Police Bhavan Kalaburagi

Police Bhavan Kalaburagi

Saturday, October 31, 2020

BIDAR DISTRICT DAILY CRIME UPDATE 31-10-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-10-2020

 

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 96/2020 ಕಲಂ 279, 304() ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 30-10-2020 ರಂದು 07:00 ಗಂಟೆಗೆ ಫಿರ್ಯಾದಿ ಶ್ರೀ ಭೀಮರೆಡ್ಡಿ ತಂದೆ ಶಿವಾರೆಡ್ಡಿ ಶೇರಿಕಾರ ವಯ: 31 ವರ್ಷ ಜಾತಿ: ರೆಡ್ಡಿ ಉ: ಎಲ್ & ಟಿ ಟೋಲ್ ಗೇಟದಲ್ಲಿ ಟೋಲ್ ಕಲೇಕ್ಟರ್ ಕೆಲಸ ಸಾ: ಸಲಗರ ಬಸಂತಪೂರ ತಾ: ಚಿಂಚೋಳಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ ಫಿರ್ಯಾದಿಯು ಎಲ್ & ಟಿ ಟೋಲ್ ಗೇಟದಲ್ಲಿ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ 30-10-2020 ರಂದು ರಾತ್ರಿ 24:00 ಗಂಟೆಯಿಂದ ಮುಂಜಾನೆ 08:00 ಗಂಟೆಯವರೆಗೆ ಫಿರ್ಯಾದಿ ಕರ್ತವ್ಯ ಅವಧಿ ಇದ್ದಿರುತ್ತದೆ. ಫಿರ್ಯಾದಿಯು  ಟೋಲ್ ಗೇಟ್ ಮೇಲೆ ಕರ್ತವ್ಯದ ಮೇಲೆ ಇದ್ದಾಗ ರಾತ್ರಿ ಸಮಯದಲ್ಲಿ ಒಬ್ಬ ಅಪರಿಚಿತ ಭಿಕ್ಷುಕನು ಟೋಲ ಪ್ಲಾಜಾ ಹತ್ತಿರ ತಿರುಗಾಡುತಿದ್ದು ಆತನು ಲೈನ್ ಮೇಲೆ ಬಂದಾಗ ಆತನು   ಕೈ ಸನ್ನೆ ಮಾಡಿ ಊಟ ಬೇಕು ಅಂತ ಕೇಳಿರುತ್ತಾನೆ.   ಆತನಿಗೆ   ಆಫೀಸನ ಕಡೆಯಿದ್ದ ಗಾರ್ಡನ ಕಡೆ ಹೋಗಲು ಕೈ ಸನ್ನೆ ಮಾಡಿ ಹೇಳಿದ್ದು ಆತನು ಆ ಕಡೆ ಹೋಗಿರುತ್ತಾನೆ. ನಂತರ ನಸುಕಿನ ಜಾವ ನಮಗೆ ನಮ್ಮ ಕಂಪನಿಯ ಕಂಟ್ರೋಲ್ ರೂಮ್ನಿಂದ ವೈರಲೆಸ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಟೋಲ್ ಪ್ಲಾಜಾದ ವೇ ಬ್ರೀಜ್ ಮುಂದೆ ರಾ ಹೆದ್ದಾರಿ ನಂ 65 ಹೈದ್ರಾಬಾದ ಕಡೆ ಹೋಗುವ ರೋಡಿನ ಎಡಗಡೆ ರೋಡಿನ ಮೇಲೆ ಒಬ್ಬ ಅಪರಿಚಿತ ಭಿಕ್ಷುಕ ವಾಹನ ಅಪಘಾತದಿಂದ ಮೃತ ಪಟ್ಟಿರುತ್ತಾರೆ ನಸುಕಿನ ಜಾವ 05:32 ಗಂಟೆಗೆ ಹೋಗಿ ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು 45 ವರ್ಷ ಮೈ ಮೇಲೆ ಕೆಂಪು ಬಣ್ಣದ ಫುಲ್ ಷರ್ಟ , ಅದರ ಒಳಗೆ ಬೂದಿ ಬಣ್ಣದ ಷರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು ಆತನಿಗೆ ಕಪ್ಪು , ಬಿಳುಪು ಗಡ್ಡ ಇದ್ದು ತಲೆಯ ಮೇಲೆ ಕಪ್ಪು ಬಿಳುಪು ಕೂದಲೂ ಇದ್ದು ಆತನ ಬಣ್ಣ ಗೋದಿ ಮೈ ಬಣ್ಣ, ಎತ್ತರ 5' 5 ಇರುತ್ತದೆ. ಸದರಿ ಅಪಘಾತವು ದಿನಾಂಕ 30-10-2020 ರಂದು 03:40 ಗಂಟೆಯಿಂದ 05:32 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

