Police Bhavan Kalaburagi

Police Bhavan Kalaburagi

Saturday, January 4, 2020

BIDAR DISTRICT DAILY CRIME UPDATE 04-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-01-2020

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 01/2020, ಕಲಂ. 498(), 323, 324, 504, 506(2) ಐಪಿಸಿ :-
ಫಿರ್ಯಾದಿ ಜ್ಯೋಗಿ ಗಂಡ ಸಂತೋಷ ವಯ: 30 ವರ್ಷ, ಜಾತಿ: ಲಿಂಗಾಯತ, ಸಾ: ಹಳ್ಳದಕೇರಿ, ಸದ್ಯ: ದರ್ಜಿಗಲ್ಲಿ ಬೀದರ ರವರ ಮದುವೆಯು ಸುಮಾರು 10 ವರ್ಷಗಳ ಹಿಂದೆ ಹಳ್ಳದಕೇರಿಯ ಸಂತೋಷನ ಜೊತೆಯಲ್ಲಿ ಆಗಿದ್ದು, 3 ಜನ ಮಕ್ಕಳು ಇರುತ್ತಾರೆ, ಗಂಡ ಮದುವೆಯಾದ ಸ್ವಲ್ಪ ದಿವಸಗಳ ನಂತರ ಸರಾಯಿ ಕುಡಿಯುವ ಚಟಕ್ಕೆ ಬಿದ್ದು, ಏನು ಕೆಲಸ ಮಾಡದೆ ದಿನಾಲು ಸರಾಯಿ ಕುಡಿದು ಬಂದು ಸಣ್ಣ ಪುಟ್ಟ ವಿಷಯಕ್ಕಾಗಿ ಜಗಳ ತೆಗೆದು, ಹೊಡೆ ಬಡೆ ಮಾಡುತ್ತಾ ಬಂದಿರುತ್ತಾನೆ ಹಾಗೂ ಫಿರ್ಯಾದಿಯು ಕೆಲಸ ಮಾಡುವ ಸ್ಥಳಕ್ಕೆ ಬಂದು ನೀನು ಯಾವನ ಹತ್ತಿರವಾದರೂ ಹೋಗಿ ಮಲಗಿಕೊಂಡು ನನಗೆ ಸರಾಯಿ ಕುಡಿಯಲು ಹಣ ಕೊಡು ಅಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಮನಸ್ಸಿಗೆ ಹತ್ತುವ ಹಾಗೆ ಮಾತನಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಹೀಗಿರುವಾಗ ದಿನಾಂಕ 02-01-2020 ರಂದು ಗಂಡನಾದ ಸಂತೋಷ ಇತನು ಸರಾಯಿ ಕುಡಿಯಲು ಹಣ ಕೊಡು ಅಂತ ಕೇಳಿದಾಗ ಫಿರ್ಯಾದಿಯು ತನ್ನ ಹತ್ತಿರ ಹಣ ಇಲ್ಲ ಎಲ್ಲಿಂದ ಕೊಡಲಿ ಅಂತ ಹೇಳಿದರೆ ಫಿರ್ಯಾದಿಯ ತಲೆಯ ಕೂದಲು ಹಿಡಿದು ನೀನು ಹಣ ಕೊಡದೆ ಇದ್ದರೆ ನಿನ್ನ ಜೀವ ತೆಗೆಯುತ್ತೇನೆ ಅಂತ ಹೇಳಿ ಮನೆಯಲ್ಲಿದ್ದ ತರಕಾರಿ ಕಟ್ ಮಾಡುವ ಚಾಕುವನ್ನು ಹಿಡಿದು ಹೆದರಿಸಿರುತ್ತಾನೆ ಮತ್ತು ಒಂದು ಬಡಿಗೆಯಿಂದ ಎರಡು ತೊಡೆಯ ಮೇಲೆ, ಬಿನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 05/2020, ಕಲಂ. 420 ಐಪಿಸಿ :-
