ದಿನಂಪ್ರತಿ
ಅಪರಾಧಗಳ ಮಾಹಿತಿ ದಿನಾಂಕ: 28-05-2020
ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/2020 ಕಲಂ 174 ಸಿಆರ್.ಪಿ.ಸಿ. :-
ದಿನಾಂಕ:27-05-2020 ರಂದು 1615 ಗಂಟೆಗೆ ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ರತ್ನಮ್ಮಾ
ಗಂಡ ದತ್ತಪ್ಪಾ ಗದ್ದೆ ವಯ: 70 ವರ್ಷ, ಜಾ: ಪದ್ಮಾಶಾಲಿ ಉ; ಮನೆಕೆಲಸ ಸಾ|| ಅಷ್ಟುರ ರವರು ತನ್ನ ಹೇಳಿಕೆ
ಕೊಟ್ಟಿದ್ದು ಸಾರಾಂಶವೆನೆಂದರೆ ಫೀರ್ಯಾದಿಗೆ
ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಇದ್ದು ಎಲ್ಲರ ಮದುವೆಯಾಗಿದ್ದು ಇವರ ಕಿರಿಯ ಮಗನ ಹೆಸರು ಪ್ರಭು ತಂದೆ ದತ್ತಪ್ಪಾ
ಗದ್ದೆ ವಯ-50 ಇದ್ದು
ಕೂಲಿಕೆಲಸ ಮಾಡಿಕೊಂಡಿರುತ್ತಾನೆ. ಪ್ರಭು ಇತನ ಹೆಂಡತಿ ಹೆಸರು ಕಮಳಮ್ಮ ಅಂತ ಇದ್ದು ಅವನ ಮಗನ
ಹೆಸರು ಅವಿನಾಸ ಅಂತ ಇರುತ್ತದೆ. ಈಗ ಸುಮಾರು 15 ವರ್ಷದ ಹಿಂದೆ ಪ್ರಭು ಇತನ ಹೆಂಡತಿ ಕಮಳಮ್ಮ
ಇವಳು ಪ್ರಭು ಇತನಿಗೆ ಬಿಟ್ಟು ಅವಿನಾಶ ಇತನೊಂದಿಗೆ ತನ್ನ ತವರು ಮನೆ ವಿದ್ಯಾನಗರ
ಬೀದರಕ್ಕೆ ಹೋಗಿ ಅಲ್ಲಿಯೆ ಇರುತ್ತಾಳೆ. ಇದರಿಂದ ಪ್ರಭು ಇತನು ಬೇಜಾರು ಮಾಡಿಕೊಂಡು ಸರಾಯಿ
ಕುಡಿಯುವ ಚಟಕ್ಕೆ ಒಳಗಾಗಿರುತ್ತಾನೆ. ದಿನಾಂಕ 21/05/2020 ರಂದು ರಾತ್ರಿ ಊಟ ಮಾಡಿ ಮನೆಯ ಹೊರಗೆ ಮಲಗಿದ್ದು
ಪ್ರಭು ಇತನು ಮನೆಯಲ್ಲಿ ಮಲಗಿರುತ್ತಾನೆ. ದಿನಾಂಕ 22/05/2020 ರಂದು
ಮುಂಜಾನೆ 6.30 ಗಂಟೆಗೆ
ಎದ್ದು
ಮನೆಯಲ್ಲಿ ಹೋದಾಗ ಪ್ರಭು ಇತನು ಮೈ ಸುಟ್ಟಿಕೊಂಡು ನರಳುತಾ ಮಲಗಿದ್ದು ಏನಾಗಿದೆ ಅಂತ ವಿಚಾರಿಸಲು
ಪ್ರಭು ಇತನು ಹೇಳಿದೆನೆಂದರೆ ಇಂದು ನಸುಕಿನ 5 ಗಂಟೆಗೆ ನಾನು ಎದ್ದು ಬಿಡಿ ಸೇದಲು
ಬೆಂಕಿ ಕಡ್ಡಿ ಗಿರಿದಾಗ ಆಕಸ್ಮೀಕವಾಗಿ ಬೆಂಕಿ ಮೈಗೆ ಹತ್ತಿಕೊಂಡು ಎದೆಗೆ, ಹೊಟ್ಟೆಗೆ,ಕೈ ಕಾಲುಗಳಿಗೆ ಸುಟ್ಟಗಾಯಗಳು ಆಗಿರುತ್ತದೆ ಚಿಕಿತ್ಸೆ
ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು ದಿನಾಂಕ 27/06/2020 ರಂದು
ಮದ್ಯಾನ 3.15 ಗಂಟೆಗೆ
ನನ್ನ ಮಗ ಪ್ರಭು ಇತನು ಗುಣಮುಖನಾಗದೇ ತೀರಿಕೊಂಡಿರುತ್ತಾನೆ. ಸದರಿ ಘಟನೆ ಆಕಸ್ಮೀವಾಗಿದ್ದು. ಈ
ಬಗ್ಗೆ ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ. ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೋಳ್ಳಲಾಗಿದೆ.
ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 127/2020
ಕಲಂ 379 ಐಪಿಸಿ :-
ದಿನಾಂಕ 27/05/2020 ರಂದು
12:00 ಗಂಟೆಗೆ ದತ್ತುಕುಮಾರ ತಂದೆ ಕಾಶೆಪ್ಪಾ ಖಂಡ್ರೆ ವಯ: 55 ವರ್ಷ ಜಾತಿ: ಲಿಂಗಾಯತ ಉ: ಒಕ್ಕಲುತನ ಸಾ:
ಸುಭಾಷ ಚೌಕ ಹತ್ತಿರ ಭಾಲ್ಕಿ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ
ಭಾಲ್ಕಿಯ ಹೋಲ ಸವರ್ೆ ನಂ 620 ರಲ್ಲಿ ತನ್ನ ಹೇಸರಿನಲ್ಲಿ 40 ಎಕ್ಕರೆ ಜಮೀನಿದ್ದು ಅದರಲ್ಲಿ ಒಂದು ಬಾವಿ ತೋಡಿ ಬಾವಿಗೆ ಎರಡು ಕರೇಂಟ ಮೋಟಾರ
ಅಳವಿಡಿಸಿದ್ದು ಇದ್ದವು ಈ ವರ್ಷ ಸದರಿ ಹೋಲದಲ್ಲಿ ತರಕಾರಿ ಮತ್ತು ಕಬ್ಬಿನ ಬೇಳೆ ಇರುತ್ತದೆ
ಪ್ರತಿ ದಿವಸ ಮುಂಜಾನೆ 9 ಗಂಟೆಯಿಂದ ಸಾಯಂಕಾಲ 5 ಗಂಟೆಯ ವರೆಗೆ ಕರೆಂಟ ಇರುವದರಿಂದ ಅದೆ ಸಮಯಲ್ಲಿ ಹೋಲಕ್ಕೆ ನೀರು ಉಣಿಸುತ್ತೆವೆ. ನ 2-3 ವರ್ಷಗಳಿಂದ ಕಲವಾಡಿಯ ಪಿಂಟು ತಂದೆ ದಗಡು ಪವಾರ ಇವನು ಒಕ್ಕಲುತನ ಕೇಲಸದ ಮೇಲೆ ನೌಕರಿ
ಇರುತ್ತಾನೆ. ಅವನು ಪ್ರತಿ ದಿವಸ ಹಗಲು ಹೊತ್ತಿನಲ್ಲಿ ಹೋಲದಲ್ಲಿ ಕೇಲಸ ಮಾಡಿ ರಾತ್ರಿ ಮನೆಗೆ
ಹೋಗುತ್ತಾನೆ ಅದರಂತೆ ದಿನಾಂಕ 26/05/2020 ರಂದು
ಸಹ ಹಗಲೇಲ್ಲಾ ಹೋಲದಲ್ಲಿ ಕೆಲಸ ಮಾಡಿ ಸಾಯಂಕಾಲ 5 ಗಂಟೆಗೆ ಮನೆಗೆ ಹೋಗಿದ್ದನು. ಹಿಗೀರಲು ದಿನಾಂಕ 27/05/2020 ರಂದು ಮುಂಜಾನೆ 9 ಗಂಟೆಗೆ
ಫೀರ್ಯಾದಿ ಮತ್ತು ನೌಕರಿ ಮನುಷ್ಯ ಪಿಂಟು ಇಬ್ಬರು ನೀರು ಬೀಡುವ ಕುರಿತು ಹೋಲಕ್ಕೆ ಹೋಗಿ ಮೋಟಾರ
ಚಾಲು ಮಾಡಿದಾಗ ಮೋಟಾರ ಚಾಲು ಆಗದ ಕಾರಣ ಬಾವಿಯಲ್ಲಿ ನೋಡಲು ಎರಡು ಕರೆಂಟ ಮೋಟಾರಗಳಿಗೆ ಅಳವಡಿಸಿದ
ಕೇಬಲ ವೈರ ಇರಲಿಲ್ಲ ಸುಮಾರು 400 ಫೀಟ ಕೇಬಲ ವೈರ ಅದರ ಅಂದಾಜು ಕಿಮ್ಮತ್ತು 7000 ರೂದಷ್ಟು ದಿನಾಂಕ 26/05/2020 ರಂದು ಸಾಯಂಕಾಲ 5 ಗಂಟೆಯಿಂದ ಮುಂಜಾನೆ 9 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚೀತ ಕಳ್ಳರು
ಕೇಬಲ ವೈರ ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.