Police Bhavan Kalaburagi

Police Bhavan Kalaburagi

Friday, December 4, 2020

BIDAR DISTRICT DAILY CRIME UPDATE 04-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-12-2020

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 106/2020, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 03-12-2020 ರಂದು ಫಿರ್ಯಾದಿ ಹಾವಗೀರಾವ ತಂದೆ ನಾಗನಾಥ ಬಿರಾದರ, ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಮಾಧವ ನಗರ ಬೀದರ ರವರು ಮಾಧವ ನಗರದಿಂದ ಬೀದರ ನಗರಕ್ಕೆ ಹೋಗುತ್ತಿರುವಾಗ ಪಾಪನಾಶ 2ನೇ ಗೇಟ ಹತ್ತಿರ ಬಂದಾಗ ನೌಬಾದ ಕಡೆಯಿಂದ ಬೀದರ ಕಡೆಗೆ ಮೋಟಾರ ಸೈಕಲ ನಂ. ಕೆಎ-38/ಹೆಚ್-5528 ನೇದರ ಚಾಲಕನಾದ ಆರೋಪಿ ನಂ. 1 ಸಂಜುಕುಮಾರ ತಂದೆ ಯೇಶಪ್ಪಾ ಮಜಗೇನೋರ್ ವಯ: 25 ವರ್ಷ, ಜಾತಿ: ಕ್ರಿಶ್ವಯನ್, ಸಾ: ಶ್ರೀಮಂಡಲ ಬೀದರ ಇತನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮತ್ತು ಬೀದರ ಕಡೆಯಿಂದ ನೌಬಾದ ಕಡೆಗೆ ಲಾರಿ ನಂ. ಎಪಿ-24/ಟಿ.ಬಿ-1279 ನೇದರ ಚಾಲಕನಾದ ಆರೋಪಿ ನಂ. 2 ಇತನು ತನ್ನ ಲಾರಿಯನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಎದುರು ಬದುರು ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಮೋಟಾರ ಸೈಕಲ ಚಾಲಕನಿಗೆ ಬಲಗಾಲ ಮೋಣಕಾಲ ಕೆಳಗೆ ಭಾರಿ ಗುಪ್ತಗಾಯ, ಬಲಭುಜಕ್ಕೆ  ಗುಪ್ತಗಾಯ, ಬಲಗಣ್ಣಿನ ಮೇಲೆ ರಕ್ತಗಾಯವಾಗಿರುತ್ತದೆ, ಲಾರಿ ನೇದರ ಚಾಲಕ ತನ್ನ ಲಾರಿನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಸಂಜುಕುಮಾರ ಇತನಿಗೆ ಬೀದರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 74/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 03-12-2020 ರಂದು ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಎಂಬ ನಸೀಬಿನ ಜೂಜಾಟದ ನಂಬರಗಳು ಬರೆದುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಮಟಕಾ ಬರೆದುಕೊಳ್ಳುತ್ತಿದ್ದಾರೆಂದು ಅರುಣಕುಮಾರ ಪಿಎಸ್ಐ ಮುಡಬಿ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನ ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಹಿರನಾಗಾಂವ ಗ್ರಾಮದ ಅಂಬೇಡ್ಕರ ಚೌಕ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಸಾರ್ವಜನಿಕರಿಗೆ ಕೂಗುತ್ತಾ ಮಟಕಾ ನಂಬರಗಳು ಬರೆಯಿಸಿರಿ 01/- ರೂಪಯಿಗೆ 90/- ರೂಪಾಯಿ ಪಡೆಯಿರಿ ಅಂತ ಕೂಗಾಡುತ್ತಿರುವುದನ್ನು ಕಂಡು ಪಿಎಸ್ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಸದರಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಅವರನ್ನು ಹಿಡಿದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು ಅವರು ತಮ್ಮ ಹೆಸರು 1) ರಾಜಕುಮಾರ ತಂದೆ  ಮಲ್ಲಿಕಾರ್ಜುನ ಇಪ್ಪಿ ವಯ: 24 ವರ್ಷ, ಜಾತಿ: ಕಬ್ಬಲಿಗ, ಸಾ: ಹಿರನಾಗಾಂವ, ತಾ: ಬಸವಕಲ್ಯಾಣ, 2) ಅಮ್ರುತ  ತಂದೆ ಲಕ್ಷ್ಮಣ ಸನಾಮಿ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ಹಿರನಾಗಾಂವ ಅಂತ ತಿಳಿಸಿದ್ದು, ನಂತರ ಪಂಚರ ಸಮಕ್ಷಮ ಸದರಿ ವ್ಯಕ್ತಿಗಳನ್ನು ಪರಿಶಿಲಿಸಿ ಅವರಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ 4200/- ರೂಪಾಯಿ ನಗದು ಹಣ ಮತ್ತು 2 ಬಾಲ್ ಪೆನ್ನು ಹಾಗೂ ಮಟಕಾ ಅಂಕಿಗಳು ಸಿಕ್ಕಿದ್ದು, ನಂತರ ಇವುಗಳ ಬಗ್ಗೆ ವಿಚಾರಿಸಲು ನಾವು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ಪಡೆದುಕೊಂಡಿರುತ್ತೆವೆ, ಹೀಗೆ ನಾವಿಬ್ಬರು ಕೂಡಿ ವ್ಯವಹಾರ ಮಾಡುತ್ತೆವೆ ಅಂತಾ ತಿಳಿಸಿದರು, ನಂತರ ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

