ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ ದತ್ತುರಾವ ತಂದೆ ಮೋತಿರಾಮ ಘೋಗರೆ ಸಾ:
ಜೋಷಿಗಲ್ಲಿ ಈಶ್ವರ ನಗರ ಬಸವಕಲ್ಯಾಣ ಜೀ. ಬೀದರ ರವರ ಮಗಳು ದಿಪಾಲ್ಲಿಯ ಮದುವೆ ಶ್ರೀಕಾಂತ ರಮೇಶ
ಮಾಲ್ಲದಾರ (ವಾಕೋಡೆ) ಜೋತೆ ದಿನಾಂಕ 27-12-2011 ರಂದು ಬಸವಕಲ್ಯಾಣದಲ್ಲಿ ಮಾಡಿದ್ದು ಈ ಮದುವೆ ನಮ್ಮ ಸಮಾಜದ ರಿತ್ತಿ ರಿವಾಜ ಪಾರಂಪರಿಕ
ರೀತಿಯಲ್ಲಿ ಆಯಿತ್ತು. ಇವರಿಗೆ 15 ಲಕ್ಷ (ಹದಿನೈದು ಲಕ್ಷ ರೂಪಾಯಿ) ಇವರಿಗೆ ವ್ಯವಸಾಯ ಮಾಡುವ ಸಲುವಾಗಿ
ಕೊಡದು ಇತ್ತು ಆದರೆ ನಾನು ಆತನಿಗೆ ಆ ಸಂದರ್ಭದಲ್ಲಿ ಮಾತ್ರ 5 ಲಕ್ಷ ರೂಪಾಯಿ ಕೊಟ್ಟಿದೆ ಉಳಿದ 10
ಲಕ್ಷ ರುಪಾಯಿ ಆಮೇಲೆ ಕೋಡುತ್ತೇನೆ ಎಂದಿದ್ದೆ ನನ್ನ ಪಾರಂಪರಿಕ ಅಥವಾ ನನ್ನ ಪರಿಸ್ಥಿತಿ ಗಂಭೀರವಾದರಿಂದ
ಕೋಡೊಕೆ ಆಗಿಲ್ಲ ಅದರ ಜೋತೆ ನಾನು ಇವರಿಗೆ ಮನೆಯ
ವಸ್ತುಗಳು ಮತ್ತು 5 ತೋಲೆ ಬಂಗಾರ ಕೊಡದೆ ಅದರ ಜೋತೆ ಈ ಮದುವೆಯ ಎಲ್ಲಾ ಖರ್ಚನ್ನು ನಾನು
ನೋಡಿಕೊಂಡಿದ್ದೇನೆ. ಮದುವೆ ಆದಾಗ ಕೇಲವು ತಿಂಗಳು ನನ್ನ ಮಗಳ ಖುಶಾಲವಾಗಿ ಇದ್ದಳು ಕೇಲವು ವರ್ಷದ
ನಂತರ ನನ್ನ ಮಗಳಿಗೆ ರಜತ ಎಂಬ ಹುಡುಗ ಅದನಂತರ ರಂಜನ ಎಂಬ ಎರಡನೇಯ ಹುಡಗನಿಗೆ ಜನಸಿದಳು, ಅದನಂತರ ನನ್ನ ಅಳಿಯ ಶ್ರೀಕಾಂತ,
ಅತ್ತೆ ವಂದನಾ ರಮೇಶ ಮಾಲ್ಲದಾರ , ಮಾವ ರಮೇಶ
ಮಾಲ್ಲದಾರ, ಭಾವ ಶಶಿಕಾಂತ ರಮೇಶ ಮಾಲ್ಲದಾರ ಅವನ ಹೆಂಡತಿ ಸಾರಿಕಾ
, ಶಶಿಕಾಂತ ಮಾಲ್ಲದಾರ, ಮೈದುನ ರಜನೀಕಾಂತ ರಮೇಶ
ಮಾಲ್ಲದಾರ ಅವನ ಹೆಂಡತಿ ರಶಮಾ ರಜನಿಕಾಂತ ಮಾಲ್ಲದಾರ ಇವರು ಎಲ್ಲರೂ ಸೇರಿ ನನ್ನ ಮಗಳು
ದಿಪಾಲ್ಲಿಗೆ ತನ್ನ ತವರುಲ್ಲಿಂದ ಉಳಿದ ಹತ್ತು ಲಕ್ಷ ರೂಪಾಯಿ (10 ಲಕ್ಷ ರೂಪಾಯಿ) ಮಾತಿನ
