Police Bhavan Kalaburagi

Police Bhavan Kalaburagi

Tuesday, February 23, 2021

BIDAR DISTRICT DAILY CRIME UPDATE 23-02-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-02-2021

 

ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 20/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಪರಶುರಾಮ ತಂದೆ ಶಂಕರ ಹೊಟಕರ್ ಸಾ: ಗಾಂಧಿ ನಗರ ಮೈಲೂರ, ಬೀದರ ರವರ ಮಗಳಾದ ಲಕ್ಷ್ಮೀ ಇವಳ ಮಗಳಾದ ಕು. ಶ್ವೇತಾ ವಯ: 20 ವರ್ಷ ಇವಳು ಸುಮಾರು 2 ವರ್ಷಗಳಿಂದ ಫಿರ್ಯಾದಿಯವರ ಮನೆಯಲ್ಲಿ ವಾಸವಾಗಿದ್ದು, ಅವಳು ಬೀದರ ನಗರದ ಅಕ್ಕಮಹಾದೇವಿ ಕಾಲೇಜಿನಲ್ಲಿ ಬಿ.ಕಾಂ ದ್ವೀತಿಯ ವರ್ಷದಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು, ದಿನಾಲು ಮನೆಯಿಂದ ಕಾಲೇಜಿಗೆಂದು 0900 ಗಂಟೆಗೆ ಹೋಗಿ 1400 ಗಂಟೆಗೆ ಮರಳಿ ಕಾಲೇಜಿನಿಂದ ಮನೆಗೆ ಬರುತ್ತಿದ್ದಳು, ಹೀಗಿರುವಾಗ ಎಂದಿನಂತೆ ದಿನಾಂಕ 22-02-2021 ರಂದು ಶ್ವೇತಾ ಇವಳು ಮನೆಯಿಂದ ಅಕ್ಕಮಹಾದೇವಿ ಕಾಲೇಜಿಗೆ ಹೋಗಿ ಬರುತ್ತೆನೆಂದು ಹೇಳಿ 0900 ಗಂಟೆಗೆ ಮನೆಯಿಂದ ಹೋದವಳು 1500 ಗಂಟೆಯಾದರು ಮನೆಗೆ ಬಂದಿರುವುದಿಲ್ಲಾ, ಆಗ ಫಿರ್ಯಾದಿಯು ಅವಳ ಮೊಬೈಲ್ ಸಂ. 7829972263 ನೇದಕ್ಕೆ ಕರೆ ಮಾಡಿದಾಗ ಅದು ಸ್ವಿಚ್ಡ್ಆಫ್ ಅಂತ ಹೇಳಿರುತ್ತದೆ, ನಂತರ ಫಿರ್ಯಾದಿಯು ತನ್ನ ಮಕ್ಕಳಾದ ಶಂಕರ, ಸುರೇಶ ಎಲ್ಲರೂ ಕೂಡಿಕೊಂಡು ಅಕ್ಕಮಹಾದೇವಿ ಕಾಲೇಜಿಗೆ ಬಂದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಶ್ವೇತಾ ಇವಳ ಭಾವಚಿತ್ರ ತೋರಿಸಿ ವಿಚಾರಿಸಲಾಗಿ ಅವನು ಗುರುತಿಸಿ ಕಾಲೇಜಿಗೆ ಬಂದ ಬಗ್ಗೆ ತಿಳಿಸಿರುತ್ತಾನೆ, ನಂತರ ಆಕೆಯನ್ನು ಎಲ್ಲಾ ಕಡೆ ಹುಡಕಾಡಿದರೂ ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. 504, 323, 498(), 506 ಜೊತೆ 34 ಐಪಿಸಿ ಮತ್ತು 3 & 4 ಡಿ.ಪಿ ಕಾಯ್ದೆ :-

ಫಿರ್ಯಾದಿ ಗೌಸಿಯಾ ಸುಲ್ತಾನಾ ಗಂಡ ಮುಜಮೀಲ್ ಬಡಾಡಿ ವಯ: 20 ವರ್ಷ, ಜಾತಿ: ಮುಸ್ಲಿಂ, ಸಾ: ಮಂಠಾಳ ರವರ ಮದುವೆಯು ದಿನಾಂಕ 06-08-2020 ರಂದು ಮುಸ್ಲಿಂ ಸಂಪ್ರದಾಯದಂತೆ ತಂದೆ-ತಾಯಿಯವರು ರಬ್ಬಾನಿ ಬೀ ಇವರು ಬಸವಕಲ್ಯಾಣ ಪಟ್ಟಣದಲ್ಲಿರುವ ಸೇರೆ ಸವಾರ ಫಕ್ಷನ ಹಾಲದಲ್ಲಿ ಮಂಠಾಳ ಗ್ರಾಮದ ಮುಜಮೀಲ ತಂದೆ ಮುಬಿನ ಬಡಾಡಿ ಇವರೊಂದಿಗೆ ಮಾಡಿಕೊಟ್ಟಿರುತ್ತಾರೆ, ಮದುವೆಯಲ್ಲಿ ಗಂಡನಿಗೆ ವರೋಪಚಾರ ಅಂತಾ 25,000/- ರೂಪಾಯಿ ಕೊಟ್ಟಿರುತ್ತಾರೆ ಹಾಗೂ ಮೈಮೇಲೆ ಒಂದು ವರೆ ತೊಲೆ ಬಂಗಾರದ ಆಭರಣಗಳನ್ನು ಹಾಕಿರುತ್ತಾರೆ, ಗಂಡನ ಮನೆಯಲ್ಲಿ ಫಿರ್ಯಾದಿ, ಗಂಡ ಮುಜಮೀಲ್, ಅತ್ತೆ ಹಲಿಮಾಬೀ ಮತ್ತು ನಾದಣಿಯರಾದ ಸೂರೈಯಾ ಗಂಡ ರಹಮತ ಅಲಿ ಸಾ: ಕೊಹೀನೂರ ಪಹಡ, ಹೀನಾ ಸಾ: ಕೊಹೀನೂರ ಪಹಾಡ ಇವರು ಇರುತ್ತಾರೆ, ಮದುವೆಯ ಮುಂಚಿತವಾಗಿ ಫಿರ್ಯಾದಿಯ ಎಡಗೈ ಭುಜದ ಮೇಲೆ, ಕುತ್ತಿಗೆ ಹತ್ತಿರ ಬಿಳಿ ಬಣ್ಣದ ಚಿಬ್ ಇದ್ದ ಬಗ್ಗೆ ತಿಳಿಸಿದ್ದು ಇರುತ್ತದೆ, ಗಂಡ ಮದುವೆಯಾದ ಎರಡು ದಿವಸ ಸರಿಯಾಗಿ ಇಟ್ಟಿಕೊಂಡು ನಂತರ ಮೂರನೆ ದಿವಸ ಆರೋಪಿತರಾದ ಗಂಡ, ಅತ್ತೆ ಮತ್ತು ಇಬ್ಬರು ನಾದಣಿಯವರು ನಿನ್ನ ಎಡಗೈ ಭುಜದ ಮೇಲೆ, ಕುತ್ತಿಗೆ ಹತ್ತಿರ ಬಿಳಿ ಬಣ್ಣದ ಚಿಬ್ ಇದೆ ಅಂತ ಅವಾಚ್ಯವಾಗಿ ಬೈದು ನೀನು ಮನೆ ಬಿಟ್ಟು ಹೋಗು ಇಲ್ಲವಾದರೆ ನಿನಗೆ ಜೀವ ಸಹೀತ ಬಿಡುವುದಿಲ್ಲಾ ಅಂತಾ ದಿನಾಂಕ 08-08-2020 ರಂದು ಹೊಡೆ ಬಡೆ ಮಾಡಿರುತ್ತಾರೆ ಹಾಗೂ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ ಇನ್ನು 5 ತೊಲೆ ಬಂಗಾರ ಮತ್ತು ಒಂದು ಮೋಟಾರ ಸೈಕಲ ವರದಕ್ಷಿಣೆ ತರಬೇಕು ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುತ್ತಾರೆ, ಸದರಿ ಆರೋಪಿತರು ತೊಂದರೆ ಕೊಡುತ್ತಿದ್ದ ಬಗ್ಗೆ ತನ್ನ ತಂದೆ ತಾಯಿಯವರಿಗೆ ತಿಳಿಸಿದಾಗ ಅಣ್ಣನಾದ ವಹೀದ ಇತನು ಮಂಠಾಳ ಗ್ರಾಮಕ್ಕೆ ಬಂದು ಗಂಡ, ಅತ್ತೆ ಮಾವ ಮತ್ತು ನಾದಣಿ ಇವರಿಗೆ ತಿಳಿಸಿ ಹೇಳಿ ಹೋಗಿರುತ್ತಾನೆ, ನಂತರ ದಿನಾಂಕ 10-08-2020 ರಂದು ಗಂಡ ಮುಜಮೀಲ ಇತನು ಫಿರ್ಯಾದಿಗೆ ಬಸವಕಲ್ಯಾಣ ಪಟ್ಟಣದಲ್ಲಿ ಫಿರ್ಯಾದಿಯ ತಂದೆ ತಾಯಿಯವರ ಮನೆಯಲ್ಲಿ ಬಿಟ್ಟು ಸಂಬಂಧಿಕರ ಮದುವೆ ಮುಗಿಸಿಕೊಂಡು ಬರುವುದಾಗಿ ಹೇಳಿ ಹೋಗಿರುತ್ತಾನೆ, ನಂತರ ದಿನಾಂಕ 11-08-2020 ರಂದು ಫಿರ್ಯಾದಿಯವರ ಮನೆಗೆ ಸದರಿ ಆರೋಪಿತರೆಲ್ಲರೂ ಬಂದು ನಿಮ್ಮ ಮಗಳಿಗೆ ನಮ್ಮ ಮನೆಗೆ ಕಳುಹಿಸಬೇಕಾದರೆ ಇನ್ನು 5 ತೊಲೆ ಬಂಗಾರ ಮತ್ತು ಒಂದು ಮೋಟಾರ ಸೈಕಲ ವರದಕ್ಷಿಣೆ ಕೊಡಬೇಕು ಇಲ್ಲವಾದರೆ ನಿಮ್ಮ ಮಗಳಿಗೆ ನಿಮ್ಮ ಮನೆಯಲ್ಲಿಯೇ ಇಟ್ಟಿಕೊಳ್ಳಿ ಅಂತಾ ಜಗಳ ಮಾಡಿ ಹೋಗಿರುತ್ತಾರೆ, ನಂತರ ಇಲ್ಲಿಯವೆಗೆ ಕರೆಯಲು ಬಂದಿರುವುದಿಲ್ಲಾ, ಸುಮಾರು ಸಲ ಗಂಡನಿಗೆ ಬುದ್ದಿವಾದ ಹೇಳಿದರೂ ಸಹ ಕರೆದುಕೊಂಡು ಹೋಗಿರುವುದಿಲ್ಲಾ, ಗಂಡ ಇಗ ಸುಮಾರು ದಿವಸಗಳ ಹಿಂದೆ ಕೆಲಸಕ್ಕಾಗಿ ದುಬೈಗೆ ಹೋಗಿರುವುದಾಗಿ ಗೊತ್ತಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 379 ಐಪಿಸಿ :-