BIDAR DISTRICT DAILY CRIME UPDATE 03-12-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-12-2020

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 147/2020, ಕಲಂ. 379 ಐಪಿಸಿ :-  

ದಿನಾಂಕ 30-11-2020 ರಂದು 2300 ಗಂಟೆಯಿಂದ ದಿನಾಂಕ 01-12-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಬಸವಕುಮಾರ ತಂದೆ ಕಾಶಿನಾಥಯ್ಯಾ ವಸ್ತ್ರದ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಸಂಗಮೇಶ್ವರ ಕಾಲೋನಿ ಬಸವಕಲ್ಯಾಣ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ್ ನಂ. ಕೆಎ-39/ಜೆ-2773, ಚಾಸಿಸ್ ನಂ. MBLHA10EE9HK03722, ಇಂಜಿನ್ ನಂ. HA10EAGHK47357, ಮಾಡಲ್ 2009 ಹಾಗೂ .ಕಿ 25,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 78/2020, ಕಲಂ. 87 ಕೆ.ಪಿ ಕಾಯ್ದೆ :-

ದಿನಾಂಕ 02-12-2020 ರಂದು ಚವಳಿ ಗ್ರಾಮದ ರಮೇಶ ಮೂಕಾ ರವರ ಹೊಟೇಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾಹರÀ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸು) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ ದಿಲೀಪ್ ತಂದೆ ಅಣ್ಣೆಪ್ಪಾ ಮಾಳೆಗೆ ಸಾ: ಚವಳಿ ಇತನು ಹಾಗೂ ಇನ್ನೂ 5 ಜನ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಗೆ ದಸ್ತಗಿರಿ ಮಾಡಿಕೊಂಡು, ಅವರಿಂದ ಒಟ್ಟು ನಗದು ಹಣ 1720/- ರೂ ಹಾಗು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 148/2020, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 02-12-2020 ರಂದು ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಜಿ.ಎಂ.ಪಾಟೀಲ್ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ನಾರಾಯಣಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಎಜಾಜ ತಂದೆ ಅಲಿಮೋದ್ದಿನ ಕಬಾಡಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಮದಿನಾ ಕಾಲೋನಿ ಬಸವಕಲ್ಯಾಣ ಮತ್ತು 2) ಖುತಬೋದ್ದಿನ ತಂದೆ ಉಸ್ಮಾನಸಾಬ ಖುರೇಶಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಲಾಲತಲಾಬ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಒಮ್ಮಲೆ ದಾಳಿ ಮಾಡಿ ಸದರಿಯವರಿಗೆ ಮಟಕಾ ಚೀಟಿ ಬರೆದುಕೊಂಡು ಸಂಗ್ರಹ ಮಾಡಿದ ಹಣ ಯಾರಿಗೆ ಕೊಡುತ್ತಿರಿ? ಅಂತ ವಿಚಾರಿಸಲು ಶೇಖ್ ರಿಯಾಜೋದ್ದಿನ್ ತಂದೆ ಶೇಖ್ ಅಬ್ದುಲ್ ಕರೀಮ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಮೀರಪೇಟ್ ಬಸವಕಲ್ಯಾಣ ಇತನಿಗೆ ಕೊಡುತ್ತೆವೆ ಎಂದು ತಿಳಿಸಿದರು, ನಂತರ ಅವರಿಂದ ನಗದು ಹಣ 10,250/- ರೂ., 04 ಮಟಕಾ ಚೀಟಿಗಳು ಹಾಗೂ 02 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಅವರಿಗೆ ಸದರಿ 36 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.