ತಕ್ಕಂತೆ ತರಬೇಕು ಎಂದು ಆಕೆಯ ಮೇಲೆ ಅತ್ಯಾಚಾರವನ್ನು ನಡೆಸಿಕೊಂಡು ಮಾತು ಮಾತಿಗು ಆಕೆಯ ಅತ್ತೆ
ನೇಗಣಿ , ಮೈದುನ , ಭಾವ ,ಮಾವ ಮತ್ತು ಗಂಡ ಬೈದು ಹೊಡೆದು ಊಟವನ್ನು ಕೋಡುವುದಿಲ್ಲ ಏನಾದ್ದರು ಆಯಿತು ಅಂದರೆ ದವಾಖನೇಗೆ
ವಯುವುದಿಲ್ಲ ಇಂತಹ ಹಿಂಸಾಚಾರವನ್ನು ನಡೆಸುಕೊಂಡಿದ್ದರು. ಇವು ಎಲ್ಲಾ ಆಗಿರುವಂತಹ ವಿಚಾರಗಳನ್ನು
ದಿಪಾಲ್ಲಿ ಯಾವಾಗ ಬಸವಕಲ್ಯಾಣಗೆ ಬಂದಾಗ ಹೇಳುತ್ತಿದಳು, ಯಾವಾಗ ನನ್ನ
ದೊಡ್ಡ ಅಣ್ಣನಾದಂತಹ ಶ್ರೀ ಬಾಬುರಾವ ಮೋತಿರಾಮ ಘೋಗರೇ, ತಮ್ಮರಾದಂತಹ
ಶ್ರೀ ಸಂಜುಕುಮಾರ ಮೋತಿರಾಮ ಘೋಗರೇ. ಹಾಗೂ ಇತ್ತರೆ ಸಂಭಂದಿಕರಾದತಂಹ ಶ್ರೀ ದತ್ತಾ ನಾಮದೇವರಾವ
ವಾಕೋಡೆ, ಕೂಡಿ ದಿಪಾಲ್ಲಿಯ ಗಂಡನ ಮನೆಗೆ , ಹೋಗಿ
ಎಲ್ಲರಿಗೆ ತಿಳಿಸಿ , ಸಮಜಾಯಿಸಿ ವಿನಂತಿಯನ್ನು ಮಾಡಿಕೊಂಡಿದ್ದೇವೆ,
ಅವಾಗ ಅವಳ ಅತ್ತೆ ಗಂಡ, ಮೈದುನ ಭಾವ, ಮಾವ ಹಾಗೂ ಗಂಡ ಎಲ್ಲರು ಸೇರಿ ನನ್ನಗೆ ಪ್ರಶ್ನಿಸಿದರು ಅದು ಎನೆತಂದರೆ ತಾವು ನಮಗೆ
ಕೋಟ್ಟಿರುವ ಮಾತು ತಕ್ಕಂತೆ, ಉಳಿದ ಹಣ 10 ಲಕ್ಷ ರೂಪಾಯಿ ಏಕೆ ಕೊಟ್ಟಿಲ
, ಕಾರಣ ನನಗೆ ನನ್ನ ಬಾಂಡೆಯ ಅಂಗಡಿಯ ಹಾಕುವದಿದೆ, ಅವಾಗೆ
ನಾನು ನಿಮ್ಮ ಮಗಳಾದ ದೀಪಾಲಿಯನ್ನು ಸರಿಯಾಗಿ ನೋಡಿಕೊಳ್ಳುತ್ತೇನೆ, ಆವಾಗ
ನನ್ನ ಬಿಕಟ್ಟು ಪರಿಸ್ಥಿತಿಯಂದಾಗಿ ಈ ಹಣವನ್ನು ಆಮೇಲೆ ಕೊಡುತ್ತೆನೆ ಎಂದು ವಿನಂತಿಸಿದರು ಎಂದು
ಹೇಳಿ ನಾವೆಲ್ಲರೂ ನಮ್ಮ ಊರು ಬಸವಕಲ್ಯಾಣಗೆ ತೆರಳಿದ್ದು, ಮತ್ತೆ ಅವರು
ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದರು, ಎಂಟು ದಿನಗಳ ಹಿಂದೆ ದಿಪಾಲ್ಲಿ
ಬಸವಕಲ್ಯಾಣಕ್ಕೆ ಬಂದಿದ್ದಳು. ಆವಾಗ ನನಗೆ ಹೇಳಿದೆನೆಂದರೆ , ನನಗೆ
