ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ:
12-07-2020.
ಬೀದರ ನಗರ ಪೊಲೀಸ್ ಠಾಣೆ ಯು.ಡಿ.ಆರ್. ನಂ.
07/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ 11/07/2020 ರಂದು 12:30 ಗಂಟೆಗೆ ಫಿರ್ಯಾದಿ ಶ್ರೀ
ಶೇಖ ಅಬ್ರಾರ್ ತಂದೆ ಮುಕ್ತಾರ ಪಟೇಲ್ ವಯ:50 ವರ್ಷ
ಜಾ:ಮುಸ್ಲಿಂ ಸಾ:ಮನೆ ನಂ 10-2-127 ಖಾಜಾ ಅಬ್ದುಲ್ ಫೈಜ ಕಾಲೂನಿ ಬೀದರ ರವರು ಠಾಣೆಗೆ
ಹಾಜರಾಗಿ ಬಾಯಿ ಮಾತಿನ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶವೆನೆಂದರೆ ಶೇಖ ಅಹ್ಮದ ತಂದೆ ಶೇಖ ಹನೀಫ್ ವಯ:70 ವರ್ಷ ಸಾ: ತಾಂಡೂರ ಸುಮಾರು 5-6 ವರ್ಷಗಳು ಫಿರ್ಯಾದಿ ಮನೆಯಲ್ಲಿ ವಾಸವಿದ್ದು ನಂತರ ಒಂದು ದಿನ ನಾನು ತಾಮ್ರದ
ಉಂಗುರು ಮತ್ತು ತಾವಿತು ಮಾರಾಟ ಮಾಡಿಕೊಂಡು ಬರುತ್ತೇನೆ ಅಂತ ಹೇಳಿ ಹೊದವರು ಮರಳಿ ಬಂದಿರುವುದ್ದಿಲ್ಲಾ, ದಿನಾಂಕ 11/07/2020 ರಂದು ಮುಂಜಾನೆ 11:00 ಗಂಟೆ ಸುಮಾರಿಗೆ ಫಿರ್ಯಾದಿಗೆ ಪರಿಚಯ ಇದ್ದ ರಾವ ತಾಲೀಮ ಓಣಿಯ ಹನ್ನಾನ ತಂದೆ ಎಂ.ಎ ಜಹುರ ಬೇಗ್ ರವರು ನನ್ನ ಮೊಬೈಲಗೆ ಫೋನ ಮಾಡಿ
ತಿಳಿಸಿದೇನೆಂದರೆ ನಿಮ್ಮ ಮನೆಯಲ್ಲಿ ವಾಸವಾಗಿದ್ದ ಶೇಖ ಅಹ್ಮದ ತಂದೆ ಶೇಖ ಹನಿಫ್ ಇವರು ನಿನ್ನೆ ರಾತ್ರಿ 9:30 ಗಂಟೆಗೆ ನಾನು ಮನೆಗೆ ಹೊಗುವಾಗ ನಯಾ ಕಮಾನ ಹತ್ತಿರ
ನಿಂತಿದರು. ಈಗ ಅಲ್ಲಂ ದುಲ್ಲಾ ಹೊಟಲ ಹತ್ತಿರ ಮಲಗಿದ
ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾರೆ.
