Police Bhavan Kalaburagi

Police Bhavan Kalaburagi

Thursday, December 26, 2019

BIDAR DISTRICT DAILY CRIME UPDATE 26-12-2019

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-12-2019

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 10/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-12-2019 ರಂದು ಫಿರ್ಯಾದಿ ಶಾಂತಾಬಾಯಿ ಗಂಡ ವೈಜಿನಾಥ ಸಾ: ಸಿಂದೋಲ್ ತಾಂಡಾ ರವರ ಗಂಡನಾದ ವೈಜಿನಾಥ ಪವಾರ ರವರು ತಮ್ಮ ಹೊಲದಲ್ಲಿ ತೊಗರೆ ಬೆಳೆ ನೋಡಲು ಹೋದಾಗ ಹೊಲದಲ್ಲಿ ಅವರ ಬಲಗಾಲು ಹಿಮ್ಮಡಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಚಿಕಿತ್ಸೆ ಕುರಿತು ಸರಕಾರಿ ಅಸ್ಪತ್ರೆಗೆ ತಂದು ವೈದ್ಯಾಧಿಕಾರಿಯವರಿಗೆ ತೋರಿಸಿದಾಗ ವೈದ್ಯರು ತಿಳಿಸಿದ್ದೆನೆಂದರೆ ವೈಜಿನಾಥ ತಂದೆ ಗೋಪಿನಾಥ ಪವಾರ ಇವರು ದಾರಿ ಮದ್ಯದಲ್ಲಿ ಮೃತ್ತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ, ಕಾರಣ ಫಿರ್ಯಾದಿಯವರ ಗಂಡ ಹಾವು ಕಚ್ಚಿ ಮೃತ್ತಪಟ್ಟಿದ್ದು ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ನಂ. 12/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 25-12-2019 ರಂದು ಫಿರ್ಯಾದಿ ರೇಣುಕಾಬಾಯಿ ಗಂಡ ಗೋಪಾಲ ಚಿನ್ನರಾಠೋಡ, ವಯ: 48 ವರ್ಷ, ಜಾತಿ: ಲಂಬಾಣಿ, ಸಾ: ಗೋವಿಂದ ತಾಂಡಾ ರವರ ಗಂಡನಾದ ಗೋಪಾಲ ತಂದೆ ತೇಜು ಚಿನ್ನ ರಾಠೋಡ ವಯ: 52 ವರ್ಷ ರವರು ಜಮೀನು ಉಳುಮೆ ಮಾಡಲು ಕೆನರಾ ಬ್ಯಾಂಕ ಚಿಟಗುಪ್ಪಾದಲ್ಲಿ 1,98,291/- ರೂಪಾಯಿ ಮತ್ತು ಎಸ್.ಬಿ. ನಿರ್ಣಾ ಬ್ಯಾಂಕಿನಲ್ಲಿ 1,29,175/- ರೂಪಾಯಿ ಹಾಗೂ ಪಿ.ಕೆ.ಪಿ.ಎಸ್ ಮುಂತ್ತಗಿಯಲ್ಲಿ 1,54,130/- ರೂಪಾಯಿ ಹೀಗೆ ಒಟ್ಟು 4,81,596/- ರೂಪಾಯಿ ಸಾಲ ಮಾಡಿರುತ್ತಾರೆ, ವರ್ಷ ಮಳೆ ಸರಿಯಾಗಿ ಬರದೆ ಇರುವುದರಿಂದ ಹೊಲದಲ್ಲಿ ಬೆಳೆಗಳು ಬೆಳೆಯದ ಕಾರಣ ಬ್ಯಾಂಕಿನಿಂದ ತಂದ ಸಾಲ ತಿರಿಸುವುದು ಹೇಗೆ ಅಂತಾ ಚಿಂತೆ ಮಾಡುತ್ತಿದ್ದರು, ಹೀಗಿರುವಾಗ ದಿನಾಂಕ 25-12-2019 ರಂದು ಸದರಿ ಸಾಲ ತಿರಿಸುವುದು ಹೇಗೆ ಅಂತಾ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡುಮ್ಮ ಮನೆಯ ಆರಗಾಲಿನ ಕೆಳಗಿರುಕಟ್ಟಿಗೆಗೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಅವರ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 126/2019, ಕಲಂ. 302, 201 ಜೊತೆ 149 ಐಪಿಸಿ ಮತ್ತು ಕಲಂ: 3(2)(5) ಎಸ್.ಸಿ/ಎಸ್.ಟಿ ತಿದ್ದುಪಡಿ ಕಾಯ್ದೆ-2015 :-
ಫಿರ್ಯಾದಿ ಸತೀಷ ತಂದೆ ಪುಂಡಲಿಕ ಫುಲೆ ಸಾ: ಬ್ಯಾಲಹಳ್ಳಿ (ಡಬ್ಲ್ಯೂ), ತಾ: ಭಾಲ್ಕಿ ರವರ ತಮ್ಮನಾದ ಅಂಬರೀಶ ಅಲಿಯಾಸ ಮಹಾಂತೇಶ ತಂದೆ ಪುಂಡಲಿಕ ಇತನು 22 ದಿವಸದಿಂದ ಮನೆಯಲ್ಲಿ ಇರಲಿಲ್ಲ, ಫಿರ್ಯಾದಿಯು ನೋಡಲು ಮರಖಲ ಗ್ರಾಮದಲ್ಲಿ ತಮ್ಮ ಚಿಕ್ಕಮ್ಮನ ಮನೆಯಲ್ಲಿ ಇರುವುದು ಕಂಡು ಬಂದಿದ್ದು, ಫಿರ್ಯಾದಿಯು ಹೊದ ಸೋಮವಾರ ಬಂದು ನೋಡಿ ಹೇಗೆ ಇದ್ದಿ ಯಾವಾಗಿನಿಂದ ಬಂದಿದಿ ಅಂತ ವಿಚಾರಿಸಿದ್ದು, ಹೀಗಿರುವಾಗ ದಿನಾಂಕ 24-12-2019 ರಂದು ಫಿರ್ಯಾದಿಯು ಆತನಿಗೆ ಕರೆ ಮಾಡಿ ಮಾತಾಡಲು ಪ್ರಯತ್ನ ಮಾಡಿದ್ದು ಆದರೆ ಆತನು ಕರೆಯನ್ನು ರಿಸೀವ ಮಾಡಲಿಲ್ಲ ಮತ್ತು ಚಿಕ್ಕಮ್ಮನ ಮಗ ರಾಹುಲ ತಂದೆ ವೈಜಿನಾಥ ಇತನು ಕೂಡಾ ಆತನಿಗೆ ರೆ ಮಾಡಿದರೆ ಸಂಪರ್ಕಕ್ಕೆ ಸಿಕ್ಕಿಲ್ಲ, ಆವಾಗ ಕಂಡು ಬಂದಿದ್ದೆನೆಂದರೆ 3 ವರ್ಷದಿಂದ ಮರಕಲನ  ನಿವಾಸಿಯಾದ ನೀತಿ ತಂದೆ ಶ್ರೀನಿವಾಸ ಇವಳ ಜೊತೆ ಅಂಬರೀಶ @ ಮಹಾಂತೇಶ ತಂದೆ ಪುಂಡಲಿಕರಾವ ಪ್ರೇಮವಿತ್ತು ಅವಳ ಜೊತೆ ದಿನಾಲು ಮಾತಾಡುತಿರುವುದು, ಕೂಡುವುದು, ನಿಲ್ಲುವುದು ಮಾಡುತ್ತಿದ್ದನು ಹಾಗೆಯೆ ನೀತಿ ಜೊತೆ ಸಂತೋಷ ಸ್ವಾಮಿ ಬೊತ್ಗಿದವನ ಜೊತೆ ಆಕೆ ಮಾತಾಡುವುದು ಇವನಿಗೂ ತಿಳಿದಿತ್ತು, ಅಂಬ್ರೆಶನಿಗೆ ಸಂತೋಷನು ಸ್ವಲ್ಪ ದಿವಸದ ಹಿಂದೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾನೆ, ಆದ್ದರಿಂದ ನೀತಿ ತಂದೆ ಶ್ರೀನಿವಾಸ ಮತ್ತು ಆಕೆಯ ಅಣ್ಣ ಸಂವಿಧಾನ ಮತ್ತು ತಾಯಿ ವಿಮಲಾ ಇವರು ಮತ್ತು ಸಂತೋಷ ಸ್ವಾಮಿ ಗೆಳೆಯರು ಕೂಡಿಕೊಂಡು ಅಂಬ್ರೆಶ ಅಲಿಯಾಸ ಮಹಾಂತೇಶನ ಕೊಲೆ ಮಾಡಿದ್ದಾರೆಂದು ಸಂಶಯ ಮೂಡುತ್ತಿದೆ, ಹಾಗೆಯೇ ದಿನಾಂಕ 21-12-2019 ರಂದು ಚಿಕ್ಕಮ್ಮನ ಮನೆಯಿಂದ 30 ಸಾವಿರ ರೂಪಾಯಿ ಹಣ ತೆಗೆದುಕೊಂಡು ಹೋಗಿರುತ್ತಾನೆಂದು ರಾಹುಲ ತಂದೆ ವೈಜಿನಾಥ ತಿಳಿಸಿದ್ದು, ನಂತರ ದಿನಾಂಕ 25-12-2019 ರಂದು ಫಿರ್ಯಾದಿಗೆ ಕಾಶಿನಾಥ ಎಂಬುವವನು ಕರೆ ಮಾಡಿ ನಿನ್ನ ತಮ್ಮನ ಕೊಲೆ ಆಗಿದೆ ಎಂದು ತಿಳಿಸಿದಾಗ ಫಿರ್ಯಾದಿಯು ಮರಕಲ ಗ್ರಾಮದ ಶೆಕ್ಪರಿ ದರ್ಗಾದ ಹತ್ತಿರ ಬಂದು ನೋಡಲು ತಮ್ಮನ ಕಾಲು ಕಟ್ಟಿ ಬಾಯಲ್ಲಿ ಬಟ್ಟೆ ತುರುಕಿದ್ದು ಕಂಡು ಆಘಾತವಾಗಿದ್ದು ಹಾಗೂ ಕುತ್ತಿಗೆಗೆ ಹಗ್ಗದಿಂದ ಬಿಗಿದಿದ್ದು ತಮ್ಮನ ಬಾಡಿ ಕೆಳಗೆ ಬಿದ್ದಿತ್ತು,  ಗಿಡಕ್ಕೆ ಒಂದು ಹಗ್ಗ ಇತ್ತು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ ಪೊಲೀಸ ಠಾಣೆ ಅಪರಾಧ ಸಂ. 94/2019, ಕಲಂ. 379 ಐಪಿಸಿ :-
ಫಿರ್ಯಾದಿ ಮಹ್ಮದ ಸಿರಾಜೋದ್ದೀನ ತಂದೆ ಮಹ್ಮದ ಐಹ್ಮದ ಅಲಿ, ಜಾತಿ: ಮುಸ್ಲಿಂ, ಸಾ: ಬಗದಲ ರವರ ಜಮೀನು ಬೀದರ - ಮೀನಕೇರಾ ಕ್ರಾಸ್ ರೋಡ ಬಗದಲ ರಿಲಾಯನ್ಸ್ ಕಛೇರಿ ಹತ್ತಿರ ಇರುತ್ತದೆ, ಫಿರ್ಯಾದಿಯವರ ಹತ್ತಿರ 2 ಎತ್ತುಗಳ ಇದ್ದು, ಅವುಗಳನ್ನು