ಹೆಣ್ಣುಮಗಳು
ಕಾಣೆಯಾದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ರಾಜು
ಹಡಪಾದ್ ಸಾ; ಬಸವನಕಟ್ಟಿ ಹಾ.ವ ವಿದ್ಯಾನಗರ ನಗರ ಜೇವರ್ಗಿ ರವರ ಗಂಡನ ಮನೆ ವಾಡಿ ಗ್ರಾಮ ಇದ್ದು, ನನ್ನ ತವರು ಮನೆ ಜೇವರ್ಗಿ ಇರುತ್ತದೆ.
ನಮಗೆ ಶೃತಿ 19 ವರ್ಷದ ಮಗಳಿದ್ದು ಜೇವರ್ಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನಾನು ಮತ್ತು ನನ್ನ ಮಗಳು ವಾಸವಾಗಿರುತ್ತೇವೆ.
ನನ್ನ ಮಗಳು ಶೃತಿ ಇವಳು ವಿನ್ನರ್ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಳು. ಇವಳಿಗೆ
ಹುಣಸಗಿ ಗ್ರಾಮದ ಹುಡುಗನೊಂದಿಗೆ ಮದುವೆ ನಿಶ್ಚಯ ಮಾಡಿದ್ದು ದಿನಾಂಕ; 04/11/2019 ರಂದು ಮದುವೆ ಮಾಡಲು ಸಿದ್ದತೆ ನಡೆಸಿರುತ್ತೇವೆ.
ದಿನಾಂಕ; 26/10/2019 ರಂದು ಶನಿವಾರ ಬೆಳಿಗ್ಗೆ ನಾನು ಮತ್ತು ನನ್ನ ಮಗಳು ಶೃತಿ ಕೂಡಿಕೊಂಡು ಜಾಲಾದಿಗೆ ದೇವರ ಕಾರ್ಯಾಕ್ರಮಕ್ಕೆ
ಹೋಗಿದ್ದೇವು. ಅಲ್ಲಿ ದೇವರ ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಸಾಯಂಕಾಲ 4-00 ಘಂಟೆಯ ಸುಮಾರಿಗೆ ಜೇವರ್ಗಿಗೆ ಬಂದೇವು.
ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ತಿರುಗಾಡಿ ಸಂಬಂದಿಕರಿಗೆ ಮದುವೆ ಕಾರ್ಡ ಹಂಚಲು ಹೋಗಿರುತ್ತೇನೆ.
ಮರಳಿ ನಾನು ರಾತ್ರಿ 10-00 ಘಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು
ಇರಲಿಲ್ಲ, ಆಗ ನಾನು ಎಲ್ಲಿಯಾದರು ನಮ್ಮ ತಾಯಿಯ ಮನೆಗೆ ಹೋಗಿರಬಹುದು ಸ್ವಲ್ಪ ಹೊತ್ತಿನಲ್ಲಿ ಮನೆಗೆ ಬರಬಹುದು
ಎಂದು ಸುಮ್ಮನಿದ್ದೇನು. ನಂತರ ನನಗೆ ದಿನಪೂರ್ತಿ ತಿರುಗಾಡಿ ಸುಸ್ತಾಗಿದ್ದರಿಂದ ಮನೆಯಲ್ಲಿ ನಿದ್ದೇ
ಹೋದೆನು. ದಿನಾಂಕ; 27.10.19 ರಂದು ನಾನು ಬೆಳಿಗ್ಗೆ ಎದ್ದು ನೋಡಲಾಗಿ ನಮ್ಮ ಮಗಳು ಮನೆಗೆ ಬಂದಿರಿಲಿಲ್ಲ. ಆಗ ನಾನು ನಮ್ಮ
ಬೀಗರು ನೆಂಟರಲ್ಲಿ ಪೋನ್ ಮಾಡಿ ವಿಚಾರಿಸಿ ನಮ್ಮ ಮಗಳಿಗೆ ಹುಡುಕಾಡಲಾಗಿ ಎಲ್ಲಿ ಹೋಗಿದ್ದಾಳೆ ಎನ್ನುವ
ಕುರಿತು ಸುಳಿಯು ಸಿಕ್ಕಿರುವದಿಲ್ಲ, ನಂತರ ನಾನು ಜೇವರ್ಗಿ ಪಟ್ಟಣದಲ್ಲಿ ಮತ್ತು ಕಲಬುರಗಿ ಶಹಾಪೂರ ಹುಣಸಗಿ ಮೊದಲಾದ ಕಡೆಯಲ್ಲಿ
ನಮ್ಮ ಮಗಳಿಗೆ ಹುಡುಕಾಡಿದರು ಕೂಡ ಅವಳು ಸಿಕ್ಕಿರುವದಿಲ್ಲ. ಕಾಣೆಯಾಗಿರುತ್ತಾಳೆ ಕಾಣೆಯಾದ ಮಗಳ ಚಹರಾ ಪಟ್ಟಿ ಈ ಕೆಳಕಂಡಂತೆ ಇರುತ್ತದೆ. ಕಾಣೆಯಾದವಳ
