಂ.ಎಲ್ 7 ಅ.ಕಿ 1386/- ರೂ., 4) ಕಿಂಗಫಿಶರ ಬೀರ 650 ಎಂ.ಎಲ್ ಒಂದು ಅ.ಕಿ 465/- ರೂ. ಹೀಗೆ ಒಟ್ಟು 2755/- ರೂ ಬೆಲೆ ಬಾಳವು ಸರಾಯಿ ಇದ್ದು, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 120/2021, ಕಲಂ. 379 ಐಪಿಸಿ :-
ಫಿರ್ಯಾದಿ ಆನಂದ ತಂದೆ ಮಾರುತಿ ಮೇಲೆಕೇರಿ ವಯ: 33 ವರ್ಷ ಜಾತಿ: ಎಸ್.ಸಿ ಹೊಲೆಯಾ, ಸಾ: ಜಲಸಂಗಿ, ತಾ: ಹುಮನಾಬಾದ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. KA39Q6693, ಚಾಸಿಸ್ ನಂ. MBLHAR087HHD0079, ಇಂಜಿನ್ ನಂ. HA10AGHHDA0500, ಮಾಡಲ್ 2017, ಬಣ್ಣ: ಸಿಲ್ವರ ಬಣ್ಣ ಹಾಗೂ ಅ.ಕಿ 35,000/- ರೂ. ನೇದನ್ನು ಹುಮನಾಬಾದ ಹಳೆ ಆರ್.ಟಿ.ಓ ಚೆಕ್ ಪೊಸ್ಟ್ ಹತ್ತಿರ ಒಂದು ಹೊಟೇಲ ಮುಂದಗಡೆ ನಿಲ್ಲಿಸಿರುವುದನ್ನು ದಿನಾಂಕ 09-07-2021 ರಂದು 1900 ಗಂಟೆಗೆ 1905 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 11-07-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.