ನೀವು ಕೂಡಲೆ ಇಲ್ಲಿಗೆ
ಬನ್ನಿರಿ ಅಂತ ತಿಳಿಸಿದಾಗ ಫಿರ್ಯಾದಿಯು
ಹೊಗಿ ನೋಡಲು ಸದರಿ ಘಟನೆ
ನಿಜ ಇದ್ದು ಸದರಿ ಶೇಖ ಅಹ್ಮದ ತಂದೆ ಶೇಖ ಹನೀಫ್ ರವರು ವಯಸ್ಸಾಗಿದರಿಂದ ಯಾವುದೋ ಕಾಯಿಲೆಯಿಂದ ಬಳಲಿ
ಮಲಗಿದ ಸ್ಥಳದಲ್ಲಿಯೆ ದಿನಾಂಕ 10/07/2020 ರಂದು ರಾತ್ರಿ 9:30 ಗಂಟೆಯಿಂದ ಇಂದು ದಿನಾಂಕ 11/07/2020 ರಂದು 11:00 ಗಂಟೆಯ ಅವಧಿಯಲ್ಲಿ ಮೃತ ಪಟ್ಟಿದ್ದು ಇರುತ್ತದೆ ಅಂತಾ ನೀಡಿದ
ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ
94/2020 ಕಲಂ 498(ಎ), 302, 304(ಬಿ) ಜೊತೆ 34 ಐಪಿಸಿ :-
ದಿನಾಂಕ 11/07/2020 ರಂದು 1500 ಗಂಟೆಗೆ
ಶ್ರೀ ಅಮ್ರುತ ತಂದೆ ಪುಂಡಲಿಕ ಮಾಳಗೆ ಗ್ರಾಮ ನಾಗೂರೆ (ಕೆ) ತಾ; ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ
ಇವರ ಮಗಳಾದ ಶೀಲ್ಪಾ
ಗಂಡ ಅರ್ಜುನ ಸಾ; ಶೇಮಶಾಪೂರವಾಡಿ ತಾ; ಭಾಲ್ಕಿ ಇವರಿಗೆ ಅಳಿಯನಾದ ಅರ್ಜುನ ತಂದೆ ರಾಮಣ್ಣಾ ಇವರು ಮಗಳಿಗೆ ಪ್ರೀತಿಸಿ ಮದುವೆ ಮಾಡಿಕೊಂಡು ಮದುವೆ ದಿನಾಂಕ
11/03/2019 ರಂದು ಮದುವೆ ಮಾಢಿಕೊಂಡು ಒಂದು ವರ್ಷವಾಗಿದ್ದು ಸ್ವಲ್ಪ ದಿವಸ ಸರಿಯಾಗಿ ಇದ್ದು ಇವಾಗ ವಿನಾಕಾರಣ ಮನೆಯಲ್ಲಿ ಮಗಳಿಗೆ ಜಗಳ ಮಾಡಿ ದಿನಾಲು ಹೊಡೆದು ಬಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಇವಳನ್ನು ಈ
ತರಹದ ತುಂಬಾ ತೊಂದರೆ ಕೊಡುತಿದ್ದು ಇವಾಗ ಅರ್ಜುನ ತಂದೆ ರಾಮಣ್ಣಾ ಇವನು ಸರಾಯಿ ಕುಡಿದುಕೊಂಡು, ಕುಡಿದ ಅಮಲಿನಲ್ಲಿ ಮನೆಗೆ ಬಂದು ರಾತ್ರಿ ಜಗಳ
ಮಾಡಿ ದಿನಾಂಕ 11/07/2020 ರಂದು ನಸುಕೀನ ಜಾವಾ ಸಮಯ 0400 ಗಂಟೆಯ ಸುಮಯದಲ್ಲಿ ಮನೆಯಲ್ಲಿ
ಹೊಡೆದು ಕೊಂದು ಅವಳನ್ನು
ಮನೆಯಲ್ಲಿ ನೇಣು
ಹಾಕಿರುತ್ತಾನೆ. ಅಲ್ಲದೆ ಇವರ ಅಂದರೆ ಅರ್ಜುನ ತಂದೆ ರಾಮಣ್ಣಾ ಇವರ ಅತ್ತಿಗೆಯರಾದ ಶ್ರೀಮತಿ
ಸುವರ್ಣಾ ಗಂಡ ಭೀಮಣ್ಣಾ ಇವಳು ಸಹ ಫಿರ್ಯಾದಿ ಮಗಳಿಗೆ ತುಂಬಾ ತೊಂದರೆ
ಕೊಡುತಿದ್ದರು. ಮತ್ತು ದಿನಾಲು ಇವಳನ್ನು ಬೈಯುತಿದ್ದಳು. ಅರ್ಜುನ
ಮತ್ತು ಇವನ ಅತ್ತಿಗೆಯಾದ ಸುವರ್ಣಾ ಇಬ್ಬರು ಕೂಡಿ ಫಿರ್ಯಾದಿ ಮಗಳಿಗೆ ಕೊಲೆ ಮಾಡಿ ನೇಣು ಹಾಕಿರುತ್ತಾರೆ. ಇವರು ಇಬ್ಬರು ನನ್ನ ಮಗಳ ಜಿವವನ್ನು
ತೊಗೆದುಕೊಂಡಿದ್ದಾರೆ. ಅಂತಾ
ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.