  

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ  140/2020 ಕಲಂ 3 & 7 ಇ.ಸಿ. ಕಾಯ್ದೆ :-

ದಿನಾಂಕ 30-10-2020 ರಂದು 15:30 ಗಂಟೆಗೆ ಫಿರ್ಯಾದಿ ಶ್ರೀ ರಾಜೇಂದ್ರಕುಮಾರ ತಂದೆ  ಶಾಮರಾವ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರು ಠಾಣೆಯಲ್ಲಿ ಹಾಜರಗಿ  ಲಿಖಿತ ಅಜರ್ಿ ಸಾರಾಂಶವೆನಂದರೆ, ದಿನಾಂಕ: 30/10/2020 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ರಾಮರತನ ದೇಗಲೆ ಆಹಾರ ನೀರಿಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ತಹಸೀಲ್ ಕಛೇರಿ ಹತ್ತಿರ ಮಾತಾಡುತ್ತಾ ನಿಂತಿರುವಾಗ  ಫೋನ್ ಮುಖಾಂತರ ಖಚಿತ ಭಾತ್ಮಿಯ ತಿಳಿದುಬಂದಿದ್ದೇನೆಂದರೆ, ಹುಮನಾಬಾದ ಕಡೆಯಿಂದ ನಾಲ್ಕು ಲಾರಿಗಳಲ್ಲಿ ಅನಧೀಕೃತವಾಗಿ ರ್ಯಾಶನ ಅಕ್ಕಿ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ತೆಗೆದುಕೊಂಡು ಹೊಗುತ್ತಿದ್ದಾರೆ ಎಂದು ಖಚಿತ ಭಾತ್ಮಿಯ ತಿಳಿಸಿದ ಮೇರೆಗೆ ಫಿರ್ಯಾದಿ ಮತ್ತು ್ತ ಆಹಾರ ನಿರೀಕ್ಷಕರಾದ ಶ್ರೀ ರಾಮರತನ ದೇಗಲೆ ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ಹಾಗು ಪೊಲೀಸರು ಮತ್ತು  ಇಬ್ಬರು ಪಂಚರು ಹಾಗು ಪೊಲೀಸ್ ಸಿಬ್ಬಂದಿಯವರೊಂದಿಗೆ ಬಸವಕಲ್ಯಾಣ ನಗರದ ಸಸ್ತಾಪೂರ ಬಂಗ್ಲಾ ಹತ್ತಿರ 12:20 ಗಂಟೆಗೆ ತಲುಪಿ ಲಾರಿಗಳ ದಾರಿ ಕಾಯುತ್ತಾ ನಿಂತಿರುವಾಗ ಸಮಯ 12:30 ಗಂಟೆಗೆ ಲಾರಿ ಒಂದರ ಹಿಂದೆ ಒಂದು ನಾಲ್ಕು ಲಾರಿಗಳು ಬರುವುದನ್ನು ನೋಡಿ ಪೊಲೀಸ್ರು ಮೊದಲನೆ ಲಾರಿ ಚಾಲಕನಿಗೆ ಲಾರಿ ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಲಾರಿ ಚಾಲಕನು ನಿಲ್ಲಿಸಿದಾಗ ಲಾರಿ ಹಿಂದೆ ಇದ್ದ ಮೂರು ಲಾರಿ ಚಾಲಕರು ಕೂಡ ತಮ್ಮ ತಮ್ಮ ಲಾರಿ ನಿಲ್ಲಿಸಿರುತ್ತಾರೆ. ಮೊದಲನೆ ಲಾರಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4286 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಬಾಗೆಖಾನ @ ಬರಕತ ಭೈ ತಂದೆ ಶಕುರ ಖಾನ ವಯಸ್ಸು// 25 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4286 ನೇದ್ದರ ಚಾಲಕ ಸಾ// ಹೌಸ್.ನಂ-480 ಇತವಾಯನಂದ ಸಂಗನಾ ತಾ//ಶಯಲಾ ಜಿಲ್ಲೆ// ಜಾಲೋರ(ಆರ್.ಜೆ) ಅಂತಾ ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಬ್ಬಸಖಾನ ತಂದೆ ಸತಾರ ಖಾನ ವಯಸ್ಸು// 24 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4286 ನೇದ್ದರ ಕ್ಲಿನರ ಸಾ// ಚಡೇಚಾ ತಾ// ಸಿಳಂದ್ರಿ ಜಿಲ್ಲೆ// ಬಾರಮೇರ(ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯಕುಮಾರ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು & ಎರಡನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-5277 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಅರಬಖಾನ ತಂದೆ ಮುಸೆಖಾನ ವಯಸ್ಸು// 