ದಿನಾಲು ಮ್ಮ ಜಮೀನಿನಲ್ಲಿ ಇದ್ದ ಖುಲ್ಲಾ ಟೀನ್ ಶೆಡ್ಡಿನ ಕೊಟ್ಟಿಗೆಯಲ್ಲಿ ಕಟ್ಟಿ ಮ್ಮ ಆಳು ಮಗನಾದ ಪ್ರಭು ಈತನು ದಿನಾಲು ಅಲ್ಲಿಯೇ ಮಲಗುತ್ತಿದ್ದನು, ಹೀಗಿರುವಲ್ಲಿ ದಿನಾಂಕ 14-12-2019 ರಂದು ಪ್ರಭು ಈತನು ಸದರಿ 2 ಎತ್ತುಗಳನ್ನು ಖುಲ್ಲಾ ಟೀನ್ ಶೆಡ್ಡಿನ ಕೊಟ್ಟಿಗೆಯಲ್ಲಿ ಕಟ್ಟಿ ಮ್ಮ ಹೊಲದಲ್ಲಿ ಕಬ್ಬು ಕಟಾವು ಮಾಡಿದ್ದು ದಿನ ಕಬ್ಬು ತುಂಬುವ ಲಾರಿಯಲ್ಲಿ ಪ್ರಭು ಈತನು ಹಕ್ಕಲು ಕಬ್ಬು ಲಾರಿಯಲ್ಲಿ ಹಾಕಿ ಎತ್ತುಗಳಿಗೆ ಮೇವು ಹಾಕಿ ಮನೆಗೆ ಬಂದಿರುತ್ತಾನೆ, ನಂತರ ಫಿರ್ಯಾದಿಯು ದಿನಾಂಕ 15-12-2019 ರಂದು 0500 ಗಂಟೆಗೆ ತಮ್ಮ ಹೊಲಕ್ಕೆ ಹೊಗಿ ನೋಡಲು ಕೊಟ್ಟಿಗೆಯಲ್ಲಿದ್ದ ಎತ್ತುಗಳ ಪೈಕಿ ಒಂದು ಎತ್ತು ಕಾಣಲಿಲ್ಲಾ, ನಂತರ ಫಿರ್ಯಾದಿಯು ತಮ್ಮ ಜಮೀನಿನಲ್ಲಿ ಹಾಗು ಸುತ್ತಾ ಮುತ್ತಾ ಇರುವ ಜಮೀನಿನಲ್ಲಿ ಹುಡುಕಿದರು ಎತ್ತು ಸಿಕ್ಕಿರುವದಿಲ್ಲಾ, ನಂತರ ಫಿರ್ಯಾದಿಯು ಪ್ರಭು ಜೊತೆಯಲ್ಲಿ ಬಗದಲ ಗ್ರಾಮದ ಸುತ್ತಲು ಹುಡುಕಿದರು ಎತ್ತು ಸಿಕ್ಕಿರುವದಿಲ್ಲಾ, ಕಾರಣ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಖುಲ್ಲಾ ಟೀನ್ ಶೆಡ್ಡಿನ ಕೊಟ್ಟಿಗೆಯಲ್ಲಿದ್ದ ಎತ್ತಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ಎತ್ತನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ, ಸದರಿ ಎತ್ತಿನ .ಕಿ 45,000/- ರೂ. ಇರುತ್ತದೆ, ಎತ್ತು ಕರಿ ಬಣ್ಣ ಬಿಳಿ ಚುಕ್ಕಿಗಳು ಉಳ್ಳದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 152/2019, ಕಲಂ. 379 ಐಪಿಸಿ :-