ಫಿರ್ಯಾದಿ ಲತಾ ಗಂಡ ಸುರೇಶ ದಂತಕಾಳೆ ವಯ: 57 ವರ್ಷ, ಜಾತಿ: ಬಾವುಸಾರ ಕ್ಷತ್ರಿಯ, ಸಾ: ಗಾಸ ಬಜಾರ ಚಿಟಗುಪ್ಪಾ ರವರ ಗಂಡ ಹಾಗೂ ಮಗ ಇಬ್ಬರೂ ಬಟ್ಟೆ ಅಂಗಡಿ ವ್ಯಾಪಾರ ಮಾಡಿಕೊಂಡಿರುತ್ತಾರೆ, ದಿನಾಂಕ 03-01-2020 ರಂದು ಇಬ್ಬರೂ ಅಪರಿಚಿತ ವ್ಯಕ್ತಿಗಳು ಫಿರ್ಯಾದಿಯವರ ಮನೆಗೆ ಬಂದು ತಾಮ್ರದ ಹಾಗೂ ಬೆಳ್ಳಿಯ ಸಾಮಾನುಗಳು ಸ್ವಚ್ಛಗೊಳಿಸಬೇಕಾಗಿದೆಯೇ ಇದು ನಮ್ಮ ನೌಕರಿ ಇದ್ದು ಕಂಪನಿಯವರು ಜಾಹಿರಾತು ಎಂದು ಕಳುಹಿಸುತ್ತಾರೆ ಹೇಳಿದಾಗ ಫಿರ್ಯದಿಯು ಅದನ್ನು ನಂಬಿ ತ್ರಾಮದ ಹಾಗು ಬೆಳ್ಳಿಯ ಸಾಮನುಗಳನ್ನು ಕೊಟ್ಟಾಗ ಅವುಗಲನ್ನು ಸ್ವಚ್ಛಗೊಳಿಸಿ ಕೊಟ್ಟರು ಹಾಗೆಯೇ ಬಂಗಾರದ ಸಾಮನುಗಳನ್ನು ಸ್ವಚ್ಛಗೊಳಿಸಬೇಕೇ ಎಂದು ಬೇಡಿಕೊಂಡರು ಇದನ್ನು ನಂಬಿ ಫಿರ್ಯಾದಿಯು ತನ್ನ ಕೈಯಲ್ಲಿರುವ ಎರಡು ಬಂಗಾರದ ಬಳೆಗಳನ್ನು ಅಂದಾಜು ನಾಲ್ಕು ತೋಲೆ ಉಳ್ಳ ಅ.ಕಿ 1,50,000/- ರೂಪಾಯಿ ಬೇಲೆವುಳ್ಳ ಬಳೆಗಳು ನಿಡಿದಾಗ ಅವನು ಕುಕ್ಕರನಲ್ಲಿ ಹಾಕಿ ಅದನ್ನು 15 ನೀಮಿಷ ಕುದಸಿ ಆಮೇಲೆ ತೇಗೆದುಕೊಳ್ಳಿ ಎಂದಾಗ ಫಿರ್ಯಾದಿ ಅವರಿಗೆ ಕುಕ್ಕರ ನೀಡಿ ಕುಕ್ಕರ ಮೇಲಿನ ಮುಚ್ಛಳ ತರಲು ಮನೆಯಲ್ಲಿ ಹೋಗಿ ತರುವಷ್ಟರಲ್ಲಿ ಬಂಗಾರದ ಬಳೆಗಳನ್ನು ತೇಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 02/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 03-01-2020 ರಂದು ಚೀನಕೇರಾ ಗ್ರಾಮದ ಶೀವಾರದಲ್ಲಿ ಒಂದು ಗಿಡಿದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಕೆಲವು ಜನರು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದಾರೆ ಅಂತ ರವಿಕುಮಾರ ಪಿಎಸಐ ಹುಮನಾಬಾದ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಜೂಜಾಟ ಆಡುತ್ತಿದ್ದ ಆರೋಪಿತರಾದ 1) ಎಕನಾಥ ತಂದೆ ಕನಕಪ್ಪಾ ಯಾದವ, 2) ರಾಮಚಂದ್ರ ತಂದೆ ಪಾಂಡುರಂಗ ಪುಜಾರಿ, 3) ರಾಜಶೇಖರ ತಂದೆ ಕಲ್ಲಯ್ಯಾ ಸ್ವಾಮಿ, 4) ರಾಜಕುಮಾರ @ ರಾಜಶೇಖರ ತಂದೆ ಸಿದ್ದಣ್ಣಾ ಕಾರಂಜಿ, 5) ಪವನ, 6) ಲಕ್ಷ್ಮಣ, 7) ಸತೀಶ ಪುಜಾರಿ ಮತ್ತು 8) ರೇವಣಸಿದ್ದ ದೇವಣಿ ಎಲ್ಲರು ಸಾ: ಹುಮನಾಬಾದ ಇವರೆಲ್ಲರ ಮೇಲೆ ದಾಳಿ ಮಾಡಿದಾಗ 04 ಜನರು ಸಿಕ್ಕಿದ್ದು, ಉಳಿದ ಜನರು ಓಡಿ ಹೋಗಿರುತ್ತಾರೆ, ಅವರಿಂದ ನಗದು ಹಣ 27,630/- ರೂ. ಹಾಗೂ 52 ಇಸ್ಪೀಟ್ ಎಲೆಗಳು ಜಪ್ತಿ ಮಾಡಿಕೊಂಡು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 3 & 7 .ಸಿ ಕಾಯ್ದೆ :-
ದಿನಾಂಕ 03-01-2020 ರಂದು ಫಿರ್ಯಾದಿ ರವಿ ಸೂರ್ಯವಂಶಿ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರು ತಹಸೀಲ್ ಕಛೇರಿ ಬಸವಕಲ್ಯಾಣದಲ್ಲಿರುವಾಗ ರಾಮರತನ ದೆಗಲೆ ಆಹಾರ ನಿರೀಕ್ಷಕರು ಬಸವಕಲ್ಯಾಣ ಇವರು ತಿಳಿಸಿದೆನಂದರೆ ಒಬ್ಬ ವ್ಯಕ್ತಿ ಅನಧಿಕೃತವಾಗಿ ಒಂದು ಟಾಟಾ ಲಾರಿ ನಂ. ಜಿಜೆ-36/ವಿ-8766 ನೇದರಲ್ಲಿ ಪಿ.ಡಿ.ಎಸ್ ಅಕ್ಕಿ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡಲು ರಾ.ಹೆ ನಂ. 65 ಬದಿಯಲ್ಲಿರುವ ಧಾಮಿ ಪಂಜಾಬಿ ಧಾಬಾ ಹತ್ತಿರ ಲಾರಿಯನ್ನು ನಿಲ್ಲಿಸಿ ಊಟ ಮಾಡಲು ಹೋಗಿರುತ್ತಾನೆಂದು ಕರೆ ಮೂಲಕ ಖಚಿತ ಬಾತ್ಮಿ ತಿಳಿದು ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಧಾಮಿ ಪಂಜಾಬಿ ಧಾಬಾಕ್ಕೆ ತಲುಪಿ ಮೋಟರ ಸೈಕಲಗಳನ್ನು ನಿಲ್ಲಿಸಿ ನೋಡಲು ಸದರಿ ಧಾಮಿ ಧಾಬಾದ ಎದರುಗಡೆ ರಾ. ಹೆ ನಂ. 