ಸಣ್ಣ ಸಣ್ಣ ವಿಷಯದ ಮೇಲೆ ಮನೆಯ ಎಲ್ಲಾ ಸದಸ್ಯರು ನನ್ನ ಮೇಲೆ ಅತ್ಯಾಚಾರ ಮಾಡಿರುತ್ತಾರೆ,
ಹಾಗೂ ನನಗೆ ಊಟ ಕೋಡುವದಿಲ್ಲಾ ಮೈ ಮೇಲೆ ಹರಿದಿರುವಂತಹ ಬಟ್ಟೆಗಳನ್ನು
ಕೊಡುತ್ತಾರೆ, ಒಂದು ಕೊಠಡಿಯೊಳಗೆ ಇಡಿ ದಿನ ಇಡುತ್ತಾರೆ, ಯಾರಿಗೂ ಭೇಟಿಯನ್ನು ಮಾಡಲು ಕೊಡುವದಿಲ್ಲಾ, ದೂರವಾಣಿ ಮಗ
ಮಾತಾಡುತ್ತಿರುವಾಗ ಸ್ಪೀಕರ್ ಆನ್ ಅಥವಾ (ಚಾಲು) ಮಾಡಲಿಕೆ ಒತ್ತಾಯಿಸುತ್ತಾರೆ , ಇಂತಹ ಸಿಕ್ಕಾಪಟ್ಟ ಹಿಂಶಾಚಾರವನ್ನು ನನ್ನ ಮೇಲೆ ನಡೆಸಿಕೊಂಡು ಇರುತ್ತಾರೆ. ಯಾವಾಗಲ್ಲು
ನನ್ನ ಮದುವೆಯಾದಗ ಹಣವನ್ನು ಕಡಿಮೆ ಕೊಟ್ಟುವುದರಿಂದ ಇವರೆಲ್ಲರು ಮಾತು ಮಾತಿಗೆ ಬಯದು ಹೊಡೆದು
ವತಾಯಿಸಿರುವದು ಮಾಡುತ್ತಾರೆ ಎಂದು ಹೇಳಿದಳು, ಆವಾಗ ನಾನು ಶ್ರೀ
ದತ್ತುರಾವ ಮೋತಿರಾಮರಾವ ಘೋಗರೇ, ನನ್ನ ಹೆಂಡತಿಯ ಸೋಸೆ ಸುರೇಖಾ ಹಾಗೂ
ನನ್ನ ಮಗನಾದಂತಹ ಚಿ.ಸಚೀನ ಎಲ್ಲರೂ ಕೂಡಿ ದೀಪಾಲ್ಲಿಗೆ ತಗೊಂಡಿ ಗಂಡನ ಮನೆಗೆ ತೇರಳಿ ವಿನಂತಿ
ಮಾಡಿ ಸಮಜಾಯಿಸಿ ಬಿಟ್ಟು ವಾಪಸ ಬಸವಕಲ್ಯಾಣಗೆ ತೊಗಳಿದ್ದರು. ಮೊನೆ ದಿನಾಂಕ 9-12-2018 ರಂದು ನಾನು 6-45 ಪಿ.ಎಮ್
ದೂರವಾಣಿ ಮುಖಾಂತರ ಮಾತನಾಡಿದೆನು ಅವಾಗ ಅಕಿ ಅಂದಳು ನಾನು ಇಗ ಬದುಕುವದು ಆಗುವದಿಲ್ಲಾ
ಇವರೆಲ್ಲರೂ ನನ್ನ ಕೊಂದು ಹಾಕಲು ಯೋಚಿಸುತ್ತಿದ್ದಾರೆ ಮತ್ತು ಬಹಳ ಹೊಡೆದು ನೋವುವನು
ಕೊಡುತ್ತಿದ್ದಾರೆ ಎಂದು ಹೇಳಿದಳು, ಅವಾಗ ನಾನು ಅಕ್ಕಿಗೆ ಸಮಜಾಯಿಸಿ
ಧರ್ಯವನ್ನು ಕೊಟ್ಟೆ. ನಿನ್ನೆ ದಿನಾಂಕ 10-12-2018 ರಂದು ದಿಪಾಲ್ಲಿಯ ಮೈದುನ ಶಶಿಕಾಂತ ದೂರವಾಣಿ
ನಂಬರ 7353595343 ಮುಖಾಂತರ ನನಗೆ ತ್ವರಿತ ಸೊಂತ ಊರಿಗೆ ಬರಲಿಕೆ ಹೇಳಿದನು ಮತ್ತು ನಿಮ್ಮ ಮಗಳು
ನೇಣುಹಾಕಿಕೊಂಡಿದ್ದಾಳೆ ಆಗ ನಾನು ನಮ್ಮ ಊರಿನಲ್ಲಿ ಇರುವಂತಹ ಎಲ್ಲಾ ಸಂಭಂದಿಕರಿಗೆ ತೊಗಂಡು ಸೊಂತ