ಫಿರ್ಯಾದಿ ಭೀಮಾಶಂಕರ ತಂದೆ ಬಾಬುರಾವ ರಾಸೂರೆ, ವಯ: 22 ವರ್ಷ, ಜಾತಿ: ಎಸ್.ಟಿ ಟೋಕರಿ ಕೊಳಿ, ಸಾ: ವಳಖಿಂಡಿ ರವರ ಹಾಗೂ ಫಿರ್ಯಾದಿಯವರ ತಾಯಿಯವರ ಹೆಸರಿನ ಮೇಲೆ ಸಾಹಯಕ ಕೃಷಿ ನಿರ್ದೆಶಕರ ಕಾರ್ಯಲಯ ಹುಮನಾಬಾದ ಇವರ ಕಾರ್ಯಾಲಯದಿಂದ ಸಹಾಯದನ ಅಡಿಯಲ್ಲಿ ತೋಗರಿ ಬೇಳೆಗೆ ಹನಿ ನಿರಾವರಿ ಅಳವಡಿಸಿಕೊಳ್ಳಲು ಮಂಜೂರಾಗಿ ಕೋಟಾರಿ ಅರ್ಗಿಟೇಕ ಕಂಪನಿಯಿಂದ ಹನಿ ನಿರಾವರಿಯ ಸಾಮಾರ್ಗಿಗಳು ಹೋಲಕ್ಕೆ 15 ದಿನಗಳ ಹಿಂದೆ ಕಂಪನಿಯವರು 68 ಲ್ಯಾಟ್ರೆರ್ಡ 400 ಮೀಟರವುಳ್ಳ ಬಂಡಲಗಳು ಒಟ್ಟು 68 ಬಂಡಲ ಇಳಿಸಿರುತ್ತಾರೆ, ಹೀಗಿರುವಾಗ ದಿನಾಂಕ 25-12-2019 ರಂದು ಬೆಳಿಗ್ಗೆ 0600 ಗಂಟೆಗೆ ಹೊಲಕ್ಕೆ ಹೋಗಿ ನೋಡಲು 32 ಬಂಡಲ ಲಾಟ್ರೇಡ್ ಪೈಪಗಳು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಒಟ್ಟು 32 ಬಂಡಲಿನ ಅ.ಕಿ 1,60,000/- ರೂಪಾಯಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 179/2019, ಕಲಂ. 379 ಐಪಿಸಿ :-
ಫಿರ್ಯಾದಿ ಸತೀಷಕುಮಾರ ತಂದೆ ಬಸಪ್ಪ ಜಾಬಾ ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಆಲೂರ (ಕೆ), ತಾ: ಔರಾದ(ಬಿ), ಜಿಲ್ಲಾ: ಬೀದರ ರವರು ಎಮ್.ಜಿ. ಎಸ್.ಎಸ್.ಕೆ. ಫ್ಯಾಕ್ಟ್ರಿಯಲ್ಲಿ ಲಾರಿಗಳನ್ನು ನೀಡಿ ಕಾಂಟ್ರಾಕ್ಟರ ಕೆಲಸ ಮಾಡಿಕೊಂಡಿದ್ದು, ಅದೇ ಕಾರ್ಖಾನೆಯಲ್ಲಿ ಪಂಚಶೀಲಾ ಗಂಡ ಸಂಜಯ ಸಾ: ಮಾಂಜರಮ, ತಾ: ನಾಯಾಗಾಂವ, ಜಿಲ್ಲಾ: ನಾಂದೇಡ ಇವರು ಎತ್ತಿನ ಬಂಡಿಯಿಂದ ಕಬ್ಬು ಸಾಗಿಸುವ ಸಲುವಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ, ಹೀಗಿರುವಾಗ ದಿನಾಂಕ 24-12-2019 ರಂದು ಪಂಚಶೀಲಾ ಇವರು ಬಂಡಿಯಿಂದ ಬಿದ್ದು ಗಾಯಗೊಂಡು ಬೀದರ ಸರಕಾರಿ ಆಸ್ಪತ್ರೆಗೆ ದಾಖಲಾದ ಬಗ್ಗೆ ಗೊತ್ತಾಗಿ ಫಿರ್ಯಾದಿಯು ಆಸ್ಪತ್ರೆಗೆ ಹೋಗಿ ನೋಡಿದಾಗಿ ಪಂಚಶೀಲಾ ಇವರಿಗೆ ಸಿ.