ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 86/2014
ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ 20-09-2014 ರಂದು ರಾತ್ರಿ 7-00 ಗಂಟೆಗೆ ಪೋನ್ ಮುಖಾಂತರ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಮಾಹಿತಿ
ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿದಾರರಾದ ಶ್ರೀ ಕಟ್ನಿಂಗಪ್ಪ ತಂದೆ
ಹನುಮಪ್ಪ ಹಂಚಿನಾಳ ವಯ: 49 ವರ್ಷ ಜಾತಿ:
ಕುರುಬರು ಉ: ಒಕ್ಕಲುತನ ಸಾ: ಗುಂಜಳ್ಳಿ ತಾ: ಸಿಂಧನೂರು ಇವರು ಹೇಳಿಕೆ ಫಿರ್ಯಾದಿಯನ್ನು
ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ 20-09-2014
ರಂದು ಮುಂಜಾನೆ 10-00 ಗಂಟೆಗೆ ನಮ್ಮೂರಾದ ಗುಂಜಳ್ಳಿಯಿಂದ ನನ್ನ ಖಾಸ ತಮ್ಮನಾದ ನಾಗಪ್ಪನ ಸಂಗಡ ನಮ್ಮ ಯಮಹಾ ಕ್ರಕ್ಸ
ಮೋಟಾರು ಸೈಕಲ್ ನಂ: ಕೆ.ಎ-36/ವೈಯ್-8492 ನೇದ್ದನ್ನು ತೆಗೆದುಕೊಂಡು
ನಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ಯಲಬುರ್ಗಾ ತಾಲೂಕಿನ ಗಾಣಧಾಳ ಗ್ರಾಮಕ್ಕೆ
ಹೋಗಿದ್ದೆವು. ಅಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಸಂಜೆ 4-00 ಗಂಟೆ ಸುಮಾರು ವಾಪಾಸು ನಮ್ಮೂರಿಗೆ ಬರಲು ನಮ್ಮ ಮೋಟಾರು ಸೈಕಲ್ ತೆಗೆದುಕೊಂಡು
ಬರುತ್ತಿದ್ದು, ಮೋಟಾರು ಸೈಕಲ್ ನ್ನು ನಮ್ಮ
ತಮ್ಮನಾದ ನಾಗಪ್ಪನು ಓಡಿಸುತ್ತಿದ್ದನು. ನಾವು ಲಿಂಗದಹಳ್ಳಿ ದಾಟಿ ವಿರುಪಾಪುರ ಹತ್ತಿರ ಇರುವ
ಕ್ರಾಸ್ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಅದೇ ಕ್ರಾಸ್ ಕಡೆಯಿಂದ ಒಂದು ಲಾರಿಯನ್ನು
ಅದರ ಚಾಲಕನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸುತ್ತಾ ಬಂದು ನಮ್ಮ
ಮೋಟಾರು ಸೈಕಲ್ ಗೆ ಎದುರುಗಡೆಯಿಂದ ಜೋರಾಗಿ ಟಕ್ಕರು ಕೊಟ್ಟನು. ಪರಿಣಾಮವಾಗಿ ನಾವು ಮೋಟಾರು
ಸೈಕಲ್ ದೊಂದಿಗೆ ಕೆಳಗೆ ಬಿದ್ದೆವು. ಕಾರಣ ನನಗೆ ಬಲಗಾಲಿನ ಮೊಣಕಾಲಿಗೆ ರಕ್ತಗಾಯವಾಗಿದ್ದು ಮತ್ತು
ತಲೆಗೆ ಬಲಭಾಗದಲ್ಲಿ ಒಳಪೆಟ್ಟಾಗಿರುತ್ತದೆ. ನನ್ನ ತಮ್ಮನನ್ನು ನೋಡಲಾಗಿ ಆತನಿಗೆ ತಲೆಗೆ