ಊರಿಗೆ ತೇರಳಿದ್ದು ಬಂದು ನೋಡಿದರೆ ನನ್ನ ಮಗಳನ್ನು ಬೆಡ್ ಮೇಲೆ ಮನಕೊಂಡಿರುವಂತಹ ಸ್ಥಿಯಲ್ಲಿದ್ದಳು,
ನೋಡಿದಾಗ ಅಕ್ಕಿಯ ಕುತ್ತಿಗೆ ಹಾಗೂ ಮೈ ಮೇಲೆ ಗಾಯ ಇದ್ದವು, ಅವಳ ಮೃತ್ಯವನ್ನು ಬಹಳ ಗಂಭೀರವಾಯಿತು. ನಿಮ್ಮಗೆ ನಾನು ವಿನಂತಿಸುವದೆನೆಂದರೆ ನನ್ನ ಮಗಳ
ದಿಪಾಲ್ಲಿಯ ಕೋಲೆಯನ್ನು ಹುಂಡಾ ಸಲುವಾಗಿ ಮಾಡಿದರು. ಇದರಲ್ಲಿ ಕೈವಾಡ ಇರುವಂತಹ ವ್ಯಕ್ತಿಗಳು ಗಂಡ
ಶ್ರೀಕಾಂತ ರಮೇಶ ಮಾಲದಾರ, ಮಾವ ರಮೇಶ ಮಾಲದಾರ, ಅತ್ತೆ ವಂದನಾ ರಮೇಶ ಮಾಲದಾರ, ಮೈದುನ ರಜನಿಕಾಂತ ರಮೇಶ
ಮಾಲದಾರ, ಭಾವ ಶಶಿಕಾಂತ ರಮೇಶ ಮಾಲದಾರ, ನೆಗೇಣಿ
ರೇಶಮಾ ರಮೇಶ ಮಾಲದಾರ, ಭಾವನ ಹೆಂಡತಿ ಸಾರಿಕಾ ಶಶಿಕಾಂತ ಮಾಲ್ಲದಾರ
ಇವರೆಲ್ಲರೂ ಕೂಡಿ ನನ್ನ ಮಗಳ ದಿಪಾಲ್ಲಿಯನ್ನು ಕೋಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ದೇವಲಗಾಣಗಾಪೂರ
ಠಾಣೆ : ದಿನಾಂಕ 08-12-2018 ರಂದು ರಾತ್ರಿ ಇಂಗಳಗಿ
ಗ್ರಾಮದ ನಮ್ಮ ತಂಗಿಯ ಗಂಡನಾದ ಬೀರಪ್ಪ ತಂದೆ ನಿಂಗಪ್ಪ ಮೋನಟಗಿ ಎಂಬಾತನು ನನಗೆ ಪೋನ ಮಾಡಿ
ತಿಳಿಸಿದ್ದೆನೆಂದರೆ. ನಾನು ಮತ್ತು ನಮ್ಮೂರಿನ ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ
ಕೂಡಿಕೊಂಡು ನನ್ನ ವೈಯಕ್ತಿಕ ಕೆಲಸದ ನಿಮಿತ್ಯ
ರಾತ್ರಿ ಗೊಬ್ಬೂರ (ಬಿ) ಗ್ರಾಮದಲ್ಲಿದ್ದಾಗ ನಿಮ್ಮ ಅಳಿಯನಾದ ಮಾಳಪ್ಪನು ಕಲಬುರಗಿಯಿಂದ ಮೋಟರ
ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಗೊಬ್ಬೂರ (ಬಿ) ಗ್ರಾಮಕ್ಕೆ ಬಂದಾಗ ನಾನು
ಸದರಿಯವನಿಗೆ ಈ ವೇಳೆಯಲ್ಲಿ ಎಲ್ಲಿಗೆ ಹೋಗುತ್ತಿದ್ದಿಯಾ ಅಂತ ಕೇಳಿದಾಗ ಮಾಳಪ್ಪನು ನಮ್ಮ ಅಕ್ಕನ