ಟಿ. ಸ್ಕ್ಯಾನ ಮಾಡಿಕೊಂಡು ಬಂದ ನಂತರ ಪಂಚಶೀಲಾ ಇವರು ತಿಳಿಸಿದ್ದೇನೆಂದರೆ ಅವರ ಕೊರಳಲ್ಲಿದ್ದ ಮಂಗಳಸೂತ್ರ ಗುಂಡ ಇದ್ದಿರುವದಿಲ್ಲ ಎಂದು ತಿಳಿಸಿದ್ದು, ಅದು 3.5 ಗ್ರಾಂ ತೂಕ ಇದ್ದು, ಅದರ ಅ.ಕಿ. ಸುಮಾರು 10,500/- ರೂ. ಇರುತ್ತದೆ ಎಂದು ತಿಳಿಸಿದ್ದು, ಅದನ್ನು ಸ್ಕ್ಯಾನ ಮಾಡುವ ವಾರ್ಡ ಬಾಯಗಳು ಕಳವು ಮಾಡಿಕೊಂಡು ಹೋಗಿರಬಹುದು ಎಂದು ತಿಳಿಸಿದ್ದು, ವಾರ್ಡ ಬಾಯಗಳ ಬಗ್ಗೆ ವಿಚಾರಿಸಿಸಲು ಅವರ ಹೆಸರು ಸೂರ್ಯಕಾಂತ ತಂದೆ ಶಶಿಗಿರ ಹಾಗು ರಮೇಶ ತಂದೆ ಮಾಣಿಕ ಎಂದು ತಿಳಿದು ಬಂದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-12-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪೂ ಪೊಲೀಸ್ ಠಾಣೆ ಅಪರಾಧ ಸಂ. ಅಪರಾಧ ಸಂ. 112/2019, ಕಲಂ. 457, 380 ಐಪಿಸಿ :-
ದಿನಾಂಕ 24-12-2019 ರಂದು ಫಿರ್ಯಾದಿ ಸಿಸ್ಟರ್ ಸ್ನೇಹಲ್ ತಂದೆ ಕ್ಲಿಟೋ ತುಸ್ಕಾನೋ ವಯ: 61 ವರ್ಷ ಜಾತಿ: ಕ್ರೀಶ್ಚನ್, ಸಾ: ಮುಂಬೈ, ಸದ್ಯ: ಸಂತಪೂರ ರವರು ರ್ಚಿಗೆ ಪ್ರಾಥನೆ ಕುರಿತು ಹೋದಾಗ 2200 ಗಂಟೆಗೆಯಿಂದ ದಿನಾಂಕ 25-12-2019 ರಂದು 0100 ಗಂಟೆಯ ಮದ್ಯದಲ್ಲಿ ಫಿರ್ಯಾದಿಯವರ ಕಾನ್ವೆಂಟನಲ್ಲಿ ಯಾರು ಇಲ್ಲದೆ ಇದ್ದಾಗ ಯಾರೋ ಅಪರಿಚಿತ ಕಳ್ಳರು ಕಾನ್ವೆಂಟ ಮುಂದಿನ ಡೋರಿನ ಕೀಲಿ ಮುರಿದು ಒಳಗೆ ಹೋಗಿ ಫಿರ್ಯಾದಿಯವರ ಕೋಣೆಯಲ್ಲಿದ್ದ ನಗದು ಹಣ 20,000/- ರೂ., ರಜನಿ ಸಿಸ್ಟರ ಇವರ ಕೋಣೆಯಲ್ಲಿ ಆಲಮಾರದಲ್ಲಿದ್ದ ನಗದು ಹಣ 30,000/- ರೂ., ದೀಪಾಲಯ ಶಾಲೆಯ ಮುಖ್ಯೋಪಾದ್ಯಾಯರಾದ ಸಿಸ್ಟರ್ ದೀಪಾ ಇವರ ಅಲಮಾರಾದಲ್ಲಿದ್ದ ನಗದು ಹಣ 30,000/- ರೂ. ಹಿಗೆ ಒಟ್ಟು 80,000/- ರೂ. ನಗದು ಹಣ ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 163/2019, ಕಲಂ. 279, 337, 338 ಐಪಿಸಿ :- 