29 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-5277 ನೇದ್ದರ ಚಾಲಕ ಸಾ// ಕೇಸರಪೂರಾ ನವೋರಾ ಬೇರಾ ತಾ//ಪಚಭದ್ರಾ ಜಿಲ್ಲೆ// ಬಾರಮೇರ(ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜೋಸಿಬಖಾನ ತಂದೆ ಅಮಲೆಖಾನ ವಯಸ್ಸು// 27 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-5277 ನೇದರ ಕ್ಲಿನರ ಸಾ//ಕೇಸರಪೂರಾ ತಾ// ಪಸಭೋದ್ರಾ ಜಿಲ್ಲೆ// ಬಾರಮೇರ (ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು, ಮೂರನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4511 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಬರಕತ ಅಲಿ ತಂದೆ ಸಾಯಾರ ಖಾನ ವಯಸ್ಸು// 25 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4511 ನೇದ್ದರ ಚಾಲಕ ಸಾ//ಮೇಕುಬಾ ಬಂದೇವಾ ತಾ// ಪೊಕ್ರಾನ ಜಿಲ್ಲೇ//ಜೈಸಲಮರ (ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಖಾಸಿಮಖಾನ ತಂದೆ ಹರಬಾಜ ಖಾನ ವಯಸ್ಸು// 22 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4511 ನೇದ್ದರ ಕ್ಲಿನರ ಸಾ// ಬಾಂದೆವಾನ ತಾ// ಪೊಕ್ರಾನ ಜಿಲ್ಲೆ//ಜೈಸಲ್ ಮಿರ ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು ನಾಲ್ಕನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4114 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಶಫಿಖಾನ ತಂದೆ ರಿಮುಖಾನ ವಯಸ್ಸು// 25 ವರ್ಷ ಜಾತಿ//ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4114 ನೇದ್ದರ ಚಾಲಕ ಸಾ// ಗೇಡವ ಧೋರಾ ಭುಂಕಾ ಭಗತಸಿಂಗ ತಾ// ಸೇವನಾ ಜಿ// ಬಾರಮೇರ (ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಪೀರೆಖಾನ ತಂದೆ ಅಲಂಖಾನ ವಯಸ್ಸು// 30 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4114 ನೇದ್ದರ ಕ್ಲಿನರ್ ಸಾ// ಸಂಗನಾ ತಾ// ಸಾಯಿಲಾ ಜಿಲ್ಲೆ// ಜಾಲವಾರ (ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು, ಒಟ್ಟು ಮಾಡಿದ ನಾಲ್ಕು ಲಾರಿಗಳು ಮತ್ತು ಅವುಗಳಲ್ಲಿದ್ದ ಅಕ್ಕಿ ಚೀಲಗಳು ಹಿಗೆ ಒಟ್ಟು 1 ಕೋಟಿ 16 ಲಕ್ಷ ರೂ ಬೆಲೆವುಳ್ಳ ಸ್ವತ್ತು ಹಾಜರು ಪಡಿಸುತ್ತಿದ್ದು, ಈ ಮೇಲೆ ನಮೂದಿಸಿದ 8 ಜನ ವಶಕ್ಕೆ ಪಡೆದ ಆರೋಪಿತರು ಮತ್ತು ಲೋಡ ಮಾಡಿಕೊಟ್ಟ ಆರೋಪಿತರಾದ ಮಣಿಕಂಠ ತಂದೆ ನರೇಂದ್ರ ರಾಠೋಡ ಸಾ// ಗುರಮಿಠಕಲ್ ಮತ್ತು ವಿಜಯ ಪವಾರ ಸಾ//ಉಮಗರ್ಾ ಇವರುಗಳು ಅನಧಿಕೃತವಾಗಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ ಅಕ್ಕಿಗೆ ಹೋಲುವ ಅಕ್ಕಿ ಸಾಗಾಟ ಮಾಡುತ್ತಿದ್ದು ಇವರುಗಳ ವಿರುದ್ಧ ಕಾನೂನು ಕ್ರಮ ಕೈ ಕೊಳ್ಳಲು ವಿನಂತಿ. ಎಂಬ ಫಿಯರ್ಾದು ದೂರಿನ  ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.