ಹೆಸರು; ಶೃತಿ ತಂದೆ ರಾಜು ಹಡಪಾದ್ ವಯ; 19 ವರ್ಷ, ಎತ್ತರ 5. 2 ಅಡಿ, ಸಾದಗಪ್ಪು ಮೈ ಬಣ್ಣ, ತೆಳ್ಳನೆ ಮೈಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ, ಭಾಷೆ ಬಲ್ಲವಾಳಾಗಿದ್ದು, ಮನೆಯಿಂದ ಹೋಗುವಾಗ ಪೈಜಾಮ್ ಚುಡಿದಾರ ಧರಿಸಿರುತ್ತಾಳೆ.. ಮತ್ತು ಅವಳಿಗೆ ಬೆನ್ನಿನ ಮೇಲೆ
ಮುಂಗೈ ಮೇಲೆ ಸುಟ್ಟ ಹಳೆಯ ಘಾಯದ ಗುರುತು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನಕ್ಕೆ
ಬೆಂಕಿ ಹಚ್ಚಿ ಹಾನಿ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚಂದ್ರಕಾಂತ ತಂದೆ ಶಿವಪ್ಪ ದೊಡ್ಡಮನಿ
ಸಾ||ಬನ್ನಟ್ಟಿ ಹಾ||ವಾ||ಅಫಜಲಪೂರ ರವರು ಹಿರೊ ಪ್ಯಾಶನ ಪ್ರೋ ಕಂಪನಿಯ
ಮೋಟಾರ ಸೈಕಲ ನಂಬರ ಕೆ,ಎ-32 ಈಜೆ-5777 ಇರುತ್ತದೆ.ಇದರ ಅಂದಾಜು ಕಿಮ್ಮತ್ತು 20,000/- ಇರಬಹುದು ಸದರಿ ನನ್ನ ಮೋಟಾರ ಸೈಕಲನ್ನು ಪ್ರತಿದಿವಸ ಅಫಜಲಪೂರ ಪಟ್ಟಣದ ನನ್ನ ಮನೆಯ ಮುಂದೆ
ನಿಲ್ಲಿಸುತ್ತೇನೆ. ದಿನಾಂಕ 01-11-2019 ರಂದು ರಾತ್ರಿ 10:00 ಗಂಟೆಗೆ ನನ್ನ ಮೋಟಾರ ಸೈಕಲ್ ಅನ್ನು ನನ್ನ
ಮನೆಯ ಮುಂದೆ ನಿಲ್ಲಿಸಿ ನಾನು ನನ್ನ ಹೆಂಡತಿ ಮಕ್ಕಳೋಡನೆ ಮನೆಯಲ್ಲಿ ಇರುತ್ತೇನೆ. ಸುಮಾರು
ರಾತ್ರಿ 11:30 ಪಿ.ಎಮ್ ಸುಮಾರಿಗೆ ನಾನು ಮಲಗಿದ್ದಾಗ ನಮ್ಮ ಮನೆಯ ಮುಂದೆ ಡಭ್ ಅಂತಾ ಶಬ್ದ ಕೇಳಿ
ಮನೆಯಿಂದ ಹೊರಗೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಬೆಂಕಿ ಹತ್ತಿ ಉರಿಯುತ್ತಿದ್ದು ಹತ್ತಿರ
ಹೋಗಿ ನೋಡಲಾಗಿ ಅಲ್ಲೇ ಸಮೀಪದಲ್ಲಿ ಒಂದು ನೀರಿನ ಬಾಟಲಿಯಲ್ಲಿ ಅರ್ಧ ಪೇಟ್ರೋಲ್ ಇತ್ತು ಯಾರೋ
ದುಷ್ಕರ್ಮಿಗಳು ನನ್ನ ಮೇಲಿನ ಸಿಟ್ಟಿನಿಂದ ಅಥವಾ ಹೊಟ್ಟೆಕಿಚ್ಚಿನಿಂದ ನನ್ನ ಮೋಟಾರ ಸೈಕಲ್ ಮೇಲೆ
ಪೇಟ್ರೋಲ್ ಹಾಕಿ ಬೆಂಕಿ ಹಚ್ಚಿ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ನನಗೆ 20000/- ರೂ ಹಾನಿ ಮಾಡಿರುತ್ತಾರೆ ನನ್ನ ಮೋಟಾರ ಸೈಕಲ್
ಸುಡುವಾಗ ನಾನು ಮತ್ತು ನಮ್ಮ ಓಣಿಯ ರಾವುತಪ್ಪ ಬ್ಯಾಡಗಿಹಾಳ ಮತ್ತು ಇನ್ನಿತರರು ಕೂಡಿ
ಬೆಂಕಿಯನ್ನು ಆರಿಸಿರುತ್ತೇವೆ ಕಾರಣ ನನ್ನ ಮೋಟಾರ ಸೈಕಲ್ ಅನ್ನು ಸುಟ್ಟು ಹಾನಿ ಮಾಡಿದವರ ಮೇಲೆ
ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.