ಬಲಭಾಗದಲ್ಲಿ ತಲೆ ಹೋಳಾಗಿ ರಕ್ತ ಸೋರಿ ಭಾರಿ ಗಾಯವಾಗಿದ್ದು ಮತ್ತು ಬಲಗಾಲ ಮೋಣಕಾಲ ಕೆಳಗೆ
ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆಗ ಸಮಯ ಸಂಜೆ 5-00 ಗಂಟೆಯಾಗಿರಬಹುದು. ಅಲ್ಲಿಯೇ ನಿಂತಿದ್ದ ಲಾರಿಯನ್ನು ನೋಡಲಾಗಿ ಅದು
ಕ್ಯಾಂಟರ್ ಲಾರಿ ನಂ ಕೆ.ಎ-37/ಎ-4868 ಅಂತಾ ಇತ್ತು. ಅದರ
ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ತಂದೆ ಅಮರಪ್ಪ ತೋಟದ ಸಾ: ಹುಲಿಯಾಪುರ ತಾ:
ಕುಷ್ಟಗಿ ಅಂತಾ ತಿಳಿಸಿದನು. ನಂತರ ನಮ್ಮ ಹಿಂದೆಯೇ ಬಂದ ಸಂಬಂಧದಲ್ಲಿ ನನ್ನ ಮಗನಾದ ನಿರುಪಾದಿ
ತಂದೆ ಹನುಮಂತಪ್ಪ ಹಂಚಿನಾಳ ಮತ್ತು ನನ್ನ ಖಾಸ ಕಿರಿಯ ತಮ್ಮನಾದ ಅಮರೇಶ್ ಸಾ: ಗುಂಜಳ್ಳಿ ಇವರು
ಅಲ್ಲಿಗೆ ಬಂದಿದ್ದು ಅಷ್ಟರಲ್ಲಿ ಅಲ್ಲಿ ಸೇರಿದ್ದವರಲ್ಲಿ ಯಾರೋ 108 ಅಂಬುಲೇನ್ಸ್ ವಾಹನಕ್ಕೆ ಪೋನ್ ಮಾಡಿದ್ದು ಅದು ಬಂದ ಕೂಡಲೇ ನಮ್ಮನ್ನು
ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ತಾವರಗೇರಾದಲ್ಲಿ ಸೇರಿಕೆ ಮಾಡಿದ್ದು
ಇರುತ್ತದೆ. ಕಾರಣ ಕ್ಯಾಂಟರ್ ಲಾರಿ ನಂ: ಕೆ.ಎ-37/ಎ-4868 ನೇದ್ದನ್ನು ಅತೀವೇಗ ಮತ್ತು
ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ಎದುರಗಡೆಯಿಂದ ನಮ್ಮ ಮೋಟಾರು ಸೈಕಲ್ ಗೆ ಟಕ್ಕರು
ಕೊಟ್ಟು ನನ್ನ ತಮ್ಮನ ಸಾವಿಗೆ ಕಾರಣನಾದ ಮಂಜುನಾಥ ತೋಟದ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು
ವಿನಂತಿ.ಅಂತಾ ಮುಂತಾಗಿದ್ದ ನುಡಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ
ನಂ. 58/2014 ಕಲಂ. 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ 20-09-2014
ರಂದು ಸಂಜೆ 5-00 ಗಂಟೆಗೆ ಜಿಲ್ಲಾ
ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಗಾಯಾಳು ಶ್ರೀ ಬಸವರಾಜ ಆರ್ಯ ಈಡಿಗರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 20-09-2014 ರಂದು ತಾನು ಮತ್ತು ತಮ್ಮ
ಊರಿನ ಇತರರೊಂದಿಗೆ ತಮ್ಮ ಊರಿನ ಬುಡ್ಡಾಸಾಬ ಕಂದಗಲ್ ಇವರ ಅಪೆ ಆಟೋದಲ್ಲಿ ಕೊಪ್ಪಳ
