Police Bhavan Kalaburagi

Police Bhavan Kalaburagi

Sunday, May 16, 2021

BIDAR DISTRICT DAILY CRIME UPDATE 16-05-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-05-2021

 

ನೂತನ ನಗರ ಪೊಲೀಸ್ ಠಾಣೆ ಬೀದರ ಅಪರಾಧ ಸಂ. 57/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಪಾವರ್ತಿ ಗಂಡ ಜಗನ್ನಾಥ ಕಾಂಬಳೆ ವಯ: 45 ವರ್ಷ, ಜಾತಿ: ಎಸ್.ಸಿ ಹೊಲಿಯ, ಸಾ: ಬಾಚೆಪಳ್ಳಿ ಗ್ರಾಮ, ತಾ: ಔರಾದ(ಬಾ) ರವರ ಮಗಳಾದ ಕು. ಸುಪ್ರೀಯ ವಯ: 19 ವರ್ಷ ಇವಳ ನಿಶ್ಚಿತಾರ್ಥ ಸುಮಾರು 2 ತಿಂಗಳ ಹಿಂದೆ ನಿರ್ಣಾ ಗ್ರಾಮದ ಚಂದು ಈತನೊಂದಿಗೆ ಆಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 10-04-2021 ರಂದು ಚಂದು ಈತನು ಕರೆ ಮಾಡಿ ನಾನು ಬೀದರಗೆ ಬರುತ್ತಿದ್ದೆನೆ ಮುಂಗಡವಾಗಿ ಬಂಗಾರ ಖರೀದಿ ಮಾಡಿಕೊಂಡು ಇಟ್ಟುಕೊಳ್ಳೋಣ ಅಂತ ಹೇಳಿದಕ್ಕೆ ಅದಕ್ಕೆ ಒಪ್ಪಿ ದಿನಾಂಕ 11-04-2021 ರಂದು ತಮ್ಮ ಗ್ರಾಮದಿಂದ 0900 ಗಂಟೆಗೆ ಮಗನಾದ ಲೊಕೇಶ ವಯ 16 ವರ್ಷ ಈತನು ಮೋಟಾರ ಸೈಕಲ ಮೇಲೆ ಮಗಳಾದ ಸುಪ್ರೀಯ ಇವಳನ್ನು ಕೂಡಿಸಿಕೊಂಡು ಬೀದರಗೆ ಹೊರಟಿದ್ದು, ಫಿರ್ಯಾದಿ ಮತ್ತು ಗಂಡನಾದ ಜಗನ್ನಾಥ ಇಬ್ಬರು ಬಸ್ಸಿನ ಮೂಲಕ ಬೀದರಗೆ ಬರುತ್ತಿರುವಾಗ ಅಂದಾಜು 1145 ಗಂಟೆಗೆ ಮಗನಾದ ಲೊಕೇಶ ಈತನು ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಅಕ್ಕ ಸುಪ್ರೀಯ ಇಬ್ಬರು ಮೋಟಾರ ಸೈಕಲ ಮೇಲೆ ಬೀದರಗೆ ಬಂದು ಬೀದರ ಜನವಾಡಾ ರಸ್ತೆ ವಾಟರ ಟ್ಯಾಂಕ ಹತ್ತಿರ ಬಂದು ನಿಂತಾಗ ಅಕ್ಕ ಸುಪ್ರೀಯ ಇವಳು ವಾಂತಿ ಮಾಡಿಕೊಂಡಿದ್ದು ಆವಾಗ ನಾನು ನೀರಿನ ಬಾಟಲಿ ತೆಗೆದುಕೊಂಡು ಬರುವಷ್ಠರಲ್ಲಿ ಸುಪ್ರೀಯ ಇವಳು ಅಲ್ಲಿಂದ ಹೋಗಿದ್ದು ಎಲ್ಲಾ ಕಡೆ ನೋಡಿದರು ಕಾಣಲಿಲ್ಲಾ ಅಂತ ತಿಳಿಸಿರುತ್ತಾನೆ, ನಂತರ ಫಿರ್ಯಾದಿಯು ತನ್ನ ಮಗಳಾದ ಸುಪ್ರೀಯ ಇವಳಿಗೆ ಎಲ್ಲಾ ಕಡೆಗೆ ಹುಡಕಾಡಿದರು ಸಹ ಅವಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 44/2021, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 15-05-2021 ರಂದು ಫಿರ್ಯಾದಿ ನಾಗಾರ್ಜುನ ತಂದೆ ವೈಜಿನಾಥ ಫುಲೆ ಸಾ: ಬಾಜೋಳಗಾ ರವರ ತಂಗಿ ಪ್ರೀತಿ ಇವಳಿಗೆ ಅಂದಾಜು 20 ದಿವಸಗಳ ಹಿಂದೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನಿಡಿರುತ್ತಾಳೆ, ಸದರಿ ಮಗನಿಗೆ ಆರಾಮ ಇಲ್ಲದ ಪ್ರಯುಕ್ತ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿರುತ್ತಾರೆ, ಹೀಗಿರುವಲ್ಲಿ ದಿನಾಂಕ 14-05-2021 ರಂದು ಫಿರ್ಯಾದಿಯು ತನ್ನ ತಂಗಿಯಾದ ಪ್ರೀತಿ ಇಬ್ಬರು ಬೀದರ ಸರಕಾರಿ ಆಸ್ಪತ್ರೆಯಲ್ಲಿದ್ದಾಗ ಭಾವನಾದ ಗೌತಮ ಬುದ್ದ ತಂದೆ ರಾಮಣ್ಣಾ ವಯ: 28 ವರ್ಷ, ಜಾತಿ: ಎಸ್.ಸಿ, : ಪೊಲೀಸ್ ಕಾನ್ಸ್ಟೇಬಲ್ ಸಿಪಿಸಿ-1435 ಭಾಲ್ಕಿ ನಗರ ಪೊಲೀಸ ಠಾಣೆ, ಸಾ: ತುಮಕುಂಟಾ, ತಾ: ಚಿಂಚೊಳಿ ಇವರು ಆಸ್ಪತ್ರೆಗೆ ಬಂದು ಜೋತೆಯಲ್ಲಿ ದ್ದು, ಅಂದಾಜು 2230 ಗಂಟೆಯ ಸುಮಾರಿಗೆ ಭಾ ಗೌತಮ ಬುದ್ಧ ರಾತ್ರಿ ಕರ್ತವ್ಯ ಕುರಿತು ಭಾಲ್ಕಿಗೆ ಹೊಗುತ್ತೆನೆ ಅಂತ ಹೇಳಿ ಮೋಟರ ಸೈಕಲ್ ನಂ. ಕೆಎ-38/ಎಕ್ಸ-2836 ನೇದರ ಮೇಲೆ ಹೋಗುವಾಗ ಬೀದರ-ಖಾನಾಪುರ ರಸ್ತೆಗೆ ಆನಂದ ಧಾಭಾದ ಸ್ವಲ್ಪ ಮುಂದೆ ಬೀದರ ಕಡೆಯಿಂದ ಭಾವನ ಹಿಂದೆ ಲಾರಿ ನಂ. ಕೆಎ-09/ಬಿ-7171 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಹಾಗೂ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಭಾವನ ಮೋಟಾರ್ ಸೈಕಲಗೆ ಹಿಂದಿನಿಂದ ಡಿಕ್ಕಿ ಮಾಡಿ ತನ್ನ ಲಾರಿಯನ್ನು ನಿಲ್ಲಿಸಿ ಕೆಳಗೆ ಇಳಿದು ನೋಡಿ ತನ್ನ ಲಾರಿಯನ್ನು ಓಡಿಸಿಕೊಂಡು ಹೋಗಿದ್ದು ಇರುತ್ತದೆ, ಸದರಿ ಅಪಘಾತದಿಂದ ಭಾವನ ತಲೆಗೆ ಮತ್ತು ಇನ್ನಿತರ ಕಡೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥತಿಯಲ್ಲಿ ರಲಿಲ್ಲ, ಅದನ್ನು ನೋಡಿದ ರಾಜಕುಮಾರ ಪಾಟೀಲ ಖಾನಾಪುರ ರವರು 108 ಅಂಬುಲೇನ್ಸ್ ನಲ್ಲಿ ಚಿಕಿತ್ಸೆಗಾಗಿ ಬೀದಗೆ ಕಳುಹಿಸಿರುತ್ತಾರೆ, ನಂತರ ಅವರಿಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಆಸ್ಪತ್ರೆಯಿಂದ ತೆಗೆದುಕೊಂಡು ಬೀದರ ವೈದೇಹಿ ಭಾಲ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ದಾಖಲಿಸಿದಾಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ವಾಹನ ಸೌಕರ್ಯ ಇಲ್ಲದ ಪ್ರಯುಕ್ತ ಭಾವನಿಗೆ ಮರಳಿ ಬೀದರ ಸರಕಾರಿ ಆಸ್ಪತ್ರೆಗೆ ದಿನಾಂಕ 15-05-2021 ರಂದು 0200 ಗಂಟೆಗೆ ತಂದಾಗ ವೈದ್ಯಾದಿಕಾರಿಯವರಿಗೆ ತೊರಿಸಿದಾಗ ಅವರು ದಾರಿಯಲ್ಲೇ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತಿನಿಖೆ ಕೈಗೊಳ್ಳಲಾಗಿದೆ.