ಮನೆಯಾದ ಮೋಘನಾ ಇಟಗಾ ಗ್ರಾಮಕ್ಕೆ ಹೋಗುತ್ತಿದ್ದೇನೆ ಅಂತ ತಿಳಿಸಿದನು ನಂತರ ನಾನು ಮತ್ತು
ದತ್ತಪ್ಪ ತಂದೆ ನಿಂಗಪ್ಪ ಮೋನಟಗಿ ಇಬ್ಬರೂ ನನ್ನ ಮೋಟರ ಸೈಕಲ ಮೇಲೆ ಇಂಗಳಗಿ (ಬಿ) ಗ್ರಾಮಕ್ಕೆ ಹಾಗು
ಮಾಳಪ್ಪನು ತನ್ನ ಮೋಟರ ಸೈಕಲ ನಂ ಕೆಎ-32 ಇ.ಎಮ್-1520 ನೇದ್ದರ ಮೇಲೆ ಮೋಘನಾ ಇಟಗಾ ಗ್ರಾಮಕ್ಕೆ
ಹೋಗಲು ಕಲಬುರಗಿ-ಚವಡಾಪೂರ ರೋಡಿನ ಮೇಲೆ ಹೋಗುತ್ತಿದ್ದಾಗ ಮಾಳಪ್ಪನು ನಮ್ಮ ಮೋಟರ ಸೈಕಲ ಮುಂದುಗಡೆ
ತನ್ನ ಮೋಟರ ಸೈಕಲ ಮೇಲೆ ಹೋಗುತ್ತಿದ್ದನು ರಾತ್ರಿ 10-30 ಗಂಟೆಯ ಸುಮಾರಿಗೆ ಗೊಬ್ಬೂರ (ಬಿ)
ಗ್ರಾಮದ ಹತ್ತಿರ ರೋಡಿಗೆ ಇರುವ ಜೈಭವಾನಿ ಡಾಬಾದ ಹತ್ತಿರ ಹೋಗುತ್ತಿದ್ದಾಗ ಚವಡಾಪೂರ ಕಡೆಯಿಂದ
ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ ಚಾಲಕನು ತನ್ನ ಮೋಟರ ಸೈಕಲನ್ನು ಅತೀವೇಗವಾಗಿ ಮತ್ತು
ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಾಳಪ್ಪನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟರ ಸೈಕಲ ನಂ
ಕೆಎ-32 ಇ.ಎಮ್-1520 ನೇದ್ದಕ್ಕೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದರಿಂದ ಮಾಳಪ್ಪನು ಮೋಟರ ಸೈಕಲ
ಸಮೇತ ರೋಡಿನ ಮೇಲೆ ಬಿದ್ದನು ಆಗ ನಾನು ಮತ್ತು ದತ್ತಪ್ಪ ಮೋನಟಗಿ ಇಬ್ಬರು ಮಾಳಪ್ಪನಿಗೆ ಹೋಗಿ
ನೋಡಲಾಗಿ ಮಾಳಪ್ಪನ ತಲೆಗೆ ಭಾರೀ ರಕ್ತಗಾಯ ಮತ್ತು ಬಲಗೈಗೆ ಬಾರೀ ರಕ್ತಗಾಯಗಳಾಗಿದ್ದರಿಂದ
ಮಾಳಪ್ಪನು ಸ್ಥಳದಲ್ಲಿಯ ಮೃತಪಟ್ಟಿರುತ್ತಾನೆ. ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203
ನೇದ್ದರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ದತ್ತು ತಂದೆ ದೀಪಲು ಸಾ||