ಕಾರಾಗೃಹದಲ್ಲಿರುವ ತಮ್ಮ ಊರಿನ ಜನರನ್ನು ಮಾತನಾಡಿಸುವ ಕುರಿತು ಕೊಪ್ಪಳಕ್ಕೆ ಬಂದಿದ್ದು, ಅವರನ್ನು ಮಾತನಾಡಿಸಿಕೊಂಡು ವಾಪಾಸ್ ಊರಿಗೆ ಅಪೆ ಆಟೋದಲ್ಲಿ ಹೋಗಲು ಅಪೆ ಆಟೋ ಚಾಲಕನು ಗದಗ -
ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಹರ್ಷ ಹೊಟೆಲ್
ಹತ್ತಿರ ಸಂಜೆ 4-30
ಗಂಟೆಯ ಸುಮಾರಿಗೆ ಬುಡ್ಡಾಸಾಬ ಈತನು ಅಪೆ ಆಟೋವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಮಾಡಿದ್ದು, ಇದರಿಂದ ತನಗೆ ಎಡಗೈ ಮುಂಗೈಗೆ, ಎಡಗಾಲ ಮೊಣಕಾಲಿಗೆ, ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ಇತರರಿಗೂ ಸಹ ಸಾದಾ ಸ್ವರೂಪದ ಗಾಯಗಳು ಆಗಿದ್ದು
ಇರುತ್ತದೆ. ಅಪಘಾತ ಮಾಡಿದ ನಂತರ ಬುಡ್ಡಾಸಾಬ ಈತನು ಗಾಯಗೊಂಡ ತಮ್ಮನ್ನು ಆಸ್ಪತ್ರೆಗೆ
ಕರೆದುಕೊಂಡು ಹೋಗದೇ ಆಟೋ ತೆಗೆದುಕೊಂಡು ಅಪಘಾತ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ
ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 168/2014
ಕಲಂ. 379 ಐ.ಪಿ.ಸಿ. ಮತ್ತು 86 ಕೆ.ಎಫ್. ಕಾಯ್ದೆ:.
ದಿನಾಂಕ
20-09-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ರಾಮಚಂದ್ರ ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ಠಾಣೆ
ರವರು ವರದಿಯೊಂದಿಗೆ ಪಂಚನಾಮೆಗಳನ್ನು ಹಾಜರು ಪಡಿಸಿದ್ದು ಅವುಗಳ ಸಾರಾಂಶವೇನೆಂದರೆ ಇಂದು ಸಂಜೆ
04-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಒಂದು ಲಾರಿಯಲ್ಲಿ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು
ಅನಧಿಕೃತವಾಗಿ ಸಾಗಿಸುತ್ತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಕೂಡಲೇ ಠಾಣೆಯ
ಸಿಬ್ಬಂದಿಯವರಾದ ಹೆಚ್.ಸಿ.108, ಪಿ.ಸಿ.-381,105,426,296,434
ಎ.ಪಿ.ಸಿ.38 ರವರನ್ನು ಹಾಗೂ ಪಂಚರಾದ ಬಸವರಾಜ ತಂದೆ ಶರಣಪ್ಪ ದಾನಮ್ಮನವರ ಸಾ.ಯಲಬುರ್ತಿ ಮತ್ತು
ಕಲ್ಲೆ ತಂದೆ ಭಿಣ್ಣ ತಾಳದ ಸಾ.ಕುಷ್ಟಗಿ ರವರನ್ನು ಬರಮಾಡಿಕೊಂಡು ಅವರಿಗೆ ಬಾತ್ಮಿ ವಿಷಯ ತಿಳಿಸಿ