ದಿನಾಂಕ 24-11-2020 ರಂದು 2100 ಗಂಟೆಯಿಂದ 2130 ಗಂಟೆಯ ಮದ್ಯದ ಅವಧಿಯಲ್ಲಿ ಕಮಲಾ ರೇಸಿಡೆನ್ಸ್ ಲಾಡ್ಡಿನ ಎದುರುಗಡೆ ನಿಲ್ಲಿಸಿದ ಫಿರ್ಯಾದಿ ಚನ್ನವೀರ ಶಿವಚಾರ್ಯ .ಟಿ. ಕಾಲೇಜಿನಲ್ಲಿ ಕ್ಲರ್ಕ ಸಾ: ಹಿರೇಮಠ ಕಾಲೋನಿ ಬಸವಕಲ್ಯಾಣ ರವರ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ನಂ. ಕೆಎ-56/ಹೆಚ್-5441 ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಕಳುವಾದ ವಾಹನದ ವಿವರ 1) ಮೋಟಾರ ಸೈಕಲ್ ನಂ. ಕೆಎ-56/ಹೆಚ್-5441, 2) ಚಾಸಿಸ್ ನಂ. MBLHA10CGGHF80827, 3) ಇಂಜಿನ್ ನಂ. HA10ERGHF88262, 4) Model-2016 & 5) .ಕಿ. 20,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 22-02-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.