ದಿನಾಂಕ 25-12-2019 ರಂದು ಫಿರ್ಯಾದಿ ಅರಾಫತ ತಂದೆ ಖಲೀಲ್ ವಯ: 18 ವರ್ಷ, ಜಾತಿ: ಮುಸ್ಲಿಂ, ಸಾ: ಭಾತಂಬ್ರಾ ರವರು ತನ್ನ ಗೆಳೆಯರಾದ 1) ಸುದರ್ಶನ ತಂದೆ ರಮೇಶ, 2) ಮಿರ್ಜಾಸಲ್ಮಾನ ತಂದೆ ಮೇಹತಾಬಸಾಬ, 3) ಅಬ್ದುಲ ತಂದೆ ರೆಹಮಾನ, 4) ಅಂಕೂಶ @ ಲೊಕೇಶ ತಂದೆ ಝರೇಪ್ಪಾ ಎಲ್ಲರೂ ಸಾ: ಭಾಲ್ಕಿರವರೆಲ್ಲರು ಕೂಡಿ ಎಳ-ಅಮವಾಸ್ಯೆ ಹಬ್ಬ ಇದ್ದ ಪ್ರಯುಕ್ತ ಗೆಳೆಯ ಅನುಪ ಈತನ ಹೊಲಕ್ಕೆ ಕಾರ ನಂ.  ಕೆಎ-38/ಎಮ-3530 ನೇದ್ದರಲ್ಲಿ ಹೋಗಿ ಊಟ ಮುಗಿಸಿಕೊಂಡು ಮರಳಿ ಎಲ್ಲರು ಭಾಲ್ಕಿ ಕಡೆಗೆ ಬರುವಾಗ ಕಾರ ಅಂಕೂಶ @ ಲೊಕೇಶ ತಂದೆ ಝರೇಪ್ಪಾ ಈತನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಕಾರಿನ ಮೇಲಿನ ಹಿಡಿತ ತಪ್ಪಿ ಭಾಲ್ಕಿ - ಉದಗೀರ ರೋಡ ಗುಂಪಾ ಹತ್ತಿರ ಪಲ್ಟಿ ಮಾಡಿರುತ್ತಾನೆ, ಸದರಿ ಪಲ್ಟಿಯ ಪ್ರಯುಕ್ತ ಜಖಂಗೊಂಡಿರುತ್ತದೆ, ಮತ್ತು ಕಾರಿನಲಿದ್ದ ಫಿರ್ಯಾದಿಯ ಮೂಗಿನ ಹತ್ತಿರ ರಕ್ತಗಾಯ ಹಾಗೂ ಎರಡು ಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ, ಸುದರ್ಶನ ತಂದೆ ರಮೇಶ ಸುಂಟೆ ಭಾಲ್ಕಿ ಈತನಿಗೆ ಬಲಗೈಗೆ ಭಾರಿಗಾಯವಾಗಿ ಕೈಮುರಿದಿರುತ್ತದೆ, ಮಿರ್ಜಾಸಲ್ಮಾನ ತಂದೆ ಮೇಹತಾಬ ಭಾಲ್ಕಿ  ಈತನಿಗೆ ಎರಡು ಕಣ್ಣಿನ ಹುಬ್ಬಿನ ಮೇಲೆ ಕಂದು ಗಟ್ಟಿದ ಗಾಯ, ತುಟಿಯ ಹತ್ತಿರ ರಕ್ತಗಾಯವಾಗಿರುತ್ತದೆ, ಅಬ್ದುಲ ರಹೇಮಾನ ತಂದೆ ತಾಜೊದ್ದೀನ ಈತನಿಗೆ ತಲೆಯಲ್ಲಿ ರಕ್ತಗಾಯವಾಗಿರುತ್ತದೆ ಮತ್ತು ಕಾರ ಚಾಲಕ ಆರೋಪಿ ಅಂಕೂಶ @ ಲೊಕೇಶ ತಂದೆ ಝರೇಪ್ಪಾ ಈತನಿಗೆ ಬಲಗಣ್ಣಿನ ಹತ್ತಿರ ರಕ್ತಗಾಯ ಹಾಗೂ ಎದೆಯಲ್ಲಿ ಭಾರಿ ಗುಪ್ತಗಾಯವಾಗಿರುತ್ತವೆ, ನಂತರ ಅಲ್ಲೆ ದಾರಿಯಿಂದ ಹೋಗುವ ಜನರು ಎಲ್ಲರಿಗೂ ಕಾರಿನಿಂದ ಹೊರತೆಗೆದು 108 ಅಂಬುಲೈನ್ಸನಲ್ಲಿ ಹಾಕಿ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.