ಗೊಬ್ಬೂರವಾಡಿ ತಾಂಡಾ ಅಂತ ತಿಳಿಸಿದ್ದು ಸದರಿಯವನಿಗೆ ನೋಡಲಾಗಿ ಸದರಿಯವನ ಬಲಗಾಲಿನ ಹಿಂಬಡಿಗೆ
ರಕ್ತಗಾಯವಾಗಿರುತ್ತದೆ. ನಂತರ ಯಾರೋ ಒಬ್ಬರು 108 ಅಂಬುಲೆನ್ಸ ವಾಹನಕ್ಕೆ ಪೋನ ಮಾಡಿದ್ದರಿಂದ
ಅಂಬುಲೆನ್ಸ ವಾಹನ ಬಂದ ನಂತರ ಸದರಿಯವನು ಉಪಚಾರ ಕುರಿತು ಗೊಬ್ಬೂರ (ಬಿ) ಸರಕಾರಿ ದವಖಾನೆಗೆ
ಹೋಗಿರುತ್ತಾನೆ ಅಂತ ತಿಳಿಸಿದನು. ವಿಷಯ ಗೊತ್ತಾದ ಕೂಡಲೆ ನಾವು ಸ್ಥಳಕ್ಕೆ ಹೋಗಿ ನೋಡಲು ವಿಷಯ
ನಿಜವಿರುತ್ತದೆ. ನನ್ನ ಅಳಿಯನಿಗೆ ಅಪಘಾತಪಡಿಸಿದ ಮೋಟರ ಸೈಕಲ ನಂ ಕೆಎ-32 ಯು-0203 ನೇದ್ದರ
ಚಾಲಕನಾದ ದತ್ತು ತಂದೆ ದೀಪಲು ಸಾ|| ಗೊಬ್ಬೂರವಾಡಿ ತಾಂಡಾ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಬೇಕು ಅಂತಾ ಶ್ರೀ ಗುರಪ್ಪ ತಂದೆ ಲಚ್ಚಪ್ಪ ಮ್ಯಾಕೇರಿ ಸಾ|| ಮೋಘನ ಇಟಗಾ ತಾ|| ಜೇವರ್ಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ರಮೇಶ
ತಂದೆ ಶಂಕರ ಪಾಟೀಲ ಸಾ: ಕೈಲಾಸ ನಗರ ಕಲಬುರಗಿ ರವರು ದಿನಾಂಕ: 31/10/2018 ರಂದು ರಾತ್ರಿ ಗಂಟೆಯ ಸುಮಾರಿಗೆ ತನ್ನ
ಹೊಂಡಾ ಸೈನ ಮೋಟಾರ ಸೈಕಲ ನಂ.ಕೆಎ.32 ಇಎಲ್.3583 ಅ.ಕಿ.48000/-ರೂ ನೇದ್ದನ್ನು ನಮ್ಮ ಮನೆಯ ಮುಂದಿನ
ಕಂಪೌಂಡದಲ್ಲಿ ನಿಲ್ಲಿಸಿ ರಾತ್ರಿ ಮನೆಯಲ್ಲಿ ಮಲಗಿದ್ದು ದಿನಾಂಕ:01/11/2018 ರಂದು ಬೆಳಗ್ಗೆ
5.00 ಗಂಟೆಗೆ ಎದ್ದು ನೋಡಲು ನನ್ನ ಮೋಟಾರ ಸೈಕಲ್ ಇರಲಿಲ್ಲ ನಂತರ ನಾನು ಮೋಟಾರ ಸೈಕಲ ಪತ್ತೆ ಕುರಿತು
ಎಲ್ಲಾ ಕಡೆಗೆ ಹುಡುಕಾಡಿದ್ದು ಮತ್ತು ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ನನ್ನ ಮೋಟಾರ ಸೈಕಲ ಪತ್ತೆಯಾಗಿರುವದಿಲ್ಲಾ