ನಂತರ ಎಲ್ಲರೂ ಕೂಡಿ ಸರಕಾರಿ ಜೀಪ್ ನಂ. ಕೆ.ಎ.37/ಜಿ-292 ನೇದ್ದರಲ್ಲಿ ಕುಷ್ಟಗಿ ಯಿಂದ ಹೊಸಪೇಟ್
ಕಡೆಗೆ ರಾಷ್ಟ್ರಿ ಹೆದ್ದಾರಿಯಲ್ಲಿ ನಿಧಾನವಾಗಿ ಲಾರಿಗಳನ್ನು ಪರಿಶೀಲನೆ ಮಾಡುತ್ತಾ
ಹೋಗುತ್ತಿದ್ದಾಗ ನಾವು ಕುರುಬನಾಳ ಕ್ರಾಸ್ ಹತ್ತಿರ ಇದ್ದಾಗ ಹೊಸಪೇಟ್ ಕಡೆಯಿಂದ ಬಂದ ಒಂದು ಲಾರಿ
ಚಾಲಕನು ನಮ್ಮ ಪೊಲೀಸ್ ಜೀಪ್ ನೋಡಿ ತನ್ನ ಲಾರಿಯನ್ನು ನಿಲ್ಲಿಸಿ ಓಡತೊಡಗಿದ್ದು ಅವನಂತೆಯೇ ಸದರಿ
ಲಾರಿಯಲ್ಲಿದ್ದ ಇತರ 2 ಜನರು ಸಹ ಲಾರಿಯಿಂದ ಇಳಿದು ಒಡತೊಡಗಿದ್ದು ಆಗ ನಾವು ಅನುಮಾನ ಬಂದು ನಮ್ಮ
ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸದರಿಯವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ
ಸದರಿಯವರು ಯಾವದೇ ಸಮರ್ಪಕವಾದ ಉತ್ತರ ನೀಡದೇ ಇದ್ದು ಆಗ ನಾವು ಅನುಮಾನ ಬಂದು ಸದರಿ ಲಾರಿಯನ್ನು
ಪರಿಶೀಲಿಸಿ ನೋಡಿ ಚೆಫ್ ಮಾಡಿದಾಗ ಸದರಿ ಲಾರಿಯಲ್ಲಿ ಮೊದಲಿಗೆ ಯಾವುದೋ ಒಂದು ಮಷಿನ್ ಇದ್ದು ಅದರ
ನಂತರ ರಕ್ತ ಚಂದನದ ಕಟ್ಟಿಗೆಯ ತುಂಡುಗಳು ಇದ್ದು ಈ ಬಗ್ಗೆ ಸದರಿ 3 ಜನರನ್ನು ವಿಚಾರಿಸಿದಾಗ
ಸದರಿಯವರು ಯಾವದೇ ಸಮರ್ಪಕವಾದ ಉತ್ತರ ಕೊಡದೇ ತಾವು ಯಾವದೇ ಲೈಸೆಸ್ನ್ ಪರವಾನಿಗೆ ವಗೈರೆ ಇಲ್ಲದೇ
ಸದರಿ ರಕ್ತ ಚಂದನದ ಕಟ್ಟಿಗೆಯ ತುಂಡುಗಳನ್ನು ಸಾಗಿಸುತ್ತಿದ್ದಾಗಿ ಹೇಳಿದ್ದು ನಂತರ ಸದರಿಯವರನ್ನು
ವಿಚಾರಿಸಿದಾಗ ಅವರ ಹೆಸರು 1) ಗುರುಮುಖಸಿಂಗ್ ತಂದೆ ಸುಖದೇವಸಿಂಗ್ ವಯಾ 21 ವರ್ಷ ಜಾ.ಆಧಾರಮಿ
ಉ.ಲಾರಿ ಡ್ರ್2ಎರ್ ಸಾ.ಪ್ರೆಪುರ ಫಗ್ ವಾಡ ಜಿ.ಕರ್ಪೂತಲಾ ಪಚಿಜಾಬ ರಾಜ್ಯ 2) ತರವೇಂದ್ರಕುಮಾರ
ತಂದೆ ಹರವಂಶಲಾಲ್ ವಯಾ 33 ವರ್ಷ ಜಾ.ಆಧಾರಮಿ ಉ.ಲಾರಿ ಕ್ಲಿರ್ ಸಾ.ಪಿಪ್ಪಾರಂಗಿ ಜಿ.ನವಾಶಹರ
ಪಂಜಾಬರಾಜ್ಯ ಮತ್ತು ಇಮ್ರಾನ್ ತಂದೆ ಖಲೀಲ ವಯಾ 42 ವರ್ಷ ಜಾ.ಮುಸ್ಲಿಂ ಉ.ಗುಜರಿ ವ್ಯಾಪಾರ
ಸಾ.ಬನಶಂಕರಿ 2 ನೇ ಸ್ಟೆಜ್ ಬೆಂಗಳೂರ ಅಂತಾ ಹೇಳಿದ್ದು ಸದರಿ ಲಾರಿ ನಂ. ಪಿ.ಬಿ.-13 ಎಸ್-9871
ಇದ್ದು ಸದರಿ ಲಾರಿ ಮತ್ತು ಅದರಲ್ಲಿದ್ದ ಮಾಲನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು
5-15 ಪಿ.ಎಂ. ದಿಂದ 6-00 ಪಿ.ಎಂ. ವರೆಗೆ ಮಾಡಿಕೊಂಡು ತಾಬಾಕ್ಕೆ ತೆಗೆದುಕೊಂಡು ಠಾಣಾ ಆವರಣಕ್ಕೆ
ತೆಗೆದುಕೊಂಡು ಬಂದಿದ್ದು ನಂತರ ಠಾಣಾ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹಾಗೂ
ಹಮಾಲರನ್ನು ಬರಮಾಡಿಕೊಂಡು ಮತ್ತು ಎಲೆಕ್ಟ್ರಾನಿಫ್ ಕಂಪ್ಯೂಟರ್ ತೂಕದ ಯಂತ್ರವನ್ನು ತರಿಸಿದ್ದು
ನಂತರ ಸದರಿ ಪಂಚರು ಅರಣ್ಯಾಧಿಕಾರಿಗಳ ಸಮಕ್ಷಮ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದರಲ್ಲಿನ
ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಅವುಗಳಿಗೆ ಬಿಳಿ ಪೆಯಿಂಟ್ದಿಂದ ನಂಬರ್ ಬರೆಯುತ್ತಾ ತೂಕ
ಮಾಡಿ ಅಂದಾಜು ಕಿಮ್ಮತ್ತು ಮಾಡಿದ್ದು ಅವುಗಳು ಅ.ನಂ. 1 ರಿಂದ 311 ಇದ್ದು ಅವುಗಳ ಒಟ್ಟು
ತೂಕ 3527 ಇದ್ದು ಅವುಗಳ ಒಟ್ಟು ಅಂ.ಕಿ. 10,58,100=00 ಇರುತ್ತದೆ ಸದರಿ ಆರೋಪಿತರು ರಕ್ತ
ಚಂದನದ ಕಟ್ಟಿಗೆ ತುಂಡುಗಳನ್ನು ಎಲ್ಲಿಯೊ ಕಳ್ಳತನ ಮಾಡಿಕೊಂಡು ಸದರಿ ಲಾರಿ ನಂ. ಪಿ.ಬಿ.-13
ಎಸ್-9871 ನೇದ್ದರಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದು ಸದರಿ ರಕ್ತಚಂದನದ ಕಟ್ಟಿಗೆ
ತುಂಡುಗಳನ್ನು ಲಾರಿಯನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು ಸಂಜೆ 6-30 ಪಿ.ಎಂ.
ದಿಂದ 10-00 ಪಿ.ಎಂ. ವರೆಗೆ ಮಾಡಿಕೊಂಡು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ ಕಾರಣ ಸದರಿ
ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದನ್ನು ಹಾಗೂ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಹಾಗೂ
ಆರೋಪಿತರನ್ನು ವಿವರವಾದ ದಾಳಿ ಜಪ್ತಿ ಪಂಚನಾಮೆ ಮತ್ತು ಜಪ್ತಿ ಪಂಚನಾಮೆಗಳೊಂದಿಗೆ ತಮ್ಮ ಮುಂದೆ
ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ
ನಂ 168/2014 ಕಲಂ 379 ಐಪಿಸಿ ಮತ್ತು 86 ಕೆ.ಎಫ್ ಯ್ಯಾಕ್ಟ್ ನೇದ್ದರ ಪ್ರಕರಾ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.