ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-12-2020
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 147/2020, ಕಲಂ. 379 ಐಪಿಸಿ :-
ದಿನಾಂಕ 30-11-2020 ರಂದು 2300 ಗಂಟೆಯಿಂದ ದಿನಾಂಕ 01-12-2020 ರಂದು 0500 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿ ಬಸವಕುಮಾರ ತಂದೆ ಕಾಶಿನಾಥಯ್ಯಾ ವಸ್ತ್ರದ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಸಂಗಮೇಶ್ವರ ಕಾಲೋನಿ ಬಸವಕಲ್ಯಾಣ ರವರು ತನ್ನ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲ್ ನಂ. ಕೆಎ-39/ಜೆ-2773, ಚಾಸಿಸ್ ನಂ. MBLHA10EE9HK03722, ಇಂಜಿನ್ ನಂ. HA10EAGHK47357, ಮಾಡಲ್ 2009 ಹಾಗೂ ಅ.ಕಿ 25,000/- ರೂ. ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-12-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 78/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 02-12-2020 ರಂದು ಚವಳಿ ಗ್ರಾಮದ ರಮೇಶ ಮೂಕಾ ರವರ ಹೊಟೇಲ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗದಲ್ಲಿ ಕೆಲವು ಜನರು ಅಂದರ ಬಾಹರÀ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಶಿವರಾಜ ಪಾಟೀಲ್ ಪಿಎಸ್ಐ (ಕಾ&ಸು) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹೋಗಿ ಆರೋಪಿತರಾದ ದಿಲೀಪ್ ತಂದೆ ಅಣ್ಣೆಪ್ಪಾ ಮಾಳೆಗೆ ಸಾ: ಚವಳಿ ಇತನು ಹಾಗೂ ಇನ್ನೂ 5 ಜನ ಇವರೆಲ್ಲರ ಮೇಲೆ ದಾಳಿ ಮಾಡಿ ಅವರಿಗೆ ದಸ್ತಗಿರಿ ಮಾಡಿಕೊಂಡು, ಅವರಿಂದ ಒಟ್ಟು ನಗದು ಹಣ 1720/- ರೂ ಹಾಗು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 148/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 02-12-2020 ರಂದು ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಜಿ.ಎಂ.ಪಾಟೀಲ್ ಪಿ.ಎಸ.ಐ [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ನಾರಾಯಣಪೂರ ಕ್ರಾಸ್ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ನಾರಾಯಣಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಎಜಾಜ ತಂದೆ ಅಲಿಮೋದ್ದಿನ ಕಬಾಡಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಮದಿನಾ ಕಾಲೋನಿ ಬಸವಕಲ್ಯಾಣ ಮತ್ತು 2) ಖುತಬೋದ್ದಿನ ತಂದೆ ಉಸ್ಮಾನಸಾಬ ಖುರೇಶಿ ವಯ: 26 ವರ್ಷ, ಜಾತಿ: ಮುಸ್ಲಿಂ, ಸಾ: ಲಾಲತಲಾಬ ಬಸವಕಲ್ಯಾಣ ಇವರಿಬ್ಬರು ನಿಂತುಕೊಂಡು ಸಾರ್ವಜನಿಕರಿಗೆ ಒಂದು ರೂಪಾಯಿಗೆ 90/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಒಮ್ಮಲೆ ದಾಳಿ ಮಾಡಿ ಸದರಿಯವರಿಗೆ ಮಟಕಾ ಚೀಟಿ ಬರೆದುಕೊಂಡು ಸಂಗ್ರಹ ಮಾಡಿದ ಹಣ ಯಾರಿಗೆ ಕೊಡುತ್ತಿರಿ? ಅಂತ ವಿಚಾರಿಸಲು ಶೇಖ್ ರಿಯಾಜೋದ್ದಿನ್ ತಂದೆ ಶೇಖ್ ಅಬ್ದುಲ್ ಕರೀಮ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಅಮೀರಪೇಟ್ ಬಸವಕಲ್ಯಾಣ ಇತನಿಗೆ ಕೊಡುತ್ತೆವೆ ಎಂದು ತಿಳಿಸಿದರು, ನಂತರ ಅವರಿಂದ ನಗದು ಹಣ 10,250/- ರೂ., 04 ಮಟಕಾ ಚೀಟಿಗಳು ಹಾಗೂ 02 ಬಾಲ್ ಪೆನ್ ನೇದವುಗಳನ್ನು ಜಪ್ತಿ ಮಾಡಿಕೊಂಡು, ಅವರಿಗೆ ಸದರಿ 36 ಜನ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
No comments:
Post a Comment