ಅಂದಿನಿಂದ ಇಂದಿನವರೆಗೆ ನಾನು ನನ್ನ ಮೋಟಾರ ಸೈಕಲನ್ನು ಹುಡುಕಿದ್ದು ಆದರು ಕೂಡಾ ನನ್ನ ಮೋಟಾರ ಸೈಕಲ
ಪತ್ತೆಯಾಗಿರುವದಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾದ
ನನ್ನ ಮೋಟಾರ ಸೈಕಲ ಪತ್ತೆ ಮಾಡಿಕೊಡಬೇಕು ಅಂತಾ ಅಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ನರೋಣಾ
ಠಾಣೆ : ಶ್ರೀಮತಿ ಶಾಂತಾಬಾಯಿ ಗಂಡ ಹಣಮಂತ್ರಾಯ ಬೆನಕಟ್ಟಿ, ರವರು ದಿನಾಂಕ 06/12/2018 ರಂದು ಬೆಳಿಗ್ಗೆ ನಮ್ಮೂರ ಕ್ರಾಸ ಹತ್ತಿರ ನಮ್ಮ ಹೊಲಕ್ಕೆ ಹೊಗಲು ಕುಳಿತಾಗ
ಅದೆ ವೇಳೆಗೆ ಸಿದ್ದಪ್ಪಾ ತಂದೆ ಮಾದಪ್ಪಾ ಮೂಲಿಮನಿ ಸಾ: ಬೆಳಮಗಿ ಈತನು ನಾನು ಕುಳಿತಲ್ಲಿ ಬಂದು
ವಿನಾಕಾರಣ ನನಗೆ ಬಂದು ''ಏ ರಂಡಿ ಇಲ್ಲಿ ಯಾಕೆ ಕುಳಿತಿದ್ದಿ, ರಂಡಿ, ಭೋಸಡಿ, ಸೂಳಿ ಅಂತಾ
ಬೈಯುತ್ತಿದ್ದಾಗ ನಾನು ಸುಮ್ಮನೆ ಯಾಕೆ ಬೈಯುತ್ತಿ ಅಂದ್ದಿದಕ್ಕೆ ನನಗೆ ಎದುರು ಮಾತಾಡುತ್ತಿ ಸೂಳಿ
ಅಂತಾ ಬೈಯುತ್ತಾ ನನಗೆ ಅಲ್ಲೆ ಬಿದ್ದ ಕಲ್ಲಿನಿಂದ ನನ್ನ ಬಲ ತಲೆಗೆ ಹೊಡೆದು ಗುಪ್ತಗಾಯ ಮಾಡಿದ
ಕಾಲಿನಿಂದ ಸೊಂಟಗೆ ಒದ್ದು ಮತ್ತು ಇನ್ನೊಂದು ಕಲ್ಲು ತಗೆದುಕೊಂಡು ಎಡಕಾಲಿನ ಹಿಮ್ಮಡಿ ಹತ್ತಿರ
ಹೊಡೆದು ತೆರಚಿದ ರಕ್ತಗಾಯಪಡಿಸಿದ ನಾನು ಚಿರಾಡಿದಾಗ ರಂಡಿ ಬಾಯಿ ಮಾಡತಿ ಅಂತಾ ನನ್ನ ಕೂದಲು
ಹಿಡಿದು ಎಳೆದಾಡುತ್ತಿದ್ದಾಗ ಅಲ್ಲೆ ಊರಿಗೆ ಹೋಗಲು ನಿಂತಿದ್ದ ನಮ್ಮೂರಿನ ಅಪ್ಪಾರಾಯ ತಂದೆ
ಮಲ್ಲಪ್ಪಾ ಬೆನಕಟ್ಟಿ ಮತ್ತು ಜಗನ್ನಾಥ ತಂದೆ ಭೀಮಶಾ ಹೊಲ್ಕರ ಇಬ್ಬರು ಸೇರಿ ನನಗೆ ಬಿಡಿಸಿಕೊಂಡಾಗ
ಸೂಳಿ ಇವತ್ತು ಉಳಿದಿದ್ದಿ, ಮತ್ತೆ ಸಿಗು ನಿನಗೆ ಖಲಾಸ ಮಾಡುತ್ತಿನಿ
ಅಂತಾ ಅಲ್ಲಿಂದ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.