65 ಬದಿಯಲ್ಲಿ ಟಾಟಾ ಲಾರಿ ನಂ. ಜಿಜೆ-36/ವಿ-8766 ನೇದು ನಿಲ್ಲಿಸಿದ್ದು, ಸದರಿ ಲಾರಿಯಲ್ಲಿ ನೋಡಲು ಲಾರಿ ಚಾಲಕ ಲಾರಿ ಚಾಲು ಮಾಡುವಾಗ ಅವನಿಗೆ ನಿಲ್ಲಿಸಲು ಕೈಸನ್ನೆ ಮಾಡಿದಾಗ ಅವನು ಚಾಲು ಮಾಡುವದನ್ನು ಬೀಟ್ಟು ಕೆಳಗೆ ಇಳಿದು ಬಂದಾಗ ಅವನಿಗೆ ಲಾರಿಯಲ್ಲಿ ಏನು ಲೋಡ ಇದೆ? ಎಂದು ವಿಚಾರಿಸಿದಾಗ ಅವನು ಅಕ್ಕಿ ತುಂಬಿದ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಸದರಿ ಲೋಡಿಗೆ ಸಂಬಂಧಿಸಿದಾಖಲಾತಿಗಳನ್ನು ಹಾಜರ ಪಡಿಸಲು ಸೂಚಿಸಿದಾಗ ಚಾಲಕ ದಾಖಲಾತಿಗಳನ್ನು ಹಾಜರ ಪಡಿಸಿದ್ದು ಅದನ್ನು ಪರಿಶಿಲಿಸಿ ನೋಡಲು ಶ್ರೀ ಬಾಲಾಜಿ ಟ್ರೇಡರ್ಸ ಮೋತಿ ಬಜಾರ ಗಾಂಧಿಗಂಜ ಬೀದರ ನೇದ್ದರಲ್ಲಿ ಅಕ್ಕಿ ತುಂಬಿರುವ ಚೀಲಗಳು ಲೋಡ ಮಾಡಿದ ಬಗ್ಗೆ ದಾಖಲಾತಿ ಇರುತ್ತದೆ, ಆದರೆ ಇದು ಸೂಕ್ತ ದಾಖಲೆ ಎಂದು ಫಿರ್ಯಾದಿಗೆ ಅನಿಸಲಿಲ್ಲಾ, ಸದರಿ ಲಾರಿಯಲ್ಲಿದ್ದ ಅಕ್ಕಿ ಚೀಲಗಳನ್ನು ಪರಿಶೀಲಿಸಿ ನೋಡಲು ಅಂದಾಜು 50 ಕೆ.ಜಿ ತೂಕದ ಒಟ್ಟು 700 ಪ್ಲಾಸ್ಟೀಕ್ ಚೀಲಗಳು ಇದ್ದು ಸದರಿ ಅಕ್ಕಿ ಪಿ.ಡಿ.ಎಸ್. ಅಕ್ಕಿಗೆ ಹೋಲುವ ಅಕ್ಕಿ ಇದ್ದುದ್ದರಿಂದ ಸದರಿ ಲಾರಿ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ನಾಗಭಾಯಿ ತಂದೆ ದೇವಾ ಭಾಯಿ ಚವ್ಡಾ ವಯ: 33 ವರ್ಷ, ಜಾತಿ: ರಬ್ಬಾರಿ, ಸಾ: ಕೋಲಿಖಡಾ, ತಾ&ಜಿಲ್ಲೆ: ಪೋರ ಬಂದರ (ಗುಜರಾತ ರಾಜ್ಯ) ಎಂದು ತಿಳಿಸಿದಾಗ ಅವನ ಅಧಿನದಲ್ಲಿದ್ದ 50 ಕೆ.ಜಿ ತೂಕದ ಒಟ್ಟು 700 ಪ್ಲಾಸ್ಟೀಕ್ ಚೀಲಗಳು ಅದರ ಬೆಲೆ ಒಟ್ಟು 10,50,000/- ರೂ ಮತ್ತು 20 ಲಕ್ಷ ಬೆಲೆಯ ಲಾರಿ ಜಪ್ತಿ ಮಾಡಿಕೊಂಡು, ಆರೋಪಿ ನಾಗಭಾಯಿ ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೋರಲಾಗಿದೆ ಅಂತ ನೀಡಿದ ಫಿರ್ಯಾದು ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.